* ಪ್ರಸಕ್ತ ಆವೃತ್ತಿಯ ಐಪಿಎಲ್‌ನಲ್ಲಿ ಕ್ಯಾಪ್ಟನ್ಸ್ ಫೇಲ್‌* ನಿರೀಕ್ಷಿತ ಪ್ರದರ್ಶನ ತೋರಲು ವಿಫಲವಾಗಿರುವ ಬಹುತೇಕ ನಾಯಕರು* *  10 ಕ್ಯಾಪ್ಟನ್ಸ್​​​ ಪೈಕಿ, 9 ತಂಡದ ನಾಯಕರುಗಳು ಬ್ಯಾಟಿಂಗ್​​​​ನಲ್ಲಿ ಎಡವುತ್ತಿದ್ದಾರೆ.  

ಮುಂಬೈ(ಏ.15): 10 ತಂಡಗಳ ಕಾದಾಟದಿಂದ ಪ್ರಸಕ್ತ ಐಪಿಎಲ್​​​ ಭಾರೀ ಕುತೂಹಲ ಕೆರಳಿಸಿದೆ. ಈವರೆಗೆ ನಡೆದ 25 ಪಂದ್ಯಗಳು ಕೌತುಕತೆ ಉಳಿಸಿಕೊಂಡಿವೆ. ಮುಂದಿನ ಪಂದ್ಯಗಳು ಮತ್ತಷ್ಟು ರೋಚಕವಾಗಿರಲಿವೆ. 15ನೇ ಐಪಿಎಲ್ ಆವೃತ್ತಿ ಏನೋ ಕ್ರಿಕೆಟ್ ಪ್ರೇಮಿಗಳ ಭರಪೂರ ಮನರಂಜನೆ ಒದಗಿಸುವಲ್ಲಿ ಸಕ್ಸಸ್​​​ ಕಾಣ್ತಿದೆ. ಆದ್ರೆ ಕ್ಯಾಪ್ಟನ್ಸ್ ಆಟದ ವಿಚಾರಕ್ಕೆ ಬಂದ್ರೆ ಎಲ್ಲವೂ ಉಲ್ಟಾ ಆಗಿದೆ. 10 ಕ್ಯಾಪ್ಟನ್ಸ್​​​ ಪೈಕಿ, 9 ತಂಡದ ನಾಯಕರುಗಳು ಬ್ಯಾಟಿಂಗ್​​​​ನಲ್ಲಿ ಎಡವುತ್ತಿದ್ದಾರೆ. ಇವರಿಂದ ನಿರೀಕ್ಷಿತ ಪ್ರದರ್ಶನ ಮೂಡಿ ಬರ್ತಿಲ್ಲ. ಫ್ರಾಂಚೈಸಿಗಳು ತಮ್ಮ ಮೇಲಿಟ್ಟಿದ್ದ ನಂಬಿಕೆಯನ್ನ ಉಳಿಸಿಕೊಳ್ಳುವಲ್ಲಿ ಫೇಲಾಗಿದ್ದಾರೆ. 

ಹೊಸ ಕ್ಯಾಪ್ಟನ್​​ ಪಾಂಡೆ ಕಮಾಲ್​​​.. ರಾಹುಲ್​ ಫೇಲ್​​..: 
ಹೊಸ ಫ್ರಾಂಚೈಸಿಗಳ ನಾಯಕರಾದ ಕೆಎಲ್ ರಾಹುಲ್ ಮತ್ತು ಹಾರ್ದಿಕ್​ ಪಾಂಡ್ಯ ತಂಡ ಮುನ್ನಡೆಸುವಲ್ಲಿ ಯಶಸ್ವಿ ಕಂಡಿದ್ದಾರೆ ನಿಜ. ಆದ್ರೆ ಬ್ಯಾಟಿಂಗ್​​​​ನಲ್ಲಿ ಲಕ್ನೋ ತಂಡದ ಕ್ಯಾಪ್ಟನ್​ ಕಳಪೆ ಆಟವಾಡ್ತಿದ್ದಾರೆ. 5 ಇನ್ನಿಂಗ್ಸ್​​ಗಳಲ್ಲಿ ಒಂದು ಅರ್ಧಶತಕವಷ್ಟೇ ಬಾರಿಸಿದ್ದಾರೆ. ಕಳೆದ ಬಾರಿಯಂತೆ ಈ ಸಲ ರನ್​​ ಹರಿದು ಬರ್ತಿಲ್ಲ. ಆದ್ರೆ ಗುಜರಾತ್ ಕ್ಯಾಪ್ಟನ್ ಹಾರ್ದಿಕ್​​​ ಪಾಂಡ್ಯ 140 ರನ್​​ ಗಳಿಸಿದ್ದಾರೆ. ಒಂದು ಅರ್ಧಶತಕ ಸಹಿತ 3 ವಿಕೆಟ್​ ಕಬಳಿಸಿ ಮಿಂಚಿದ್ದಾರೆ. ಇವರು 40 ಪ್ಲಸ್​ ಎವರೇಜ್​​ನಲ್ಲಿ ಬ್ಯಾಟ್ ಬೀಸಿದ್ದಾರೆ.

ದಿಗ್ಗಜ ತಂಡದ ಕ್ಯಾಪ್ಟನ್ಸ್​​​ಗಳಿಂದ ಕಳಪೆ ಆಟ: 
5 ಬಾರಿ ಕಪ್ ಗೆಲ್ಲಿಸಿಕೊಟ್ಟಿರೋ ರೋಹಿತ್​ ಶರ್ಮಾ ಕ್ಯಾಪ್ಟನ್ ಜೊತೆ ಆಟಗಾರರಾಗಿಯೂ ಫೇಲಾಗಿದ್ದಾರೆ. 5 ಪಂದ್ಯವಾಡಿ ಜಸ್ಟ್​ 101 ರನ್​ ಗಳಿಸಿದ್ದಾರೆ. ಇವರ ಕ್ಯಾಪ್ಟನ್ಸಿಯಲ್ಲಿ ಮುಂಬೈ ಸತತ ಸೋಲುಂಡಿದೆ. ಇನ್ನು ನಾಲ್ಕು ಸೋಲಿನ ಬಳಿಕ ಚೆನ್ನೈ ಕೊನೆಗೂ ಗೆಲುವಿನ ಲಯಕ್ಕೆ ಮರಳಿದೆ. ಆದ್ರೆ ತಂಡದ ಕ್ಯಾಪ್ಟನ್​ ಜಡ್ಡು ಮಾತ್ರ ಬ್ಯಾಟಿಂಗ್​​ನಲ್ಲಿ ಫಾರ್ಮ್​ಗೆ ಮರಳಿಲ್ಲ. ಈವರೆಗೆ ಬರೀ 66 ರನ್​​​​​ ಗಳಿಸಿದ್ದಾರೆ. ಕ್ಯಾಪ್ಟನ್ಸ್​ ಪೈಕಿ ಜಡ್ಡುನೇ ತೀರ ನಿರಾಸೆ ಮೂಡಿಸಿದ್ದಾರೆ. 

ಡೆಲ್ಲಿ, ಹೈದ್ರಾಬಾದ್ ಕ್ಯಾಪ್ಟನ್​​​ಗಳದ್ದು ಅದೇ ರಾಗ ಅದೇ ಹಾಡು: 
ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಕ್ಯಾಪ್ಟನ್ ರಿಷಬ್​​ ಪಂತ್​ರಿಂದ ಈವರೆಗೆ ಒಂದು ಬಿಗ್​ ಇನ್ನಿಂಗ್ಸ್ ಮೂಡಿ ಬಂದಿಲ್ಲ. ನಾಲ್ಕು ಪಂದ್ಯಗಳಲ್ಲಿ ಕ್ರಮವಾಗಿ 27, 39,43 ಹಾಗೂ 1 ರನ್​ ಗಳಿಸಿದ್ದಾರೆ. ಪ್ಲೇ ಆಫ್​​ ಪ್ರವೇಶದ ದೃಷ್ಟಿಯಿಂದ ಪಂತ್​ ಅಬ್ಬರ ಅನಿವಾರ್ಯ. ಇನ್ನೊಂದೆಡೆ ಅನುಭವಿ ಕ್ಯಾಪ್ಟನ್ ಕೇನ್ ವಿಲಿಯಮ್ಸನ್​​​ ನಸೀಬು ಕೆಟ್ಟಿದೆ. ಆಡಿದ ಕೊನೆ ಪಂದ್ಯದ 57 ರನ್​ ಈವರೆಗಿನ ಬೆಸ್ಟ್ ಆಗಿದೆ. ಇನ್ನು ನಾಯಕರಾಗಿ ಹ್ಯಾಟ್ರಿಕ್ ಸೋಲುಂಡಿದ್ರು. ಬಳಿಕ ತಂಡ ಎಚ್ಚೆತ್ತುಕೊಂಡಿದೆ.

IPL 2022: ಸನ್‌ರೈಸರ್ಸ್ ಪರ ವಾಷಿಂಗ್ಟನ್ ಸುಂದರ್ ಸ್ಥಾನ ತುಂಬೋರು ಯಾರು..?

ನಿರೀಕ್ಷೆ ಹುಸಿಗೊಳಿಸಿದ ಶ್ರೇಯಸ್​​- ಮಯಾಂಕ್​​​:
ಮೊದಲ ಬಾರಿ ಪಂಜಾಬ್​​​​​​​​​​ ತಂಡ ಮುನ್ನಡೆಸ್ತಿರೋ ಮಯಾಂಕ್​​ ಅಗರ್ವಾಲ್​​ ಕೂಡ ಬ್ಯಾಟಿಂಗ್​​ನಲ್ಲಿ ಜಾದು ಮಾಡ್ತಿಲ್ಲ. ಮುಂಬೈ ವಿರುದ್ಧ ಅರ್ಧಶತಕ ಬಿಟ್ರೆ, ಉಳಿದ ನಾಲ್ಕು ಪಂದ್ಯಗಳಿಂದ 42 ರನ್​​ ಕಲೆ ಹಾಕಿದ್ದಾರೆ. ಇನ್ನು ಕೆಕೆಆರ್​ ಕ್ಯಾಪ್ಟನ್​​​ ಶ್ರೇಯಸ್ ಕಥೆ ಏನೂ ಮಯಾಂಕ್​ಗಿಂತ ಭಿನ್ನವಾಗಿಲ್ಲ. ಇವರು ಒಂದು ಅರ್ಧಶತಕ ಸೇರಿ ಒಟ್ಟು 133 ರನ್​​ ಬಾರಿಸಿದ್ದಾರೆ. ಈವರೆಗೆ ಅಸಲಿ ಖದರ್ ತೋರಿಸಿಲ್ಲ.

ಪ್ಲಾಫ್​ ಆದ್ರು ಡುಪ್ಲೆಸಿಸ್​​​-ಸ್ಯಾಮ್ಸನ್​ : 
ಹೌದು, ಆರ್​​ಸಿಬಿ ತಂಡದ ಕ್ಯಾಪ್ಟನ್​ ಫಾಫ್​ ಡುಪ್ಲೆಸಿಸ್​ ಕೂಡ ಫ್ಲಾಫ್ ಆಗಿದ್ದಾರೆ. ಮೊದಲ ಪಂದ್ಯದ 88 ರನ್​ ಬಿಟ್ರೆ, ಉಳಿದ ನಾಲ್ಕು ಪಂದ್ಯಗಳಲ್ಲಿ ಕೈ ಕೊಟ್ಟಿದ್ದಾರೆ. 31.1ರ ಎವರೇಜ್​​ನಲ್ಲಿ ಬ್ಯಾಟ್​ ಬೀಸಿರೋ ಇವರು ಸ್ಥಿರ ಪ್ರದರ್ಶನ ನೀಡಬೇಕಿದೆ. ಇನ್ನು ರಾಜಸ್ಥಾನ ತಂಡದ ಐಪಿಎಲ್​​​ನಲ್ಲಿ ರಾಯಲ್​ ಆಟವಾಡ್ತಿದೆ. ಆದ್ರೆ ಕ್ಯಾಪ್ಟನ್ ತದ್ವಿರುದ್ಧ ಪ್ರದರ್ಶನ ನೀಡ್ತಿದ್ದಾರೆ. 5 ಪಂದ್ಯಗಳಿಂದ 105 ರನ್​​​ ಕಲೆಹಾಕಿದ್ದಾರೆ. ಬಿಗ್ ಇನ್ನಿಂಗ್ಸ್ ಮರೆಯಾಗಿದೆ. 

ಆರಂಭಿಕ ಪಂದ್ಯಗಳಲ್ಲಿ ಫೇಲಾಗಿರೋ ಒಂಭತ್ತು ಕ್ಯಾಪ್ಟನ್ಸ್​​​​, ಮುಂದಿನ ಪಂದ್ಯಗಳಲ್ಲಾದ್ರು ಬಿಗ್​ ಇನ್ನಿಂಗ್ಸ್ ಆಡಿ ತಂಡಕ್ಕೆ ನೆರವಾಗಲಿ. ಹಾಗಾಗಬೇಕಾದ್ದಲ್ಲಿ ಒತ್ತಡ ಮೆಟ್ಟಿನಿಂತು ಬ್ಯಾಟ್ ಬೀಸಬೇಕಿದೆ.