* 15ನೇ ಆವೃತ್ತಿಯ ಐಪಿಎಲ್‌ನಲ್ಲಿ ಮಿಂಚುತ್ತಿದ್ದಾರೆ ಲಿಯಾಮ್ ಲಿವಿಂಗ್‌ಸ್ಟೋನ್* ಆಫ್ ಬ್ರೇಕ್, ಲೆಗ್ ಬ್ರೇಕ್, ಫಾಸ್ಟ್ ಬೌಲಿಂಗ್ ಮಾಡುತ್ತಾರೆ.*  ಪಂಜಾಬ್ ಕಿಂಗ್ಸ್​ 11.5 ಕೋಟಿ ಕೊಟ್ಟು ಲಿಯಾಮ್ ಲಿವಿಂಗ್‌ಸ್ಟೋನ್ ಅವರನ್ನ ಖರೀದಿಸಿತ್ತು

ಬೆಂಗಳೂರು(ಏ.07): ​ಲಿಯಾಮ್ ಲಿವಿಂಗ್​ಸ್ಟೋನ್ (Liam Livingstone)​. ಕ್ರಿಕೆಟ್ ಜನಕರ ನಾಡಿನ ಆಲ್ರೌಂಡ್ ಪ್ಲೇಯರ್. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್. ಹೀಗೆ ಮೂರು ವಿಭಾಗದಲ್ಲೂ ಅದ್ಭುತ ಪ್ರದರ್ಶನ ನೀಡ್ತಾರೆ. ಎಲ್ಲದರಲ್ಲೂ ಫರ್ಫಕ್ಟ್​ ಪ್ಲೇಯರ್. ಮಿಡಲ್ ಆರ್ಡರ್ ಬ್ಯಾಟ್ಸ್​ಮನ್. ಮಿಡಲ್ ಓವರ್ ಬೌಲರ್. ಯಾವ ಸ್ಥಾನದಲ್ಲಿ ನಿಲ್ಲಿಸಿದ್ರೂ ಅದ್ಭುತ ಫೀಲ್ಡರ್​​​​​. ಕೆಲವೇ ಕೆಲ ಪಕ್ಕಾ ಆಲ್​ರೌಂಡರ್​​ಗಳಲ್ಲಿ ಇವರೂ ಒಬ್ಬರು. 

ಇಂಗ್ಲೆಂಡ್ ಡೊಮೆಸ್ಟಿಕ್ ಕ್ರಿಕೆಟ್​ನಲ್ಲಿ ಆಲ್ರೌಂಡ್ ಆಟದಿಂದ ಮಿಂಚಿದ್ದ ಲಿಯಾಮ್ ಲಿವಿಂಗ್‌ಸ್ಟೋನ್, 2017ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ್ರು. ಈಗ ಇಂಗ್ಲೆಂಡ್ ಒನ್​ಡೇ ಮತ್ತು ಟಿ20 ಟೀಮ್​​​ನಲ್ಲಿ ಪರ್ಮನೆಂಟ್ ಪ್ಲೇಸ್ ಇದೆ. ಮೂರು ಒನ್​ಡೇಯಿಂದ 72 ರನ್​ ಗಳಿಸಿ, ಒಂದು ವಿಕೆಟ್ ಪಡೆದಿದ್ದರೆ, 17 ಟಿ20 ಮ್ಯಾಚ್​ಗಳಲ್ಲಿ 285 ರನ್ ಜೊತೆ 12 ವಿಕೆಟ್​ಗಳನ್ನ ತಮ್ಮ ಖಾತೆಗೆ ಹಾಕಿಕೊಂಡಿದ್ದಾರೆ. 9 ಕ್ಯಾಚ್​ಗಳನ್ನೂ ಹಿಡಿದಿದ್ದಾರೆ. ಟಿ20 ಕ್ರಿಕೆಟ್​ನಲ್ಲಿ ಇಂಗ್ಲೆಂಡ್ ಪರ ವೇಗದ ಶತಕ ಬಾರಿಸಿದ ದಾಖಲೆಯನ್ನೂ ಮಾಡಿದ್ದಾರೆ. ಪವರ್​ ಹಿಟ್ಟರ್ ಎಂದೇ ಫೇಮಸ್.

ಆಫ್ ಬ್ರೇಕ್, ಲೆಗ್ ಬ್ರೇಕ್, ಫಾಸ್ಟ್ ಬೌಲಿಂಗ್​:

ಇದೇ ಲಿಯಾಮ್ ಲಿಯಾಮ್ ಲಿವಿಂಗ್​ಸ್ಟೋನ್​ ಸ್ಪೆಷಾಲಿಟಿ. ಈತ ಅದ್ಭುತ ಬ್ಯಾಟ್ಸ್​ಮನ್ ಮತ್ತು ಫೀಲ್ಡರ್ ಮಾತ್ರವಲ್ಲ, ಮಾರಕ ಬೌಲರ್ ಕೂಡ ಹೌದು. ಲಿಯಾಮ್ ಮೂಲತಃ ವೇಗದ ಬೌಲರ್. ಆದರೆ ಸ್ಪಿನ್ ಬೌಲಿಂಗ್ ಸಹ ಮಾಡ್ತಾರೆ. ಸ್ಪಿನ್​ನಲ್ಲೂ ಆಫ್ ಸ್ಪಿನ್ ಮತ್ತು ಲೆಗ್​ ಸ್ಪಿನ್ ಬೌಲಿಂಗ್ ಮಾಡಿ ಎದುರಾಳಿಯನ್ನ ಕಾಡುತ್ತಾರೆ. ಹೀಗಾಗಿನೇ ಲಿವಿಂಗ್ ಸ್ಟೋನ್ ವಿಶ್ವ ಕ್ರಿಕೆಟ್​ನಲ್ಲಿ ಸ್ಪೆಷಲ್ ಆಲ್ರೌಂಡರ್ ಲಿಸ್ಟ್​​ಗೆ ಸೇರಿರೋದು.

IPL 2022: ಆರ್​​ಸಿಬಿ ತಂಡದಲ್ಲಿ ಮ್ಯಾಚ್ ಫಿನಿಶರ್ 'ಎಂ ಎಸ್ ಧೋನಿ'..!

ಪಂಜಾಬ್ ಕಿಂಗ್ಸ್​​ನಲ್ಲಿ ಈತನೇ ಕಿಂಗ್

ಈ ಸಲದ ಐಪಿಎಲ್ ಬಿಡ್​​​​ನಲ್ಲಿ ಪಂಜಾಬ್ ಕಿಂಗ್ಸ್ (Punjab Kings)​ ಬರೋಬ್ಬರಿ 11.5 ಕೋಟಿ ಕೊಟ್ಟು ಲಿಯಾಮ್ ಲಿವಿಂಗ್‌ಸ್ಟೋನ್ ಅವರನ್ನ ಖರೀದಿಸಿತ್ತು. ಈ ಬಾರಿಯ ಹರಾಜಿನಲ್ಲಿ ಅತಿಹೆಚ್ಚು ಮೊತ್ತಕ್ಕೆ ಸೇಲ್ ಆದ ವಿದೇಶಿ ಆಟಗಾರ ಎನಿಸಿಕೊಂಡಿರೋ ಲಿಯಾಮ್, ಪಡೆದ ಕಾಸಿಗೆ ತಕ್ಕಂತೆ ಆಡ್ತಿದ್ದಾರೆ. ಮೂರು ಮ್ಯಾಚ್​​ನಿಂದ 98 ರನ್ ಮತ್ತು ಎರಡು ವಿಕೆಟ್ ಪಡೆದಿದ್ದಾರೆ. ಸಿಎಸ್​ಕೆ ವಿರುದ್ಧ 60 ರನ್ ಸಿಡಿಸಿದ್ದರಿಂದಲೇ ಪಂಜಾಬ್ ಬೃಹತ್ ಮೊತ್ತ ಕೂಡಿಹಾಕಿ ಗೆಲುವು ಪಡೆಯಲು ಸಾಧ್ಯವಾಗಿದ್ದು. ಇನ್ನು ಐಪಿಎಲ್(IPL) ಪಂದ್ಯಗಳು ನಡೆಯುತ್ತಿರುವ ನಾಲ್ಕು ಪಿಚ್​ಗಳೂ ಸ್ಪಿನ್ನರ್ಸ್​ಗೆ ನೆರವಾಗ್ತಿವೆ. ಹಾಗಾಗಿ ಲಿವಿಂಗ್‌ಸ್ಟೋನ್, ವೇಗದ ಬೌಲಿಂಗ್ ಬದಲಿಗೆ ಸ್ಪಿನ್ ಬೌಲಿಂಗ್ ಮಾಡ್ತಿದ್ದಾರೆ. ಮೂರು ಪಂದ್ಯದಲ್ಲೂ ಬೌಲಿಂಗ್ ಮಾಡಿದ್ರೂ ಸಿಎಸ್​ಕೆ ವಿರುದ್ಧ 2 ವಿಕೆಟ್​ ಪಡೆದ್ರು. ಇದಕ್ಕಾಗಿನೇ ಈ ಐಪಿಎಲ್​ನಲ್ಲಿ ಲಿಯಾಮ್ ಲಿವಿಂಗ್‌ಸ್ಟೋನ್ ಸ್ಪೆಷಲ್ ಪ್ಲೇಯರ್ ಎನಿಸಿಕೊಂಡಿರೋದು. ನಾವು ಸಕಲಕಲಾವಲ್ಲಭ ಅಂತಿರೋದು.

ಮಯಾಂಕ್‌ ಅಗರ್‌ವಾಲ್‌ ನೇತೃತ್ವದ ಪಂಜಾಬ್ ಕಿಂಗ್ಸ್‌ ತಂಡವು ಮೂರು ಪಂದ್ಯಗಳನ್ನಾಡಿ ಎರಡು ಗೆಲುವು ಹಾಗೂ ಒಂದು ಸೋಲುಗಳೊಂದಿಗೆ 4 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಬಲಿಷ್ಠ ತಂಡಗಳನ್ನು ಬಗ್ಗುಬಡಿದು ಆತ್ಮವಿಶ್ವಾಸದಿಂದ ಬೀಗುತ್ತಿರುವ ಪಂಜಾಬ್ ತಂಡವು ಚೊಚ್ಚಲ ಐಪಿಎಲ್‌ ಟ್ರೋಫಿ ಮೇಲೆ ಕಣ್ಣಿಟ್ಟಿದೆ.