* ಐಪಿಎಲ್‌ನಲ್ಲಿ ಕಮಾಲ್ ಮಾಡುತ್ತಿದೆ ಕುಲ್ಚಾ ಜೋಡಿ* ಸದ್ಯ ಪರ್ಪಲ್‌ ಕ್ಯಾಪ್ ಮುಡಿಗೇರಿಸಿಕೊಂಡಿದ್ದಾರೆ ಯುಜುವೇಂದ್ರ ಚಹಲ್* ಡೆಲ್ಲಿ ಪರ ಮಿಂಚುತ್ತಿದ್ದಾರೆ ಮಣಿಕಟ್ಟು ಸ್ಪಿನ್ನರ್

ಮುಂಬೈ(ಏ.21): ಸೆಪ್ಟೆಂಬರ್​​ 8, 2021. ಈ ದಿನಂದು ಎರಡು ಘಟನೆ ನಡೆದಿತ್ತು. ಟಿ20 ವಿಶ್ವಕಪ್​ಗೆ ಟೀಂ​​ ಇಂಡಿಯಾ (Team India) ಅನೌನ್ಸ್ ಆಯ್ತು, ಜೊತೆಗೆ ಇಬ್ಬರು ಸ್ಟಾರ್ ಸ್ಪಿನ್ನರ್ಸ್​ಗೆ ದೊಡ್ಡ ಶಾಕ್​​​ ಎದುರಾಯ್ತು. ಕುಲ್ಚಾ ಜೋಡಿ ಖ್ಯಾತಿಯ ಕುಲ್​ದೀಪ್​ ಯಾದವ್ (Kuldeep Yadav) ​ ಹಾಗೂ ಯುಜವೇಂದ್ರ ಚಹಲ್​ರನ್ನ (Yuzvendra Chahal) ಟಿ20 ವಿಶ್ವಕಪ್​​​ನಿಂದ ಕೈಬಿಡಲಾಯ್ತು. ಅದ್ಯಾವ ಮಾನದಂಡದಲ್ಲಿ ಬಿಸಿಸಿಐ ಸೆಲೆಕ್ಟರ್ಸ್​ ತಂಡವನ್ನ ಸೆಲೆಕ್ಟ್ ಮಾಡಿದ್ರೋ ಗೊತ್ತಿಲ್ಲ. ಆದ್ರೆ ಸ್ಟಾರ್ ಸ್ಪಿನ್ನರ್​​ಗಳಾದ ಚಹಲ್​ ಹಾಗೂ ಕುಲ್ದೀಪ್​ಗೆ ನಿಜಕ್ಕೂ ದೊಡ್ಡ ಮೋಸವಾಗಿತ್ತು. ಟಿ20 ಮಹಾಸಮರದ ಬಳಿಕನೂ ಇಬ್ಬರಿಗೆ ಕೆಲ ಕಾಲ ಟೀಂ​ ಇಂಡಿಯಾದಿಂದ ಗೇಟ್​ಪಾಸ್​ ಕೂಡ ನೀಡಲಾಯ್ತು. ಆದ್ರೆ ಈ ವರ್ಷಾರಂಭದಲ್ಲಿ ಮತ್ತೆ ಕುಲ್ಚಾ ಜೋಡಿ ಮತ್ತೆ ಜೊತೆಯಾಗಿ ಕಣಕ್ಕಿಳಿದ್ರು.

ಅಂದು ಯಾವ ಸೆಲೆಕ್ಟರ್ಸ್​ ಟಿ20 ವಿಶ್ವಕಪ್​ಗೆ ಕುಲ್ಚಾ ಜೋಡಿಯನ್ನ ಬಿಟ್ಟು ಅವಮಾನಿಸಿತ್ತೋ, ಯಾವ ಆಯ್ಕೆಗಾರರು ಇಬ್ಬರ ಕೆಪಾಸಿಟಿ ಮೇಲೆ ಅನುಮಾನ ಪಟ್ಟು ತಂಡದಿಂದ ಕಿಕೌಟ್​​ ಮಾಡಿದ್ರೋ ಇಂದು ಅದೇ ಸೆಲೆಕ್ಟರ್ಸ್​ ಮೂಗಿನ ಮೇಲೆ ಕೈಯಿಟ್ಟು ನೋಡುವಂತೆ ಪ್ರದರ್ಶನವನ್ನ ಕುಲ್ಚಾ ಜೋಡಿ ಐಪಿಎಲ್​​ನಲ್ಲಿ ನೀಡ್ತಿದೆ. 

15ನೇ ಐಪಿಎಲ್​​ನಲ್ಲಿ ಯುಜಿ-ಕುಲ್ದೀಪ್​​ ಬೊಂಬಾಟ್​ ಪ್ರದರ್ಶನ: 

ಹೌದು, ಪ್ರಸಕ್ತ ಐಪಿಎಲ್​​ನಲ್ಲಿ ಟೀಂ​ ಇಂಡಿಯಾದ ಯುಜವೇಂದ್ರ ಚಹಲ್​ ಹಾಗೂ ಕುಲ್ದೀಪ್​​​​​​​ ಯಾದವ್ ಸಾಲಿಡ್​ ಪ್ರದರ್ಶನ ನೀಡ್ತಿದ್ದಾರೆ. ತನ್ನ ಸ್ಪಿನ್​​ ಕೈಚಳಕದಿಂದ ಇಡೀ ಐಪಿಎಲ್​ ಲೋಕವನ್ನ ಮಂತ್ರ ಮುಗ್ದರನ್ನಾಗಿಸಿದ್ದಾರೆ. ವಿಕೆಟ್​​​ ಬೇಟೆಗಾಗಿ ಇಬ್ಬರು ಜಿದ್ದಿಗೆ ಬಿದ್ದಿದ್ದಾರೆ. ಒಮ್ಮೆ ಚೈನಾಮ್ಯಾನ್ ಕುಲ್ದೀಪ್​​​ ಮೇಲುಗೈ ಸಾಧಿಸಿದ್ರೆ, ಇನ್ನೊಮ್ಮೆ ಚಹಲ್​ ಮೇಲುಗೈ ಸಾಧಿಸ್ತಿದ್ದಾರೆ. ಇಬ್ಬರು ಸೇರಿ ಕಲರ್​ಫುಲ್ ಟೂರ್ನಿಯಲ್ಲಿ ಒಟ್ಟು 28 ವಿಕೆಟ್​​ ಪಡೆದು ಹಲ್​​ಚಲ್ ಎಬ್ಬಿಸಿದ್ದಾರೆ.

IPL 2022: ವಿಶ್ವದ ನಂ. 1 ಟೆಸ್ಟ್ ಬೌಲರ್​, ಐಪಿಎಲ್​ನಲ್ಲಿ ಪ್ಲಾಫ್ ಶೋ..!

17 ವಿಕೆಟ್​ ಕಬಳಿಸಿದ ಚಹಲ್​​ ಪರ್ಪಲ್ ​​ಕ್ಯಾಪ್​​ಮ್ಯಾನ್​​: ಆರ್​ಸಿಬಿಯಿಂದ ಹೊರಬಿದ್ದ ಚಹಲ್​​, ರಾಜಸ್ಥಾನ ಸೇರಿದ ಬಳಿಕ ಇನ್ನುಷ್ಟು ವೈಲೆಂಟ್ ಆಗಿದ್ದಾರೆ. ಪ್ರತಿ ಪಂದ್ಯದಲ್ಲೂ ಎದುರಾಳಿ ಕಿಲ್ಲರ್ ಆಗಿ ಪರಿಣಮಿಸಿದ್ದಾರೆ. ಈವರೆಗೆ ಆರು ಪಂಧ್ಯಗಳನ್ನಾಡಿರುವ ಯುಜಿ 7.33 ರ ಎಕಾನಮಿಯಲ್ಲಿ 17 ವಿಕೆಟ್​ ಕಬಳಿಸಿ ಪರ್ಪಲ್​ ಕ್ಯಾಪ್​ ಉಳಿಸಿಕೊಂಡಿದ್ದಾರೆ. ಅಲ್ಲದೇ ಇದೇ ಮೊದಲ ಬಾರಿ ಹ್ಯಾಟ್ರಿಕ್​​ ವಿಕೆಟ್​​ ಪಡೆದ ಗರಿಮೆ ಕೂಡ ಇವರದ್ದಾಗಿದೆ.

11 ವಿಕೆಟ್​​​​​ ಪಡೆದು ಚಹಲ್​​​ಗೆ ಪ್ರಬಲ ಸ್ಪರ್ಧೆ ನೀಡ್ತಿದ್ದಾರೆ ಕುಲ್ದೀಪ್​: ಇನ್ನು ಕುಲ್ದೀಪ್​​ ಕೂಡ ಈ ಬಾರಿ ಐಪಿಎಲ್​​ನಲ್ಲಿ ಸ್ಪಿನ್​ ಮ್ಯಾಜಿಕ್​ ಮಾಡ್ತಿದ್ದಾರೆ. 5 ಪಂದ್ಯಗಳಿಂದ 11 ವಿಕೆಟ್​ ಕಬಳಿಸಿ ಗರಿಷ್ಠ ವಿಕೆಟ್ ಪಡೆದ 3ನೇ ಬೌಲರ್ ಅನ್ನಿಸಿಕೊಂಡಿದ್ದಾರೆ. ಒಂದು ಬಾರಿ 4 ವಿಕೆಟ್​​​​ ಪಡೆದು ಚಹಲ್​ಗೆ ಪ್ರಬಲ ಸ್ಪರ್ಧಿಯಾಗಿ ಹೊರಹೊಮ್ಮಿದ್ದಾರೆ.

ಒಟ್ಟಿನಲ್ಲಿ ಟಿ20 ವಿಶ್ವಕಪ್​​​​​​​​​​​​​​​ನಲ್ಲಿ ಟೀಮ್​​​ ಇಂಡಿಯಾದ ಹೊರಬಿದ್ದ ಕುಲ್ಚಾ ಜೋಡಿ ರಂಗಿನ್​ ಆಟದಲ್ಲಿ ಸ್ಪಿನ್​​​ ಮ್ಯಾಜಿಕ್​​​ ನಡೆಸಿದ್ದಾರೆ. ಆ ಮೂಲಕ ಮುಂಬರೋ ಟಿ20 ವಿಶ್ವಕಪ್​​ನಲ್ಲಿ ಸ್ಥಾನ ಪಡೆದೇ ತೀರುವ ಛಲ ಇವರದ್ದು. ಯುಜಿ-ಕುಲ್ದೀಪ್​ರ ಆ ಆಸೆ ಈಡೇರಲಿ.