Asianet Suvarna News Asianet Suvarna News

IPL 2022 ಚೆನ್ನೈ ವಿರುದ್ಧದ ಉದ್ಘಾಟನಾ ಪಂದ್ಯದಲ್ಲಿ ಟಾಸ್ ಗೆದ್ದ ಕೆಕೆಆರ್,ತಂಡದಲ್ಲಿ ಯಾರಿಗೆ ಸ್ಥಾನ?

  • ಐಪಿಎಲ್ 2022 ಟೂರ್ನಿಯ ಮೊದಲ ಲೀಗ್ ಪಂದ್ಯ
  • ಮುಂಬೈನ ವಾಂಖೆಡೆಯಲ್ಲಿ ಚೆನ್ನೈ ಹಾಗೂ ಕೋಲ್ಕತ್ತಾ ಫೈಟ್
  • ಜಡೇಜಾ ತಂಡದಲ್ಲಿ ಸ್ಥಾನ ಪಡೆದವರು ಯಾರು? 
IPL 2022 KKR won toss and chose bowl first against CSK at wankhede Playing XI and squad details ckm
Author
Bengaluru, First Published Mar 26, 2022, 7:06 PM IST

ಮುಂಬೈ(ಮಾ.26): 15ನೇ ಆವೃತ್ತಿ ಐಪಿಎಲ್ ಟೂರ್ನಿ ಆರಂಭಗೊಂಡಿದೆ. ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ತಂಡ ಮುಖಾಮುಖಿಯಾಗುತ್ತಿದೆ. 2022ರ ಐಪಿಎಲ್ ಟೂರ್ನಿಯ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಕೋಲ್ಕತಾ ನೈಟ್ ರೈಡರ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಕೆಕೆಆರ್ ತಂಡಕ್ಕೆ ಮೂವರು ಪಾದರ್ಪಣೆ ಮಾಡಿದ್ದಾರೆ. ಸ್ವತಃ ನಾಯಕ ಶ್ರೇಯಸ್ ಅಯ್ಯರ್, ಸ್ಯಾಮ್ ಬಿಲ್ಲಿಂಗ್ಸ್ ಹಾಗೂ ಅಜಿಂಕ್ಯ ರಹಾನೆ ಡೆಬ್ಯೂ ಮಾಡಿದ್ದಾರೆ.  ಚೆನ್ನೈ ತಂಡಲ್ಲಿ ಕೊನ್ವೋ, ಬ್ರಾವೋ, ಮಿಲ್ನೆ ಹಾಗೂ ಸ್ಯಾಂಟ್ನರ್ ವಿದೇಶಿ ಆಟಗಾರರಾಗಿ ಸ್ಥಾನ ಪಡೆದಿದ್ದಾರೆ.

ಇದೇ ಮೊದಲ ಬಾರಿಗೆ ಚೆನ್ನೈ ಸೂಪರ್ ಕಿಂಗ್ಸ್ ಧೋನಿ ನಾಯಕತ್ವವಿಲ್ಲದೆ ಕಣಕ್ಕಿಳಿಯುತ್ತಿದೆ. ಚೆನ್ನೈ ತಂಡವನ್ನು ಸಮರ್ಥವಾಗಿ ಮುನ್ನಡೆಸಿ 4 ಚಾಂಪಿಯನ್ ಟ್ರೋಫಿಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಇದೀಗ ಈ ಜವಾಬ್ದಾರಿಯನ್ನು ರವೀಂದ್ರ ಜಡೇಜಾ ಹೆಗಲಿಗೆ ವಹಿಸಿದ್ದಾರೆ. ಅಲ್ರೌಂಡರ್ ಆಗಿ ರವೀಂದ್ರ ಜಡೇಜಾ ಐಪಿಎಲ್ ಟೂರ್ನಿಯಲ್ಲಿ ತಮ್ಮ ಸಾಮರ್ಥ್ಯ ಸಾಬೀತು ಪಡಿಸಿದ್ದಾರೆ. ಆದರೆ ನಾಯಕನಾಗಿ ಈ ಟೂರ್ನಿ ಜಡೇಜಾ ಮಾತ್ರವಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪಾಲಿಗೂ ಅತ್ಯಂತ ಮಹತ್ವದ್ದಾಗಿದೆ. 

ಧೋನಿಯನ್ನೂ ಬಿಟ್ಟಿಲ್ಲ IPL ಕಾಂಟ್ರವರ್ಸಿಗಳು..! ಈ 3 ವಿವಾದ ನಿಮಗೆ ನೆನಪಿದೆಯಾ..?

ಕೋಲ್ಕತಾ ನೈಟ್ ರೈಡರ್ಸ್ ತಂಡ ಕೂಡ ಅತ್ಯಂತ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿದೆ. ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಕೆಕೆಆರ್ ಹೊಸ ಅದೃಷ್ಠ ಪರೀಕ್ಷೆಗೆ ಸಜ್ಜಾಗಿದೆ. ಗೌತಮ್ ಗಂಭೀರ್ ನಾಯಕತ್ವದ ಬಳಿಕ ಕೆಕೆಆರ್ ತಂಡ ಸೂಕ್ತ ನಾಯಕತ್ವವಿಲ್ಲದೆ ಸೊರಗಿತ್ತು. ಇದೀಗ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಅತ್ಯುತ್ತಮವಾಗಿ ಮುನ್ನಡೆಸಿ ನಾಯಕತ್ವ ಸಾಬೀತು ಪಡಿಸಿರುವ ಶ್ರೇಯಸ್ ಅಯ್ಯರ್ ಈ ಬಾರಿ ಕೆಕೆಆರ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಹೀಗಾಗಿ ಇಂದಿನ ಪಂದ್ಯ ರೋಚಕ ಹೋರಾಟ ಎರ್ಪಡಲಿದೆ.

ವಾಂಖೆಡೆ ಕ್ರೀಡಾಂಗಣ ಕೋಲ್ಕತಾ ನೈಟ್ ರೈಡರ್ಸ್ ಪಾಲಿಗೆ ಸಿಹಿ ಅನುಭವ ನೀಡಿದ್ದು ತೀರಾ ವಿರಳ. ಕಾರಣ ವಾಂಖೆಡೆಯಲ್ಲಿ ಆಡಿರುವ 11 ಪಂದ್ಯಗಳ ಪೈಕಿ ಕೆಕೆಆರ್ ಗೆದ್ದಿರುವುದು ಕೇವಲ ಒಂದು ಪಂದ್ಯ ಮಾತ್ರ. ಹೀಗಾಗಿ ಇಂದಿನ ಪಂದ್ಯ ಕೋಲ್ಕತಾಗೆ ಮತ್ತಷ್ಟು ಕಠಿಣ ಸವಾಲು ಒಡ್ಡಲಿದೆ. 

IPL 2022- KKR ಹೊಸ ನಾಯಕ Shreyas Iyer ಐಷಾರಾಮಿ ಜೀವನಶೈಲಿ ಹೀಗಿದೆ

ಕೋಲ್ಕತಾ ನೈಟ್ ರೈಡರ್ಸ್ ತಂಡದ ಸ್ಪಿನ್ನರ್ ವರುಣ್ ಚಕ್ರವರ್ತಿ ಮತ್ತೆ ಮ್ಯಾಜಿಕ್ ಮಾಡಲು ಸಜ್ಜಾಗಿದ್ದಾರೆ. ಈಗಾಗಲೇ ಎಂಎಸ್ ಧೋನಿಯನ್ನು 3 ಬಾರಿ ಔಟ್ ಮಾಡಿರುವ ಚಕ್ರವರ್ತಿ ಮತ್ತೆ ಮೋಡಿ ಮಾಡುತ್ತಾರಾ ಅನ್ನೋ ಕುತೂಹಲವೂ ಹೆಚ್ಚಾಗಿದೆ. 

ಕೊರೋನಾ ಕಡಿಮೆಯಾಗಿರುವ ಕಾರಣ ಈ ಬಾರಿಯ ಐಪಿಎಲ್ ಟೂರ್ನಿ ಭಾರತದಲ್ಲೇ ಆಯೋಜಿಸಲಾಗಿದೆ. ಇನ್ನು ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. 2020ರಲ್ಲಿ ಐಪಿಎಲ್ ಟೂರ್ನಿಯನ್ನು ದುಬೈನಲ್ಲಿ ಆಯೋಜಿಸಲಾಗಿತ್ತು. ಅತ್ಯಂತ ಯಶಸ್ವಿಯಾಗಿ ಟೂರ್ನಿ ಆಯೋಜನೆ ಮಾಡಲಾಗಿತ್ತು. ಆದರೆ 2021ರಲ್ಲಿ ಭಾರತದಲ್ಲಿ ಟೂರ್ನಿ ಆರಂಭಿಸಿದ ಬಿಸಿಸಿಐ ಸಂಕಷ್ಟಕ್ಕೆ ಸಿಲುಕಿತ್ತು. ಕೊರೋನಾ ಸೋಂಕು ಕಾಣಿಸಿಕೊಂಡ ಕಾರಣ ಟೂರ್ನಿ ಅರ್ಧಕ್ಕೆ ನಿಲ್ಲಿಸಲಾಗಿತ್ತು. ಬಳಿಕ ಯುಎಇಗೆ ಸ್ಥಳಾಂತರ ಮಾಡಲಾಗಿತ್ತು. ಎರಡನೇ ಭಾಗ ಐಪಿಎಲ್ ಟೂರ್ನಿ ಯುಇನಲ್ಲಿ ಆಯೋಜಿಸಿತ್ತು. ಆದರೆ ಈ ಬಾರಿ ಕೊರೋನಾ ಯುದ್ಧ ಗೆದ್ದಿರುವ ಕಾರಣ ಸಂಪೂರ್ಣ ಟೂರ್ನಿ ಭಾರತದಲ್ಲಿ ನಡೆಯಲಿದೆ. 

ಕೋವಿಡ್‌ನಿಂದಾಗಿ ಕಳೆದೆರಡು ಆವೃತ್ತಿಗಳಲ್ಲಿ ಪಂದ್ಯಗಳನ್ನು ಟಿವಿಯಲ್ಲಿ ನೋಡುತ್ತಿದ್ದ ಕ್ರೀಡಾಭಿಮಾನಿಗಳಿಗೆ ಈ ಬಾರಿ ನೇರವಾಗಿ ಪಂದ್ಯ ವೀಕ್ಷಿಸುವ ಸೌಭಾಗ್ಯ ಒದಗಿಬಂದಿದೆ. ಖಾಲಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಟೂರ್ನಿಯಲ್ಲಿ ಈ ಬಾರಿ ಪ್ರೇಕ್ಷಕರಿಗೆ ಅನುಮತಿ ನೀಡಲಾಗಿದೆ. 

ನಾಳೆ(ಮಾ.27) ಡಬಲ್ ಹೆಡರ್ ಪಂದ್ಯಗಳು ನಡೆಯಲಿದೆ. ಭಾನುವಾರದ ಸಂಪೂರ್ಣ ಸವಿ ಅನುಭವಿಸಲು ಪ್ರಮುಖ ಎರಡು ತಂಡಗಳು ಕಣಕ್ಕಿಳಿಯುತ್ತಿದೆ. ಇದರಲ್ಲಿ ಎರಡನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ಮುಖಾಮುಖಿಯಾಗುತ್ತಿದೆ. ಆರ್‌ಸಿಬಿ ಈ ಬಾರಿ ಫಾಫ್ ಡುಪ್ಲೆಸಿಸ್ ನಾಯಕತ್ವದಲ್ಲಿ ಕಣಕ್ಕಿಳಿಯುತ್ತಿದೆ. ಇನ್ನು 3.30ಕ್ಕೆ ಆರಂಭಗೊಳ್ಳಲಿರುವ ಮೊದಲ ಪಂದ್ಯದ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಹಾಗೂ ಮುಂಬೈ ಇಂಡಿಯನ್ಸ್ ಹೋರಾಟ ಮಾಡಲಿದೆ. 

Follow Us:
Download App:
  • android
  • ios