David Warner: ಈತ ಮಾಡ್ರನ್​​ ಕ್ರಿಕೆಟ್​​ನ ‘ತ್ಯಾಗ’ರಾಜ..!

* ಡೇವಿಡ್ ವಾರ್ನರ್‌ ಓರ್ವ ಟೀಂ ಪ್ಲೇಯರ್ ಎನ್ನುವುದು ಮತ್ತೊಮ್ಮೆ ಸಾಬೀತು

* ಸನ್‌ರೈಸರ್ಸ್ ಎದುರು ಶತಕ ಬಾರಿಸಲು ಅವಕಾಶವಿದ್ದರೂ ತ್ಯಾಗ ಮಾಡಿದ ವಾರ್ನರ್‌

* ತಂಡದ ಗೆಲುವಿಗಾಗಿ ಶತಕವನ್ನೇ ಬಲಿಕೊಟ್ಟ ಎಡಗೈ ಬ್ಯಾಟರ್‌

IPL 2022 Delhi Capitals Cricketer Rovman Powell reveals David Warner selfless act kvn

ಮುಂಬೈ(ಮೇ.07): ಸಚಿನ್​​ ತೆಂಡುಲ್ಕರ್​​​ (Sachin Tendulkar) ಗಾಡ್​​ ಆಫ್​ ಕ್ರಿಕೆಟರ್​​. ಶತಕಗಳ ಶತಕರಾಜ. ಇಂದಿಗೂ ಸಚಿನ್​​​ ಹೆಸರು ಕೇಳಿದ್ರೆ ಎಲ್ಲರ ಮನಸ್ಸಲ್ಲಿ ಹೆಮ್ಮೆಯ ಭಾವ ಮೂಡುತ್ತೆ. ಅಂತಹ ಕೊಡುಗೆಯನ್ನ ಭಾರತೀಯ ಕ್ರಿಕೆಟ್​ಗೆ ದಿ ಗ್ರೇಟ್​ ಲೆಜೆಂಡ್ ನೀಡಿದ್ದಾರೆ. ಆದ್ರೆ ಇಷ್ಟೆಲ್ಲಾ ಸಾಧಿಸಿದ ಸವ್ಯಸಾಚಿ ಸಚಿನ್​​​ ಕ್ರಿಕೆಟ್​​ಗೆ ನಿವೃತ್ತಿ ಘೋಷಿಸಿದ್ರು ಸ್ವಾರ್ಥಿ ಕ್ರಿಕೆಟರ್​ ಅನ್ನೋ ಹಣೆಪಟ್ಟಿ ಬದಲಾಗ್ಲಿಲ್ಲ. ಸೆಂಚುರಿ ವಿಷಯದಲ್ಲಿ ಸಚಿನ್​​  ತುಂಬಾ ಸ್ವಾರ್ಥಿ ಅನ್ನೋ ಅಪವಾದ ಈಗಲೂ ಇದೆ. ಸಚಿನ್​ರನ್ನು ಹೆಗಲಮೇಲೆ ಹೊತ್ತು ಮೆರೆದಾಡಿಸಿದ ಅಭಿಮಾನಿ ದೇವರುಗಳಿಗೆ ಅವರ ಆಟದ ಬಗ್ಗೆ ಹೊಗಳುವ, ತೆಗಳುವ ಎರಡೂ ಹಕ್ಕಿದೆ ಅನ್ನೋದನ್ನ ಮರೆಯುವಂತಿಲ್ಲ.

ಸದ್ಯ ನಾವು ಸಚಿನ್​ ಸ್ವಾರ್ಥಿಯಾಗಿದ್ರಾ ಅನ್ನೋ ಟಾಪಿಕ್​​​ ಎತ್ತಲು ಕಾರಣ ಈ ತ್ಯಾಗರಾಜ. ತಂಡದ ಗೆಲುವಿಗಾಗಿ ಈತ ತನ್ನ ಸೆಂಚುರಿಯನ್ನೇ ತ್ಯಜಿಸಿ, ಮಾಡ್ರನ್​ ಕ್ರಿಕೆಟ್​ನ ರಿಯಲ್​​ ನಿಸ್ವಾರ್ಥ ಕ್ರಿಕೆಟರ್ ಅನ್ನಿಸಿಕೊಂಡಿದ್ದಾನೆ. ಅಂದಹಾಗೇ ಆ ತ್ಯಾಗಮಯಿ ಆಟಗಾರ ಬೇರಾರು ಅಲ್ಲ, ಆತನೇ ಡೇವಿಡ್​ ವಾರ್ನರ್​.

ನನಗೆ ಸೆಂಚುರಿ ಮುಖ್ಯವಲ್ಲ, ತಂಡದ ಗೆಲುವೇ ಮುಖ್ಯ:

ಯೆಸ್​​, ಈಗಾಗ್ಲೆ ತಮ್ಮ ಸ್ಫೋಟಕ ಆಟದೊಂದಿಗೆ ಡೇವಿಡ್​ ವಾರ್ನರ್ (David Warner) ಹೆಸರು ವಾಸಿಯಾಗಿದ್ದಾರೆ. ಈಗ ಆ ಜನಪ್ರೀಯತೆ ಮತ್ತಷ್ಟು ಹೆಚ್ಚಾಗುವ ಕೆಲಸವೊಂದನ್ನು ವಾರ್ನರ್​ ಮಾಡಿದ್ದಾರೆ. ಸನ್‌ರೈಸರ್ಸ್‌ ಹೈದ್ರಾಬಾದ್​ (Sunrisers Hyderabad) ವಿರುದ್ಧದ ಪಂದ್ಯದಲ್ಲಿ ತಂಡದ ಗೆಲುವಿಗಾಗಿ ತನ್ನ ಸೆಂಚುರಿಯನ್ನೇ ಬಲಿ ಕೊಟ್ಟ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.

ನಿಜ, ಹೈದ್ರಾಬಾದ್​​ ವಿರುದ್ಧ  ವೀರಾವೇಶ ತೋರಿದ್ದ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ಆರಂಭಿಕ ಬ್ಯಾಟರ್ ವಾರ್ನರ್​ ಸ್ಪೋಟಕ 92 ರನ್​ ಗಳಿಸಿ ಗೆಲುವಿಗೆ ಕಾರಣರಾಗಿದ್ರು. ಈ ಪಂದ್ಯದಲ್ಲಿ ಲೆಫ್ಟಿ ಆಟಗಾರನಿಗೆ ಶತಕ ಸಿಡಿಸುವ ಉತ್ತಮ ಅವಕಾಶವಿತ್ತು. 19 ಓವರ್​ ಮುಕ್ತಾಯದಂತ್ಯಕ್ಕೆ ವಾರ್ನರ್​​ 92 ರನ್​ ಗಳಿಸಿದ್ರು. ಕೊನೆ ಓವರ್​​ನಲ್ಲಿ  ಇನ್ನೂ ಎಂಟು ಗಳಿಸಿದ್ರೆ ಪ್ರಸಕ್ತ ಐಪಿಎಲ್​​ನಲ್ಲಿ ಡೇವಿಡ್ ವಾರ್ನರ್ ಮೊದಲ ಸೆಂಚುರಿ ದಾಖಲಿಸಬಹುದಿತ್ತು. ಇದಕ್ಕೆ ಸಹ ಆಟಗಾರ ರೋಮನ್​ ಪೊವೆಲ್ (Rovman Powell)​ ಕೂಡ ಸಹಕರಿಸಿದ್ರು. ಆದ್ರೆ ವಾರ್ನರ್​​ ಇದನ್ನ ತಿರಸ್ಕರಿಸಿದ್ರು. ನೀನೇ ಎಲ್ಲಾ ಬಾಲ್​​ಗಳನ್ನ ಆಡು ಎಂದು ವಾರ್ನರ್​ ಹೇಳಿದ್ರು ಎಂದು ಪೊವೆಲ್​​ ಹೇಳಿದ್ದಾರೆ.

IPL 2022: ಸನ್‌ರೈಸರ್ಸ್‌ ಮುಳುಗಿಸಿ ಸೇಡು ತೀರಿಸಿಕೊಂಡ ಡೇವಿಡ್ ವಾರ್ನರ್..!​

ಕೇಳಿದ್ರಾ ಸ್ಪೋಟಕ ದಾಂಡಿಗ ಪೊವೆಲ್​​ ಹೇಳಿದ ಮಾತುಗಳನ್ನ. ಫೈನಲ್​​ ಓವರ್ ಶುರುವಾಗೋಕು ಮುನ್ನ ಪೊವೆಲ್​​​, ವಾರ್ನರ್ ಜೊತೆ ಮಾತುಕತೆ ನಡೆಸಿ, ಮೊದಲ ಬಾಲ್ ಸಿಂಗಲ್​ ತೆಗೆದು ನಿಮಗೆ ಸ್ಟ್ರೈಕ್​​​​​ಕೊಡುವುದಾಗಿ ವಾರ್ನರ್​ಗೆ ಹೇಳಿದ್ದರಂತೆ. ಆದ್ರೆ ಇದನ್ನ ಒಪ್ಪದ ಆಸೀಸ್ ಬ್ಯಾಟರ್​​​, ನಾನು ಹಾಗೆಲ್ಲಾ ಮಾಡಲ್ಲ. ನೀನೆ ಎಲ್ಲಾ ಬಾಲ್​ಗಳನ್ನ ಆಡಲು ಪ್ರಯತ್ನಿಸು ಎಂದರಂತೆ. 

ನಿಜಕ್ಕೂ ವಾರ್ನರ್​​​​ ಎಂತಹ ನಿಸ್ವಾರ್ಥಿ ಕ್ರಿಕೆಟರ್ ಅಲ್ವಾ ? ಬೇರೆ ಯಾರೇ ಆಗಿದ್ರೆ ಸಿಂಗಲ್ ತೆಗೆದುಕೊಡ್ತೀನಿ ಅಂದಾಗ ಓಕೆ ಎಂದು ಸೆಂಚುರಿ ಪೂರ್ಣಗೊಳಿಸಿಕೊಳ್ಳುವವರು. ಆದ್ರೆ ವಾರ್ನರ್​​​ ಹಾಗೇ ಮಾಡ್ಲಿಲ್ಲ. ತನ್ನ ಸೆಂಚುರಿ ಮಿಸ್ ಆದ್ರೂ ಪರ್ವಾಗಿಲ್ಲ. ನೀನೇ ಆಡು ಎನ್ನುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಈ ನಡೆಯಿಂದ ವಾರ್ನರ್​​​​​ ತಮ್ಮನ್ನ ಪ್ರೀತಿಸುವ ಅಭಿಮಾನಿಗಳ ಹೃದಯಕ್ಕೆ ಮತಷ್ಟು ಹತ್ತಿರ ಆಗೋದ್ರಲ್ಲಿ ಯಾವುದೇ ಸಂಶಯವಿಲ್ಲ. ಡೇವಿಡ್ ವಾರ್ನರ್ ಓರ್ವ ಟೀಂ ಪ್ಲೇಯರ್ ಎನ್ನುವುದಕ್ಕೆ ಇದಕ್ಕಿಂತ ಒಳ್ಳೆಯ ಉದಾಹರಣೆ ಬೇಕಾ ಹೇಳಿ..?
 

Latest Videos
Follow Us:
Download App:
  • android
  • ios