ಪಂಜಾಬ್ ವಿರುದ್ಧ 165 ರನ್ ಸಿಡಿಸಿದ ಕೋಲ್ಕತಾ ನೈಟ್ ರೈಡರ್ಸ್ ಕೆಕೆಆರ್‌ಗೆ ನೆರವಾದ ವೆಂಕಟೇಶ್ ಅಯ್ಯರ್ ಹಾಫ್ ಸೆಂಚುರಿ  ದುಬೈನಲ್ಲಿ ನಡೆಯುತ್ತಿರುವ ಮಹತ್ವದ ಪಂದ್ಯ

ದುಬೈ(ಅ.01): ಕೋಲ್ಕತಾ ನೈಟ್ ರೈಡರ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಲೀಗ್ ಪಂದ್ಯ ಅಭಿಮಾನಿಗಳ ಕುತೂಹಲ ಮತ್ತಷ್ಟು ಹೆಚ್ಚಿಸಿದೆ. ವೆಂಕಟೇಶ್ ಅಯ್ಯರ್ ಅರ್ಧಶತಕ, ರಾಹುಲ್ ತ್ರಿಪಾಠಿ ಸಿಡಿಸಿದ 34 ರನ್ ನೆರವಿನಿಂದ ಕೆಕೆಆರ್ ದಿಟ್ಟ ಹೋರಾಟ ನೀಡಿತು. ಪಂಜಾಬ್ ವಿರುದ್ಧ ದಿಟ್ಟ ಬ್ಯಾಟಿಂಗ್ ಪ್ರದರ್ಶನ ನೀಡಿದ ಕೆಕೆಆರ್ 7 ವಿಕೆಟ್ ನಷ್ಟಕ್ಕೆ 165 ರನ್ ಸಿಡಿಸಿದೆ. 

IPL 2021 ಕ್ರಿಕೆಟ್‌ ಆಟವನ್ನು ಅವಮಾನಿಸಿಲ್ಲ: ಅಶ್ವಿನ್‌ ತಿರುಗೇಟು..!

ಟಾಸ್ ಸೋತು ಬ್ಯಾಟಿಂಗ್ ಇಳಿದ ಕೋಲ್ಕತಾ ನೈಟ್ ರೈಡರ್ಸ್ ಆರಂಭ ಉತ್ತಮವಾಗಿರಲಿಲ್ಲ. ಶುಭಮನ್ ಗಿಲ್ ಕೇವಲ 7 ರನ್ ಸಿಡಿಸಿ ಔಟಾದರು. 18 ರನ್‌ಗೆ ಕೋಲ್ಕತಾ ಮೊದಲ ವಿಕೆಟ್ ಕಳೆದುಕೊಂಡಿತು. ಆದರೆ ವೆಂಕಟೇಶ್ ಅಯ್ಯರ್ ಹೋರಾಟ ಮುಂದುವರಿಸಿದರು. ರಾಹುಲ್ ತ್ರಿಪಾಠಿ ಜೊತೆ ಸೇರಿ ಕೆಕೆಆರ್ ತಂಡಕ್ಕೆ ಆಸರೆಯಾದರು.

IPL 2021: ಪಂಜಾಬ್‌ಗೆ ಗಾಯದ ಮೇಲೆ ಬರೆ, ಇದ್ದಕ್ಕಿದ್ದಂತೆಯೇ ತಂಡದಿಂದ ಹೊರನಡೆದ ಕ್ರಿಸ್‌ ಗೇಲ್‌..!

ಎರಡನೇ ವಿಕೆಟ್‌ಗೆ ಅಯ್ಯರ್ ಹಾಗೂ ತ್ರಿಪಾಠಿ 72 ರನ್ ಜೊತೆಯಾಟ ನೀಡಿದರು. ಈ ಜೊತೆಯಾದಿಂದ ಕೋಲ್ಕತಾ ನೈಟ್ ರೈಡರ್ಸ್ ಕಮ್‌ಬ್ಯಾಕ್ ಮಾಡಿತು. ರಾಹುಲ್ ತ್ರಿಪಾಠಿ 34 ರನ್ ಸಿಡಿಸಿ ಔಟಾದರು. ರವಿ ಬಿಶ್ನೋಯ್ ಮ್ಯಾಜಿಕ್‌ನಿಂದ ಭರ್ಜರಿ ಜೊತೆಯಾಟಕ್ಕೆ ಬ್ರೇಕ್ ಬಿದ್ದಿತು. ಹಾಫ್ ಸೆಂಚುರಿ ಮುನ್ನಗ್ಗುತ್ತಿದ್ದ ವೆಂಂಕಟೇಶ್ ಅಯ್ಯರ್ ಕೆಕೆಆರ್ ತಂಡಕ್ಕೆ ಆಧಾರವಾಗಿದ್ದರು.

IPL 2021 RCB ತಂಡದ ಪರ ಅಪರೂಪದ ದಾಖಲೆ ಬರೆದ ಹರ್ಷಲ್‌ ಪಟೇಲ್..!

ಅಯ್ಯರ್ 67 ರನ್ ಸಿಡಿಸಿ ನಿರ್ಗಮಿಸಿದರು. ಪ್ರತಿ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ವೆಂಕಟೇಶ್ ಅಯ್ಯರ್ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ತಮ್ಮ ಆರಂಭಿಕ 5 ಐಪಿಎಲ್ ಪಂದ್ಯದಲ್ಲಿ ಗರಿಷ್ಠ ರನ್ ಸಿಡಿಸಿದ ಕ್ರಿಕೆಟಿಗರ ಪೈಕಿ ದಿಗ್ಗಜರ ಸಾಲಿನಲ್ಲಿ ಗುರುತಿಸಿಕೊಂಡಿದ್ದಾರೆ. ಆರಂಭಿಕ 5 ಐಪಿಎಲ್ ಪಂದ್ಯದ ಬಳಿಕ ಅಯ್ಯರ್ 193 ರನ್ ಸಿಡಿಸಿ ಜ್ಯಾಕ್ ಕ್ಯಾಲಿಸ್ ಜೊತೆ ಮೊದಲ ಸ್ಥಾನ ಹಂಚಿಕೊಂಡಿದ್ದಾರೆ.

ಆರಂಭಿಕ 5 ಐಪಿಎಲ್ ಪಂದ್ಯಗಳ ಬಳಿಕ ಗರಿಷ್ಠ ರನ್ ಸ್ಕೋರರ್!
ಜ್ಯಾಕ್ ಕ್ಯಾಲಿಸ್ - 193 ರನ್
ವೆಂಕಟೇಶ್ ಅಯ್ಯರ್ - 193 ರನ್
ಬ್ರೆಂಡನ್ ಮೆಕಲಮ್ - 189 ರನ್
ಕ್ರಿಸ್ ಲಿನ್ - 176 ರನ್

ಅಯ್ಯರ್ ಬೆನ್ನಲ್ಲೇ ನಾಯಕ ಇಯಾನ್ ಮಾರ್ಗನ್ ವಿಕೆಟ್ ಪತನಗೊಂಡಿತು. ದಿಢೀರ್ ವಿಕೆಟ್ ಕಬಳಿಸಿದ ಪಂಜಾಬ್ ಕಿಂಗ್ಸ್ ಪಂದ್ಯದ ಮೇಲೆ ಮತ್ತೆ ಹಿಡಿತ ಸಾಧಿಸಿತು. ಆದರೆ ನಿತೀಶ್ ರಾಣಾ ಹೋರಾಟ ಕೆಕೆಆರ್ ತಂಡದ ಆತಂಕ ದೂರ ಮಾಡಿತು. ಸ್ಫೋಟ ಬ್ಯಾಟಿಂಗ್ ಪ್ರದರ್ಶನ ನೀಡಿದ ರಾಣಾ 18 ಎಸೆತದಲ್ಲಿ 31 ರನ್ ಸಿಡಿಸಿ ಔಟಾದರು. 

IPL 2021: ಪತ್ನಿಯರ ಬರ್ತ್‌ಡೇ ರೋಮ್ಯಾಂಟಿಕ್‌ ಆಗಿ ಸೆಲೆಬ್ರೆಟ್‌ ಮಾಡಿದ RCB ಪ್ಲೇಯರ್ಸ್‌!

ಟಿಮ್ ಸೈಫರ್ಟ್ ಕೇವಲ 2 ರನ್ ಸಿಡಿಸಿ ರನೌಟ್‌ಗೆ ಬಲಿಯಾದರು. ದಿನೇಶ್ ಕಾರ್ತಿಕ್ 11 ರನ್ ಸಿಡಿಸಿ ಔಟಾದರು. ಈ ಮೂಲಕ ಕೋಲ್ಕತಾ ನೈಟ್ ರೈಡರ್ಸ್ 7 ವಿಕೆಟ್ ನಷ್ಟಕ್ಕೆ 165 ರನ್ ಸಿಡಿಸಿತು. 

ಪಂಜಾಬ್ ಕಿಂಗ್ಸ್ ಪರ ಅರ್ಶದೀಪ್ ಸಿಂಗ್ 3, ರವಿ ಬಿಶ್ನೋಯ್ 2 ಹಾಗೂ ಮೊಹಮ್ಮದ್ ಶಮಿ 1 ವಿಕೆಟ್ ಕಬಳಿಸಿದರು.