IPL 2022: ಸನ್‌ರೈಸರ್ಸ್ ಮುಳುಗಿಸಿ ಸೇಡು ತೀರಿಸಿಕೊಂಡ ಡೇವಿಡ್ ವಾರ್ನರ್..!
* ಸನ್‌ರೈಸರ್ಸ್ ವಿರುದ್ದ ಭರ್ಜರಿ ಬ್ಯಾಟಿಂಗ್ ನಡೆಸಿ ಮಿಂಚಿದ ಡೇವಿಡ್ ವಾರ್ನರ್
* ಹಳೆಯ ತಂಡಕ್ಕೆ ಬ್ಯಾಟಿಂಗ್ ಮೂಲಕವೇ ಉತ್ತರಿಸಿದ ಎಡಗೈ ಬ್ಯಾಟರ್
* ಕಳೆದ ಆವೃತ್ತಿಯಲ್ಲಿ ಅನುಭವಿಸಿದ ಅವಮಾನಕ್ಕೆ ಸೇಡು ತೀರಿಸಿಕೊಂಡ ವಾರ್ನರ್
ಮುಂಬೈ(ಮೇ.07): ಐಪಿಎಲ್ನಲ್ಲಿ (IPL 2022) ಆಟಗಾರರ ಮಧ್ಯೆ ಸ್ನೇಹ ಎಷ್ಟಿರುತ್ತೋ ಅಷ್ಟೇ ಧ್ವೇಷ ಸಹ ಇರುತ್ತದೆ. ಪ್ಲೇಯರ್ಸ್ ಮತ್ತು ಫ್ರಾಂಚೈಸಿಗಳ ನಡುವೆಯೂ ಹಾಗೆ. ಫ್ರಾಂಚೈಸಿಗಳಿಗೆ ಕೆಲ ಆಟಗಾರರು ನಿಷ್ಟರಾಗಿರುತ್ತಾರೆ. ಆದ್ರೆ ಕೆಲ ಪ್ಲೇಯರ್ಗಳಿಗೆ ಫ್ರಾಂಚೈಸಿಗಳೆಂದರೆ ಸಿಡಿಮಿಡಿಗೊಳ್ತಾರೆ. ಅದಕ್ಕೆ ಕಾರಣವೂ ಇದೆ. ಆಟಗಾರರು ಒಂದು ತಂಡದ ಪರ ಆಡುವಾಗ ಆ ತಂಡದ ಫ್ರಾಂಚೈಸಿ ಆಟಗಾರರನ್ನ ಸರಿಯಾಗಿ ನಡೆಸಿಕೊಂಡಿರಲ್ಲ. ಅವಮಾನ ಸಹ ಮಾಡಿರುತ್ತಾರೆ. ಹಾಗಾಗಿ ಕೆಲ ಪ್ಲೇಯರ್ಸ್ಗೆ ಕೆಲ ಫ್ರಾಂಚೈಸಿ ಅಂದರೆ ಆಗಿ ಬರೋಲ್ಲ.
ಕಳೆದ ವರ್ಷ ಕುಲ್ದೀಪ್ ಯಾದವ್ (Kuldeep Yadav) ಅವರನ್ನ ಬೆಂಚ್ ಕಾಯಿಸಿ ಅವಮಾನ ಮಾಡಿತ್ತು ಕೆಕೆಆರ್ (KKR). ಈ ಸಲ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ಸೇರಿಕೊಂಡ ಕುಲ್ದೀಪ್, ಅದ್ಭುತ ಪ್ರದರ್ಶನ ನೀಡಿ ಕೆಕೆಆರ್ ಸೋಲಿಸಿದ್ದರು. ಇನ್ನು ಆರ್ಸಿಬಿ ವಿರುದ್ಧ ಯುಜವೇಂದ್ರ ಚಹಲ್ (Yuzvendra Chahal) ಅದ್ಭುತ ಪ್ರದರ್ಶನ ನೀಡಿದ್ದರು. ಕುಲ್ಚಾ ಜೋಡಿ ನಂತರ ಈಗ ಡೇವಿಡ್ ವಾರ್ನರ್ (David Warner) ಸರದಿ. ಮೊನ್ನೆ ಸನ್‌ರೈಸರ್ಸ್ ವಿರುದ್ಧ ಭರ್ಜರಿ ಬ್ಯಾಟಿಂಗ್ ಮಾಡಿ ಡೆಲ್ಲಿ ಕ್ಯಾಪಿಟಲ್ಸ್ ಗೆಲ್ಲಿಸಿದ್ದು ಹೈದ್ರಾಬಾದ್ ಮಾಜಿ ಪ್ಲೇಯರ್ ಡೇವಿಡ್ ವಾರ್ನರ್.
ನಾಯಕತ್ವವೂ ಹೋಯ್ತು, ಪ್ಲೇಯಿಂಗ್-11ನಲ್ಲಿ ಸ್ಥಾನವೂ ಹೋಗಿತ್ತು:
ಸನ್‌ರೈಸರ್ಸ್ ಹೈದ್ರಾಬಾದ್ಗೆ (Sunrisers Hyderabad) ಐಪಿಎಲ್ ಕಪ್ ಗೆಲ್ಲಿಸಿಕೊಟ್ಟ ನಾಯಕ ಡೇವಿಡ್ ವಾರ್ನರ್. ಕಳೆದ ಸೀಸನ್ನಲ್ಲಿ ಮನೀಶ್ ಪಾಂಡೆಯನ್ನ ಬೆಂಬಲಿಸಿದ್ರು ಮತ್ತು ಕಳಪೆ ಫಾರ್ಮ್ನಲ್ಲಿದ್ದಾರೆ ಅನ್ನೋ ಕಾರಣಕ್ಕೆ ಸೀಸನ್ ಮಧ್ಯೆಯೇ ಡೇವಿಡ್ ವಾರ್ನರ್ ಅವರನ್ನ ನಾಯಕತ್ವದಿಂದ ಕೆಳಗಿಸಿ, ಬೆಂಚ್ ಕಾಯಿಸುವಂತೆ ಮಾಡಿತ್ತು ಫ್ರಾಂಚೈಸಿ. ಡೇವಿಡ್ ವಾರ್ನರ್ ಜನರ ಮಧ್ಯೆ ಕೂತು ಪಂದ್ಯವನ್ನೂ ವೀಕ್ಷಿಸಿದ್ರು. ಕೆಲ ಪಂದ್ಯಗಳಿಗೆ ಸ್ಟೇಡಿಯಂಗೂ ಕರೆದುಕೊಂಡು ಬರದೆ ಹೋಟೆಲ್ನಲ್ಲಿ ಬಿಟ್ಟು ಬಂದು ಅವಮಾನ ಮಾಡಿತ್ತು ಹೈದ್ರಾಬಾದ್ ಫ್ರಾಂಚೈಸಿ.
ಅವಮಾನಕ್ಕೆ ಪ್ರತಿಕಾರ ತೀರಿಸಿಕೊಂಡ ವಾರ್ನರ್:
ಹೈದ್ರಾಬಾದ್ ಫ್ರಾಂಚೈಸಿ ಮಾಡಿದ ಅವಮಾನಕ್ಕೆ ಪ್ರತಿಕಾರ ತೀರಿಸಿಕೊಳ್ಳಲು ಡೇವಿಡ್ ವಾರ್ನರ್ ವರ್ಷದಿಂದ ಕಾಯುತ್ತಿದ್ದರು. ಮೊನ್ನೆ ಸನ್‌ರೈಸರ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಕಣಕ್ಕಿಳಿದ ವಾರ್ನರ್, 58 ಬಾಲ್ನಲ್ಲಿ 12 ಬೌಂಡ್ರಿ, 3 ಸಿಕ್ಸ್ ಸಹಿತ ಅಜೇಯ 92 ರನ್ ಬಾರಿಸಿದ್ರು. ಹೈದ್ರಾಬಾದ್ 21 ರನ್ನಿಂದ ಪಂದ್ಯ ಸೋತಿತು. ವಾರ್ನರ್ ಪಂದ್ಯಶ್ರೇಷ್ಠರಾಗಿ ಸನ್‌ರೈಸರ್ಸ್ ವಿರುದ್ಧ ಸೇಡು ತೀರಿಸಿಕೊಂಡರು. ಈಗ ಹೈದ್ರಾಬಾದ್ ಫ್ರಾಂಚೈಸಿ ಕಾವ್ಯ ಮಾರನ್ ಫುಲ್ ಟ್ರೋಲ್ ಆಗ್ತಿದ್ದಾರೆ.
IPL 2022: ವಿರಾಟ್ ಕೊಹ್ಲಿ ಜೊತೆ ಬ್ಯಾಟಿಂಗ್ ಮಾಡಲು ಸಾಧ್ಯವಿಲ್ಲ ಮ್ಯಾಕ್ಸ್ವೆಲ್ ಹೇಳಿದ್ದೇಕೆ..?
ಐಪಿಎಲ್ನಲ್ಲಿ ದಾಖಲೆ ಬರೆದ ವಾರ್ನರ್:
ಮೊನ್ನೆ ಹೈದ್ರಾಬಾದ್ ವಿರುದ್ಧ 92 ರನ್ ಬಾರಿಸೋ ಮೂಲಕ ಡೇವಿಡ್ ವಾರ್ನರ್ ದಾಖಲೆ ಬರೆದಿದ್ದಾರೆ. ಐಪಿಎಲ್ನಲ್ಲಿ ಅತಿಹೆಚ್ಚು 90 ರನ್ ಹೊಡೆದ ಆಟಗಾರ ಎನಿಸಿಕೊಂಡಿದ್ದಾರೆ. ವಾರ್ನರ್ ಬ್ಯಾಟ್ನಿಂದ 6 ಸಲ 90 ರನ್ಗಳು ಬಂದಿವೆ. ಇನ್ನು ಐಪಿಎಲ್ನಲ್ಲಿ ಗರಿಷ್ಠ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಆಟಗಾರರ ಲಿಸ್ಟ್ನಲ್ಲಿ 3ನೇ ಸ್ಥಾನದಲ್ಲಿದ್ದಾರೆ. 18 ಸಲ ಮ್ಯಾಚ್ ಆಫ್ ದ ಮ್ಯಾಚ್ ಅವಾರ್ಡ್ ಪಡೆದಿದ್ದಾರೆ ವಾರ್ನರ್.