* RCB ಉತ್ಸವ ಅಲ್ಲ.. ಕಾರ್ತಿಕೋತ್ಸವ..* ಸಿಂಗಲ್​ ಆರ್ಮಿಯಂತೆ ಹೋರಾಡ್ತಿದ್ದಾರೆ ಡಿಕೆ* ಡೆಲ್ಲಿ ಮಣಿಸಿದ ಬಳಿಕ ಸಂಭ್ರಮ ಜೋರು 

ಬೆಂಗಳೂರು, (ಏ.18):15ನೇ ಐಪಿಎಲ್​​ನಲ್ಲಿ ಆರ್​​​ಸಿಬಿ ಜಬರ್ದಸ್ತ್​ ಪ್ರದರ್ಶನ ನೀಡಿದೆ. ಆಡಿದ 6 ಪಂದ್ಯಗಳಲ್ಲಿ 4 ರಲ್ಲಿ ಜಯಭೇರಿ ಬಾರಿಸಿದೆ. ಪ್ರತಿ ಪಂದ್ಯವನ್ನ ಗೆಲ್ಲುವ ಉತ್ಸಾಹದದಿಂದಲೇ ಆರ್​ಸಿಬಿ ಕಣಕ್ಕಿಳಿಯುತ್ತಿದೆ. 2 ಪಂದ್ಯ ಸೋತ್ರು ಅದು ಸ್ವಲ್ಪದರಲ್ಲಿ ಮಿಸ್ ಆಗಿದೆ. ಟೋಟಲಿ ಈ ಬಾರಿ ಕೆಂಪಂಗಿ ಸೈನ್ಯ ಕಂಪ್ಲೀಟ್ ಬದಲಾಗಿದೆ. ಬ್ಯಾಟಿಂಗ್​​, ಬೌಲಿಂಗ್​​​​, ಫೀಲ್ಡಿಂಗ್​​​​ ಹೀಗೆ ಎಲ್ಲದರಲ್ಲೂ ಪರ್ಫೆಕ್ಟ್​​​. ಒಂದೇ ಮಾತಲ್ಲಿ ಹೇಳಬೇಕಂದ್ರೆ ಈ ಸಲ ಆರ್​ಸಿಬಿ ತಂಡದ ಜೋಶ್​​​ ಹೈ ಆಗಿದೆ.

ಹಿಂದೆಂದೂ ಇರದ ವಿಕ್ಟರಿ ಜೋಶ್​​ ಈ ಬಾರಿ ತಂಡದಲ್ಲಿ ಕಾಣ್ತಿದೆ ಅಂದ್ರೆ ಅದಕ್ಕೆ ಏನೋ ಸ್ಪೆಶಲ್​ ರೀಸನ್​​​ ಇರಲೇಬೇಕು ಅಲ್ವಾ ? ಖಂಡಿತಾ ಇದೆ. ಆರ್​ಸಿಬಿ ಹೀಗೆ ಬ್ಯಾಕ್ ಟು ಬ್ಯಾಕ್ ಗೆಲುವಿನ ನಾಗಲೋಟದ ಹಿಂದೆ ಒಂದು ಶಕ್ತಿ ಇದೆ. ಆ ಶಕ್ತಿನೇ ಡುಪ್ಲೆಸಿಸ್​​​​ ಬಳಗವನ್ನ ಗೆಲುವಿನ ಮದದಲ್ಲಿ ತೇಲಾಡುವಂತೆ ಮಾಡ್ತಿದೆ. ಅಷ್ಟಕ್ಕೂ ಆ ಬಲಿಷ್ಠ ಶಕ್ತಿ ಬೇರಾವುದು ಅಲ್ಲ, ಅದೇ ಒನ್ ಆಂಡ್ ಓನ್ಲಿ ಡಿಕೆ ಖ್ಯಾತಿಯ ದಿನೇಶ್​ ಕಾರ್ತಿಕ್​​.

RCB ಮ್ಯಾಚ್​​​ ಫಿನಿಶರ್ ಟಿ20 ವಿಶ್ವಕಪ್​​​ಗೆ ಸೆಲೆಕ್ಟ್ ಆಗ್ತಾರಾ..?

ಹೌದು... ಆರ್​ಸಿಬಿ ಪರ ಬ್ಯಾಟಿಂಗ್‍ನಲ್ಲಿ ಧೂಳೆಬ್ಬಿಸುತ್ತಿರುವ ಕಾರ್ತಿಕ್ ಆರ್​ಸಿಬಿ ತಂಡದ ಮ್ಯಾಚ್ ಫಿನಿಶರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ 6 ಪಂದ್ಯಗಳನ್ನು ಆಡಿ 209.57 ಸ್ಟ್ರೈಕ್‍ರೇಟ್‍ನಲ್ಲಿ 197 ರನ್ ಸಿಡಿಸಿ ತಂಡಕ್ಕೆ ನೆರವಾಗಿದ್ದಾರೆ. ಈ ಪ್ರದರ್ಶನ ಇದೀಗ ಟೀಂ ಇಂಡಿಯಾ ಪರ ಮತ್ತೆ ಕಾಣಿಸಿಕೊಳ್ಳುವ ಕಾರ್ತಿಕ್ ಕನಸಿಗೆ ಜೀವ ತುಂಬಿದೆ.

ಸಿಂಗಲ್​ ಆರ್ಮಿಯಂತೆ ಹೋರಾಡ್ತಿದ್ದಾರೆ ಡಿಕೆ:
ದಿನೇಶ್​ ಕಾರ್ತಿಕ್​​ ಅನ್ನೋ ಫಯರ್​ ಮ್ಯಾನ್​​ ಈ ಸಲ ಆರ್​ಸಿಬಿ ಸೇರಿದ್ದೇ ಬಂತು. ಕೆಂಪಂಗಿ ಸೈನ್ಯದ ಚರಿಷ್ಮಾನೇ ಬದಲಾಗಿದೆ. ಬದಲಿಸಿದ್ದು ಡಿಕೆ ಬಾಸ್​​​. ತಮಿಳ್​​ ಮಗನ್ ಮೊದಲ ಪಂದ್ಯದಿಂದಲೇ ರನ್​ ಭರಾಟೆ ಶುರುವಿಟ್ಟುಕೊಂಡಿದ್ದಾರೆ. ಕ್ರೀಸ್​​​​​ಗೆ ಎಂಟ್ರಿಕೊಟ್ಟಾಗಲೆಲ್ಲಾ ಒನ್​ ಮ್ಯಾನ್​ ಶೋ ನೀಡಿ ತಂಡವನ್ನ ಸಂಕಷ್ಟದಿಂದ ಪಾರು ಮಾಡಿದ್ದಾರೆ. ಆರ್​ಸಿಬಿಗೆ ಡಿಕೆನೇ ತೂಫಾನ್​​​​, ಡಿಕೆನೇ ಫಿನಿಶರ್​​​, ಡಿಕೆನೇ ಆಪತ್ಭಾಂದವ.

ಎದುರಾಳಿ ಪಡೆಗೆ ನಡುಕ ಹುಟ್ಟಿಸಿರೋ ಡಿಕೆ ಬಾಸ್​​ ಆಡಿದ ಆರು ಪಂದ್ಯಗಳಲ್ಲಿ ಅಮೋಘ 197 ರನ್​​ ಬಾರಿಸಿದ್ದಾರೆ. ಬ್ಯಾಟಿಂಗ್​ ಸ್ಟ್ರೈಕ್​​ರೇಟ್​ ಅಂತೂ ಧೂಳ್​​​​. 207ರ ಸ್ಟ್ರೈಕ್​ರೇಟ್​​ನಲ್ಲಿ ಬ್ಯಾಟ್​ ಬೀಸ್ತಿದ್ದು, ಡಿಕೆಗೆ ಯಾರೂ ಸಾಟಿನೇ ಇಲ್ಲದಂತಾಗಿದೆ. 

6 ಇನ್ನಿಂಗ್ಸ್​​​​..5 ಬಾರಿ ನಾಟೌಟ್​​​..ಒಂದು ಅರ್ಧಶತಕ..:
ಯೆಸ್​​​​, ಡಿಕೆ ರನ್ ಭರಾಟೆಯ ಸ್ಪೆಷಾಲಿನೇ ಇದು. ಈವರೆಗೆ ಆಡಿದ ಆರು ಪಂದ್ಯಗಳ ಪೈಕಿ 5 ರಲ್ಲಿ ಅಜೇಯರಾಗಿದ್ದಾರೆ. ಇನ್ನೂ ಒಂದು ಪಂದ್ಯದಲ್ಲಿ ಅರ್ಧಶತಕ ಮೂಡಿ ಬಂದಿದೆ. ಆ ಅರ್ಧಶತಕವೇ ಡೆಲ್ಲಿ ಕ್ಯಾಪಿಟಲ್ಸ್​ ತಂಡವನ್ನ ಮಣ್ಣು ಮುಕ್ಕಿಸಲು ನೆರವಾಗಿತ್ತು.

ಡೆಲ್ಲಿ ಮಣಿಸಿದ ಬಳಿಕ ಸಂಭ್ರಮ ಜೋರು 
ಇನ್ನು ಡಿಕೆಯ ಫೆಂಟಾಸ್ಟಿಕ್​​ ಇನ್ನಿಂಗ್ಸ್​​ನೊಂದಿಗೆ 4ನೇ ವಿಕ್ಟರಿ ಕಂಡ ಆರ್​ಸಿಬಿ ಪಾಳಯದಲ್ಲಿ ಸಂಭ್ರಮ ಮನೆ ಮಾಡಿತ್ತು. ಡ್ರೆಸ್ಸಿಂಗ್ ರೂಮ್​​​​ಗೆ ತೆರಳ್ತಿದ್ದಂತೆ ಕುಣಿದು ಕುಪ್ಪಳಿಸಿದ್ರು.