ಐಪಿಎಲ್ ಲೀಗ್ ಟೂರ್ನಿಯ 30ನೇ ಪಂದ್ಯ ಟಾಸ್ ಗೆದ್ದ ಕೆಕೆಆರ್‌ ಬೌಲಿಂಗ್ ಆಯ್ಕೆ ಬ್ರೇಬೋರ್ನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯ

ಮುಂಬೈ(ಏ.18): IPL 2022 ಟೂರ್ನಿಯ 30ನೇ ಲೀಗ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಕೆಕೆಆರ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಕೆಕೆಆರ್ ತಂಡದಲ್ಲಿ ಒಂದು ಬದಲಾವಣೆ ಮಾಡಿದೆ. ಅಮನ್ ಖಾನ್ ಬದಲು ಶಿವಂ ಮಾವಿ ತಂಡ ಸೇರಿಕೊಂಡಿದ್ದಾರೆ.ರಾಜಸ್ಥಾನ ರಾಯಲ್ಸ್ ತಂಡದಲ್ಲಿ 3 ಬದಲಾವಣೆ ಮಾಡಲಾಗಿದೆ. ಕರುಣ್ ನಾಯರ್, ಒಬೆಡ್ ಮೆಕೋಯ್ ಹಾಗೂ ಟ್ರೆಂಟ್ ಬೋಲ್ಟ್ ತಂಡ ಸೇರಿಕೊಂಡಿದ್ದಾರೆ.

ಕೋಲ್ಕತಾ ನೈಟ್ ರೈಡರ್ಸ್ ಪ್ಲೇಯಿಂಗ್ 11
ವೆಂಕಟೇಶ್ ಅಯ್ಯರ್, ಆ್ಯರೋನ್ ಫಿಂಚ್, ಶ್ರೇಯಸ್ ಅಯ್ಯರ್(ನಾಯಕ), ನಿತೀಶ್ ರಾಣಾ, ಆ್ಯಂಡ್ರೆ ರಸೆಲ್, ಶೆಲ್ಡಾನ್ ಜಾಕ್ಸನ್, ಸುನಿಲ್ ನರೈನ್, ಪ್ಯಾಟ್ ಕಮಿನ್ಸ್, ಶಿವಂ ಮಾವಿ, ಉಮೇಶ್ ಯಾದವ್, ವರುಣ್ ಚಕ್ರವರ್ತಿ

Athiya Shetty ಮಾತ್ರವಲ್ಲ, ಈ ನಟಿಯರ ಜೊತೆ KL Rahulಗೆ ಲಿಂಕ್‌?

ರಾಜಸ್ಥಾನ ರಾಯಲ್ಸ್ ಪ್ಲೇಯಿಂಗ್ 11
ಜೋಸ್ ಬಟ್ಲರ್, ದೇವದತ್ ಪಡಿಕ್ಕಲ್, ಸಂಜು ಸ್ಯಾಮ್ಸನ್(ನಾಯಕ), ಕರುಣ್ ನಾಯರ್, ಶಿಮ್ರೋನ್ ಹೆಟ್ಮೆಯರ್, ರಿಯಾನ್ ಪರಾಗ್, ಆರ್ ಅಶ್ವಿನ್, ಟ್ರೆಂಟ್ ಬೋಲ್ಟ್, ಪ್ರಸಿದ್ಧ್ ಕೃಷ್ಣ, ಒಬೆಡ್ ಮೆಕೋಯ್, ಯುಜುವೇಂದ್ರ ಚಹಾಲ್

ಬ್ರೇಬೋರ್ನ್ ಕ್ರೀಡಾಂಗಣದಲ್ಲಿ ಚೇಸಿಂಗ್ ಮಾಡಿದ ತಂಡ ಹೆಚ್ಚಿನ ಯಶಸ್ಸು ಸಾಧಿಸಿದೆ. ಡ್ಯೂ ಫ್ಯಾಕ್ಟರ್ ಕೂಡ ಇಲ್ಲಿ ಪರಿಣಾಮ ಬೀರಲಿದೆ. ಬ್ರೇಬೋರ್ನ್ ಕ್ರೀಡಾಂಗಣದಲ್ಲಿ ಇದುವರೆಗೆ ಕೆಕೆಆರ್‌ಗೆ ಗೆಲುವ ಮರೀಚಿಕೆಯಾಗಿದೆ. ಹೀಗಾಗಿ ರಾಜಸ್ಥಾನ ವಿರುದ್ದ ಮೊದಲ ಗೆಲುವಿನ ನಿರೀಕ್ಷೆಯಲ್ಲಿದೆ. ರಾಜಸ್ಥಾನ ರಾಯಲ್ಸ್ ಬ್ರೇಬೋರ್ನ್‌ನಲ್ಲಿ ಆಡಿದ 4 ಪಂದ್ಯಗಳ ಪೈಕಿ 2ರಲ್ಲಿ ಗೆಲುವು ದಾಖಲಿಸಿದೆ.

ರಾಜಸ್ಥಾನ ರಾಯಲ್ಸ್ ಹಾಗೂ ಕೋಲ್ಕತಾ ನಡುವಿನ ಐಪಿಎಲ್ ಹೋರಾಟದಲ್ಲಿ ಕೆಕೆಆರ್ ಹೆಚ್ಚು ಮೇಲುಗೈ ಸಾಧಿಸಿದೆ. ಕೆಕೆಆರ್ 13 ಗೆಲುವು ದಾಖಲಿಸಿದ್ದರೆ, ರಾಜಸ್ಥಾನ 11 ಗೆಲುವು ಕಂಡಿದೆ.

ಐಪಿಎಲ್ ಟೂರ್ನಿಯ ಅಂಕಪಟ್ಟಿಯಲ್ಲಿ ರಾಜಸ್ಥಾನ ರಾಯಲ್ಸ್ 5ನೇ ಸ್ಥಾನದಲ್ಲಿದೆ. ಇತ್ತ ಕೆಕೆಆರ್ 6ನೇ ಸ್ಥಾನದಲ್ಲಿದೆ. ರಾಜಸ್ಥಾನ ಆಡಿದ 5 ಪಂದ್ಯಗಲ್ಲಿ 3 ಗೆಲುವು ಕಂಡಿದೆ. ಇತ್ತ ಕೆಕೆಆರ್ 6 ಪಂದ್ಯದಗಳಲ್ಲಿ 3 ಗೆಲುವು ಹಾಗೂ 3 ಸೋಲು ಕಂಡಿದೆ.

IPL 2022 ಕಾರ್ತಿಕ್ ಬ್ಯಾಟಿಂಗ್, ಹೇಜಲ್‌ವುಡ್ ಬೌಲಿಂಗ್, ಡೆಲ್ಲಿ ಮಣಿಸಿದ ಆರ್‌ಸಿಬಿ

ಅಂಕಪಟ್ಟಿಯಲ್ಲಿ ಗುಜರಾತ್ ಲಯನ್ಸ್ ಮೊದಲ ಸ್ಥಾನ ಅಲಂಕರಿಸಿದೆ. ಆಡಿದ 6 ಪಂದ್ಯಗಳಲ್ಲಿ 5 ಗೆಲುವು ದಾಖಲಿಸಿದೆ. ಇನ್ನು ಲಖನೌ ಸೂಪರ್ ಜೈಂಟ್ಸ್ 6 ಪಂದ್ಯಗಳ ಪೈಕಿ 4 ಗೆಲುವು ದಾಖಲಿಸುವ ಮೂಲಕ 2ನೇ ಸ್ಥಾನದಲ್ಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 6ರಲ್ಲಿ 4 ಗೆಲುವು ದಾಖಲಿಸಿ 3ನೇ ಸ್ಥಾನದಲ್ಲಿದೆ. ಅದ್ಭುತ ಪ್ರದರ್ಶನದ ಮೂಲಕ ಗೆಲುವಿನ ಹಳಿಗೆ ಮರಳಿರುವ ಸನ್‌ರೈಸರ್ಸ್ ಹೈದರಾಬಾದ್ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ.

9 ಐಪಿಎಲ್‌ ತಂಡಗಳಲ್ಲಿ ಆಡಿದ ಫಿಂಚ್‌: ದಾಖಲೆ
ಆಸ್ಪ್ರೇಲಿಯಾ ಬ್ಯಾಟರ್‌ ಆ್ಯರೋನ್‌ ಫಿಂಚ್‌ ಐಪಿಎಲ್‌ನಲ್ಲಿ ವಿಶೇಷ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಶುಕ್ರವಾರ ಸನ್‌ರೈಸ​ರ್‍ಸ್ ವಿರುದ್ಧದ ಪಂದ್ಯದಲ್ಲಿ ಕೋಲ್ಕತಾ ತಂಡಕ್ಕೆ ಪಾದಾರ್ಪಣೆ ಮಾಡಿದ ಅವರು, ಐಪಿಎಲ್‌ನ 9 ವಿವಿಧ ತಂಡಗಳನ್ನು ಪ್ರತಿನಿಧಿಸಿದ ಮೊದಲ ಕ್ರಿಕೆಟಿಗ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. 2010ರಲ್ಲಿ ರಾಜಸ್ಥಾನ ರಾಯಲ್ಸ್‌ ಪರ ಆಡಿದ್ದ ಫಿಂಚ್‌ ಬಳಿಕ ಡೆಲ್ಲಿ ಡೇರ್‌ಡೆವಿಲ್ಸ್‌ (2011-12), ಪುಣೆ ವಾರಿಯ​ರ್‍ಸ್ ಇಂಡಿಯಾ(2013), ಸನ್‌ರೈಸ​ರ್‍ಸ್ ಹೈದರಾಬಾದ್‌ (2014), ಮುಂಬೈ ಇಂಡಿಯನ್ಸ್‌ (2015), ಗುಜರಾತ್‌ ಲಯನ್ಸ್‌(2016-17), ಕಿಂಗ್‌್ಸ ಇಲೆವೆನ್‌ ಪಂಜಾಬ್‌(2018) ಹಾಗೂ ರಾಯಲ್‌ ಚಾಲೆಂಜ​ರ್‍ಸ್ ಬೆಂಗಳೂರು(2020) ಪರ ಆಡಿದ್ದಾರೆ. 2022ರ ಹರಾಜಿನಲ್ಲಿ ಬಿಕರಿಯಾಗದಿದ್ದರೂ ಇಂಗ್ಲೆಂಡ್‌ನ ಅಲೆಕ್ಸ್‌ ಹೇಲ್ಸ್‌ ಹೊರಗುಳಿಯಲು ನಿರ್ಧರಿಸಿದ ಕಾರಣ ಅವರ ಬದಲಿಗರಾಗಿ ಕೆಕೆಆರ್‌ ತಂಡ ಫಿಂಚ್‌ ಅವರನ್ನು ಸೇರಿಸಿಕೊಂಡಿತ್ತು. ಪಾರ್ಥೀವ್‌ ಪಟೇಲ್‌ 6 ತಂಡಗಳ ಪರ ಆಡಿದ್ದಾರೆ.