* 15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ನೀರಸ ಪ್ರದರ್ಶನ ತೋರುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್* ಟೂರ್ನಿಯಲ್ಲಿ ಸತತ 4 ಸೋಲು ಕಂಡ ರವೀಂದ್ರ ಜಡೇಜಾ ನೇತೃತ್ವದ ಸಿಎಸ್‌ಕೆ* ಸಿಎಸ್‌ಕೆ ತಂಡ ಸೇರಿಕೊಳ್ಳಿ ಎನ್ನುವ ಅಭಿಮಾನಿಯ ಪ್ರಶ್ನೆಗೆ ವ್ಯಂಗ್ಯ ಉತ್ತರ ನೀಡಿದ ಅಮಿತ್ ಮಿಶ್ರಾ
ಬೆಂಗಳೂರು(ಏ.10): ಪ್ರಸಕ್ತ ಐಪಿಎಲ್ನಲ್ಲಿ (IPL 2022) ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings Failure) ತಂಡ ಹಿಂದೆಂದು ಕಾಣದಷ್ಟು ಕಳಪೆ ಪ್ರದರ್ಶನ ನೀಡುತ್ತಿದೆ. ಸತತ ನಾಲ್ಕು ಸೋಲು ತಂಡದ ಆತ್ಮವಿಶ್ವಾಸ ಕುಗ್ಗಿಸಿದೆ. 4 ಟ್ರೋಫಿ ವಿನ್ನರ್ಸ್ ಈಗ ಗೆಲುವಿಗಾಗಿ ಹೆಣಗಾಡ್ತಿದ್ದಾರೆ. ತಂಡದಲ್ಲಿ ಅನುಭವಿ ಪ್ಲೇಯರ್ಸ್ ಇದ್ರೂ ಯಾವುದೇ ಪ್ರಯೋಜನವಿಲ್ಲದಂತಾಗಿದೆ. ತಂಡದ ಕಳಪೆ ಪರ್ಫಾಮೆನ್ಸ್ ಬಗ್ಗೆ ಭಾರೀ ಟೀಕೆ ಹಾಗೂ ಚರ್ಚೆ ನಡೆಯುತ್ತಿರುವಾಗಲೇ ಟೀಂ ಇಂಡಿಯಾ ಮಾಜಿ ಆಟಗಾರನೊಬ್ಬ ಯೆಲ್ಲೋ ಆರ್ಮಿ ಬಗ್ಗೆ ವ್ಯಂಗವಾಡಿದ್ದಾರೆ.
ಯೆಸ್, ಈಗಾಗ್ಲೇ ಚೆನ್ನೈ ಡ್ಯಾಡ್ಸ್ ಆರ್ಮಿ, ತಂಡದಲ್ಲಿ ಉತ್ಸಾಹವಿಲ್ಲ ಎಂದು ಟ್ರೋಲ್ ಮತ್ತು ಟೀಕೆ ಮಾಡಲಾಗ್ತಿದೆ. ಹಲವು ಸೀಸನ್ಗಳಿಂದ ವಯಸ್ಕರ ತಂಡ ಹಣೆಪಟ್ಟಿ ಅಂಟಿದೆ. ಇದೇ ಡ್ಯಾಡ್ಸ್ ಆರ್ಮಿ ಟೀಂ ಎರಡು ಬಾರಿ ಟ್ರೋಫಿ ಗೆದ್ರೂ ತಂಡವನ್ನ ಕಾಲೆಳೆಯುವರ ಸಂಖ್ಯೆ ಮಾತ್ರ ಕಮ್ಮಿಯಾಗಿಲ್ಲ. ಈಗ ಸ್ಟಾರ್ ಸ್ಪಿನ್ನರ್ ಅಮಿತ್ ಮಿಶ್ರಾ (Amit Mishra) ಚೆನ್ನೈ ತಂಡವನ್ನು ಕಿಚಾಯಿಸಿದ್ದಾರೆ. ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಬಲಿಷ್ಠ ತಂಡಗಳನ್ನೆಲ್ಲ ಬಗ್ಗುಬಡಿದು ನಾಲ್ಕನೇ ಬಾರಿಗೆ ಐಪಿಎಲ್ ಟ್ರೋಫಿಗೆ ಮಹೇಂದ್ರ ಸಿಂಗ್ ಧೋನಿ (MS Dhoni) ಪಡೆ ಮುತ್ತಿಕ್ಕಿತ್ತು. ಆದರೆ ಇದೀಗ ರವೀಂದ್ರ ಜಡೇಜಾ (Ravindra Jadeja Led CSK) ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮೊದಲ 4 ಪಂದ್ಯಗಳಲ್ಲೂ ಹೀನಾಯ ಸೋಲು ಅನುಭವಿಸಿದೆ.
ಸಿಎಸ್‌ಕೆ ಸೇರಲು ಮನವಿ ಮಾಡಿದ ಫ್ಯಾನ್ಸ್ಗೆ ಮಿಶ್ರಾ ವ್ಯಂಗ್ಯ:
ಪಂಜಾಬ್ ಕಿಂಗ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ (Punjab Kings vs Gujarat Titans) ರೋಚಕ ಗೆಲುವು ಸಾಧಿಸಿದ ಬಳಿಕ ಮಾಜಿ ಕ್ರಿಕೆಟಿಗ ಅಮಿತ್ ಮಿಶ್ರಾ ಟ್ವೀಟ್ ಮಾಡಿದ್ದು, ಕೋಚ್ ಆಶಿಶ್ ನೆಹ್ರಾರನ್ನ ಕೊಂಡಾಡಿದ್ರು. ಅಮಿತ್ ಹೀಗೆ ಗುಜರಾತ್ ಟೈಟನ್ಸ್ ಬಗ್ಗೆ ಟ್ವೀಟ್ ಮಾಡ್ತಿದ್ದಂತೆ ನೆಟ್ಟಿಗನೋರ್ವ ರಿಪ್ಲೈ ಮಾಡಿ ಚೆನ್ನೈ ತಂಡಕ್ಕೆ ಬನ್ನಿ ಎಂದು ಟ್ವೀಟ್ ಮೂಲಕ ಮನವಿ ಮಾಡಿದ್ರು.
ಸೈಮಂಡ್ಸ್, ಫ್ರಾಂಕ್ಲಿನ್ ನನ್ನ ಕೈಕಾಲು ಕಟ್ಟಿ ಕೂಡಿಹಾಕಿದ್ದರು..! ಆಘಾತಕಾರಿ ಘಟನೆ ಬಿಚ್ಚಿಟ್ಟ ಚಹಲ್
ಇನ್ನು ಅಭಿಮಾನಿ ಕೋರಿಕೆಗೆ ರಿಪ್ಲೇ ಮಾಡಿರೋ ಲೆಗ್ ಬ್ರೇಕರ್, ಕ್ಷಮಿಸು ಗೆಳೆಯ. ಚೆನ್ನೈ ತಂಡ ಸೇರಲು ನಾನಿನ್ನೂ ಎರಡು ವರ್ಷ ಚಿಕ್ಕವನು ಎಂದು ಬರೆದುಕೊಂಡಿದ್ರು. ಇದರೊಂದಿಗೆ ನೇರವಾಗಿ ಅಮಿತ್ ಮಿಶ್ರಾ ಚೆನ್ನೈ ತಂಡ ಸೇರಿಕೊಳ್ಳಲು ಹೆಚ್ಚಿನ ವಯಸ್ಸಾಗಿರಬೇಕು, ಸಿಎಸ್‌ಕೆ ತಂಡದ ಪ್ಲೇಯರ್ಸ್ ವಯಸ್ಸಾದವರು ಎಂದೂ ಪರೋಕ್ಷವಾಗಿಯೇ ಕಿಚಾಯಿಸಿದ್ದಾರೆ.
ಚೆನ್ನೈ ಅಂದ್ರೆ ಅಮಿತ್ ಮಿಶ್ರಾಗೆ ಸಿಟ್ಟೇಕೆ ..?:
ಅಮಿತ್ ಮಿಶ್ರಾ ಹೀಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕಾಲೆಳೆಯಲು ಒಂದು ಕಾರಣವಿದೆ. ಆಕ್ಷನ್ನಲ್ಲಿ ಚೆನ್ನೈ ತಂಡ 35 ವರ್ಷ ಮೇಲ್ಪಟ್ಟ ಡ್ವೇನ್ ಬ್ರಾವೋ, ಅಂಬಟಿ ರಾಯುಡು ಹಾಗೂ ರಾಬಿನ್ ಉತ್ತಪ್ಪರನ್ನ ಖರೀದಿಸಿತ್ತು. 39 ವರ್ಷದ ಅಮಿತ್ ಮಿಶ್ರಾ ಹರಾಜಿನಲ್ಲಿ ಅನ್ಸೋಲ್ಡ್ ಆಗಿದ್ರು. ಈ ಹಿರಿಯ ಬೌಲರ್ನನ್ನ ಖರೀದಿಸುವ ಬೆಸ್ಟ್ ಚಾನ್ಸ್ ಚೆನ್ನೈಗಿತ್ತು. ಆದ್ರೆ ಯೆಲ್ಲೊ ಆರ್ಮಿ ಆ ಕೆಲಸ ಮಾಡ್ಲಿಲ್ಲ. ಈ ಬೇಸರದಿಂದಲೇ ಅಮಿತ್ ಮಿಶ್ರಾ ಚೆನ್ನೈ ತಂಡವನ್ನ ವಯಸ್ಕರ ತಂಡವೆಂದು ಕಿಚಾಯಿಸಿದ್ದಾರೆ.
ಐಪಿಎಲ್ನಲ್ಲಿ ಮಿಶ್ರಾ ರೆಕಾರ್ಡ್ ಅದ್ಭುತವಾಗಿದೆ. 154 ಪಂದ್ಯಗಳಿಂದ 166 ವಿಕೆಟ್ ಕಬಳಿಸಿದ್ದಾರೆ. ಐಪಿಎಲ್ ಹಿಸ್ಟರಿಯಲ್ಲಿ ಅತ್ಯಧಿಕ ವಿಕೆಟ್ ಪಡೆದ 4ನೇ ಪ್ಲೇಯರ್ ಹಾಗೂ 3 ಬಾರಿ ಹ್ಯಾಟ್ರಿಕ್ ವಿಕೆಟ್ ಪಡೆದ ಖ್ಯಾತಿ ಇವರದ್ದಾಗಿದೆ. ಇಂತಹ ಬೌಲರ್ ಅನ್ಸೋಲ್ಡ್ ಆಗಿದ್ದು ನಿಜಕ್ಕೂ ವಿಷಾದವೇ.
