Asianet Suvarna News Asianet Suvarna News

IPL 2022 ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಟಾಸ್ ಗೆದ್ದ ಲಖನೌ, ತಂಡದಲ್ಲಿ ಒಂದು ಬದಲಾವಣೆ!

  • ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಲಖನೌ ನಡುವಿನ ಪಂದ್ಯ
  • ಟಾಸ್ ಗೆದ್ದ ಲಖನೌ ಸೂಪರ್‌ ಜೈಂಟ್ಸ್ ಫೀಲ್ಡಿಂಗ್ ಆಯ್ಕೆ
  • ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯ
IPL 2022 Lucknow Super Giants win toss and chose bowl first against Delhi Capitals ckm
Author
Bengaluru, First Published Apr 7, 2022, 7:02 PM IST

ಮುಂಬೈ(ಏ.07): ಐಪಿಎಲ್ ಲೀಗ್ ಟೂರ್ನಿಯ 15ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಲಖನೌ ಸೂಪರ್‌ ಜೈಂಟ್ಸ್ ತಂಡ ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಲಖನೌ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಲಖನೌ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ಕನ್ನಡಿಗ ಮನೀಶ್ ಪಾಂಡೆ ಬದಲು ಮತ್ತೊರ್ವ ಕನ್ನಡಿಗ ಕೆ ಗೌತಮ್‌ಗೆ ಸ್ಥಾನ ನೀಡಲಾಗಿದೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಮೂರು ಬದಲಾವಣೆ ಮಾಡಲಾಗಿದೆ ಟಿಮ್ ಸೈಫರ್ಟ್ ಬದಲು ಡೇವಿಡ್ ವಾರ್ನರ್ ತಂಡ ಸೇರಿಕೊಂಡಿದ್ದಾರೆ. ಖಲೀಲ್ ಅಹಮ್ಮದ್ ಬದಲು ನೊರ್ತಜೆ ತಂಡ ಸೇರಿಕೊಂಡರೆ, ಮನ್ದೀಪ್ ಸಿಂಗ್ ಬದಲು ಸರ್ಫರಾಜ್ ತಂಡ ಸೇರಿಕೊಂಡಿದ್ದಾರೆ. ಡೆಲ್ಲಿ ತಂಡಕ್ಕೆ ಡೇವಿಡ್ ವಾರ್ನರ್ ಸೇರ್ಪಡೆಯಿಂದ ಮತ್ತಷ್ಟು ಬಲಿಷ್ಠವಾಗಿದೆ.

Anushka to Aditi: ಸ್ಟಾರ್ ಕ್ರಿಕೆಟರ್ಸ್‌ನ ಹಾಟ್‌ ಪತ್ನಿಯರು ಮತ್ತು ಗರ್ಲ್‌ಫ್ರೆಂಡ್ಸ್‌

ಲಖನೌ ಸೂಪರ್‌ ಜೈಂಟ್ಸ್ ಪ್ಲೇಯಿಂಗ್ 11
ಕೆಎಲ್ ರಾಹುಲ್(ನಾಯಕ),ಕ್ವಿಂಟನ್ ಡಿಕಾಕ್, ಇವಿನ್ ಲಿವಿಸ್, ದೀಪಕ್ ಹೂಡ, ಆಯುಷ್ ಬದೋನಿ, ಕ್ರುನಾಲ್ ಪಾಂಡ್ಯ, ಜೇಸನ್ ಹೋಲ್ಡರ್, ಕೆ ಗೌತಮ್, ಆ್ಯಂಡ್ರೂ ಟೈ, ರವಿ ಬಿಶ್ನೋಯ್, ಆವೇಶ್ ಖಾನ್

ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ 11
ಪಾರ್ಥೀವ್ ಪಟೇಲ್, ಡೇವಿಡ್ ವಾರ್ನರ್,  ರಿಷಬ್ ಪಂತ್, ರೋವ್ಮನ್ ಪೊವೆಲ್, ಸರ್ಫರಾಜ್ ಖಾನ್, ಲಲಿತ್ ಯಾದವ್, ಅಕ್ಸರ್ ಪಟೇಲ್, ಶಾರ್ದುಲ್ ಠಾಕೂರ್, ಕುಲ್ದೀಪ್ ಯಾದವ್, ಮುಸ್ತಾಫಿಜುರ್ ರೆಹಮಾನ್, ಅನ್ರಿಚ್ ನೊರ್ತಜೆ

ಅಂಕಪಟ್ಟಿಯಲ್ಲಿ ಲಖನೌ ತಂಡ 5ನೇ ಸ್ಥಾನದಲ್ಲಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್ 7ನೇ ಸ್ಥಾನದಲ್ಲಿದೆ. ಲಖನೌ ತಂಡ ಆಡಿದ 3 ಪಂದ್ಯದಲ್ಲಿ 2 ಗೆಲುವು ಸಾಧಿಸಿದೆ. ಮೂಲಕ 4 ಅಂಕ ಸಂಪಾದಿಸಿದೆ.ಇತ್ತ ಡೆಲ್ಲಿ ಕ್ಯಾಪಿಟಲ್ಸ್ 2 ಪಂದ್ಯದಲ್ಲಿ 1 ಗೆಲುವು ದಾಖಲಿಸಿ 2 ಅಂಕ ಸಂಪಾದಿಸಿದೆ.

IPL 2022: ಪಂಜಾಬ್ ಕಿಂಗ್ಸ್‌​​​ನಲ್ಲಿದ್ದಾನೆ ಓರ್ವ ಸಕಲಕಲಾವಲ್ಲಭ..!

ಡೇವಿಡ್ ವಾರ್ನರ್ ಹಾಗೂ ಅನ್ರಿಚ್ ಡೆಲ್ಲಿ ತಂಡ ಸೇರಿಕೊಂಡಿದ್ದಾರೆ. ಇದು ಡೆಲ್ಲಿ ತಂಡದ ಬಲ ಹೆಚ್ಚಿಸಿದೆ. ಕಳೆದ ಪಂದ್ಯಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮೂವರು ವಿದೇಶಿ ಆಟಗಾರರನ್ನು ಮಾತ್ರ ಕಣಕ್ಕಿಳಿಸಿತ್ತು. ಡೇವಿಡ್ ವಾರ್ನರ್ ಅದೆಂತಾ ಸ್ಫೋಟಕ ಬ್ಯಾಟ್ಸ್‌ಮನ್ ಅನ್ನೋದು ಬಿಡಿಸಿ ಹೇಳಬೇಕಾಗಿಲ್ಲ. ಉತ್ತಮ ಫಾರ್ಮ್‌ನಲ್ಲಿರುವ ವಾರ್ನರ್ ಡೆಲ್ಲಿ ತಂಡಕ್ಕೆ ಅತೀ ಕಡಿಮೆ ಎಸೆತದಲ್ಲಿ ಬೃಹತ್ ಸ್ಕೋರ್ ಸಿಡಿಸಿಲು ನೆರವಾಗಲಿದ್ದಾರೆ. ಇನ್ನು ಅನ್ರಿಚ್ ಯಾವುದೇ ಕಂಡೀಷನ್‌ನಲ್ಲಿ ಅತೀ ವೇಗದ ದಾಳಿ ಮಾಡಬಲ್ಲರು. ಮುಸ್ತಾಫಿಜುರ್ ಜೊತೆ ಅನ್ರಿಚ್ ದಾಳಿ ಎದುರಾಳಿಗಳಿಗೆ ಕಂಡಕವಾಗಲಿದೆ. ಆರಂಭಿಕ ಹಂತದಲ್ಲಿ ವಿಕೆಟ್ ಕಬಳಿಸಿದರೆ ಅಲ್ಪಮೊತ್ತಕ್ಕೆ ಎದುರಾಳಿಗಳನ್ನು ಕಟ್ಟಿ ಹಾಕುವ ಸಾಮರ್ಥ್ಯ ಡೆಲ್ಲಿಗಿದೆ.

ಐಪಿಎಲ್ ಪಾಯಿಂಟ್ಸ್ ಟೇಬಲ್
ಐಪಿಎಲ್ 2022 ಟೂರ್ನಿಯಲ್ಲಿ ಟಾಪ್ 4 ಸ್ಥಾನಕ್ಕೆ ಈಗಿನಿಂದಲೇ ಪೈಪೋಟಿ ಆರಂಭಗೊಂಡಿದೆ. ಸದ್ಯ ಕೋಲ್ಕತಾ ನೈಟ್ ರೈಡರ್ಸ್ 4 ಪಂದ್ಯದಲ್ಲಿ 3 ಪಂದ್ಯಗಳನ್ನು ಗೆದ್ದು 6 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಇನ್ನು ರಾಜಸ್ಥಾನ ರಾಯಲ್ಸ್ 3ರಲ್ಲಿ 2 ಗೆಲುವು ಸಾಧಿಸಿದೆ. ಈ ಮೂಲಕ 2ನೇ ಸ್ಥಾನದಲ್ಲಿದೆ. ಇನ್ನು ಗುಜರಾತ್ ಟೈಟಾನ್ಸ್ 2 ಪಂದ್ಯದಲ್ಲಿ 2ರಲ್ಲೂ ಗೆಲುವು ದಾಖಲಿಸಿದೆ. ಈ ಮೂಲಕ 3ನೇ ಸ್ಥಾನದಲ್ಲಿದೆ. ಸದ್ಯ ಗುಜರಾತ್ ಸೋಲಿಲ್ಲದ ಸರದಾನ ಎನಿಸಿಕೊಂಡಿದೆ. ಇನ್ನು 3ರಲ್ಲಿ 2 ಗೆಲುವು ಸಾಧಿಸಿರುವ ಪಂಜಾಬ್ ಕಿಂಗ್ಸ್ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ.  ಲಖನೌ 5ನೇ ಸ್ಥಾನದಲ್ಲಿದ್ದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 3 ಪಂದ್ಯದಲ್ಲಿ 2 ಗೆಲುವು ಕಂಡಿದೆ. ಈ ಮೂಲಕ 6ನೇ ಸ್ಥಾನದಲ್ಲಿದೆ. ಡೆಲ್ಲಿ ಕ್ಯಾಪಿಟಲ್ಸ್ 7ನೇ ಸ್ಥಾನದಲ್ಲಿದ್ದರೆ, ಚೆನ್ನೈ ಸೂಪರ್ ಕಿಂಗ್ಸ್ ಆಡಿದ 3 ಪಂದ್ಯದಲ್ಲಿ ಸೋಲು ಕಂಡಿದೆ. ಈ ಮೂಲಕ 8ನೇ ಸ್ಥಾನದಲ್ಲಿದೆ. ಇನ್ನು ಮುಂಬೈ ಇಂಡಿಯನ್ಸ್ ಆಡಿದ 3ರಲ್ಲಿ ಸೋಲು ಕಂಡು 9ನೇ ಸ್ತಾನದಲ್ಲಿದ್ದರೆ, ಸನ್‌ರೈಸರ್ಸ್ ಹೈದರಾಬಾದ್ 2ರಲ್ಲೂ ಸೋಲು ಕಂಡು ಕೊನೆಯ ಸ್ಥಾನದಲ್ಲಿದೆ.

Follow Us:
Download App:
  • android
  • ios