Asianet Suvarna News Asianet Suvarna News

IPL 2022: ಲಖನೌ ತಂಡಕ್ಕೆ ರಾಹುಲ್‌ ಜತೆಗೆ ಇನ್ನಿಬ್ಬರು ಅಚ್ಚರಿಯ ಆಟಗಾರರ ರೀಟೈನ್‌..?

* 15ನೇ ಆವೃತ್ತಿಯ ಐಪಿಎಲ್‌ಗೆ ಹೊಸ ಎರಡು ತಂಡಗಳ ಭರ್ಜರಿ ಸಿದ್ದತೆ

* ಕೆ ಎಲ್‌ ರಾಹುಲ್ ಲಖನೌ ತಂಡ ಕೂಡಿಕೊಳ್ಳುವ ಸಾಧ್ಯತೆ

* ಅಹಮದಾಬಾದ್ ತಂಡದ ನಾಯಕರಾಗಲಿದ್ದಾರಾ ಹಾರ್ದಿಕ್ ಪಾಂಡ್ಯ?

IPL 2022 KL Rahul to Hardik Pandya Lucknow and Ahmedabad Team eyes on big players from the draft kvn
Author
Bengaluru, First Published Jan 14, 2022, 4:22 PM IST

ನವದೆಹಲಿ(ಜ.14): 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿ ಆರಂಭಕ್ಕೂ ಮುನ್ನ ಫೆಬ್ರವರಿ 12 ಹಾಗೂ 13ರಂದು ಬೆಂಗಳೂರಿನಲ್ಲಿ ಮೆಗಾ ಹರಾಜು (IPL Mega Auction) ನಡೆಯಲಿದೆ. 2022ರ ಐಪಿಎಲ್‌ನಲ್ಲಿ ಲಖನೌ (Lucknow) ಹಾಗೂ ಅಹಮದಾಬಾದ್ ತಂಡಗಳು ಸೇರಿದಂತೆ ಒಟ್ಟು 10 ತಂಡಗಳು ಪಾಲ್ಗೊಳ್ಳಲಿವೆ. ಮೆಗಾ ಹರಾಜಿಗೂ ಹೊಸ ಎರಡು ಫ್ರಾಂಚೈಸಿಗಳಿಗೆ ಗರಿಷ್ಠ ಮೂರು ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲು ಬಿಸಿಸಿಐ (BCCI) ಅವಕಾಶ ನೀಡಿದೆ. ಅದರಂತೆ ಈ ಎರಡು ತಂಡಗಳು ತಮಗೆ ಬೇಕಾದ ಆಟಗಾರರನ್ನು ಆಯ್ಕೆ ಮಾಡಿಕೊಂಡಿವೆ ಎಂದು ವರದಿಯಾಗಿದೆ 

ಹೌದು, ಐಪಿಎಲ್‌ನ ನೂತನ ತಂಡ ಲಖನೌ ಫ್ರಾಂಚೈಸಿಯು ಕೆ.ಎಲ್‌.ರಾಹುಲ್‌ (KL Rahul) ಜೊತೆ ಆಸ್ಪ್ರೇಲಿಯಾ ಆಲ್ರೌಂಡರ್‌ ಮಾರ್ಕಸ್‌ ಸ್ಟೋಯ್ನಿಸ್‌ (Marcus Stoinis) ಹಾಗೂ ಯುವ ಸ್ಪಿನ್ನರ್‌ ರವಿ ಬಿಷ್ಣೋಯ್‌ರನ್ನು ಹರಾಜಿಗೂ ಮುನ್ನ ಆಯ್ಕೆ ಮಾಡಿಕೊಳ್ಳಲಿದೆ ಎಂದು ವರದಿಯಾಗಿದೆ. ಉದ್ಯಮಿ ಆರ್‌.ಪಿ. ಸಂಜೀವ್‌ ಗೋಯೆಂಕಾ ಮಾಲಿಕತ್ವದ ಲಖನೌ, ಪಂಜಾಬ್‌ ಕಿಂಗ್ಸ್‌ (Punjab Kings) ಮಾಜಿ ನಾಯಕ ರಾಹುಲ್‌ರನ್ನು ಖರೀದಿಸಿ ನಾಯಕತ್ವ ವಹಿಸುವ ಸಾಧ್ಯತೆ ಇದೆ. 

ಈ ಮೊದಲು ಅಫ್ಘಾನಿಸ್ತಾನ ಸ್ಪಿನ್ನರ್‌ ರಶೀದ್‌ ಖಾನ್‌ ಲಖನೌ ತಂಡಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡದ ರವಿ ಬಿಷ್ಣೋಯ್‌ರನ್ನು ಆಯ್ಕೆ ಮಾಡಿಕೊಂಡರೆ ಹಣ ಉಳಿತಾಯ ಮಾಡಬಹುದು ಎನ್ನುವುದು ತಂಡದ ಯೋಜನೆ ಎನ್ನಲಾಗುತ್ತಿದೆ. ಕಳೆದ ಆವೃತ್ತಿಯಲ್ಲಿ ರವಿ ಬಿಷ್ಣೋಯಿ ಪಂಜಾಬ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸಿದ್ದರು.

ಅಹಮದಾಬಾದ್‌ಗೆ ಮಾನ್ಯತೆ, ಹಾರ್ದಿಕ್‌ ನಾಯಕ: ವರದಿ

ನವದೆಹಲಿ: ಐಪಿಎಲ್‌ಗೆ ಸೇರ್ಪಡೆಯಾಗಿರುವ ಅಹಮದಾಬಾದ್‌ ತಂಡಕ್ಕೆ ಬಿಸಿಸಿಐ ಅಧಿಕೃತ ಮಾನ್ಯತೆ ನೀಡಿದ್ದು, ತಂಡ ಐಪಿಎಲ್‌ನಲ್ಲಿ ಪಾಲ್ಗೊಳ್ಳಲು ಅರ್ಹತೆ ಪಡೆದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಸದ್ಯದಲ್ಲೇ ಬಿಸಿಸಿಐನಿಂದ ಅಧಿಕೃತ ಪ್ರಕಟಣೆ ಹೊರಬೀಳುವ ನಿರೀಕ್ಷೆ ಇದೆ. 

IPL Auction 2022: ಶ್ರೇಯಸ್ ಅಯ್ಯರ್ ಖರೀದಿಸಲು ತುದಿಗಾಲಿನಲ್ಲಿ ನಿಂತಿವೆ ಈ ಮೂರು ತಂಡಗಳು..!

ಇನ್ನು ತಂಡ ಹರಾಜಿಗೂ ಮೊದಲು ತಾರಾ ಆಲ್ರೌಂಡರ್‌ ಹಾರ್ದಿಕ್‌ ಪಾಂಡ್ಯ (Hardik Pandya) ಅವರನ್ನು ಆಯ್ಕೆ ಮಾಡಿಕೊಳ್ಳಲಿದ್ದು, ಅವರನ್ನು ನಾಯಕನನ್ನಾಗಿ ನೇಮಿಸಲಿದೆ ಎಂದು ವರದಿಯಾಗಿದೆ. ಪಾಂಡ್ಯ ಮೂಲತಃ ಗುಜರಾತ್‌ನವರಾಗಿರುವ ಕಾರಣ, ಸ್ಥಳೀಯ ಅಭಿಮಾನಿಗಳನ್ನು ಸೆಳೆಯಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಇದೇ ವೇಳೆ ಇನ್ನಿಬ್ಬರು ಆಟಗಾರರಾಗಿ ಆಫ್ಘಾನಿಸ್ತಾನದ ಸ್ಪಿನ್ನರ್‌ ರಶೀದ್‌ ಖಾನ್‌ (Rashid Khan), ವಿಕೆಟ್‌ ಕೀಪರ್‌ ಬ್ಯಾಟರ್‌ ಇಶಾನ್‌ ಕಿಶನ್‌ರನ್ನು (Ishan Kishan) ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ .

IPL 2022‌: ಈ ಬಾರಿ ದಕ್ಷಿಣ ಆಫ್ರಿಕಾ ಇಲ್ಲವೇ ಲಂಕಾದಲ್ಲಿ ಐಪಿಎಲ್‌ ?

ನವದೆಹಲಿ: ದೇಶದಲ್ಲಿ ಕೋವಿಡ್‌ (COVID 19) ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ 15ನೇ ಆವೃತ್ತಿಯ ಐಪಿಎಲ್‌ ಟೂರ್ನಿಯು ಭಾರತದಿಂದ ಸ್ಥಳಾಂತರವಾಗುವ ಸಾಧ್ಯತೆ ಇದೆ. ಟೂರ್ನಿಯನ್ನು ದಕ್ಷಿಣ ಆಫ್ರಿಕಾ ಇಲ್ಲವೇ ಶ್ರೀಲಂಕಾದಲ್ಲಿ ನಡೆಯಲು ಚಿಂತನೆ ನಡೆಸುತ್ತಿದೆ. ಭಾರತದಲ್ಲಿ ಪರಿಸ್ಥಿತಿ ಕೈಮೀರಿದರೆ ಎನ್ನುವ ಮುಂದಾಲೋಚನೆಯಿಂದ ಪ್ಲ್ಯಾನ್‌ ‘ಬಿ’ ಸಿದ್ಧಪಡಿಸಲು ಬಿಸಿಸಿಐ ಮುಂದಾಗಿದೆ.

2020ರಲ್ಲಿ ಟೂರ್ನಿ ಯುಎಇನಲ್ಲಿ ನಡೆದಿತ್ತು. 2021ರಲ್ಲಿ ಭಾರತದಲ್ಲೇ ಆರಂಭಗೊಂಡರೂ ಕೋವಿಡ್‌ನಿಂದಾಗಿ 31 ಪಂದ್ಯಗಳನ್ನು ಯುಎಇನಲ್ಲಿ ನಡೆಸಲಾಗಿತ್ತು. ಆದರೆ ಪ್ರತಿ ಬಾರಿ ಯುಎಇ ಮೇಲೆಯೇ ಅವಲಂಬಿತಗೊಳ್ಳಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕೆ ಪರ್ಯಾಯ ಆಯ್ಕೆಗಳನ್ನು ಬಿಸಿಸಿಐ ಪಟ್ಟಿ ಮಾಡುತ್ತಿದೆ. ಸದ್ಯ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಭಾರತ ತಂಡದ ಆಟಗಾರರಿಂದ ಅಲ್ಲಿನ ರೆಸಾರ್ಟ್‌, ಹೋಟೆಲ್‌ ಹಾಗೂ ಬಯೋಬಬಲ್‌ ವ್ಯವಸ್ಥೆಯ ಬಗ್ಗೆ ಧನಾತ್ಮಕ ಪ್ರತಿಕ್ರಿಯೆ ಬಂದಿರುವ ಕಾರಣ, ಟೂರ್ನಿ ಭಾರತದಲ್ಲಿ ನಡೆಯದಿದ್ದರೆ ದಕ್ಷಿಣ ಆಫ್ರಿಕಾಕ್ಕೆ ಸ್ಥಳಾಂತರಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

Follow Us:
Download App:
  • android
  • ios