Asianet Suvarna News Asianet Suvarna News

IPL 2021:ರುತುರಾಜ್ ಸೆಂಚುರಿ, ಚೆನ್ನೈ ಹೋರಾಟ ವ್ಯರ್ಥ; ಧೋನಿ ಸೈನ್ಯ ಮಣಿಸಿದ ರಾಜಸ್ಥಾನ!

  • ರಾಜಸ್ಥಾನ ಅಬ್ಬರಕ್ಕೆ ಸೋಲಿಗೆ ಶರಣಾದ ಚೆನ್ನೈ ಸೂಪರ್ ಕಿಂಗ್ಸ್
  • ಜೈಸ್ವಾಲ್, ದುಬೆ ಹಾಫ್ ಸೆಂಚುರಿ, ರುತುರಾಜ್ ಶತಕ ವ್ಯರ್ಥ
  • ಸ್ಫೋಟಕ ಪ್ರದರ್ಶನ ಮೂಲಕ ದಾಖಳೆ ಬರೆದ ರಾಜಸ್ಥಾನ ರಾಯಲ್ಸ್
IPL 2021 Shivam Dube  Jaiswal half century helps Rajasthan royals to beat CSK by 7 wickets ckm
Author
Bengaluru, First Published Oct 2, 2021, 11:22 PM IST

ಅಬು ಧಾಬಿ(ಅ.02):  ರುತುರಾಜ್ ಗಾಯಕ್ವಾಡ್ ಸೆಂಚುರಿ, ಚೆನ್ನೈ ಸೂಪರ್ ಕಿಂಗ್ಸ್(Chennai Super Kings) ಹೋರಾಟದ ಬೃಹತ್ ಮೊತ್ತ ರಾಜಸ್ಥಾನ ರಾಯಲ್ಸ್(Rajasthan Royals) ಮುಂದೆ ಸಣ್ಣದಾಯಿತು. ಯಶಸ್ವಿ ಜೈಸ್ವಾಲ್(Yashasvi Jaiswal) , ಶಿವಂ ದುಬೆ(Shivam Dube) ಹಾಫ್ ಸೆಂಚುರಿ ನೆರವಿನಿಂದ ರಾಜಸ್ಥಾನ ರಾಯಲ್ಸ್, ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮಣಿಸಿದೆ. ಇನ್ನು 16 ಎಸೆತ ಬಾಕಿ ಇರುವಂತೆ ರಾಜಸ್ಥಾನ ರಾಯಲ್ಸ್  7 ವಿಕೆಟ್ ಭರ್ಜರಿ ಗೆಲುವು ಕಂಡಿದೆ. 

IPL 2021 ಡೆಲ್ಲಿಗೆ ಗೆಲುವಿನ ಉಡುಗೊರೆ ನೀಡಿದ ಅಯ್ಯರ್-ಅಶ್ವಿನ್ ಕಿಲಾಡಿ ಜೋಡಿ

ರುತುರಾಜ್ ಗಾಯಕ್ವಾಡ್(Ruturaj Gaikwad) ಆಕರ್ಷಕ ಸೆಂಚುರಿಯಿಂದ ರಾಜಸ್ಥಾನ ರಾಯಲ್ಸ್ 190 ರನ್ ಬೃಹತ್ ಟಾರ್ಗೆಟ್ ಪಡೆಯಿತು. ರಾಜಸ್ಥಾನ ರಾಯಲ್ಸ್ ತಂಡಕ್ಕೆ ಯಶಸ್ವಿ ಜೈಸ್ವಾಲ್ ಹಾಗೂ ಇವಿನ್ ಲಿವಿಸ್ ಸ್ಫೋಟಕ ಆರಂಭ ತಂಡದ ಆತ್ಮವಿಶ್ವಾಸ ಹೆಚ್ಚಿಸಿತು. ಇವರಿಬ್ಬರ ಜೊತೆಯಾಟದಿಂದ ರಾಜಸ್ಥಾನ ಬೃಹತ್ ಮೊತ್ತ ಸುಲಭವಾಗಿ ಚೇಸ್ ಮಾಡುವ ಸೂಚನೆ ನೀಡಿತು. 

ಅತೀ ವೇಗದಲ್ಲಿ ರಾಜಸ್ಥಾನ ರಾಯಲ್ಸ್ 50 ರನ್ ಸ್ಕೋರ್ ಸಿಡಿಸಿತು. ಆದರೆ ಇವಿನ್ ಲಿವಿಸ್ 27 ರನ್ ಸಿಡಿಸಿ ಔಟಾದರು.  ಇತ್ತ ಅಬ್ಬರಿಸಿದ ಯಶಸ್ವಿ ಜೈಸ್ವಾಲ್ ಕೇವಲ 19 ಎಸೆತದಲ್ಲಿ ಹಾಫ್ ಸೆಂಚುರಿ ಸಿಡಿಸಿದರು. ಈ ಮೂಲಕ ಅತೀ ವೇಗದಲ್ಲಿ ಹಾಫ್ ಸೆಂಚುರಿ ಸಿಡಿಸಿದ 2ನೇ ಅನ್‌ಕ್ಯಾಪ್ಡ್ ಇಂಡಿಯನ್ ಪ್ಲೇಯರ್ ಅನ್ನೋ ಹೆಗ್ಗಳಿಕೆಗೆ ಪಾತ್ರರಾದರು.

IPL 2021: ರಾಹುಲ್ ಹಾಫ್ ಸೆಂಚುರಿ, ಶಾರುಖ್ ಭರ್ಜರಿ ಸಿಕ್ಸರ್‌ನಿಂದ ಪಂಜಾಬ್‌ಗೆ 5 ವಿಕೆಟ್ ಗೆಲುವು

ಅತೀ ವೇಗದಲ್ಲಿ ಅರ್ಧಶತಕ ಸಿಡಿಸಿದ ಭಾರತದ ಅನ್‌ಕ್ಯಾಪ್ಡ್ ಪ್ಲೇಯರ್:
17 ಎಸೆತ್, ಇಶಾನ್ ಕಿಶನ್ v KKR, 2018
19 ಎಸೆತ್, ಯಶಸ್ವಿ ಜೈಸ್ವಾಲ್ v CSK 2021
20 ಎಸೆತ್, ದೀಪಕ್ ಹೂಡ v RR 2021
22 ಎಸೆತ್, ದೀಪಕ್ ಹೂಡ v DD 2015
22 ಎಸೆತ್, ಕ್ರುನಾಲ್ ಪಾಂಡ್ಯ v DD 2016

ಪವರ್ ಪ್ಲೇ ಓವರ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಗರಿಷ್ಠ ರನ್ ಸಿಡಿಸಿದ ಹೆಗ್ಗಳಿಕೆಗೆ ಪಾತ್ರವಾಯಿತು. ಪವರ್ ಪ್ಲೇನಲ್ಲಿ ರಾಜಸ್ಥಾನ 81 ರನ್ ಸಿಡಿಸಿತು. ಐಪಿಎಲ್ ಇತಿಹಾಸದಲ್ಲಿ ಪವರ್ ಪ್ಲೇನಲ್ಲಿ ರಾಜಸ್ಥಾನ ಗಳಿಸಿದ ಗರಿಷ್ಠ ಮೊತ್ತವಾಗಿದೆ.

IPL ಇತಿಹಾಸದಲ್ಲಿ ಹೊಸ ದಾಖಲೆ ನಿರ್ಮಿಸಿದ ಎಂ ಎಸ್‌ ಧೋನಿ..!

IPL ಇತಿಹಾಸದಲ್ಲಿ ರಾಜಸ್ಥಾನ ಪವರ್ ಪ್ಲೇನಲ್ಲಿ ಸಿಡಿಸಿದ ಗರಿಷ್ಠ ಮೊತ್ತ:
81/1 v ಚೆನ್ನೈ, ಅಬು ಧಾಬಿ, 2021 
73/1 vs ಡೆಕ್ಕನ್, ಹೈದರಾಬಾದ್, 2008
70/0 vs ಪಂಜಾಬ್, ಜೈಪುರ, 2010

ಯಶಸ್ವಿ ಜೈಸ್ವಾಲ್ 50 ರನ್ ಸಿಡಿಸಿ ಔಟಾದರು. ಆರಂಭಿಕರ ಪತನ ರಾಜಸ್ಥಾನ ತಂಡದಲ್ಲಿ ಕೊಂಚ ಆತಂಕ ತಂದಿತ್ತು. ಆದರೆ ನಾಯಕ ಸಂಜು ಸ್ಯಾಮ್ಸನ್ ಹಾಗೂ ಶಿವಂ ದುಬೆ ಅದೆ ರನ್‌ರೇಟ್‌ನಲ್ಲಿ ರನ್ ಗಳಿಸಿದರು. ಶಿವಂ ದುಬೆ ಐಪಿಎಲ್ ಟೂರ್ನಿಯಲ್ಲಿ ಚೊಚ್ಚಲ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು.

ದುಬೆ ಹಾಗೂ ಸ್ಯಾಮ್ಸನ್ ಜೊತೆಯಾಟ ರಾಜಸ್ಥಾನ ರಾಯಲ್ಸ್ ಗೆಲುವಿನ ಹಾದಿಯಲ್ಲಿ ಸಾಗಿತು. ಇತ್ತ ಚೆನ್ನೈ ಪಂದ್ಯ ಉಳಿಸಿಕೊಳ್ಳಲು ಕೆಲ ಪ್ರಯೋಗ ಮಾಡಿತು. ಆದರೆ ಫಲಕೊಡಲಿಲ್ಲ ಸ್ಯಾಮ್ಸನ್ 28 ರನ್ ಸಿಡಿಸಿ ಔಟಾದರು. ರಾಜಸ್ಥಾನ ಗೆಲುವಿಗೆ ಅಂತಿಮ 24 ಎಸೆತದಲ್ಲಿ 20 ರನ್ ಅವಶ್ಯಕತೆ ಇತ್ತು. 

ದುಬೆ ಹಾಗೂ ಗ್ಲೆನ್ ಫಿಲಿಪ್ಸ್ ಜೊತೆಯಾಟ ರಾಜಸ್ಥಾನ ರಾಯಲ್ಸ್ ಗೆಲುವನ್ನು ಖಚಿತಪಡಿಸಿತು. 17. 3  ಓವರ್‌ಗಳಲ್ಲಿ ರಾಜಸ್ಥಾನ ರಾಯಲ್ಸ್ 7 ವಿಕೆಟ್ ಗೆಲುವು ಕಂಡಿತು. ದುಬೆ ಅಜೇಯ 64 ರನ್ ಸಿಡಿಸಿದರೆ, ಫಿಲಿಪ್ಸ್ ಅಜೇಯ 14 ರನ್ ಸಿಡಿಸಿದರು. 

Follow Us:
Download App:
  • android
  • ios