Asianet Suvarna News Asianet Suvarna News

IPL ಇತಿಹಾಸದಲ್ಲಿ ಹೊಸ ದಾಖಲೆ ನಿರ್ಮಿಸಿದ ಎಂ ಎಸ್‌ ಧೋನಿ..!

* ಮಹೇಂದ್ರ ಸಿಂಗ್ ಧೋನಿ ಹೆಸರಿಗೆ ಮತ್ತೊಂದು ಅಪರೂಪದ ದಾಖಲೆ ಸೇರ್ಪಡೆ

* ಒಂದೇ ಐಪಿಎಲ್‌ ತಂಡದ 100 ಕ್ಯಾಚ್‌ ಹಿಡಿದ ಮೊದಲ ಕ್ರಿಕೆಟಿಗ ಧೋನಿ

* ಸನ್‌ರೈಸರ್ಸ್‌ ವಿರುದ್ದದ ಪಂದ್ಯದಲ್ಲಿ ನಿರ್ಮಾಣವಾಯ್ತು ದಾಖಲೆ

IPL 2021 Captain MS Dhoni completes 100 catches for Chennai Super Kings sets new record kvn
Author
Sharjah - United Arab Emirates, First Published Oct 1, 2021, 1:22 PM IST

ಶಾರ್ಜಾ(ಅ.01): 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಮಹೇಂದ್ರ ಸಿಂಗ್ ಧೋನಿ (MS Dhoni) ನೇತೃತ್ವದ ಚೆನ್ನೈ ಸೂಪರ್‌ ಕಿಂಗ್ಸ್‌ (Chennai Super Kings) ತಂಡವು ಸನ್‌ರೈಸರ್ಸ್‌ ಹೈದರಾಬಾದ್ ತಂಡವನ್ನು ಮಣಿಸುವುದರೊಂದಿಗೆ ಪ್ಲೇ ಆಫ್‌ಗೆ ಲಗ್ಗೆಯಿಟ್ಟ ಮೊದಲ ತಂಡ ಎನಿಸಿಕೊಂಡಿದೆ. ಇದೇ ಪಂದ್ಯದಲ್ಲಿ ಮೂರು ಕ್ಯಾಚ್‌ ಹಿಡಿಯುವ ಮೂಲಕ ಸಿಎಸ್‌ಕೆ ನಾಯಕ ಮಹೇಂದ್ರ ಸಿಂಗ್ ಧೋನಿ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ. 

ಐಪಿಎಲ್‌ನಲ್ಲಿ ಒಂದು ತಂಡದ ಪರ 100 ಕ್ಯಾಚ್‌ಗಳನ್ನು ಪೂರೈಸಿದ ಮೊದಲ ಆಟಗಾರ ಎನ್ನುವ ದಾಖಲೆಯನ್ನು ಎಂ.ಎಸ್‌.ಧೋನಿ ಬರೆದಿದ್ದಾರೆ. ಧೋನಿ ಚೆನ್ನೈ ಸೂಪರ್‌ ಕಿಂಗ್ಸ್‌ ಪರ 100 ಕ್ಯಾಚ್‌ಗಳನ್ನು ಹಿಡಿದ ಸಾಧನೆ ಮಾಡಿದ್ದಾರೆ. ಇನ್ನು 98 ಕ್ಯಾಚ್‌ಗಳನ್ನು ಹಿಡಿದಿರುವ ಸುರೇಶ್‌ ರೈನಾ (Suresh Raina) 2ನೇ ಸ್ಥಾನದಲ್ಲಿ (ಚೆನ್ನೈ ಸೂಪರ್‌ ಕಿಂಗ್ಸ್‌) ಇದ್ದಾರೆ. 3ನೇ ಸ್ಥಾನದಲ್ಲಿ ಮುಂಬೈ ಇಂಡಿಯನ್ಸ್‌ನ ಕೀರನ್‌ ಪೊಲ್ಲಾರ್ಡ್‌ (Kieron Pollard) ಇದ್ದಾರೆ. ಪೊಲ್ಲಾರ್ಡ್‌ ಮುಂಬೈ ಇಂಡಿಯನ್ಸ್‌ (Mumbai Indians) ಪರ ಇದುವರೆಗೂ 94 ಕ್ಯಾಚ್ ಪಡೆದಿದ್ದಾರೆ.

IPL 2021: ಪಂಜಾಬ್‌ಗೆ ಗಾಯದ ಮೇಲೆ ಬರೆ, ಇದ್ದಕ್ಕಿದ್ದಂತೆಯೇ ತಂಡದಿಂದ ಹೊರನಡೆದ ಕ್ರಿಸ್‌ ಗೇಲ್‌..!

ಧೋನಿ ಐಪಿಎಲ್‌ನಲ್ಲಿ ಒಟ್ಟು 119 ಕ್ಯಾಚ್‌ಗಳನ್ನು ಪೂರೈಸಿದ್ದು, ಇದರಲ್ಲಿ 19 ಕ್ಯಾಚ್‌ಗಳು ಪುಣೆ ಪರ ಹಿಡಿದಿದ್ದಾರೆ. ಧೋನಿ, ಗುರುವಾರ ಸನ್‌ರೈಸ​ರ್ಸ್‌ ವಿರುದ್ಧದ ಪಂದ್ಯದಲ್ಲಿ 3 ಕ್ಯಾಚ್‌ಗಳನ್ನು ಪಡೆದರು. ಐಪಿಎಲ್‌ನ ಇನ್ನಿಂಗ್ಸ್‌ವೊಂದರಲ್ಲಿ 10ನೇ ಬಾರಿಗೆ 3 ಅಥವಾ ಅದಕ್ಕಿಂತ ಹೆಚ್ಚು ಕ್ಯಾಚ್‌ಗಳನ್ನು ಹಿಡಿದ ಮೈಲಿಗಲ್ಲನ್ನು ಧೋನಿ ತಲುಪಿದರು. ಇನ್ನು 5 ಬಾರಿ 3+ ಕ್ಯಾಚ್ ಹಿಡಿದಿರುವ ಎಬಿ ಡಿ ವಿಲಿಯ​ರ್ಸ್‌ (Ab de Villiers) ಈ ಪಟ್ಟಿಯಲ್ಲಿ 2 ಸ್ಥಾನದಲ್ಲಿದ್ದಾರೆ.

ಐಪಿಎಲ್‌ ಟಿವಿ ವೀಕ್ಷಕರ ಸಂಖ್ಯೆ ಭಾರೀ ಹೆಚ್ಚಳ

ನವದೆಹಲಿ: ಕೋವಿಡ್‌ ನಡುವೆ ಯುಎಇಯಲ್ಲಿ ನಡೆಯುತ್ತಿರುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್‌)ನ ಟಿವಿ ವೀಕ್ಷಕರ ಸಂಖ್ಯೆಯಲ್ಲಿ ಏರಿಕೆಯಾಗಿದ್ದಕ್ಕೆ ಬಿಸಿಸಿಐ ಕಾರ‍್ಯದರ್ಶಿ ಜಯ್‌ ಶಾ (Jay Shah) ಕ್ರೀಡಾ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ. 

‘2021ರ ಐಪಿಎಲ್‌ನ (IPL 2021) ಟಿವಿ ವೀಕ್ಷಕರ ಸಂಖ್ಯೆಯಲ್ಲಿ ಗಮನಾರ್ಹ ಬೆಳವಣಿಗೆ ಕಂಡು ಸಂತೋಷವಾಗುತ್ತಿದೆ. 35 ಪಂದ್ಯದವರೆಗೆ 380 ಮಿಲಿಯನ್‌(38 ಕೋಟಿ) ಮಂದಿ ಪಂದ್ಯ ವೀಕ್ಷಿಸಿದ್ದಾರೆ. ಇದು ಇಷ್ಟೇ ಪಂದ್ಯಗಳಲ್ಲಿ 2020ರಲ್ಲಿ ದಾಖಲಾದ ಸಂಖ್ಯೆಗಿಂತ 12 ಮಿಲಿಯನ್‌ (1.2 ಕೋಟಿ)ಜಾಸ್ತಿ. ವೀಕ್ಷಕರಿಗೆ ಧನ್ಯವಾದ’ ಟ್ವೀಟ್‌ ಮಾಡಿದ್ದಾರೆ.
 

Follow Us:
Download App:
  • android
  • ios