Anushka to Aditi: ಸ್ಟಾರ್ ಕ್ರಿಕೆಟರ್ಸ್‌ನ ಹಾಟ್ ಪತ್ನಿಯರು ಮತ್ತು ಗರ್ಲ್‌ಫ್ರೆಂಡ್ಸ್
ಕ್ರೀಡೆಗಳು ಮತ್ತು ಶೋ ಬಿಜ್ ಎರಡು ವಿಭಿನ್ನ ಕ್ಷೇತ್ರಗಳಾದರೂ ಸಂಬಂಧಗಳು ಅಥವಾ ಮದುವೆಗಳ ವಿಷಯಕ್ಕೆ ಬಂದಾಗ ಅವುಗಳು ಪರಸ್ಪರ ಒಂದಾಗಿವೆ. ಅನೇಕ ಭಾರತೀಯ ಕ್ರಿಕೆಟಿಗರು ಬಾಲಿವುಡ್ ನಟಿ ಅಥವಾ ಮಾಡೆಲ್‌ಗಳನ್ನು ಮದುವೆಯಾಗಿರುವ ಉದಾಹರಣೆಗಳಿವೆ. ಇನ್ನು ಕೆಲವು ಬಾರಿ ನಟಿ ಅಥವಾ ಮಾಡೆಲ್‌ನೊಂದಿಗೆ ಕ್ರಿಕೆಟಿಗರು ಡೇಟಿಂಗ್ ಮಾಡುತ್ತಿದ್ದಾರೆ ಎಂದು ವದಂತಿಗಳು ಆಗಾಗ ಕೇಳಿ ಬರುತ್ತಲಿರುತ್ತವೆ. ಭಾರತೀಯ ಕ್ರಿಕೆಟಿಗರ ಮಾಡೆಲ್ ಆಥವಾ ನಟಿ ಪತ್ನಿ ಅಥವಾ ಗರ್ಲ್‌ಫ್ರೆಂಡ್ಸ್ ವಿವರ ಇಲ್ಲಿದೆ.
Image: Anushka Sharma/Instagram
ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ:
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ಕ್ರೀಡೆ ಮತ್ತು ಬಾಲಿವುಡ್ ಕ್ಷೇತ್ರದ ಹಾಟೆಸ್ಟ್ ಜೋಡಿಗಳಲ್ಲಿ ಒಂದು. ವಿರಾಟ್ ಮತ್ತು ಅನುಷ್ಕಾ ಜೋಡಿಯನ್ನು ವಿರುಷ್ಕಾ ಎಂದು ಅವರ ಅಭಿಮಾನಿಗಳು ಪ್ರೀತಿಯಿಂದ ಕರೆಯುತ್ತಾರೆ. ಮದುವೆಯಾಗಿ ನಾಲ್ಕು ವರ್ಷಗಳೇ ಕಳೆದಿವೆ ಮತ್ತು ಈ ಜೋಡಿಗೆ ವಾಮಿಕಾ ಎಂಬ ಹೆಸರಿನ ಒಂದು ವರ್ಷದ ಮಗಳೂ ಇದ್ದಾಳೆ.
Image: Aditi Hundia/Instagram
ಅದಿತಿ ಹುಂಡಿಯಾ ಮತ್ತು ಇಶಾನ್ ಕಿಶನ್:
ಮಾಜಿ ಮಿಸ್ ಇಂಡಿಯಾ 2017 ಫೈನಲಿಸ್ಟ್ ಅದಿತಿ ಹುಂಡಿಯಾ ಮತ್ತು ಮುಂಬೈ ಇಂಡಿಯನ್ಸ್ ಕ್ರಿಕೆಟಿಗ ಇಶಾನ್ ಕಿಶನ್ ರಿಲೆಷನ್‌ಸಶಿಪ್‌ನಲ್ಲಿದ್ದಾರೆ ಎಂಬ ವದಂತಿಗಳಿವೆ. ಇಬ್ಬರೂ ತಮ್ಮ ವದಂತಿಯ ಸಂಬಂಧವನ್ನು ಇನ್ನೂ ಅಧಿಕೃತಗೊಳಿಸದಿದ್ದರೂ, ಅವರು ಸಾಮಾಜಿಕ ಮಾಧ್ಯಮದಲ್ಲಿ ಕೆಲವು PDA ಕ್ಷಣ ಹಂಚಿಕೊಂಡಿದ್ದಾರೆ
Image: Athiya Shetty/Instagram
ಅಥಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್:
ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆಎಲ್ ರಾಹುಲ್ ನೂತನ ತಂಡವನ್ನು ಅದ್ಭುತವಾಗಿ ಮುನ್ನಡೆಸುತ್ತಿದ್ದಾರೆ. ಅವರು ಸುನೀಲ್ ಶೆಟ್ಟಿ ಅವರ ಪುತ್ರಿ ಮತ್ತು ನಟಿ ಆಥಿಯಾ ಶೆಟ್ಟಿ ಅವರೊಂದಿಗೆ ಸಂಬಂಧ ಹೊಂದಿದ್ದಾರೆ. ಈ ಜೋಡಿ ಕೆಲವು ಬ್ರ್ಯಾಂಡ್‌ಗಳಿಗಾಗಿ ಒಟ್ಟಿಗೆ ಕೆಲವು ಫೋಟೋಶೂಟ್‌ಗಳನ್ನು ಮಾಡಿದ್ದಾರೆ.
Image: Natasa Stakovic/Instagram
ನತಾಸಾ ಸ್ಟಾಂಕೋವಿಕ್ ಮತ್ತು ಹಾರ್ದಿಕ್ ಪಾಂಡ್ಯ:
ಕ್ರಿಕೆಟ್ ಮತ್ತು ಶೋಬಿಜ್ ಪ್ರಪಂಚದ ಮತ್ತೊಂದು ಹಾಟ್ ಜೋಡಿ ನಟಾಸಾ ಸ್ಟಾಂಕೋವಿಕ್ ಮತ್ತು ಹಾರ್ದಿಕ್ ಪಾಂಡ್ಯ. ನತಾಸಾ ಬಾಲಿವುಡ್‌ನಲ್ಲಿ ಜನಪ್ರಿಯ ಡ್ಯಾನ್ಸ್ ನಂಬರ್‌ಗಳನ್ನು ಮಾಡಿದ್ದರೆ, ಹಾರ್ದಿಕ್ ಗುಜರಾತ್ ಟೈಟಾನ್ಸ್‌ಗೆ ನಾಯಕರಾಗಿದ್ದಾರೆ. ಅವರ ಮಗ ಅಗಸ್ತ್ಯ ಜುಲೈ 30, 2020 ರಂದು ಜನಿಸಿದ್ದಾನೆ.
Image: Hazel Keech/Instagram
ಹೇಝೆಲ್ ಕೀಚ್ ಮತ್ತು ಯುವರಾಜ್ ಸಿಂಗ್:
ಈ ಜೋಡಿಯು ನಿಸ್ಸಂದೇಹವಾಗಿ ಅತ್ಯಂತ ಆರಾಧ್ಯ ಜೋಡಿಗಳಲ್ಲಿ ಒಂದಾಗಿದೆ. ಹಿಂದೆ, ಯುವರಾಜ್ ಸಿಂಗ್ ಅವರು ಹೇಜೆಲ್ ಕೀಚ್ ಅವರೊಂದಿಗೆ ಮದುವೆಯಾಗುವ ಮೊದಲು ಕೆಲವು ಬಾಲಿವುಡ್ ಮಹಿಳೆಯರೊಂದಿಗೆ ಸಂಪರ್ಕ ಹೊಂದಿದ್ದರು. 2016 ರಲ್ಲಿ ವಿವಾಹವಾದ ಮಾಜಿ ಕ್ರಿಕೆಟಿಗ ಮತ್ತು ಅವರ ಪತ್ನಿ ಈ ವರ್ಷದ ಜನವರಿಯಲ್ಲಿ ಗಂಡು ಮಗುವಿಗೆ ಪೋಷಕರಾದರು.
Image: Sagarika Ghatge/Instagram
ಸಾಗರಿಕಾ ಘಾಟ್ಗೆ ಮತ್ತು ಜಹೀರ್ ಖಾನ್:
ಚಕ್ ದೇ ಇಂಡಿಯಾ ಗರ್ಲ್ ಸಾಗರಿಕಾ ಘಾಟ್ಗೆ ನವೆಂಬರ್ 2017 ರಲ್ಲಿ ಜಹೀರ್ ಖಾನ್ ಅವರನ್ನು ವಿವಾಹವಾದರು. ಜಹೀರ್ ಖಾನ್ ಸಾಗರಿಕಾ ಮದುವೆಗೂ ಮೊದಲು ಸ್ವಲ್ಪ ಸಮಯದವರೆಗೆ ಡೇಟಿಂಗ್ ಮಾಡಿದರು. ಸಾಗರಿಕಾ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಕಾಗಲ್‌ನ ಮರಾಠಾ ಸಂಸ್ಥಾನದಿಂದ ಬಂದವರು.
Image: Geeta Basra/Instagram
ಗೀತಾ ಬಸ್ರಾ ಮತ್ತು ಹರ್ಭಜನ್ ಸಿಂಗ್:
ಭಾರತದ ಮಾಜಿ ಕ್ರಿಕೆಟಿಗರಾದ ಹರ್ಭಜನ್ ಸಿಂಗ್ ಅವರು ಬಾಲಿವುಡ್ ನಟಿ ಗೀತಾ ಬಸ್ರಾ ಅವರನ್ನು ಅಕ್ಟೋಬರ್ 29, 2015 ರಂದು ವಿವಾಹವಾದರು. ದಂಪತಿಗಳು ಆರು ವರ್ಷದ ಮಗಳು ಮತ್ತು ಒಂಬತ್ತು ತಿಂಗಳ ಮಗನನ್ನು ಹೊಂದಿದ್ದಾರೆ.