ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ಬೌಲಿಂಗ್ ಆಯ್ಕೆಪ್ಲೇ ಆಫ್ ರೇಸ್ ಮತ್ತಷ್ಟು ಕಠಿಣ, ಯಾರಿಗಿದೆ ಅವಕಾಶ?ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯ
ಮುಂಬೈ(ಮೇ.16): ಗೆಲುವಿನ ಜೊತೆಗೆ ಉತ್ತಮ ರನ್‌ರೇಟ್ ಇದು ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಗುರಿ. ಪ್ಲೇ ಆಫ್ ರೇಸ್ ಪ್ರವೇಶಕ್ಕೆ ಇಂದಿನ ಪಂದ್ಯ ಅತ್ಯಂತ ಮಹತ್ವದ್ದಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ 11
ಡೇವಿಡ್ ವಾರ್ನರ್, ಸರ್ಫ್ರಾಜ್ ಖಾನ್, ಮಿಚೆಲ್ ಮಾರ್ಶ್, ರಿಷಬ್ ಪಂತ್(ನಾಯಕ), ಲಲಿತ್ ಯಾದವ್, ರೊವ್ಮೆನ್ ಪೊವೆಲ್, ಅಕ್ಸರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್, ಅನ್ರಿಚ್ ನೋರ್ಜೆ, ಖಲೀಲ್ ಅಹಮ್ಮದ್
ಮಹಿಳಾ ಟಿ20 ಚಾಲೆಂಜ್‌ಗೆ 3 ಬಲಿಷ್ಠ ತಂಡಗಳನ್ನು ಪ್ರಕಟಿಸಿದ ಬಿಸಿಸಿಐ..!
ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ 11
ಜಾನಿ ಬೈರ್‌ಸ್ಟೋ, ಶಿಖರ್ ಧವನ್, ಭಾನುಕಾ ರಾಜಪಕ್ಸ, ಲಿಯಾಮ್ ಲಿವಿಂಗ್‌ಸ್ಟೋನ್, ಮಯಾಂಕ್ ಅಗರ್ವಾಲ್, ಜಿತೇಶ್ ಶರ್ಮಾ, ಹರ್ಪ್ರೀತ್ ಬ್ರಾರ್, ರಿಶಿ ಧವನ್, ಕಾಗಿಸೋ ರಬಡಾ, ರಾಹುಲ್ ಚಹಾರ್, ಅರ್ಶದೀಪ್ ಸಿಂಗ್
ಅಂಕಪಟ್ಟಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 5ನೇ ಸ್ಥಾನದಲ್ಲಿದ್ದರೆ, ಪಂಜಾಬ್ ಕಿಂಗ್ಸ್ 7ನೇ ಸ್ಥಾನದಲ್ಲಿದೆ. ಡೆಲ್ಲಿ ಹಾಗೂ ಪಂಜಾಬ್ 12 ಪಂದ್ಯದಲ್ಲಿ 6 ಗೆಲುವಿನೊಂದಿಗೆ ತಲಾ 12 ಅಂಕ ಸಂಪಾದಿಸಿದೆ. ಲೀಗ್ ಹಂತದಲ್ಲಿ ಉಭಯ ತಂಡಕ್ಕೆ ಇಂದಿನ ಪಂದ್ಯ ಸೇರಿಸಿ ಎರಡು ಪಂದ್ಯ ಬಾಕಿ ಇದೆ. ಹೀಗಾಗಿ ಒಂದು ತಂಡಕ್ಕೆ ಒಂದು ಸೋಲು ಖಚಿತ. ಬಾಕಿ ಇರುವ ಎರಡೂ ಪಂದ್ಯ ಗೆದ್ದರೆ 16 ಅಂಕ ಸಂಪಾದಿಸಲಿದೆ. ಪ್ಲೇ ಆಫ್ ರೇಸ್‌ಗೆ ಇಷ್ಟು ಸಾಲದು. ಇದರ ಜೊತೆಗೆ ಉತ್ತಮ ರನ್‌ರೇಟ್ ಅವಶ್ಯಕತೆ ಇದೆ.
ಲಖನೌ ಹಾಗೂ ರಾಜಸ್ಥಾನ ಈಗಾಗಲೇ 16 ಅಂಕ ಸಂಪಾದಿಸಿದೆ. ಬಾಕಿ ಉಳಿದಿರುವ ಒಂದು ಪಂದ್ಯ ಗೆದ್ದರೆ ನೇರವಾಗಿ ಪ್ಲೇ ಆಫ್ ಸ್ಥಾನ ಖಚಿತ ಪಡಿಸಲಿದೆ. ಅಲ್ಲಿಗೆ 3 ಸ್ಥಾನ ಭರ್ತಿಯಾಗಲಿದೆ. ಇನ್ನೊಂದು ಸ್ಥಾನಕ್ಕೆ ಡೆಲ್ಲಿ ಪಂಜಾಬ್ ಜೊತೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡ ಹಾತೊರೆಯುತ್ತಿದೆ.
ಇನ್ನು ಕೋಲ್ಕತಾ ನೈಟ್ ರೈಡರ್ಸ್ ತಂಡ ಕೂಡ 12 ಅಂಕ ಸಂಪಾದಿಸಿದೆ. ಕೆಕೆಆರ್ ಉತ್ತಮ ರನ್‌ರೇಟ್‌ನೊಂದಿಗೆ ಗೆಲುವು ಸಾಧಿಸಿದರೆ, ಇನ್ನುಳಿದ ಪಂದ್ಯಗಳ ಫಲಿತಾಂಶ ಕೆಕೆಆರ್ ಪೂರಕವಾದರೆ ಪ್ಲೇ ಆಫ್ ಪ್ರವೇಶಿಸಲಿದೆ.
IPL 2022: ರೀಟೈನ್ ಮಾಡಿಕೊಂಡಿದ್ದ ಈ ಐವರಿಗೆ ಮುಂದಿನ ವರ್ಷ ಗೇಟ್‌ಪಾಸ್ ಫಿಕ್ಸ್..!
20 ಅಂಕ ಸಂಪಾದಿಸಿರುವ ಗುಜರಾತ್ ಟೈಟಾನ್ಸ್ ಪ್ಲೇ ಆಫ್ ಸ್ಥಾನ ಖಚಿತ ಪಡಿಸಿಕೊಂಡಿದೆ. ಇನ್ನುಳಿದ 3 ಸ್ಥಾನಗಳಿಗೆ ಪೈಪೋಟಿ ಜೋರಾಗಿದೆ.
ಅಂಕಪಟ್ಟಿ:
ಐಪಿಎಲ್ 2022 ಅಂಕಪಟ್ಟಿಯಲ್ಲಿ 13 ಪಂದ್ಯಗಳಲ್ಲಿ 10 ಪಂದ್ಯ ಗದ್ದ ಗಜರಾತ್ ಟೈಟಾನ್ಸ್ ಮೊದಲ ಸ್ಥಾನ ಅಲಂಕರಿಸಿದೆ. ಇನ್ನು ಎರಡನೇ ಸ್ಥಾನದಲ್ಲಿರುವ ರಾಜಸ್ಥಾನ ರಾಯಲ್ಸ್ 13ರಲ್ಲಿ 8 ಗೆಲುವು ಸಾಧಿಸಿದೆ. ಲಖನೌ ಸೂಪರ್ ಜೈಂಟ್ಸ್ 13ರಲ್ಲಿ 8 ಗೆಲುವಿನ ಮೂಲಕ 3ನೇ ಸ್ಥಾನ ಅಲಂಕರಿಸಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 13ರಲ್ಲಿ 7 ಗೆಲುವು ದಾಖಲಿಸುವ ಮೂಲಕ 4ನೇ ಸ್ಥಾನದಲ್ಲಿದೆ. ಡೆಲ್ಲಿ ಕ್ಯಾಪಿಟಲ್ಸ್ 12ರಲ್ಲಿ 5 ಗೆಲುವು ದಾಖಲಿಸಿ 6ನೇ ಸ್ಥಾನದಲ್ಲಿದೆ. ಕೋಲ್ಕತಾ ನೈಟ್ ರೈಡರ್ಸ್ 13ರಲ್ಲಿ 6 ಪಂದ್ಯ ಗೆದ್ದು 6ನೇ ಸ್ಥಾನದಲ್ಲಿದೆ. ಇನ್ನು ಪಂಜಾಬ್ ಕಿಂಗ್ಸ್ 12ರಲ್ಲಿ 6 ಪಂದ್ಯ ಗೆದ್ದು 7ನೇ ಸ್ಥಾನದಲ್ಲಿದೆ. ಇತ್ತ ಸನ್‌ರೈಸರ್ಸ್ ಹೈದರಾಬಾದ್ 12ರಲ್ಲಿ 5 ಪಂದ್ಯ ಗೆದ್ದು 8ನೇ ಸ್ಥಾನದಲ್ಲಿದೆ. ಚೆನ್ನೈ ಸೂಪರ್ ಕಿಂಗ್ಸ್ ಕೇವಲ 4 ಗೆಲುವಿನೊಂದಿಗೆ 9 ಹಾಗೂ ಮುಂಬೈ ಇಂಡಿಯನ್ಸ್ ಕೇವಲ 3 ಗೆಲುವಿನೊಂದಿಗೆ 10ನೇ ಸ್ಥಾನದಲ್ಲಿದೆ.
