ಐಪಿಎಲ್ 2022ರಲ್ಲಿ ಈಗಾಗಲೇ ಪ್ಲೇ ಆಫ್ ರೇಸ್ ನಿಂದ ಹೊರಬಿದ್ದಿರುವ ಲೀಗ್ ನ ಅತ್ಯಂತ ಯಶಸ್ವಿ ತಂಡಗಳಾದ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (ಅಲ್ಪ ಅವಕಾಶ ಹೊಂದಿದೆ) ತಂಡಗಳು ಇಂದಿನ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.
ಮುಂಬೈ (ಮೇ. 12): ಐಪಿಎಲ್ ನಲ್ಲಿ ಬಹುತೇಕ ಹೊರಬಿದ್ದಿರುವ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಹಾಗೂ ಅಧಿಕೃತವಾಗಿ ಹೊರಬಿದ್ದಿರುವ ಮುಂಬೈ ಇಂಡಿಯನ್ಸ್ (Mumbai Indians) ತಂಡಗಳು ಗುರುವಾರದ ಪಂದ್ಯದಲ್ಲಿ ಮುಖಾಮಮುಖಿಯಾಗಲಿವೆ. ಟಾಸ್ ಗೆದ್ದಿರುವ ಮುಂಬೈ ಇಂಡಿಯನ್ಸ್ (MI) ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿದೆ.
ವಾಂಖಡೆ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದೆ. ಟೈಮಲ್ ಮಿಲ್ಸ್‌ಗೆ ( Tymal Mills ) ಬದಲಿಯಾಗಿ ಬಂದಿರುವ ಟ್ರಿಸ್ಟಾನ್ ಸ್ಟಬ್ಸ್ (Tristan Stubbs) ಇಂದು ಮುಂಬೈ ಇಂಡಿಯನ್ಸ್ ಪರವಾಗಿ ಪಾದಾರ್ಪಣೆ ಮಾಡಲಿದ್ದಾರೆ. ನಾಯಕ ರೋಹಿತ್ ಶರ್ಮಾ (Rohit Sharma) ಅವರಿಗೆ ಕ್ಯಾಪ್ ನೀಡಿದರು. ಮೈದಾನದ ಒಂದು ಫ್ಲಡ್ ಲೈಟ್ ಹೊತ್ತಿಕೊಳ್ಳದ ಕಾರಣ, ಟಾಸ್ ( Toss )ಕೆಲ ಸಮಯ ವಿಳಂಬವಾಗಿ ನಡೆಯಿತು.
ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ ಇಲೆವೆನ್: ರೋಹಿತ್ ಶರ್ಮಾ(ನಾಯಕ), ಇಶಾನ್ ಕಿಶನ್(ವಿ.ಕೀ), ತಿಲಕ್ ವರ್ಮಾ, ಟ್ರಿಸ್ಟಾನ್ ಸ್ಟಬ್ಸ್, ರಮಣದೀಪ್ ಸಿಂಗ್, ಟಿಮ್ ಡೇವಿಡ್, ಡೇನಿಯಲ್ ಸಾಮ್ಸ್, ಕುಮಾರ್ ಕಾರ್ತಿಕೇಯ, ಹೃತಿಕ್ ಶೋಕೀನ್, ಜಸ್ಪ್ರೀತ್ ಬುಮ್ರಾ, ರಿಲೆ ಮೆರೆಡಿತ್
ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಯಿಂಗ್ ಇಲೆವೆನ್: ರುತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ರಾಬಿನ್ ಉತ್ತಪ್ಪ, ಅಂಬಟಿ ರಾಯುಡು, ಮೊಯಿನ್ ಅಲಿ, ಶಿವಂ ದುಬೆ, ಎಂಎಸ್ ಧೋನಿ(ವಿ.ಕೀ/ನಾಯಕ), ಡ್ವೇನ್ ಬ್ರಾವೋ, ಮಹೇಶ್ ತೀಕ್ಷಣ, ಸಿಮರ್ಜೀತ್ ಸಿಂಗ್, ಮುಖೇಶ್ ಚೌಧರಿ
ನಿಮಗಿದು ಗೊತ್ತೇ?
- ಮುಂಬೈ ಇಂಡಿಯನ್ಸ್ ವಿರುದ್ಧ ಐಪಿಎಲ್ ನಲ್ಲಿ ಎಂಎಸ್ ಧೋನಿ 130.8ರ ಸ್ಟ್ರೈಕ್ ರೇಟ್ ನಲ್ಲಿ 710 ರನ್ ಗಳನ್ನು ಬಾರಿಸಿದ್ದಾರೆ.
- ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಅದ್ಭುತ ದಾಖಲೆ ಹೊಂದಿರುವ ರೋಹಿತ್ ಶರ್ಮ 125.3ರ ಸ್ಟ್ರೈಕ್ ರೇಟ್ ನಲ್ಲಿ 7 ಅರ್ಧಶತಕದೊಂದಿಗೆ 752 ರನ್ ಬಾರಿಸಿದ್ದಾರೆ.
IPL 2022: ಆರ್‌ಸಿಬಿ ತಂಡಕ್ಕೆ ಟಾಪ್ 2ಗೇರಲು ಇನ್ನೂ ಇದೆ ಅವಕಾಶ..! ಹೇಗೆ ಗೊತ್ತಾ..?
ಮೊದಲು ಬ್ಯಾಟಿಂಗ್ ಮಾಡುವುದು ನಮ್ಮ ಪಾಲಿಗೆ ವರ್ಕ್ ಔಟ್ ಆಗಿದೆ. ನಾವು ಯಾವುದೇ ಬದಲಾವಣೆ ಇಲ್ಲದೆ ಆಡುತ್ತಿದ್ದೇವೆ. ಜಡ್ಡು ರೀತಿಯ ಆಟಗಾರ ತಂಡದಲ್ಲಿ ಇದ್ದ ಕಾರಣಕ್ಕಾಗಿಯೇ ನಾವು ಭಿನ್ನ ಭಿನ್ನ ಸಂಯೋಜನೆಗಳನ್ನು ಮಾಡಲು ಸಾಧ್ಯವಾಗುತ್ತಿತ್ತು. ಹಾಗಾಗಿ ಅವರನ್ನು ರಿಪ್ಲೇಸ್ ಮಾಡುವುದು ಬಹಳ ಕಷ್ಟ. ರವೀಂದ್ರ ಜಡೇಜಾರಷಷ್ಟು ಉತ್ತಮವಾಗಿ ಯಾರಾದರೂ ಫೀಲ್ಡಿಂಗ್ ಮಾಡುವುದು ಅಸಾಧ್ಯ. ಆ ರೀತಿಯಲ್ಲಿ ಯಾವುದೇ ರಿಪ್ಲೇಸ್ ಮೆಂಟ್ ಇಲ್ಲ.
ಎಂಎಸ್ ಧೋನಿ, ಚೆನ್ನೈ ಸೂಪರ್ ಕಿಂಗ್ಸ್ ನಾಯಕ
ಈ ಐಪಿಎಲ್ನಲ್ಲಿ ಬೆಸ್ಟ್ ಬೌಲರ್ ಯಾರು ಗೊತ್ತಾ..?
ನಾವು ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿದ್ದೇವೆ. ಇದು ಈ ಮೈದಾನದ ಲಕ್ಷಣ. ನಮ್ಮ ತಂಡಕ್ಕೂ ಇದು ಹೊಂದಿಕೆಯಾಗುತ್ತದೆ. ಈ ಋತುವಿನಲ್ಲಿ ನಮ್ಮ ಬಹುತೇಕ ಯೋಜನೆಗಳು ಫಲ ನೀಡಿಲ್ಲ. ಭವಿಷ್ಯದತ್ತ ನಾವು ಗಮನ ನೀಡಿದ್ದೇವೆ. ಪೊಲ್ಲಾರ್ಡ್ ( Pollard ) ಬದಲು ಟ್ರಿಸ್ಟಾನ್ ಸ್ಟಬ್ಸ್ ಇಂದು ಮುಂಬೈ ಇಂಡಿಯನ್ಸ್ ಪರವಾಗಿ ಪಾದಾರ್ಪಣೆ ಮಾಡಲಿದ್ದಾರೆ. ಎಂ.ಅಶ್ವಿನ್ ಬದಲು ಹೃತಿಕ್ ಶೋಕೇನ್ ಸ್ಥಾನ ಪಡೆದುಕೊಂಡಿದ್ದಾರೆ. ಪೊಲ್ಲಾರ್ಡ್ ಯಾವತ್ತಿಗೂ ಮುಂಬೈ ಇಂಡಿಯನ್ಸ್ ಪರವಾಗಿ ನಿಂತಿದ್ದಾರೆ. ನಾವು ಕೆಲವು ಆಟಗಾರರಿಗೆ ಅವಕಾಶ ನೀಡಬೇಕಾಗಿದೆ. ಅವರು ತಂಡಕ್ಕೆ ಯಾವ ರೀತಿಯ ಲಾಭ ತಂದುಕೊಡುತ್ತಾರೆ ಎಂದು ಪರಿಶೀಲಿಸಬೇಕಿದೆ. ಇದು ಉತ್ತಮ ಬ್ಯಾಟಿಂಗ್ ಟ್ರ್ಯಾಕ್. 40 ಓವರ್ ಗಳ ಕಾಲವೂ ಹೀಗೆ ಇರಲಿದೆ ಎಂದು ಆಶಿಸುತ್ತೇವೆ. ಚೆನ್ನೈ ವಿರುದ್ಧ ಆಡೋದಕ್ಕೆ ನಮಗೆ ಯಾವಾಗಲೂ ಖುಷಿ.
ರೋಹಿತ್ ಶರ್ಮ, ಮುಂಬೈ ಇಂಡಿಯನ್ಸ್ ನಾಯಕ
