Asianet Suvarna News Asianet Suvarna News

Rajat Patidar Century 49 ಎಸೆತದಲ್ಲಿ ಸೆಂಚುರಿ, ಯಾರು ಈ ರಜತ್ ಪಾಟಿದಾರ್!

  • ಎಲಿಮಿನೇಟರ್ ಪಂದ್ಯದಲ್ಲಿ ಲಖನೌಗೆ ನಡುಕ ಹುಟ್ಟಿಸಿದ ರಜತ್
  • ಸ್ಫೋಟಕ ಬ್ಯಾಟಿಂಗ್ ಮೂಲಕ ಶತಕ ಸಿಡಿಸಿದ ರಜತ್ ಪಾಟಿದಾರ್
  • ಒಂದು ಶತಕ ಹಲವು ದಾಖಲೆ, ಯಾರು ಈ ಪಾಟಿದಾರ್?
IPL 2022 Eliminator Who is Rajat Patidar young RCB batsman smash century in 49 balls against LSG ckm
Author
Bengaluru, First Published May 25, 2022, 10:52 PM IST

ಕೋಲ್ಕತಾ(ಮೇ.25): ರಜತ್ ಮನೋಹರ್ ಪಾಟಿದಾರ್. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಈ ಸ್ಫೋಟಕ ಬ್ಯಾಟ್ಸ್‌ಮನ್ ಎಲಿಮಿನೇಟರ್ ಪಂದ್ಯದಲ್ಲಿ ಸೆಂಚುರಿ ಸಿಡಿಸಿ ಅಬ್ಬರಿಸಿದ್ದಾರೆ. ರಜತ್ ಸೆಂಚುರಿಯಿಂದ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಆರ್‌ಸಿಬಿ ಸುಸ್ಥಿತಿಯಲ್ಲಿದೆ. ಕೇವಲ 49 ಎಸೆತದಲ್ಲಿ ರಜತ್ ಶತಕ ಪೂರೈಸಿದ್ದಾರೆ.

ರಜತ್ ಪಾಟಿದಾರ್ ಐಪಿಎಲ್ ಟೂರ್ನಿಯಲ್ಲಿ ಸಿಡಿಸಿದ ಚೊಚ್ಚಲ ಶತಕವಾಗಿದೆ. ಅದೂ ಕೂಡ ಅತ್ಯಂತ ಮಹತ್ವದ ಪಂದ್ಯದಲ್ಲಿ ಅನ್ನೋದು ವಿಶೇಷ. ಐಪಿಎಲ್ ಪ್ಲೇಆಫ್ ಪಂದ್ಯದಲ್ಲಿ ಶತಕ ಸಿಡಿಸಿದ ಮೊದಲ ಅನ್‌ಕ್ಯಾಪ್ ಪ್ಲೇಯರ್ ಅನ್ನೋ ದಾಖಲೆಯನ್ನು ರಜತ್ ಪಾಟಿದಾರ್ ಬರೆದಿದ್ದಾರೆ. 

IPL 2022 ಪಾಟಿದಾರ್ ಸೆಂಚುರಿಯಿಂದ ಅಬ್ಬರಿಸಿದ ಆರ್‌ಸಿಬಿ, ಲಖನೌಗೆ ಬೃಹತ್ ಟಾರ್ಗೆಟ್!

ಎಲಿಮಿನೇಟರ್ ಪಂದ್ಯದಲ್ಲಿ ಶತಕ ಸಿಡಿಸಿದ ಮೊದಲ ಕ್ರಿಕೆಟಿಗ ಅನ್ನೋ ದಾಖಲೆಯನ್ನು ರಜತ್ ಪಾಟಿದಾರ್ ನಿರ್ಮಿಸಿದ್ದಾರೆ. ಇನ್ನು ಐಪಿಎಲ್ ಟೂರ್ನಿಯಲ್ಲಿ ಸೆಂಚುರಿ ಸಿಡಿಸಿದ 4ನೇ ಅನ್‌ಕ್ಯಾಪ್ ಪ್ಲೇಯರ್ ಅನ್ನೋ ದಾಖಲೆಯನ್ನು ಬರೆದಿದ್ದಾರೆ. ರಜತ್ ಪಾಟಿದಾರ್‌ಗೂ ಮೊದಲು ಪೌಲ್ ವಾಲ್ತಾಟಿ, ಮನೀಶ್ ಪಾಂಡೆ, ದೇವದತ್ ಪಡಿಕ್ಕಲ್ ಈ ಸಾಧನೆ ಮಾಡಿದ್ದಾರೆ.

ರಜತ್ ಪಾಟಿದಾರ್ 54 ಎಸೆತದಲ್ಲಿ ಅಜೇಯ 112 ರನ್ ಸಿಡಿಸಿದರು. ರಜತ್ ಆಟದಿಂದ ಆರ್‌ಸಿಬಿ 207 ರನ್ ಗಳಿಸಲು ಸಾಧ್ಯವಾಯಿತು. ರಜತ್ ಆಟ ನೋಡಿದ ಅಭಿಮಾನಿಗಳಿಗೆ ಇದೀಗ ಈ ಪ್ರತಿಭಾನ್ವಿತ ಕ್ರಿಕೆಟಿಗ ಯಾರು ಅನ್ನೋ ಕುತೂಹಲ ಹೆಚ್ಚಾಗಿದೆ. 

ರಜತ್ ಪಾಟಿದಾರ್ ಮಧ್ಯ ಪ್ರದೇಶದ ಕ್ರಿಕೆಟಿಗ. 28ರ ಹರೆಯದ ಕ್ರಿಕೆಟಿಗ. ಮಧ್ಯ ಪ್ರದೇಶದ ಟಾಪ್ ಆರ್ಡರ್ ಬ್ಯಾಟ್ಸ್‌ಮನ್ ಆಗಿರುವ ರಜತ್ ಪಾಟಿದಾರ್ ಲಿಸ್ಟ್ ಎ, ಪ್ರಥಮ ದರ್ಜೆ ಕ್ರಿಕೆಟ್ ಹಾಗೂ ಟಿ20 ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಇದೇ ಕಾರಣಕ್ಕೆ ರಜತ್ ಪಾಟಿದಾರನ್ನು ಐಪಿಎಲ್ ಹರಾಜಿನಲ್ಲಿ ಆರ್‌ಸಿಬಿ ಖರೀದಿಸಿತ್ತು. ಮೂಲ ಬೆಲೆ 20 ಲಕ್ಷ ರೂಪಾಯಿಗೆ ಆರ್‌ಸಿಬಿ ರಜತ್ ಪಾಟಿದಾರ್ ಖರೀದಿ ಮಾಡಲಾಗಿದೆ. ಇದೀಗ ರಜತ್ ಪಾಟಿದಾರ್ ಕೋಟಿ ರೂಪಾಯಿಗೂ ಮೀರಿದ ಆಟ ಪ್ರದರ್ಶಿಸಿದ್ದಾರೆ.

IPL Playoffs ರದ್ದಾಗುವುದನ್ನು ತಡೆಯಲು ಬಿಸಿಸಿಐ ಮಾಸ್ಟರ್ ಪ್ಲಾನ್..!

ಮಧ್ಯಪ್ರದೇಶದ ಪರ 2021-22ರ ಸಾಲಿನಲ್ಲಿ  31 ಟಿ20 ಕ್ರಿಕೆಟ್‌ನಲ್ಲಿ 681 ರನ್ ಸಿಡಿಸಿ ಮಿಂಚಿದ್ದಾರೆ. ಇದೇ ಕಾರಣ ಆರ್‌ಸಿಬಿ ಈ ಯುವ ಪ್ರತಿಭಾನ್ವಿತ ಆಟಗಾರನಿಗೆ ಹರಾಜಿನಲ್ಲಿ ಮಣೆ ಹಾಕಿತ್ತು. 2021ರಲ್ಲೂ ರಜತ್ ಪಾಟಿದಾರ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದರು. ಆದರೆ ಸಿಕ್ಕಿದ್ದು ಕೇವಲ ನಾಲ್ಕು ಅವಕಾಶ ಮಾತ್ರ. ಇದರಲ್ಲಿ 71 ರನನ್ ಸಿಡಿಸಿದ್ದರು. 

ರಜತ್ ಪಾಟಿದಾರ್‌ಗೆ ಹೆಚ್ಚಿನ ಅವಕಾಶಗಳಿ ಸಿಗಲಿಲ್ಲ ನಿಜ. ಮಧ್ಯ ಪ್ರದೇಶ ಕ್ರಿಕೆಟ್ ತಂಡದಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. 39 ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯದಲ್ಲಿ 2588 ರನ್ ಸಿಡಿಸಿದ್ದಾರೆ. 43 ಲಿಸ್ಟ್ ಎ ಕ್ರಿಕೆಟ್ ಪಂದ್ಯದಲ್ಲಿ 1397 ರನ್ ಸಿಡಿಸಿದ್ದಾರೆ. 37 ಟಿ20 ಪಂದ್ಯದಲ್ಲಿ 1024 ರನ್ ಸಿಡಿಸಿದ್ದಾರೆ. 

ಐಪಿಎಲ್ ಟೂರ್ನಿಯಲ್ಲಿ ರಜತ್ ಪಾಟಿದಾರ್‌ಗೆ ಚೊಚ್ಚಲ ಶತಕ, ಆದರೆ ಪ್ರಥಮ ದರ್ಜೆ ಕ್ರಿಕೆಟ್‍‌ನಲ್ಲಿ 7, ಲಿಸ್ಟ್ ಎ ಕ್ರಿಕೆಟ್‌ನಲ್ಲಿ 3 ಸೆಂಚುರಿ ದಾಖಲಿಸಿದ್ದಾರೆ. ಇನ್ನು ಟಿ20 ಪಂದ್ಯಗಳಲ್ಲಿ ಗರಿಷ್ಠ ಸ್ಕೂರ್ 96. 

Follow Us:
Download App:
  • android
  • ios