Asianet Suvarna News Asianet Suvarna News

IPL 2022 ರಾಜಸ್ಥಾನ ಮಣಿಸಿದ ಗುಜರಾತ್ ಟೈಟಾನ್ಸ್‌ಗೆ ಚಾಂಪಿಯನ್ ಕಿರೀಟ!

  • ಐಪಿಎಲ್ ಟೂರ್ನಿಯಲ್ಲಿ ಇತಿಹಾಸ ರಚಿಸಿದ ಗುಜರಾತ್
  • ರಾಜಸ್ಥಾನ ರಾಯಲ್ಸ್ ವಿರುದ್ಧ 7 ವಿಕೆಟ್ ಗೆಲುವು
  • ರಾಜಸ್ಥಾನ ರಾಯಲ್ಸ್‌ಗೆ ರನ್ನರ್ ಅಪ್ ಟ್ರೋಫಿ
IPL 2022 Final  Gujarat Titans beat Rajasthan Royals by 7 wickets and clinch maiden title ckm
Author
Bengaluru, First Published May 29, 2022, 11:42 PM IST | Last Updated May 30, 2022, 12:00 AM IST

ಅಹಮ್ಮದಾಬಾದ್(ಮೇ.29): ಐಪಿಎಲ್ 2022 ಟೂರ್ನಿಯಲ್ಲಿ ಗುಜರಾತ್ ಟೈಟಾನ್ಸ್ ಇತಿಹಾಸ ರಚಿಸಿದೆ. ಫೈನಲ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ 7 ವಿಕೆಟ್ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಚೊಚ್ಚಲ ಬಾರಿಗೆ ಐಪಿಎಲ್ ಟ್ರೋಪಿ ಗೆದ್ದುಕೊಂಡಿದೆ.

ಗೆಲುವಿಗೆ 130 ರನ್ ಟಾರ್ಗೆಟ್ ಪಡೆದ ಗುಜರಾತ್ ಟೈಟಾನ್ಸ್ ಆರಂಭದಲ್ಲಿ ವಿಕೆಟ್ ಕಳೆದುಕೊಂಡು ಆತಂಕ ಎದುರಿಸಿತು. ವೃದ್ಧಿಮಾನ್ ಸಾಹ ಕೇವಲ 5 ರನ್ ಸಿಡಿಸಿ ಔಟಾದರು. ಇತ್ತ ಮ್ಯಾಥ್ಯೂ ವೇಡ್ 8 ರನ್ ಸಿಡಿಸಿ ನಿರಾಸೆ ಅನುಭವಿಸಿದರು. ಆದರೆ ಶುಭಮನ್ ಗಿಲ್ ಹಾಗೂ ನಾಯಕ ಹಾರ್ದಿಕ್ ಪಾಂಡ್ಯ ಜೊತೆಯಾಟದಿಂದ ಗುಜರಾತ್ ಟೈಟಾನ್ಸ್ ಚೇತರಿಸಿಕೊಂಡಿತು.

IPL 2022 ಆರ್‌ಸಿಬಿಗೆ 7 ಕೋಟಿ ರೂ, ಚಾಂಪಿಯನ್ ತಂಡಕ್ಕೆ ಸಿಗುವ ಪ್ರಶಸ್ತಿ ಮೊತ್ತವೆಷ್ಟು?

ಹಾರ್ದಿಕ್ ಪಾಂಡ್ಯ 30 ರನ್ ಸಿಡಿಸಿ ಔಟಾದರು. ಆದರೆ ಗಿಲ್ ಹೋರಾಟ ಮುಂದುವರಿಸಿದರು.ಇತ್ತ ಡೇವಿಡ್ ಮಿಲ್ಲರ್ ಕೂಡ ಉತ್ತಮ ಸಾಥ್ ನೀಡಿದರು. ಮಿಲ್ಲರ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಗಿಲ್ ಅಜೇಯ 45 ರನ್ ಸಿಡಿಸಿದೆ, ಮಿಲ್ಲರ್ 19 ಎಸೆತದಲ್ಲಿ 32 ರನ್ ಸಿಡಿಸಿದರು. ಈ ಮೂಲಕ ಗುಜರಾತ್ ಟೈಟಾನ್ಸ್ 18.1 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.ರಾಜಸ್ಥಾನ ವಿರುದ್ಧ 7 ವಿಕೆಟ್ ಗೆಲುವು ದಾಖಲಿಸಿದ ಗುಜರಾತ್ ಟೈಟಾನ್ಸ್ ಐಪಿಎಲ್ ಪ್ರಶಸ್ತಿ ಮುಡಿಗೇರಿಸಿಕೊಂಡಿತು.

ಈ ಗೆಲುವಿನೊಂದಿಗೆ ಗುಜರಾತ್ ಟೈಟಾನ್ಸ್ ಮೊದಲ ಪ್ರಯತ್ನದಲ್ಲೇ ಐಪಿಎಲ್ ಟ್ರೋಪಿ ಗೆದ್ದ ಸಾಧನೆ ಮಾಡಿದೆ.ಇನ್ನು  ಲೀಗ್ ಹಂತದಲ್ಲಿ ಮೊದಲ ಸ್ಥಾನ ಪಡೆದು ಟ್ರೋಫಿ ಗೆದ್ದ ಮೂರನೇ ತಂಡ ಗುಜರಾತ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.

ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದು ಟ್ರೋಪಿ ಗೆದ್ದ ತಂಡ:
ರಾಜಸ್ಥಾನ ರಾಯಲ್ಸ್, 2008
ಮುಂಬೈ ಇಂಡಿಯನ್ಸ್, 2017, 2019 ಹಾಗೂ 2020
ಗುಜರಾತ್ ಟೈಟಾನ್ಸ್, 2022

ಗುಜರಾತ್ ಟೈಟಾನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಹೊಸ ದಾಖಲೆ ಬರೆದಿದ್ದಾರೆ.  ಐಪಿಎಲ್ ಟ್ರೋಫಿ ಗೆದ್ದ 4ನೇ ಭಾರತದ ನಾಯಕ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

IPL 2022 ಫೈನಲ್ ಫೈಟ್‌ನಲ್ಲಿ ಹಾರ್ದಿಕ್ ಮಿಂಚಿನ ದಾಳಿ,ಅಲ್ಪಮೊತ್ತಕ್ಕೆ ಕುಸಿದ ರಾಜಸ್ಥಾನ!

ಐಪಿಎಲ್ ಟ್ರೋಫಿ ಗೆದ್ದ ಭಾರತದ ನಾಯಕರು
ಎಂಎಸ್ ಧೋನಿ
ಗೌತಮ್ ಗಂಭೀರ್
ರೋಹಿತ್ ಶರ್ಮಾ
ಹಾರ್ದಿಕ್ ಪಾಂಡ್ಯ

ಆರೇಂಜ್ ಕ್ಯಾಪ್
ಐಪಿಎಲ್ 2022 ಟೂರ್ನಿಯಲ್ಲಿ 16 ಪಂದ್ಯಗಳಿಂದ 824 ರನ್ ಸಿಡಿಸಿದ ರಾಜಸ್ಥಾನ ರಾಯಲ್ಸ್ ತಂಡದ ಜೋಸ್ ಬಟ್ಲರ್ ಆರೇಂಜ್ ಕ್ಯಾಪ್ ಪ್ರಶಸ್ತಿ ಗೆದ್ದುಕೊಂಡರು.

ಪರ್ಪಲ್ ಕ್ಯಾಪ್
ರಾಜಸ್ಥಾನ ರಾಯಲ್ಸ್ ತಂಡದ ಸ್ಪಿನ್ನರ್ ಯಜುವೇಂದ್ರ ಚಹಾಲ್ 17 ಪಂದ್ಯಗಳಿಂದ 27 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಪರ್ಪಲ್ ಕ್ಯಾಪ್ ಗೆದ್ದುಕೊಂಡಿದ್ದಾರೆ. 

ರಾಜಸ್ಥಾನ ಇನ್ನಿಂಗ್ಸ್
ಫೈನಲ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಯಿತು. ಗುಜರಾತ್ ನಾಯಕ ಹಾರ್ದಿಕ್ ಪಾಂಡ್ಯ ದಾಳಿಗೆ ರಾಜಸ್ಥಾನ ತತ್ತರಿಸಿತ್ತು. ಜೋಸ್ ಬಟ್ಲರ್ 39 ರನ್ ಸಿಡಿಸಿದರೆ, ಇನ್ನುಳಿದ ರಾಜಸ್ಥಾನ ಆಟಗಾರರಿಂದ ನಿರೀಕ್ಷಿತ ರನ್ ಬರಲಿಲ್ಲ. ಯಶಸ್ವಿ ಜೈಸ್ವಾಲ್ 22 ರನ್ ಸಿಡಿಸಿ ಔಟಾದರು. ನಾಯಕ ಸಂಜು ಸ್ಯಾಮ್ಸನ್ 14 ರನ್ ಸಿಡಿಸಿ ಔಟಾದರು. ದೇವದತ್ ಪಡಿಕ್ಕಲ್ 2 ಹಾಗೂ ಶಿಮ್ರೊನ್ ಹೆಟ್ಮೆಯರ್ 11 ರನ್ ಸಿಡಿಸಿ ನಿರ್ಗಮಿಸಿದರು. ಆರ್ ಅಶ್ವಿನ್ 6, ರಿಯಾನ್ ಪರಾಗ್ 15, ಟ್ರೆಂಟ್ ಬೋಲ್ಟ್ 11, ಒಬೆಡ್ ಮೆಕೊಯ್  8 ರನ್ ಸಿಡಿಸಿದರು. ಈ ಮೂಲಕ ರಾಜಸ್ಥಾನ ರಾಯಲ್ಸ್ 9 ವಿಕೆಟ್ ನಷ್ಟಕ್ಕೆ 130 ರನ್ ಸಿಡಿಸಿತು.


 

 

Latest Videos
Follow Us:
Download App:
  • android
  • ios