Asianet Suvarna News Asianet Suvarna News

CSK ವಿರುದ್ಧ ಟಾಸ್ ಗೆದ್ದ ಹೈದರಾಬಾದ್, ತಂಡದಲ್ಲಿ 2 ಬದಲಾವಣೆ!

ಐಪಿಎಲ್ ಟೂರ್ನಿ 2021ರ 23ನೇ ಲೀಗ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡ ಮುಖಾಮುಖಿಯಾಗುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ SRH ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ತಂಡದಲ್ಲಿನ ಬದಲಾವಣೆ ಏನು? ಇಲ್ಲಿದೆ.

IPL 2021 Sunrisers Hyderabad won toss and chose to bat first against CSK in Delhi ckm
Author
Bengaluru, First Published Apr 28, 2021, 7:04 PM IST

ದೆಹಲಿ(ಏ.28):  ಆರ್‌ಸಿಬಿ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ಇದೀಗ ಸನ್‌ರೈಸರ್ಸ್ ಹೈದರಾಬಾದ್ ಮಣಿಸುವ ವಿಶ್ವಾಸದಲ್ಲಿದೆ. ಆದರೆ ಆರಂಭದಲ್ಲಿ ಕೊಂಚ ಹಿನ್ನಡೆಯಾಗಿದೆ. ಕಾರಣ ಈ ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದಿರುವ SRH ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. 

ಹೈದರಾಬಾದ್ ತಂಡದಲ್ಲಿ 2 ಬದಲಾವಣೆ ಮಾಡಲಾಗಿದೆ. ಸಂದೀಪ್ ಹಾಗೂ ಮನೀಶ್ ಪಾಂಡೆ ತಂಡ ಸೇರಿಕೊಂಡಿದ್ದಾರೆ. ಚೆನ್ನೈ ತಂಡದಲ್ಲೂ 2 ಬದಲಾವಣೆ ಮಾಡಲಾಗಿದೆ. ಡ್ವೇನ್ ಬ್ರಾವೋ ಹಾಗೂ ಇಮ್ರಾನ್ ತಾಹೀರ್ ತಂಡ ಸೇರಿಕೊಂಡಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ಆಡಿದ 5ರಲ್ಲಿ 4 ಪಂದ್ಯ ಗೆದ್ದುಕೊಂಡಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಇಂದಿನ ಪಂದ್ಯ ಗೆದ್ದರೆ ಮತ್ತೆ ನಂ.1 ಸ್ಥಾನಕ್ಕೆ ಏರಲಿದೆ. ಇತ್ತ ಹೈದರಾಬಾದ್ 4 ಸೋಲು ಕಾಣೋ ಮೂಲಕ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

Follow Us:
Download App:
  • android
  • ios