ಕ್ವಿಂಟನ್ ಡಿ ಕಾಕ್ ಬಾರಿಸಿದ ಬಿರುಸಿನ ಅರ್ಧಶತಕ ಹಾಗೂ ಇತರ ಬ್ಯಾಟ್ಸ್ ಮನ್ ಗಳ ಸಂಘಟಿತ ಬ್ಯಾಟಿಂಗ್ ನೆರವಿನಿಂದ ಲಕ್ನೋ ಸೂಪರ್ ಜೈಂಟ್ಸ್ ತಂಡ ಕೋಲ್ಕತ ನೈಟ್ ರೈಡರ್ಸ್ ತಂಡದ ಗೆಲುವುಗೆ ಸ್ಮರ್ಧಾತ್ಮಕ ಮೊತ್ತದ ಸವಾಲು ನೀಡಿದೆ. 

ಪುಣೆ (ಮೇ.7): ನಾಯಕ ಕೆಎಲ್ ರಾಹುಲ್ ಮೊದಲ ಓವರ್ ನಲ್ಲಿಯೇ ಡೈಮಂಡ್ ಡಕ್ (Diamond Duck) ಎದುರಿಸಿದರೂ ಉತ್ತಮವಾಗಿ ಚೇತರಿಸಿಕೊಂಡ ಲಕ್ನೋ ಸೂಪರ್ ಜೈಂಟ್ಸ್ (Lucknow Super Giants ) ತಂಡ 15ನೇ ಆವೃತ್ತಿಯ ಐಪಿಎಲ್ ನಲ್ಲಿ (IPL 2022) ಮಾಜಿ ಚಾಂಪಿಯನ್ ಕೋಲ್ಕತ ನೈಟ್ ರೈಡರ್ಸ್ (Kolkata Knight Riders) ವಿರುದ್ಧ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿದೆ.

ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ಶನಿವಾರ ನಡೆದ ದಿನದ 2ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್, ಕ್ವಿಂಟನ್ ಡಿ ಕಾಕ್ ಬಾರಿಸಿದ ಆಕರ್ಷಕ ಅರ್ಧಶತಕ ಹಾಗೂ ಇನ್ನಿಂಗ್ಸ್ ನ ಕೊನೆಯಲ್ಲಿ ಮಾರ್ಕಸ್ ಸ್ಟೋಯಿನಿಸ್ ಆಡಿದ ಸ್ಫೋಟಕ ಇನ್ನಿಂಗ್ಸ್ ನಿಂದ 7 ವಿಕೆಟ್ ಗೆ 176 ರನ್ ಕಲೆಹಾಕಿತು.

ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡ ಮೊದಲ ಓವರ್ ನಲ್ಲಿಯೇ ನಾಯಕ ಕೆಎಲ್ ರಾಹುಲ್ ವಿಕೆಟ್ ಕಳೆದುಕೊಂಡಿತು. ಡೈಮಂಡ್ ಡಕ್ ಅವಮಾನವನ್ನು ಕೆಎಲ್ ರಾಹುಲ್ ಎದುರಿಸಿದರು. ಆದರೆ, ಇದು ತಂಡದ ಅಬ್ಬರದ ಆಟದ ಮೇಲೆ ಪರಿಣಾಮ ಬೀರಲಿಲ್ಲ. ಆರಂಭಿಕ ಕ್ವಿಂಟನ್ ಡಿ ಕಾಕ್ ಹಾಗೂ ದೀಪಕ್ ಹೂಡಾ ಜೋಡಿ ಮೊದಲ ವಿಕೆಟ್ ಗೆ 73 ರನ್ ಗಳ ಜೊತೆಯಾಟವಾಡಿದುರ. ಅದರಲ್ಲೂ ಮೊದಲ 6 ಓವರ್ ಗಳ ಪವರ್ ಪ್ಲೇ ಅವಧಿಯಲ್ಲಿ 66 ರನ್ ಸಿಡಿಸಿದರು. ಇದು ಹಾಲಿ ಋತುವಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಪವರ್ ಪ್ಲೇ ಅವಧಿಯಲ್ಲಿ ಬಾರಿಸಿದ ಗರಿಷ್ಠ ಸ್ಕೋರ್ ಆಗಿದೆ. ಅದಲ್ಲದೆ, ಪುಣೆಯ ಮೈದಾನದಲ್ಲಿ ಯಾವುದೇ ತಂಡ ಪವರ್ ಪ್ಲೇ ಅವಧಿಯಲ್ಲಿ ಬಾರಿಸಿದ ಗರಿಷ್ಠ ಮೊತ್ತ ಎನಿಸಿದೆ. 

ಭರ್ಜರಿ ಬ್ಯಾಟಿಂಗ್ ನಡೆಸಿದ ಕ್ವಿಂಟನ್ ಡಿ ಕಾಕ್ 29 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್ ಇದ್ದ 50 ರನ್ ಸಿಡಿಸಿದರು. 27 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಡಿ ಕಾಕ್, ಸುನೀಲ್ ನಾರಾಯಣ್ ಎಸೆತದಲ್ಲಿ ವಿಕೆಟ್ ಒಪ್ಪಿಸಿದಾಗ ಲಕ್ನೋ ತಂಡ ಓವರ್ ಗೆ ತಲಾ 10ರಂತೆ 73 ರನ್ ಬಾರಿಸಿತ್ತು. ಅ ಬಳಿಕ ದೀಪಕ್ ಹೂಡಾ (41ರನ್, 27 ಎಸೆತ, 4 ಬೌಂಡರಿ, 2 ಸಿಕ್ಸರ್) ಹಾಗೂ ಕೃನಾಲ್ ಪಾಂಡ್ಯ (25ರನ್, 27 ಎಸೆತ, 2 ಬೌಂಡರಿ) ಮೂರನೇ ವಿಕೆಟ್ ಗೆ 34 ರನ್ ಜೊತೆಯಾಟವಾಡಿ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು. 15 ರನ್ ಗಳ ಅಂತರದಲ್ಲಿ ಇವರಿಬ್ಬರನ್ನೂ ಡಗ್ ಔಟ್ ಮಾಡುವ ಮೂಲಕ ಆಂಡ್ರೆ ರಸೆಲ್, ಕೆಕೆಆರ್ ತಂಡಕ್ಕೆ ಮೇಲುಗೈ ನೀಡಿದರು.

IPL 2022: ಪಂಜಾಬ್ ಕಿಂಗ್ಸ್‌ ತಂಡವನ್ನು ಮಣಿಸಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದ ರಾಜಸ್ಥಾನ ರಾಯಲ್ಸ್

122 ರನ್ ಗೆ 4 ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ ಆಯುಷ್ ಬಡೋನಿ ಹಾಗೂ ಮಾರ್ಕಸ್ ಸ್ಟೋಯಿನಿಸ್ (28ರನ್, 14 ಎಸೆತ, 1 ಬೌಂಡರಿ, 3 ಸಿಕ್ಸರ್) ಜೋಡಿ ಅಬ್ಬರದ 38 ರನ್ ಜೊತೆಯಾಟದಿಂದಾಗಿ ಲಕ್ನೋ ತಂಡ 160ರ ಗಡಿ ದಾಟುವಲ್ಲಿ ಯಶ ಕಂಡಿತ್ತು.

IPL 2022: ಯಶಸ್ವಿ ಅಬ್ಬರ, ರಾಜಸ್ಥಾನ ರಾಯಲ್ಸ್‌ಗೆ ರೋಚಕ ಜಯ..!

ಕೆಎಲ್ ರಾಹುಲ್ ಡೈಮಂಡ್ ಡಕ್: 
ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆಎಲ್ ರಾಹುಲ್ (KL Rahul) ಡೈಮಂಡ್ ಡಕ್ ಗೆ ಔಟಾದರು. ಪಂದ್ಯದಲ್ಲೂ ಒಂದೂ ಎಸೆತ ಎದುರಿಸಿದೇ ಔಟಾಗುವ ಪ್ರಕ್ರಿಯೆಗೆ ಡೈಮಂಡ್ ಡಕ್ ಎನ್ನಲಾಗುತ್ತದೆ. ಇನ್ನಿಂಗ್ಸ್ ನ 5ನೇ ಎಸೆತದಲ್ಲಿ ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್ ಎಸೆದ ನಿಖರ ಥ್ರೋಗೆ ರನ್ ಔಟ್ ಆದರು. ಆ ಮೂಲಕ ಹಾಲಿ ಐಪಿಎಲ್ ನಲ್ಲಿ ಮೂರನೇ ಡಕ್ ಸಂಪಾದಿಸಿದರು. ಇದಕ್ಕೂ ಮುನ್ನ ವಾಂಖೆಡೆಯಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ವಿರುದ್ಧ ಗೋಲ್ಡನ್ ಡಕ್ ಅವಮಾನ ಕಂಡಿದ್ದರು.