Asianet Suvarna News Asianet Suvarna News

IPL 2022: ಜಾಂಟಿ ರೋಡ್ಸ್‌ಗೆ ಹೊಸ ಜವಾಬ್ದಾರಿ ನೀಡಿದ ಪಂಜಾಬ್‌ ಕಿಂಗ್ಸ್‌..!

* ಐಪಿಎಲ್‌ 2022 ಟೂರ್ನಿಗೆ ಸಿದ್ದತೆ ಆರಂಭಿಸಿದ ಪಂಜಾಬ್ ಕಿಂಗ್ಸ್‌

* ಫೀಲ್ಡಿಂಗ್ ಕೋಚ್‌ ಜಾಂಟಿ ರೋಡ್ಸ್‌ಗೆ ಹೊಸ ಜವಾಬ್ದಾರಿ

* ರೋಡ್ಸ್‌ಗೆ ಫೀಲ್ಡಿಂಗ್ ಕೋಚ್ ಜತೆಗೆ ಬ್ಯಾಟಿಂಗ್ ಕೋಚ್ ಜವಾಬ್ದಾರಿ

IPL 2022 Jonty Rhodes Takes Up Dual Role Of Batting And Fielding Coach At Punjab Kings kvn
Author
Bengaluru, First Published Feb 15, 2022, 5:38 PM IST

ನವದೆಹಲಿ(ಫೆ.15): 2022ನೇ ಸಾಲಿನ ಇಂಡಿಯನ್‌ ಪ್ರೀಮಿಯರ್ ಲೀಗ್ (India Premier League) ಟೂರ್ನಿಗೂ ಮುನ್ನ ಬೆಂಗಳೂರಿನಲ್ಲಿ ನಡೆದ ಆಟಗಾರರ ಮೆಗಾ ಹರಾಜಿನಲ್ಲಿ (IPL Mega Auction) ಎಲ್ಲಾ ಫ್ರಾಂಚೈಸಿಗಳು ಸಾಕಷ್ಟು ಅಳೆದು-ತೂಗಿ ತಮಗೆ ಬೇಕಾದ ಆಟಗಾರರನ್ನು ಖರೀದಿಸುವಲ್ಲಿ ಯಶಸ್ವಿಯಾಗಿವೆ. ಇದೀಗ ಪಂಜಾಬ್ ಕಿಂಗ್ಸ್‌ (Punjab Kings) ತಂಡದ ಫೀಲ್ಡಿಂಗ್ ಕೋಚ್ ಜಾಂಟಿ ರೋಡ್ಸ್‌ಗೆ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ. 

ಮೆಗಾ ಹರಾಜಿಗೂ ಮುನ್ನ ಪಂಜಾಬ್ ಕಿಂಗ್ಸ್‌ ತಂಡದ ಬ್ಯಾಟಿಂಗ್ ಕೋಚ್ ಹುದ್ದೆಗೆ ವಾಸೀಂ ಜಾಫರ್ (Wasim Jaffer) ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಇದೀಗ ಜಾಂಟಿ ರೋಡ್ಸ್‌ (Jonty Rhodes) ಅವರಿಗೆ ಫೀಲ್ಡಿಂಗ್ ಕೋಚ್ ಜತೆಗೆ ಬ್ಯಾಟಿಂಗ್ ಕೋಚ್ ಜವಾಬ್ದಾರಿಯನ್ನು ಸಹ ನೀಡಲಾಗಿದೆ. ಜಾಂಟಿ ರೋಡ್ಸ್‌ ವಿಶ್ವ ಕ್ರಿಕೆಟ್ ಕಂಡ ಶ್ರೇಷ್ಠ ಫೀಲ್ಡರ್‌ಗಳಲ್ಲಿ ಒಬ್ಬರೆನಿಸಿದ್ದು, ಹರಿಣಗಳ ತಂಡದ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 8,000 ರನ್ ಬಾರಿಸಿದ್ದಾರೆ.

ಇದೇ ಫೆಬ್ರವರಿ 12 ಹಾಗೂ 13ರಂದು ಬೆಂಗಳೂರಿನಲ್ಲಿ ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ 52 ವರ್ಷದ ಜಾಂಟಿ ರೋಡ್ಸ್‌, ಹೆಡ್‌ ಕೋಚ್ ಜಾಂಟಿ ರೋಡ್ಸ್‌, ಸಹ ಮಾಲೀಕರ ಜತೆ ಕುಳಿತು ತಂಡಕ್ಕೆ ಬೇಕಾದ ಆಟಗಾರರನ್ನು ಖರೀದಿಸಿದ್ದರು. ಜಾಂಟಿ ರೋಡ್ಸ್‌ ದಕ್ಷಿಣ ಆಫ್ರಿಕಾ ತಂಡದ ಪರ 245 ಪಂದ್ಯಗಳನ್ನಾಡಿ 5,935 ರನ್ ಬಾರಿಸಿದ್ದಾರೆ. ಇನ್ನು 52 ಟೆಸ್ಟ್ ಪಂದ್ಯಗಳನ್ನಾಡಿ 2,532 ರನ್ ಬಾರಿಸಿದ್ದಾರೆ. 

ಅನಿಲ್ ಕುಂಬ್ಳೆ (Anil Kumble) ಹೆಡ್ ಕೋಚ್‌ ಜತೆಗೆ ಪಂಜಾಬ್ ಕಿಂಗ್ಸ್‌ ಸ್ಪಿನ್ನರ್‌ಗಳಿಗೂ ಮಾರ್ಗದರ್ಶನ ನೀಡಲಿದ್ದಾರೆ. ಡಾಮಿನ್‌ ರೈಟ್‌, ವೇಗದ ಬೌಲಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ಕಳೆದ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಸಹಾಯಕ ಕೋಚ್ ಆಗಿ ಕಾರ್ಯನಿರ್ವಹಿಸಿದ್ದ ಆ್ಯಂಡಿ ಫ್ಲವರ್‌, 15ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಲಖನೌ ಸೂಪರ್‌ ಜೈಂಟ್ಸ್‌ ತಂಡದ ಹೆಡ್ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. 

ಕಳೆದ 14ನೇ ಆವೃತ್ತಿಗಳಿಂದಲೂ ಐಪಿಎಲ್‌ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಾ ಬಂದಿರುವ ಪಂಜಾಬ್ ಕಿಂಗ್ಸ್‌ ತಂಡವು ಇದುವರೆಗೂ ಕಪ್‌ ಗೆಲ್ಲಲು ಸಾಧ್ಯವಾಗಿಲ್ಲ. 2014ರಲ್ಲಿ ಒಮ್ಮೆ ಮಾತ್ರ ಪಂಜಾಬ್ ಕಿಂಗ್ಸ್‌ ತಂಡವು ಫೈನಲ್‌ ಪ್ರವೇಶಿಸಿತ್ತು. ಆದರೆ ಫೈನಲ್‌ನಲ್ಲಿ ಕೋಲ್ಕತಾ ನೈಟ್ ರೈಡರ್ಸ್‌ ವಿರುದ್ದ ಮುಗ್ಗರಿಸುವ ಮೂಲಕ ಚೊಚ್ಚಲ ಟ್ರೋಫಿ ಗೆಲ್ಲುವ ಅವಕಾಶವನ್ನು ಕೈಚೆಲ್ಲಿತ್ತು.

Ind vs WI: ವಿಂಡೀಸ್ ಎದುರಿನ ಟಿ20 ಸರಣಿಗೂ ಮುನ್ನ ಕೊಹ್ಲಿ ಕುರಿತಂತೆ ವಿಶೇಷ ಮನವಿ ಮಾಡಿದ ರೋಹಿತ್ ಶರ್ಮಾ

ಐಪಿಎಲ್‌ ಮೆಗಾ ಹರಾಜಿಗೂ ಮುನ್ನ ಪಂಜಾಬ್ ಕಿಂಗ್ಸ್‌ ಫ್ರಾಂಚೈಸಿಯು ಮಯಾಂಕ್ ಅಗರ್‌ವಾಲ್ ಹಾಗೂ ಆರ್ಶದೀಪ್ ಸಿಂಗ್ ಅವರನ್ನು ಉಳಿಸಿಕೊಂಡಿತ್ತು. ಈ ಮೂಲಕ ಪಂಜಾಬ್ ಕಿಂಗ್ಸ್‌ ಫ್ರಾಂಚೈಸಿಯು ಗರಿಷ್ಠ ಹಣವನ್ನು ಇಟ್ಟುಕೊಂಡು ಹರಾಜಿನಲ್ಲಿ ಪಾಲ್ಗೊಂಡಿತ್ತು. ಈ ಬಾರಿಯ ಐಪಿಎಲ್‌ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್‌ ಫ್ರಾಂಚೈಸಿಯು ಶಿಖರ್ ಧವನ್(Shikhar Dhawan), ಶಾರುಕ್ ಖಾನ್, ಲಿಯಾಮ್ ಲಿವಿಂಗ್‌ಸ್ಟೋನ್, ಜಾನಿ ಬೇರ್‌ಸ್ಟೋವ್, ಓಡೆನ್ ಸ್ಮಿತ್, ಕಗಿಸೋ ರಬಾಡ ಅವರಂತಹ ಆಟಗಾರರನ್ನು ಖರೀದಿಸುವಲ್ಲಿ ಯಶಸ್ವಿಯಾಗಿದೆ.

ಕಳೆದೆರಡು ಐಪಿಎಲ್ ಆವೃತ್ತಿಗಳಲ್ಲಿ ಕೆ.ಎಲ್‌. ರಾಹುಲ್ (KL Rahul) ಪಂಜಾಬ್ ಕಿಂಗ್ಸ್ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದರು. ಇದೀಗ ಕೆ.ಎಲ್. ರಾಹುಲ್‌ ತಂಡವನ್ನು ತೊರೆದಿರುವುದರಿಂದ ಶಿಖರ್ ಧವನ್, ಮುಂಬರುವ ಐಪಿಎಲ್‌ ಟೂರ್ನಿಯಲ್ಲಿ ಪಂಜಾಬ್ ತಂಡವನ್ನು ನಾಯಕನಾಗಿ ಮುನ್ನಡೆಸುವ ಸಾಧ್ಯತೆಯಿದೆ. ಈ ಮೊದಲು ಶಿಖರ್ ಧವನ್‌, ಸನ್‌ರೈಸರ್ಸ್‌ ಹೈದರಾಬಾದ್‌ ತಂಡವನ್ನು ಮುನ್ನಡೆಸಿದ್ದರು.

Follow Us:
Download App:
  • android
  • ios