Asianet Suvarna News Asianet Suvarna News

IPL 2022 ವಾರ್ನರ್, ಪೃಥ್ವಿ ಶಾ ಸ್ಪೋಟಕ ಆಟಕ್ಕೆ ಸೋತ ಪಂಜಾಬ್ ಕಿಂಗ್ಸ್!

ಪಂಜಾಬ್ ಕಿಂಗ್ಸ್ ನೀಡಿದ ಸಾಧಾರಣ ಸವಾಲನ್ನು ಲೆಕ್ಕಕ್ಕೇ ಇಲ್ಲದಂತೆ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಭರ್ಜರಿ ಗೆಲುವಿನೊಂದಿಗೆ ಲಯಕ್ಕೆ ಮರಳಿದೆ. ಮೊದಲ ವಿಕೆಟ್ ಗೆ ಪೃಥ್ವಿ ಶಾ ಹಾಗೂ ಡೇವಿಡ್ ವಾರ್ನರ್ ಆಡಿದ ಬಿರುಗಾಳಿಯ ಇನ್ನಿಂಗ್ಸ್ ಡೆಲ್ಲಿ ತಂಡದ 9 ವಿಕೆಟ್ ಗೆಲುವಿಗೆ ನೆರವಾಯಿತು.
 

IPL 2022 DC v PBKS David Warner Fifty Prithvi Shaw Batting Helps Delhi Capitals to beat  Punjab Kings by 9 wickets san
Author
Bengaluru, First Published Apr 20, 2022, 10:20 PM IST

ಮುಂಬೈ (ಏ.20): ಪೃಥ್ವಿ ಷಾ (Prithvi Shaw) ಹಾಗೂ ಡೇವಿಡ್ ವಾರ್ನರ್ ( David Warner) ಅವರ ಭರ್ಜರಿ ಬ್ಯಾಟಿಂಗ್ ಸಾಹಸದಿಂದ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡ 15ನೇ ಆವೃತ್ತಿಯ ಐಪಿಎಲ್ ನಲ್ಲಿ (IPL 2022) ತನ್ನ ಮೂರನೇ ಗೆಲುವು ಕಂಡಿದೆ. ಪಂಜಾಬ್ ಕಿಂಗ್ಸ್ (Punjab Kings )ನೀಡಿದ ಸವಾಲನ್ನು ಕೇವಲ 63 ಎಸೆತಗಳಲ್ಲಿ ಬೆನ್ನಟ್ಟುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡ ಗೆಲುವು ಸಾಧಿಸಿತು.

ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ (PBKS)ತಂಡ, ಡೆಲ್ಲಿ ಕ್ಯಾಪಿಟಲ್ಸ್ (DC)  ತಂಡದ ಪ್ರಮುಖ ಬೌಲರ್ ಗಳ ಮುಂದೆ ಪರದಾಟ ನಡೆಸಿ 20 ಓವರ್ ಗಳಲ್ಲಿ 115 ರನ್ ಗೆ ಆಲೌಟ್ ಆಯಿತು. ಸಾಧಾರಣ ಸವಾಲನ್ನು ಸುಲಭವಾಗಿ ಬೆನ್ನಟ್ಟಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಇನ್ನೂ 57 ಎಸೆತಗಳು ಇರುವಂತೆ 10.3 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 119 ರನ್ ಬಾರಿಸಿ ಗೆಲುವು ಕಂಡಿತು.

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಭರ್ಜರಿ ಗೆಲುವಿಗೆ ಕಾರಣರಾಗಿದ್ದು, ಆರಂಭಿಕ ಆಟಗಾರರಾದ ಪೃಥ್ವಿ ಶಾ (41 ರನ್, 20 ಎಸೆತ, 7 ಬೌಂಡರಿ, 1 ಸಿಕ್ಸರ್) ಹಾಗೂ ಡೇವಿಡ್ ವಾರ್ನರ್ (60*ರನ್, 30 ಎಸೆತ, 10 ಬೌಂಡರಿ, 1 ಸಿಕ್ಸರ್). ಸತತ ನಾಲ್ಕನೇ ಪಂದ್ಯದಲ್ಲಿ ಈ ಜೋಡಿ ಅರ್ಧಶತಕದ ಹಾಗೂ ಅದಕ್ಕಿಂತ ಹೆಚ್ಚಿನ ರನ್ ಜೊತೆಯಾಟವಾಡಿತು. ವೈಭವ್ ಅರೋರಾ ಎಸೆದ ಮೊದಲ ಓವರ್ ನಲ್ಲಿಯೇ ಪೃಥ್ವಿ ಷಾ ಮೂರು ಬೌಂಡರಿ ಸಿಡಿಸಿ ತಂಡದ ರನ್ ವೇಗಕ್ಕೆ ಚಾಲನೆ ನೀಡಿದರು. ಡೆಲ್ಲಿ ಕ್ಯಾಪಿಟಲ್ಸ್ ನ ಅಬ್ಬರದ ಆಟಕ್ಕೆ ಕಡಿವಾಣ ಹಾಕುವ ಎಲ್ಲಾ ಪ್ರಯತ್ನಗಳೂ ವಿಫಲವಾದವು. ಕಗೀಸೋ ರಬಾಡ ಎಸೆದ 2ನೇ ಓವರ್ ನಲ್ಲಿ 12 ರನ್ ಗಳು ಸಿಡಿದರೆ, ವೈಭವ್ ಅರೋರಾ ಎಸೆದ ಮೂರನೇ ಓವರ್ ನಲ್ಲಿ17 ರನ್ ಗಳು ಸಿಡಿದವು. ಕೇವಲ 21 ಎಸೆತಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ 50 ರನ್ ಗಳ ಗಡಿ ಮುಟ್ಟುವ ಮೂಲಕ ಪವರ್ ಪ್ಲೇ ಓವರ್ ಗಳ ಸದುಪಯೋಗ ಪಡೆದುಕೊಂಡರು. ರಬಾಡ ಎಸೆದ 4ನೇ ಓವರ್ ನಲ್ಲಿ 15 ರನ್, ಆರ್ಶ್ ದೀಪ್ ಸಿಂಗ್ ಎಸೆದ ಓವರ್ ನಲ್ಲಿ ಬರೋಬ್ಬರಿ 17 ರನ್ ಸಿಡಿಸುವ ಮೂಲಕ ಡೆಲ್ಲಿ ತಂಡ ಕೇವಲ 5 ಓವರ್ ಗಳಲ್ಲಿಯೇ 75 ರನ್ ಸಿಡಿಸಿ ಸುಲಭ ಗೆಲುವು ಪಡೆದುಕೊಂಡಿತು.

ಇಡೀ ಪವರ್ ಪ್ಲೇ ಓವರ್ ನಲ್ಲಿ ಅತೀ ಕಡಿಮೆ ರನ್ ಬಂದಿದ್ದು, ನಾಥನ್ ಎಲ್ಲೀಸ್ ಎಸೆದ 6ನೇ ಓವರ್ ನಲ್ಲಿ ಆಸೀಸ್ ವೇಗಿ ಒಂದು ಬೌಂಡರಿ ಬಿಟ್ಟುಕೊಟ್ಟರೂ ಓವರ್ ನಲ್ಲಿ ಕೇವಲ 6 ರನ್ ನೀಡಿದ್ದರು. ಇದರಿಂದಾಗಿ ಪವರ್ ಪ್ಲೇ ಮುಕ್ತಾಯಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ತಂಡ 81 ರನ್ ಸಿಡಿಸಿತ್ತು. ಇದು ಹಾಲಿ ಐಪಿಎಲ್ ನಲ್ಲಿ ತಂಡವೊಂದರ ಗರಿಷ್ಠ ಪವರ್ ಪ್ಲೇ ಮೊತ್ತ ಎನಿಸಿದೆ. ಅದಲ್ಲದೆ, ಒಟ್ಟಾರೆ ಐಪಿಎಲ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಗರಿಷ್ಠ ಪವರ್ ಪ್ಲೇ ಮೊತ್ತವೂ ಆಗಿದೆ. ಇದಕ್ಕೂ ಮುನ್ನ 2008ರ ಐಪಿಎಲ್ ನಲ್ಲಿ ಅರ್ ಸಿಬಿ ವಿರುದ್ಧ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ವಿಕೆಟ್ ನಷ್ಟವಿಲ್ಲದೆ 71 ರನ್ ಬಾರಿಸಿದ್ದು ಗರಿಷ್ಠ ಮೊತ್ತ ಎನಿಸಿತ್ತು.

IPL 2022 ಡೆಲ್ಲಿ ಕ್ಯಾಪಿಟಲ್ಸ್ ಬೌಲಿಂಗ್ ಗೆ ಪರದಾಡಿದ ಪಂಜಾಬ್

ಪವರ್ ಪ್ಲೇ ಅವಧಿಯ ಆಟದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅಬ್ಬರದ ಮುಗಿದ ಬೆನ್ನಲ್ಲಿಯೇ ದಾಳಿಗಿಳಿದ ರಾಹುಲ್ ಚಹರ್, ತಮ್ಮ 3ನೇ ಎಸೆತದಲ್ಲಿಯೇ ಪೃಥ್ವಿ ಷಾ ವಿಕೆಟ್ ಉರುಳಿಸಿ ಪಂಜಾಬ್ ಗೆ ಸ್ವಲ್ಪ ಸಮಾಧಾನ ನೀಡಿದರು. ಪೃಥ್ವಿ ಶಾ ಔಟಾದ ನಂತರವೂ ಪಂಜಾಬ್ ಕಿಂಗ್ಸ್ ಗೆ ಪಂದ್ಯದಲ್ಲಿ ತಿರುಗೇಟು ನೀಡುವ ಯಾವುದೇ ಅವಕಾಶ ಉಳಿದುಕೊಂಡಿರಲಿಲ್ಲ. ಡೇವಿಡ್ ವಾರ್ನರ್ ಗೆ ಜೊತೆಯಾದ ಸರ್ಫ್ರಾಜ್ ಖಾನ್ (12*) ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ನೆರವಾದರು.

IPL 2022 ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಬೌಲಿಂಗ್ ಆಯ್ಕೆ, ತಂಡಕ್ಕೆ ಮರಳಿದ ಮಾಯಾಂಕ್!

53ನೇ ಅರ್ಧಶತಕ ಬಾರಿಸಿದ ಡೇವಿಡ್ ವಾರ್ನರ್: ಆಸ್ಟ್ರೇಲಿಯಾದ ಅಗ್ರ ಬ್ಯಾಟ್ಸ್ ಮನ್ ಡೇವಿಡ್ ವಾರ್ನರ್ ಸತತ ಮೂರು ಅರ್ಧಶತಕಗಳನ್ನು ಸಿಡಿಸಿದರು. ಇದು ಐಪಿಎಲ್ ನಲ್ಲಿ ಅವರ 53ನೇ ಅರ್ಧಶತಕ ಎನಿಸಿದೆ. ಆ ಮೂಲಕ ಐಪಿಎಲ್ ನಲ್ಲಿ ಗರಿಷ್ಠ ಅರ್ಧಶತಕ ಬಾರಿಸಿದ ಬ್ಯಾಟ್ಸ್ ಮನ್ ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

Follow Us:
Download App:
  • android
  • ios