* RCB ಮ್ಯಾಚ್​​​ ಫಿನಿಶರ್ ಟಿ20 ವಿಶ್ವಕಪ್​​​ಗೆ ಸೆಲೆಕ್ಟ್ ಆಗ್ತಾರಾ..? * ಡೆಲ್ಲಿ ವಿರುದ್ಧ ಆರ್​ಸಿಬಿ ಗೆದ್ದ ಬಳಿಕ  ಮುಂಬರೋ ಟಿ20 ವಿಶ್ವಕಪ್​​​​ನಲ್ಲಿ ಸ್ಥಾನ ಪಡೆಯುವ ಬಗ್ಗೆ ಡಿಕೆ ಮಾತು* ಸದ್ಯ ಡಿಕೆಯ ಈ ವರ್ಲ್ಡ್​​​ಕಪ್​​​​​ ಡ್ರೀಮ್​ ಬಗ್ಗೆ ಭಾರಿ ಚರ್ಚೆ

ಮುಂಬೈ, (ಏ.18) : ನಾನು ದೊಡ್ಡ ಕನಸನ್ನು ಹೊಂದಿದ್ದೇನೆ. ಅದನ್ನು ಸಾಧಿಸುವ ಸಲುವಾಗಿ ಕಠಿಣ ಪರಿಶ್ರಮ ವಹಿಸುತ್ತಿದ್ದೇನೆ. ಟಿ20 ವಿಶ್ವಕಪ್​ನಲ್ಲಿ ಸ್ಥಾನ ಪಡೆಯೋದು ನನ್ನ ದೊಡ್ಡ ಗುರಿ. ಡೆಲ್ಲಿ ವಿರುದ್ಧ ಆರ್​ಸಿಬಿ ಗೆದ್ದ ಬಳಿಕ ಡಿಕೆ ಮುಂಬರೋ ಟಿ20 ವಿಶ್ವಕಪ್​​​​ನಲ್ಲಿ ಸ್ಥಾನ ಪಡೆಯುವ ಬಗ್ಗೆ ಮಾತನಾಡಿದ್ರು. ಸದ್ಯ ಡಿಕೆಯ ಈ ವರ್ಲ್ಡ್​​​ಕಪ್​​​​​ ಡ್ರೀಮ್​ ಬಗ್ಗೆ ಭಾರಿ ಚರ್ಚೆಯಾಗ್ತಿದೆ. 

 ಆರ್​ಸಿಬಿ ಪರ ಬ್ಯಾಟಿಂಗ್‍ನಲ್ಲಿ ಧೂಳೆಬ್ಬಿಸುತ್ತಿರುವ ಕಾರ್ತಿಕ್ ಆರ್​ಸಿಬಿ ತಂಡದ ಮ್ಯಾಚ್ ಫಿನಿಶರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ 6 ಪಂದ್ಯಗಳನ್ನು ಆಡಿ 209.57 ಸ್ಟ್ರೈಕ್‍ರೇಟ್‍ನಲ್ಲಿ 197 ರನ್ ಸಿಡಿಸಿ ತಂಡಕ್ಕೆ ನೆರವಾಗಿದ್ದಾರೆ. ಈ ಪ್ರದರ್ಶನ ಇದೀಗ ಟೀಂ ಇಂಡಿಯಾ ಪರ ಮತ್ತೆ ಕಾಣಿಸಿಕೊಳ್ಳುವ ಕಾರ್ತಿಕ್ ಕನಸಿಗೆ ಜೀವ ತುಂಬಿದೆ.

IPL 2022: ದಿನೇಶ್​ ಕಾರ್ತಿಕ್ ಡಿಫರೆಂಟ್​​ ಹೆಲ್ಮೆಟ್​​ ಹಾಕಿ ಆಡೋದ್ಯಾಕೆ..?

ಡಿಕೆ ಸದ್ಯ ನಡೆಯುತ್ತಿರುವ ಐಪಿಎಲ್​​ನಲ್ಲಿ ಯಂಗ್ ಸ್ಟರ್ಸ್​ ನಾಚುವಂತ ಪ್ರದರ್ಶ ನೀಡ್ತಿದ್ದಾರೆ. 34 ರಲ್ಲೂ 24ರಂತೆ ಬ್ಯಾಟ್ ಬೀಸ್ತಿದ್ದಾರೆ. ಇಂತಹ ಆಟಗಾರನಿಗೆ ಬಿಸಿಸಿಐ ಸೆಲೆಕ್ಟರ್ಸ್​ ಮತ್ತೆ ಮಣೆ ಹಾಕ್ತಾರಾ ಅನ್ನೋ ಪ್ರಶ್ನೆನೂ ಎದ್ದಿದೆ. ಡಿಕೆಯನ್ನ ಸೆಲೆಕ್ಟ್​​​ ಮಾಡೋದು ಬಿಡೋದು ಸೆಲೆಕ್ಟರ್ಸ್​ ವಿವೇಚನೆಗೆ ಬಿಟ್ಟಿದ್ದು. ಆದ್ರೆ ಈ ಮೂರು ಕಾರಣದಿಂದ ಡಿಕೆಗೆ ವಿಶ್ವಕಪ್​​ನಲ್ಲಿ ಸ್ಥಾನ ನೀಡಲೇಬೇಕು.

ರೀಸನ್​ ನಂ.1 - ಮಿಡಲ್​​​​​​​​ ಆರ್ಡರ್​ಗೆ ದೊಡ್ಡ ಬಲ: 
ಯೆಸ್​​, ಒಂದು ವೇಳೆ ಡಿಕೆ ಟಿ20 ವಿಶ್ವಕಪ್​​ನಲ್ಲಿ ಚಾನ್ಸ್ ಗಿಟ್ಟಿಸಿಕೊಂಡ್ರೆ ಟೀಮ್​ ಇಂಡಿಯಾದ ಮಧ್ಯಮ್ರ ಕ್ರಮಾಂಕ ಬಲಿಷ್ಠಗೊಳ್ಳಲಿದೆ. ಟಾಪ್ ಆರ್ಡರ್​​ನಲ್ಲಿ ರೋಹಿತ್​​​​, ರಾಹುಲ್​​​​, ಕೊಹ್ಲಿಯಂತ ಅನುಭವ ಆಟಗಾರರು ಇದ್ದಾರೆ. ಆದ್ರೆ ಮಿಡಲ್ ಆರ್ಡರ್​​​ನಲ್ಲಿ ಯಂಗ್​ ಸ್ಟರ್ಸ್​ಗಳಿದ್ದು, ಡಿಕೆ ಎಂಟ್ರಿಯಾದರೆ ಅನುಭವಿ ಫಿನಿಶರ್ ಸಿಕ್ಕಂತಾಗಲಿದೆ.

ರೀಸನ್​ ನಂ.2 - ಆರ್​ಸಿಬಿರ ಪರ ಅದ್ಭುತ ಫಾರ್ಮ್​: 
ವಿಕೆಟ್ ಕೀಪರ್ ದಿನೇಶ್​ ಕಾರ್ತಿಕ್​​​ ಆರ್​ಸಿಬಿ ಪರ ಧೂಳೆಬ್ಬಿಸಿದ್ದಾರೆ. ಆರು ಪಂದ್ಯಗಳಿಂದ 197 ರನ್​ ಗಳಿಸಿ ಮಧ್ಯಮ ಕ್ರಮಾಂಕದಲ್ಲಿ ಫಿನಿಶಿಂಗ್​ ಜವಾಬ್ದಾರಿ ನಿರ್ವಹಿಸ್ತಿದ್ದಾರೆ. ಈ ಹಾಟ್ ಫಾರ್ಮ್​ ಟಿ20 ವಿಶ್ವಕಪ್​​ನಲ್ಲಿ ಭಾರತಕ್ಕೆ ದೊಡ್ಡ ನೆರವಾಗಲಿದೆ. 

ರೀಸನ್​ ನಂ.2 - ಪಂತ್​​ಗೆ ಡಿಕೆ ಬ್ಯಾಕ್ ಅಪ್​ ವಿಕೆಟ್ ಕೀಪರ್​: 
ಡಿಕೆ ಬ್ಯಾಟಿಂಗ್ ಅಲ್ಲದೇ ವಿಕೆಟ ಕೀಪಿಂಗ್​​ನಲ್ಲಿ ಆರ್​ಸಿಬಿಗೆ ನೆರವಾಗ್ತಿದ್ದಾರೆ. 4 ಡಿಸ್ಮಿಸಲ್ಸ್ ಮಾಡಿದ್ದಾರೆ. ಹಾಗೂ ಕೀಪಿಂಗ್​ ಸದಾ ಆಕ್ಟೀವ್​​. ಆಯ್ಕೆಯಾದ್ರೆ ರಿಷಬ್​​ ಪಂತ್​​ಗೆ ಬೆಸ್ಟ್​​ ಬ್ಯಾಕ್ ಅಪ್​ ವಿಕೆಟ್​​​​​​​ ಕೀಪರ್ ಆಗಬಲ್ಲರು.

2022ರ ಅಕ್ಟೋಬರ್, ನವೆಂಬರ್ ತಿಂಗಳಲ್ಲಿ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ನಡೆಯಲಿದೆ. ಟಿ20 ವಿಶ್ವಕಪ್‍ಗೆ ಭಾರತದ ಬಲಿಷ್ಠ ತಂಡ ಕಟ್ಟುವ ಯೋಜನೆಯಲ್ಲಿ ಬಿಸಿಸಿಐ ಇದೆ. ಹಾಗಾಗಿ ಬಿಸಿಸಿಐ ಈ ಬಾರಿಯ ಐಪಿಎಲ್‍ನಲ್ಲಿ ಆಟಗಾರರ ಪ್ರದರ್ಶನದ ಬಗ್ಗೆ ಗಮನಹರಿಸಿದೆ. ಈ ಬಾರಿ ಐಪಿಎಲ್‍ನಲ್ಲಿ ಕಾರ್ತಿಕ್ ಅಬ್ಬರಿಸುತ್ತಿರುವುದನ್ನು ಗಮನಿಸುತ್ತಿರುವ ಬಿಸಿಸಿಐ ಆಯ್ಕೆ ಸಮಿತಿ ಕಾರ್ತಿಕ್‍ಗೆ ಮಣೆಹಾಕಿದರೂ ಅಚ್ಚರಿ ಪಡಬೇಕಾಗಿಲ್ಲ.