Asianet Suvarna News Asianet Suvarna News

IPL 2022 ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಬೌಲಿಂಗ್ ಆಯ್ಕೆ, ತಂಡಕ್ಕೆ ಮರಳಿದ ಮಾಯಾಂಕ್!

ಕೋವಿಡ್-19 ಆತಂಕದ ನಡುವೆಯೇ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಗೆ ಸಿದ್ಧವಾಗಿದೆ. ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ತಂಡ ಬೌಲಿಂಗ್ ಆಯ್ದುಕೊಂಡಿದೆ. ಈ ನಡುವೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಟಿಮ್ ಸೀಫರ್ಟ್ ಕೂಡ ಕೋವಿಡ್ ಪಾಸಿಟಿವ್ ಆಗಿದ್ದಾರೆ.
 

IPL 2022 DC v PBKS Delhi Capitals have won the toss and have opted to field vs Punjab Kings san
Author
Bengaluru, First Published Apr 20, 2022, 7:07 PM IST

ಮುಂಬೈ (ಏ. 20): ಕೋವಿಡ್-19 ಆತಂಕದ ನಡುವೆ ಅಂಕಪಟ್ಟಿಯಲ್ಲಿ ಕೆಳಭಾಗದಲ್ಲಿರುವ ತಂಡಗಳಾದ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ಹಾಗೂ ಪಂಜಾಬ್ ಕಿಂಗ್ಸ್ (Punjab Kings)ತಂಡಗಳು ಮುಖಾಮುಖಿಯಾಗಲಿವೆ. ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

ಸಿಕ್ಸರ್ ಗಳ ಸ್ವರ್ಗ ಬ್ರಬೋರ್ನ್ ಸ್ಟೇಡಿಯಂನಲ್ಲಿ (Brabourne Stadium) ಪಂದ್ಯ ನಡೆಯಲಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಬದಲಾವಣೆ ಮಾಡಲಾಗಿದ್ದು, ಕೋವಿಡ್ ಪಾಸಿಟಿವ್ ಆಗಿರುವ ಮಿಚೆಲ್ ಮಾರ್ಷ್ ಬದಲಿಗೆ ಸರ್ಫ್ರಾಜ್ ಖಾನ್ ಬಂದಿದ್ದಾರೆ. ಹೆಬ್ಬೆರಳು ಗಾಯದಿಂದಾಗಿ ಕಳೆದ ಪಂದ್ಯ ತಪ್ಪಿಸಿಕೊಂಡಿದ್ದ ಪಂಜಾಬ್ ತಂಡದ ನಾಯಕ ಮಯಾಂಕ್ ಅಗರ್ವಾಲ್ ತಂಡಕ್ಕೆ ವಾಪಸಾಗಿದ್ದಾರೆ. ಅವರ ಬದಲಿಗೆ ಪ್ರಭ್ ಸಿಮ್ರನ್ ಸಿಂಗ್ ಸ್ಥಾನ ಬಿಟ್ಟುಕೊಟ್ಟರು. ಒಡೆಯಿನ್ ಸ್ಮಿತ್ ಬದಲಿಗೆ ನಥಾನ್ ಎಲ್ಲೀಸ್ ತಂಡಕ್ಕೆ ಬಂದಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ ಇಲೆವೆನ್: ಪೃಥ್ವಿ ಶಾ, ಡೇವಿಡ್ ವಾರ್ನರ್, ರಿಷಬ್ ಪಂತ್ (ನಾಯಕ/ವಿ,ಕೀ), ರೋವ್‌ಮನ್ ಪೊವೆಲ್, ಲಲಿತ್ ಯಾದವ್, ಸರ್ಫರಾಜ್ ಖಾನ್, ಶಾರ್ದೂಲ್ ಠಾಕೂರ್, ಅಕ್ಸರ್ ಪಟೇಲ್, ಕುಲದೀಪ್ ಯಾದವ್, ಮುಸ್ತಾಫಿಜುರ್ ರೆಹಮಾನ್, ಖಲೀಲ್ ಅಹ್ಮದ್

ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ ಇಲೆವೆನ್: ಮಯಾಂಕ್ ಅಗರ್ವಾಲ್(ಸಿ), ಶಿಖರ್ ಧವನ್, ಜಾನಿ ಬೈರ್‌ಸ್ಟೋ, ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ(ವಿ.ಕೀ), ಶಾರುಖ್ ಖಾನ್, ಕಗಿಸೊ ರಬಾಡ, ನಾಥನ್ ಎಲ್ಲಿಸ್, ರಾಹುಲ್ ಚಾಹರ್, ವೈಭವ್ ಅರೋರಾ, ಅರ್ಶ್‌ದೀಪ್ ಸಿಂಗ್

ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಅಂಕಪಟ್ಟಿಯಲ್ಲೂ ಜೊತೆಯಾಗಿ ಸ್ಥಾನ ಪಡೆದುಕೊಂಡಿವೆ. ಪಂಜಾಬ್ ಕಿಂಗ್ಸ್ ತಂಡ ಆಡಿರುವ 6 ಪಂದ್ಯಗಳಲ್ಲಿ 3 ಗೆಲುವು, 3 ಸೋಲಿನೊಂದಿಗೆ 6 ಅಂಕ ಸಂಪಾದಿಸಿ 7ನೇ ಸ್ಥಾನದಲ್ಲಿದ್ದರೆ, 5 ಪಂದ್ಯಗಳಲ್ಲಿ 2 ಗೆಲುವು ಹಾಗೂ 3 ಸೋಲುಗಳೊಂದಿಗೆ 4 ಅಂಕ ಸಂಪಾದಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ 8ನೇ ಸ್ಥಾನದಲ್ಲಿದೆ. ಹಾಗೇನಾದರೂ ಪಂಜಾಬ್ ಕಿಂಗ್ಸ್ ಗೆಲುವು ಸಾಧಿಸಿದಲ್ಲಿ ಉತ್ತಮ ರನ್ ರೇಟ್ ಕಾರಣದಿಂದಾಗಿ ಮೊದಲ ನಾಲ್ಕು ತಂಡಗಳಲ್ಲಿ ಸ್ಥಾನ ಪಡೆಯಬಹುದು, ಡೆಲ್ಲಿ ಕ್ಯಾಪಿಟಲ್ಸ್ ಜಯ ಸಾಧಿಸಿದರೆ, ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಲಿದೆ.

ಏನನ್ನು ನಿರೀಕ್ಷೆ ಮಾಡಬಹುದು?: ಹಾಲಿ ಐಪಿಎಲ್ ನಲ್ಲಿ ಎಲ್ಲಾ ತಂಡಗಳನ್ನೂ ಇರುವ ಪ್ರವೃತ್ತಿಯಂತೆ ಈ ಬಾರಿಯೂ ಟಾಸ್ ಗೆದ್ದ ತಂಡ ಚೇಸಿಂಗ್ ಆರಿಸಿಕೊಳ್ಳುತ್ತದೆ. ಇಬ್ಬನಿಯ ಸಮಸ್ಯೆ ಇರಲಿ, ಇಲ್ಲದೇ ಇರಲಿ ಚೇಸಿಂಗ್ ಮಾಡಲು ತಂಡಗಳು ಹೆಚ್ಚಿನ ಉತ್ಸಾಹ ತೋರುತ್ತಿವೆ.

ನಿಮಗಿದು ಗೊತ್ತೇ:
* ಡೆಲ್ಲಿ ಕ್ಯಾಪಿಟಲ್ಸ್ ತಂಡ ಕಳೆದ ಐದು ಪಂದ್ಯಗಳ ಪೈಕಿ ನಾಲ್ಕರಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿದೆ. 2020ರಲ್ಲಿ ದುಬೈನಲ್ಲಿ ನಡೆದ ಏಕೈಕ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ಗೆಲುವು ಕಂಡಿತ್ತು. ಆ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೋಲು ಕಂಡರೂ ಶಿಖರ್ ಧವನ್ ಪಂದ್ಯಶ್ರೇಷ್ಠ ಎನಿಸಿಕೊಂಡಿದ್ದರು.

* ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ಹಾಲಿ ವರ್ಷ ನಡೆದಿರುವ ಎಂಟು ಐಪಿಎಲ್ ಪಂದ್ಯಗಳಿಂದ 129 ಸಿಕ್ಸರ್ ಸಿಡಿದಿದೆ. ನಂತರದ ಸ್ಥಾನದಲ್ಲಿರುವ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಈವರೆಗೂ ಆಡಿರುವ ಆರು ಪಂದ್ಯಗಳಿಂದ 103 ಸಿಕ್ಸರ್ ಸಿಡಿದಿವೆ.

IPL 2022: ಆರ್‌ಸಿಬಿ ಎದುರು ಸೋಲಿನ ಬೆನ್ನಲ್ಲೇ ರಾಹುಲ್‌, ಸ್ಟೋನಿಸ್‌ಗೆ ದಂಡದ ಬರೆ..!

* ಐಪಿಎಲ್ ಇತಿಹಾಸದಲ್ಲಿಯೇ ನಾಲ್ಕು ಅತ್ಯುತ್ತಮ ಆರಂಭಿಕ ಜೋಡಿ ಎನಿಸಿಕೊಂಡ ಪ್ಲೇಯರ್ ಗಳ ಪೈಕಿ ಮೂವರು ಬ್ಯಾಟ್ಸ್ ಮನ್ ಗಳು ಈ ಪಂದ್ಯದಲ್ಲಿ ಆಡಲಿದ್ದರೆ, ಧವನ್ ಹಾಗೂ ಡೇವಿಡ್ ವಾರ್ನರ್ ತಮ್ಮ ಆರಂಭಿಕ ಜೊತೆಯಾಟದಲ್ಲಿ 2220 ರನ್ ಬಾರಿಸಿದ್ದರೆ, ಡೇವಿಡ್ ವಾರ್ನರ್ ಹಾಗೂ ಜಾನಿ ಬೇರ್ ಸ್ಟೋ 1401 ರನ್ ಗಳನ್ನು ಆರಂಭಿಕ ಜೊತೆಯಾಟದಲ್ಲಿ ಬಾರಿಸಿದ್ದರು.

IPL 2022: ನಿಮ್ಮಿಂದ ಸಾಧ್ಯವಿಲ್ಲ ಎಂದು ಕಾಲೆಳೆದ ಲಖನೌಗೆ KGF ಡೈಲಾಗ್‌ ಮೂಲಕ ಉತ್ತರ ಕೊಟ್ಟ RCB..!

* ಕಗೀಸೋ ರಬಾಡ ಇದೇ ಮೊದಲ ಬಾರಿಗೆ ತಮ್ಮ ಮಾಜಿ ಟೀಮ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದ್ದಾರೆ. ಹಾಲಿ ಆವೃತ್ತಿಯಲ್ಲಿ 8ರ ಎಕಾನಮಿಯಲ್ಲಿ 7 ವಿಕೆಟ್ ಉರುಳಿಸಿದ್ದಾರೆ. ಎಲ್ಲಾ ಪಂದ್ಯಗಳಲ್ಲಿ ಕನಿಷ್ಠ ಒಂದಾದರೂ ವಿಕೆಟ್ ಅನ್ನು ರಬಾಡ ಉರುಳಿಸಿದ್ದಾರೆ.

Follow Us:
Download App:
  • android
  • ios