IPL 2021: ವೃದ್ಧಿಮಾನ್ ಸಾಹ, ಅಮಿತ್ ಮಿಶ್ರಾಗೆ ಕೊರೋನಾ ಪಾಸಿಟೀವ್!
ಕೊರೋನಾ ವೈರಸ್ ಕಾರಣ ಸಂಪೂರ್ಣ ಐಪಿಎಲ್ ಟೂರ್ನಿಯನ್ನು ಮುಂದೂಡಲಾಗಿದೆ. ಬಿಸಿಸಿಐ ನಿರ್ಧಾರದ ಬೆನ್ನಲ್ಲೇ ಇದೀಗ ಒಬ್ಬೊಬ್ಬ ಆಟಗಾರರು ತಮ್ಮ ತಮ್ಮ ಕೊರೋನಾ ರಿಪೋರ್ಟ್ ಬಹಿರಂಗ ಪಡಿಸುತ್ತಿದ್ದಾರೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ
ಮುಂಬೈ(ಮೇ.04): IPL 2021 ಕೊರೋನಾ ಕಾರಣದಿಂದ ಅರ್ಧಕ್ಕೆ ಸ್ಥಗಿತಗೊಂಡಿದೆ. ಕೆಕೆಆರ್ ಆಟಗಾರಲ್ಲಿ ಕೊರೋನಾ ಪಾಸಿಟೀವ್ ಕಾರಣ ಕೆಕೆಆರ್ ಹಾಗೂ ಆರ್‌ಸಿಬಿ ನಡುವಿನ ಪಂದ್ಯ ಮುಂದೂಡಲಾಗಿತ್ತು. ಇದರ ಬೆನ್ನಲ್ಲೇ ಮಹತ್ವದ ಸಭೆ ನಡೆಸಿದ ಬಿಸಿಸಿಐ, ಟೂರ್ನಿ ಸ್ಥಗಿತಗೊಳಿಸಲು ನಿರ್ಧರಿಸಿದೆ. ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದ ಬೆನ್ನಲ್ಲೇ ಐಪಿಎಲ್ ಟೂರ್ನಿ ಮುಂದುವರಿಯಲಿದೆ ಎಂದು ಬಿಸಿಸಿಐ ಹೇಳಿದೆ. ಬಿಸಿಸಿಐ ನಿರ್ಧಾರ ಹೊರಬಿದ್ದ ಬೆನ್ನಲ್ಲೇ ಇದೀಗ ಒಬ್ಬೊಬ್ಬ ಆಟಗಾರರು ಕೊರೋನಾ ಪಾಸಿಟೀವ್ ರಿಪೋರ್ಟ್ ಬಹಿರಂಗ ಪಡಿಸುತ್ತಿದ್ದಾರೆ.
ಐಪಿಎಲ್ ರದ್ದು: ಈ ಸಲ ಕಪ್ ಕೊರೋನಾದ್ದು!
ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಮುಂಬೈ ಇಂಡಿಯನ್ಸ್ ತಂಡ ನಿಗದಿಯಂತೆ ಇಂದು ಮುಖಾಮುಖಿಯಾಬೇಕಿತ್ತು. ಆದರೆ ಸಂಪೂರ್ಣ ಐಪಿಎಲ್ ಟೂರ್ನಿ ಮುಂದೂಡಲಾಗಿದೆ. ಆದರೆ ಟೂರ್ನಿ ಸ್ಥಗಿತ ಮಾಡದಿದ್ದರೂ ಇಂದಿನ ಪಂದ್ಯ ಆಯೋಜನೆ ಕಷ್ಟವಾಗಿತ್ತು. ಕಾರಣ ಸನ್‌ರೈಸರ್ಸ್ ಹೈದರಾಬಾದ್ ಕಂಡದ ವೃದ್ಧಿಮಾನ್ ಸಾಹ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅಮಿತ್ ಮಿಶ್ರಾಗೆ ಕೊರೋನಾ ಪಾಸಿಟೀವ್ ಆಗಿದೆ.
ವೃದ್ಧಿಮಾನ್ ಸಾಹಾ ಹಾಗೂ ಅಮಿತ್ ಮಿಶ್ರಾಗೆ ಐಸೋಲೇಶನ್‌ಗೆ ಒಳಗಾಗಿದ್ದಾರೆ. ಜೊತೆಗೆ ಚಿಕಿತ್ಸೆ ಮುಂದುವರಿದಿದೆ. ಸೋಮವಾರ ಕೆಕೆಆರ್ ತಂಡದ ವರುಣ್ ಚಕ್ರವರ್ತಿ ಹಾಗೂ ಸಂದೀಪ್ ವಾರಿಯರ್‌ಗೆ ಕೊರೋನಾ ಅಂಟಿಕೊಂಡಿತ್ತು. ಹೀಗಾಗಿ ಕೆಕೆಆರ್ ಹಾಗೂ ಆರ್‌ಸಿಬಿ ಪಂದ್ಯ ಮುಂಡಲಾಗಿತ್ತು.
ಇದೀಗ ಹೆಚ್ಚಿನ ಆಟಗಾರಲ್ಲಿ ಕೊರೋನಾ ಕಾಣಿಸಿಕೊಂಡಿರುವದು ಬಹಿರಂಗವಾಗಿದೆ. ಬಯೋಬಬಲ್ ಸರ್ಕಲ್, ಅತ್ಯಂತ ಮುಂಜಾಗ್ರತಾ ಹಾಗೂ ಕಠಿಣ ಕ್ರಮಗಳನ್ನು ಕೈಗೊಂಡಿದ್ದರೂ, ಆಟಗಾರರಲ್ಲಿ ಕೊರೋನಾ ಕಾಣಿಸಿಕೊಂಡಿರುವುದು ಆತಂತಕ್ಕೆ ಕಾರಣವಾಗಿದೆ.