Asianet Suvarna News Asianet Suvarna News

IPL 2021: ಆರ್‌ಸಿಬಿ ವಿರುದ್ಧ ಟಾಸ್ ಗೆದ್ದ ಮುಂಬೈ,ಕೊಹ್ಲಿ ಸೈನ್ಯದಲ್ಲಿ 3 ಬದಲಾವಣೆ!

  • ಸತತ ಎರಡು ಪಂದ್ಯ ಸೋತಿರುವ ಆರ್‌ಸಿಬಿ ಅಗ್ನಿಪರೀಕ್ಷೆ
  • ಸೋಲಿನ ಸುಳಿಯಲ್ಲಿರುವ ಮುಂಬೈ ವಿರುದ್ಧ ಗೆಲುವಿನ ವಿಶ್ವಾಸ
  • ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ
IPL 2021 RCB vs MI Virat Kohli won toss and elected bat first against mumbai Indians ckm
Author
Bengaluru, First Published Sep 26, 2021, 7:07 PM IST

ದುಬೈ(ಸೆ.26):  IPL 2021ರ ಎರಡನೇ ಭಾಗದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bengaluru) ಹಾಗೂ ಮುಂಬೈ ಇಂಡಿಯನ್ಸ್‌ಗೆ (Mumbai Indians) ಇದುವರೆಗೆ ಗೆಲುವು ಸಿಕ್ಕಿಲ್ಲ. ಇದೀಗ ಎರಡೆರಡು ಪಂದ್ಯ ಸೋತಿರುವ RCB vs MI ಮುಖಾಮುಖಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಮಹತ್ವದ ಪಂದ್ಯದಲ್ಲಿ ಟಾಸ್(Toss) ಗೆದ್ದಿರುವ ಮುಂಬೈ ಇಂಡಿಯನ್ಸ್ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.

RCB ಪ್ಲೇಯಿಂಗ್ 11:

ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಎಸ್ ಭರತ್, ಗ್ಲೆನ್ ಮ್ಯಾಕ್ಸ್‌ವೆಲ್, ಎಬಿ ಡಿವಿಲಿಯರ್ಸ್, ಶಹಬಾಜ್ ಅಹಮ್ಮದ್, ಡೇನಿಯಲ್ ಕ್ರಿಶ್ಟಿಯನ್, ಕೈಲ್ ಜ್ಯಾಮಿನ್ಸನ್, ಹರ್ಶಲ್ ಪಟೇಲ್, ಮೊಹಮ್ಮದ್ ಸಿರಾಜ್, ಯುಜುವೇಂದ್ರ ಚಹಾಲ್

ಮುಂಬೈ ಪ್ಲೇಯಿಂಗ್ 11:
ರೋಹಿತ್ ಶರ್ಮಾ, ಕ್ವಿಂಟನ್ ಡಿಕಾಕ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಕೀರನ್ ಪೋಲಾರ್ಡ್, ಕ್ರುನಾಲ್ ಪಾಂಡ್ಯ, ಆ್ಯಡಮ್ ಮಿಲ್ನೆ, ರಾಹುಲ್ ಚಹಾರ್, ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್

IPL 2021ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ಹಾಗೂ ಮುಂಬೈ ಇಂಡಿಯನ್ಸ್(MI) ಒಂದೇ ದೋಣಿಯಲ್ಲಿ ಸಾಗುತ್ತಿದೆ. 2ನೇ ಭಾಗದಲ್ಲಿ ಮುಂಬೈ  ಸತತ 2 ಪಂದ್ಯ ಸೋತರೆ, ಆರ್‌ಸಿಬಿ ಕೂಡ 2 ಪಂದ್ಯ ಸೋತು ಕಂಗಾಲಾಗಿದೆ. ದುಬೈ(Dubai) ಅವತರಣಿ ಐಪಿಎಲ್ 2021ರ ಟೂರ್ನಿಯಲ್ಲಿ ಆರ್‌ಸಿಬಿ  ಮೊದಲ ಪಂದ್ಯವನ್ನು ಕೆಕೆಆರ್(KKR) ವಿರುದ್ಧ ಆಡಿ ಸೋತಿದೆ. ಎರಡನೇ ಪಂದ್ಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್(CSK) ವಿರುದ್ಧ ಮುಗ್ಗರಿಸಿದೆ.

ಈ ಕಾರಣದಿಂದ ಅಥಿಯಾ ಶೆಟ್ಟಿ ಮೇಲೆ ಅಸಮಾಧಾನಗೊಂಡಿರುವ ಕೆಎಲ್‌ ರಾಹುಲ್‌

ಮುಂಬೈ ಇಂಡಿಯನ್ಸ್ ಮೊದಲ ಪಂದ್ಯವನ್ನು ಸಿಎಸ್‌ಕೆ ವಿರುದ್ಧ ಆಡಿತ್ತು. ಈ ಪಂದ್ಯದಲ್ಲಿ ಚೆನ್ನೈ 20 ರನ್ ಗೆಲುವು ದಾಖಲಿಸಿದೆ. ಇನ್ನು ಕೆಕೆಆರ್ ವಿರುದ್ಧದ ಎರಡನೇ ಪಂದ್ಯದಲ್ಲೂ ಮುಂಬೈ ಇಂಡಿಯನ್ಸ್ ಗೆಲುವಿನ ಲಯಕ್ಕೆ ಬರಲಿಲ್ಲ. ಸೋತ ತಂಡಗಳು ಇಂದು ಗೆಲುವಿಗಾಗಿ ಹೋರಾಟ ನಡೆಸಲಿದೆ.

ಅಂಕಪಟ್ಟಿ:
ರಾಯಲ್ ಚಾಲೆಂಜರ್ಸ್ ಬೆಂಗಳೂರು ಸತತ 2 ಪಂದ್ಯ ಸೋತರು ಅಂಕಪಟ್ಟಿ(Points Table) ಸ್ಥಾನದಲ್ಲಿ ಬದಲಾವಣೆಯಾಗಿಲ್ಲ. ಆಡಿದ 9 ಪಂದ್ಯದಲ್ಲಿ 5 ಗೆಲುವು 4 ಸೋಲಿನೊಂದಿಗೆ 3ನೇ ಸ್ಥಾನದಲ್ಲಿದೆ. ಆದರೆ ಮುಂಬೈ ಇಂಡಿಯನ್ಸ್ ತಂಡದ ಸ್ಥಾನ ಪಲ್ಲಟವಾಗಿದೆ. ಮುಂಬೈ ಆಡಿದ 9 ಪಂದ್ಯದಲ್ಲಿ 4 ಗೆಲುವು ಹಾಗೂ 5 ಸೋಲಿನೊಂದಿಗೆ ಇದೀಗ 6ನೇ ಸ್ಥಾನದಲ್ಲಿದೆ. 

IPL 2021: ಮುಂಬೈ ಎದುರಿನ ಪಂದ್ಯದಲ್ಲಿ ಅಪರೂಪದ ದಾಖಲೆ ಬರೆಯಲು ವಿರಾಟ್ ಕೊಹ್ಲಿ ರೆಡಿ..!

RCB vs MI ಮುಖಾಮುಖಿ:
ಉಭಯ ತಂಡಗಳ ನಡುವೆ ಜಿದ್ದಾಜಿದ್ದಿನ ಹೋರಾಟ ಏರ್ಪಟ್ಟಿದೆ. ಇದರಲ್ಲಿ ಮುಂಬೈ ಕೊಂಚ ಮೇಲುಗೈ ಸಾಧಿಸಿದೆ. ಆರ್‌ಸಿಬಿ ವಿರುದ್ಧ ಮುಂಬೈ ಇಂಡಿಯನ್ಸ್ 17 ಗೆಲುವು ಕಂಡಿದಿದ್ದರೆ, ಆರ್‌ಸಿಬಿ 11 ಗೆಲವು ಕಂಡಿದೆ 2020ರ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಹಾಗೂ ಮುಂಬೈ ಇದೇ ದುಬೈ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಿತ್ತು. ಈ ರೋಚಕ ಪಂದ್ಯದಲ್ಲಿ ಆರ್‌ಸಿಬಿ ಸೂಪರ್ ಓವರ್ ಮೂಲಕ ಗೆಲುವು ಸಾಧಿಸಿತ್ತು.

IPL 2021: ಸುಲಭ ಟಾರ್ಗೆಟ್ ಪಡೆದ ಹೈದರಾಬಾದ್‌ಗೆ ಶಾಕ್, ಪಂಜಾಬ್‌ ಕಿಂಗ್ಸ್‌ಗೆ 5 ರನ್ ಗೆಲುವು!

ಮುಂಬೈಗೆ ಎಬಿಡಿ ಭಯ:
ಮುಂಬೈ ಇಂಡಿಯನ್ಸ್ ವಿರುದ್ಧ ಎಬಿ ಡಿವಿಲಿಯರ್ಸ್(AB de Villiers) ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. 2015ರ ಬಳಿಕ ಮುಂಬೈ ವಿರುದ್ಧ ಡೆತ್ ಓವರ್‌ನಲ್ಲಿ ಎಬಿಡಿ ಸ್ಟ್ರೈಕ್ ರೇಟ್ 249.40. ಹೀಗಾಗಿ ಎಬಿಡಿ ಕಟ್ಟಿಹಾಕುವುದೇ ಮುಂಬೈಗೆ ಸವಾಲಾಗಿದೆ.

ನಾಯಕ ವಿರಾಟ್ ಕೊಹ್ಲಿ(Virat Kohli) ಮುಂಬೈ ವಿರುದ್ಧ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಮುಂಬೈ ವಿರುದ್ಧ ಕಳೆದ 10 ಇನ್ನಿಂಗ್ಸ್‌ಗಳಲ್ಲಿ ಕೊಹ್ಲಿ ಸರಾಸರಿ 27.92 . ಕಳೆದ 5 ಪಂದ್ಯದಲ್ಲಿ ಮೂರು ಬಾರಿ  ಜಸ್ಪ್ರೀತ್ ಬುಮ್ರಾ(Jasprit Bumrah), ವಿರಾಟ್ ಕೊಹ್ಲಿ ವಿಕೆಟ್ ಕಬಳಿಸಿದ್ದಾರೆ.
 

Follow Us:
Download App:
  • android
  • ios