ಕೆಕೆಆರ್ ವಿರುದ್ದ ಅಬ್ಬರಿಸಿದ ಜೋಸ್ ಬಟ್ಲರ್ 60 ಎಸೆತದಲ್ಲಿ ಸೆಂಚುರಿ ಬಾರಿಸಿದ ಬಟ್ಲರ್ ಬಟ್ಲರ್ ಅಬ್ಬರಕ್ಕೆ ಬೃಹತ್ ಮೊತ್ತ ದಾಖಲಿಸಿದ ರಾಜಸ್ಥಾನ  

ಮುಂಬೈ(ಏ.18): ಕೆಕೆಆರ್ ವಿರುದ್ಧ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ IPL 2022 ಆವೃತ್ತಿಯಲ್ಲಿ ಜೋಸ್ ಬಟ್ಲರ್ ಎರಡನೇ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. ಬಟ್ಲರ್ ನೆರವಿನಿಂದ ಕೆಕೆಆರ್ ವಿರುದ್ಧ ರಾಜಸ್ಥಾನ ರಾಯಲ್ಸ್ 217 ರನ್ ಸಿಡಿಸಿದೆ. ಕೇವಲ 60 ಎಸೆತದಲ್ಲಿ ಬಟ್ಲರ್ ಶತಕ ಪೂರೈಸಿದ್ದಾರೆ.

ಆರಂಭದಿಂದಲೇ ಜೋಸ್ ಬಟ್ಲರ್ ಅಬ್ಬರ ಕೆಕೆಆರ್‌ಗೆ ತಲೆನೋವಾಗಿ ಪರಿಣಮಿಸಿತು. ಬೌಂಡರಿ ಹಾಗೂ ಸಿಕ್ಸರ್ ಮೂಲಕ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ ಜೋಸ್ ಬಟ್ಲರ್ ಐಪಿಎಲ್ ಟೂರ್ನಿಯ 15ನೇ ಆವೃತ್ತಿಯಲ್ಲಿ 2ನೇ ಶತಕ ಸಿಡಿಸಿದ್ದಾರೆ. 

IPL 2022 ಮಿಲ್ಲರ್ ಕಿಲ್ಲರ್, ಚೆನ್ನೈ ವಿರುದ್ಧ ಗುಜರಾತ್ ಟೈಟಾನ್ಸ್‌ಗೆ 3 ವಿಕೆಟ್ ರೋಚಕ ಗೆಲುವು!

ಜೋಸ್ ಬಟ್ಲರ್ 61 ಎಸೆತದಲ್ಲಿ 9 ಬೌಂಡರಿ ಹಾಗೂ 5 ಸಿಕ್ಸರ್ ಮೂಲಕ 103 ರನ್ ಸಿಡಿಸಿದರು. ಮುಂಬೈ ಇಂಡಿಯನ್ಸ್ ವಿರುದ್ದ ಈ ಆವೃತ್ತಿಯಲ್ಲಿ ಮೊದಲ ಶತಕ ಸಿಡಿಸಿದ್ದ ಬಟ್ಲರ್ ಇದೀಗ ಎರಡನೇ ಸೆಂಚುರಿ ದಾಖಲಿಸಿದ್ದಾರೆ. ಮುಂಬೈ ವಿರುದ್ದ 68 ಎಸೆತದಲ್ಲಿ ಬಟ್ಲರ್ ಸೆಂಚುರಿ ಪೂರೈಸಿದ್ದರು.

ಈ ಐಪಿಎಲ್ ಆವೃತ್ತಿಯಲ್ಲಿ ಓಟ್ಟು 3 ಶತಕ ದಾಖಲಾಗಿದೆ. ಇದರಲ್ಲಿ ಎರಡು ಸೆಂಚುರಿ ಬಟ್ಲರ್ ಹೆಸರಿನಲ್ಲಿದ್ದರೆ, ಮತ್ತೊಂದು ಕೆಎಲ್ ರಾಹುಲ್ ಹೆಸರಿನಲ್ಲಿದೆ.

ಐಪಿಎಲ್ 2022 ಸೆಂಚುರಿ ಲಿಸ್ಟ್
ಜೋಸ್ ಬಟ್ಲರ್ 100 ರನ್, ಮುಂಬೈ ವಿರುದ್ಧ
ಕೆಎಲ್ ರಾಹುಲ್ ಅಜೇಯ 103 ರನ್, ಮುಂಬೈ ವಿರುದ್ಧ
ಜೋಸ್ ಬಟ್ಲರ್ 103 ರನ್, ರಾಜಸ್ಥಾನ ವಿರುದ್ಧ

IPL 2022 ತ್ರಿಪಾಠಿ, ಮಾರ್ಕ್ರಮ್ ಆಟಕ್ಕೆ ಕಂಗಾಲಾದ ಕೆಕೆಆರ್!

ಬ್ರೇಬೋರ್ನ್ ಕ್ರೀಡಾಂಗಣದಲ್ಲಿ ಶತಕ ಸಿಡಿಸಿದ ಐಪಿಎಲ್‌ 4ನೇ ಬ್ಯಾಟ್ಸ್‌ಮನ್ ಅನ್ನೋ ಹೆಗ್ಗಳಿಗೆ ಪಾತ್ರರಾಗಿದ್ದಾರೆ.ಈ ಆವೃತ್ತಿಯಲ್ಲಿ ಕೆಎಲ್ ರಾಹುಲ್ ಸಿಡಿಸಿದ ಸೆಂಚುರಿ ಕೂಡ ಇದೇ ಬ್ರೇಬೋರ್ನ್ ಕ್ರೀಡಾಂಗಣದಲ್ಲಿ ಮೂಡಿ ಬಂದಿದೆ.

ಬ್ರೇಬೋರ್ನ್ ಕ್ರೀಡಾಂಗಣದಲ್ಲಿ ಐಪಿಎಲ್ ಶತಕ
100 ಯೂಸೂಫ್ ಪಠಾಣ್ (RR v MI, 2010)
104* ಶೇನ್ ವ್ಯಾಟ್ಸನ್ (RR v KKR, 2015)
103* ಕೆಎಲ್ ರಾಹುಲ್ (LSG v MI, 2022)
103 ಜೋಸ್ ಬಟ್ಲರ್ (KKR v RR, 2022)

ಕೆಕೆಆರ್ ತಂಡಕ್ಕೆ ಬೃಹತ್ ಟಾರ್ಗೆಟ್ ನೀಡಿದ ರಾಜಸ್ಥಾನ
ಜೋಸ್ ಬಟ್ಲರ್ ಸೆಂಚುರಿಯಿಂದ ರಾಜಸ್ಥಾನ ರಾಯಲ್ಸ್ 218 ರನ್ ಟಾರ್ಗೆಟ್ ನೀಡಿದೆ. ರಾಜಸ್ಥಾನ ತಂಡದಲ್ಲಿ ಇಂದು ಸಂಪೂರ್ಣ ಬಟ್ಲರ್ ಶೋ. ಕಾರಣ ಬಟ್ಲರ್ ಹೊರತು ಪಡಿಸಿದರೆ ಇತರ ಬ್ಯಾಟ್ಸ್‌ಮನ್‌ಗಳಿಂದ ಈ ಮಟ್ಟಿನ ಪ್ರದರ್ಶನ ಮೂಡಿಬರಲಿಲ್ಲ. ದೇವದತ್ ಪಡಿಕ್ಕಲ್ 18 ಎಸೆತದಲ್ಲಿ 24 ರನ್ ಸಿಡಿಸಿ ಔಟಾದರು.

ನಾಯಕ ಸಂಜು ಸ್ಯಾಮ್ಸನ್ 19 ಎಸೆತದಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ ಮೂಲಕ 38 ರನ್ ಸಿಡಿಸಿ ಔಟಾದರು. ಸಂಜು ಇನ್ನಿಂಗ್ಸ್ ರಾಜಸ್ಥಾನ ರಾಯಲ್ಸ್ ತಂಡದ ರನ್ ವೇಗ ಹೆಚ್ಚಿಸಿತು. ಆದರೆ ಸಂಜು ಅಷ್ಟೇ ವೇಗದಲ್ಲಿ ಪೆವಿಲಿಯನ್ ಸೇರಿಕೊಂಡರು. ಜೋಸ್ ಬಟ್ಲರ್ 103 ರನ್ ಕಾಣಿಕೆ ನೀಡಿದರು. ರಿಯಾನ್ ಪರಾಗ್ 5 ರನ್ ಸಿಡಿಸಿ ಔಟಾದರು. ಕರುಣ್ ನಾಯರ್ 3 ರನ್ ಸಿಡಿಸಿ ಔಟಾದರು. 

ಶಿಮ್ರೊನ್ ಹೆಟ್ಮೆಯರ್ ಅಂತಿಮ ಹಂತದಲ್ಲಿ ಅಬ್ಬರಿಸಿದರು. ಇದರಿಂದ ರಾಜಸ್ಥಾನ ರಾಯಲ್ಸ್ 200 ರನ್ ಗಡಿ ದಾಟಿತು. ಹೆಟ್ಮೆಯರ್ ಅಜೇಯ 26 ರನ್ ಸಿಡಿಸಿದರು. ಈ ಮೂಲಕ ರಾಜಸ್ಥಾನ ರಾಯಲ್ಸ್ 5 ವಿಕೆಟ್ ನಷ್ಟಕ್ಕೆ 217 ರನ್ ಸಿಡಿಸಿತು.