* ಕೆಕೆಆರ್ ವಿರುದ್ದ ಬ್ಲೂ ಜೆರ್ಸಿ ತೊಟ್ಟು ಕಣಕ್ಕಿಳಿಯಲಿದೆ ಆರ್‌ಸಿಬಿ* ಸೆಪ್ಟೆಂಬರ್ 20ರಂದು ಕೆಕೆಆರ್ ಎದುರು ಅಬುಧಾಬಿಯಲ್ಲಿ ನಡೆಯಲಿರುವ ಪಂದ್ಯ* ಪಂದ್ಯ ಮುಗಿದ ಬಳಿಕ ಬ್ಲೂ ಜೆರ್ಸಿ ಹರಾಜು ಹಾಕಲಿದೆ ಆರ್‌ಸಿಬಿ 

ಅಬುಧಾಬಿ(ಸೆ.19): ಕೊರೋನಾ ವೈರಸ್ ವಿರುದ್ದ ಹೋರಾಡುತ್ತಿರುವ ಕೋವಿಡ್ ವಾರಿಯರ್‌ಗೆ ಗೌರವ ಸೂಚಿಸುವ ಸಲುವಾಗಿ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಅಬುಧಾಬಿಯಲ್ಲಿ ಸೆಪ್ಟೆಂಬರ್‌ 20ರಂದು ನಡೆಯಲಿರುವ ಕೋಲ್ಕತ ನೈಟ್‌ ರೈಡರ್ಸ್‌ ವಿರುದ್ದದ ಪಂದ್ಯದಲ್ಲಿ ತಿಳಿ ನೀಲಿ(ಬ್ಲೂ ಜೆರ್ಸಿ) ತೊಟ್ಟು ಕಣಕ್ಕಿಳಿಯಲಿದೆ. 

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಬ್ಲೂ ಜೆರ್ಸಿಯನ್ನು ಅನಾವರಣ ಮಾಡಿದ್ದು, ಕೆಕೆಆರ್ ವಿರುದ್ದದ ಪಂದ್ಯ ಮುಕ್ತಾಯವಾದ ಬಳಿಕ ಆಟಗಾರರು ಧರಿಸಿದ ವಿಶೇಷ ಬ್ಲೂ ಜೆರ್ಸಿಗಳನ್ನು ಹರಾಜು ಹಾಕಲಾಗುವುದು. ಇದರಿಂದ ಸಂಗ್ರಹವಾದ ಹಣವನ್ನು ಉಚಿತವಾಗಿ ಕೋವಿಡ್‌ ಲಸಿಕೆ ನೀಡಲು ಬಳಸಿಕೊಳ್ಳಲಾಗುವುದು ಎಂದು ವಿರಾಟ್ ಕೊಹ್ಲಿ ತಿಳಿಸಿದ್ದಾರೆ 

Scroll to load tweet…

ಇದು ವಿಶೇಷ ರೀತಿಯ ನೀಲಿ ಬಣ್ಣ. ಈ ಜೆರ್ಸಿಯ ಮೂಲಕ ಸಮಾಜಕ್ಕೆ ಸಂದೇಶ ರವಾನೆಯಾಗಲಿದ್ದು, ಆರ್‌ಸಿಬಿ ಪಾಲಿಗಿದು ಒಂದು ರೀತಿಯ ಮೈಲಿಗಲ್ಲು. ಪಂದ್ಯ ಮುಗಿದ ಬಳಿಕ ಈ ಜೆರ್ಸಿಗಳನ್ನು ಹರಾಜು ಹಾಕಿ ಇದರಿಂದ ಸಂಗ್ರಹವಾದ ಹಣವನ್ನು ದೇಶದ ಉಚಿಯ ವ್ಯಾಕ್ಸಿನ್‌ ಅಭಿಯಾನಕ್ಕೆ ಕೈಜೋಡಿಸಲಿದ್ದೇವೆ ಎಂದು ನಾಯಕ ವಿರಾಟ್ ಕೊಹ್ಲಿ ತಿಳಿಸಿದ್ದಾರೆ.

IPL 2021: KKR ಎದುರು ನೀಲಿ ಜೆರ್ಸಿ ತೊಟ್ಟು ಕಣಕ್ಕಿಳಿಯಲಿದೆ ಆರ್‌ಸಿಬಿ..!

2021ರ ಐಪಿಎಲ್‌ ಆವೃತ್ತಿಯನ್ನು ನಾವು ಉತ್ತಮವಾಗಿಯೇ ಆರಂಭಿಸಿದ್ದೇವೆ. ಭಾರತದಲ್ಲಿ ನಡೆದ ಮೊದಲ ಹಂತದ ಪಂದ್ಯಾವಳಿಯಲ್ಲಿ ನಾವು ಗುಣಮಟ್ಟದ ಕ್ರಿಕೆಟ್ ಆಡಿದ್ದೇವೆ. ಇದೀಗ ಎಲ್ಲಾ ಆಟಗಾರರು ಯುಎಇ ಚರಣದ ಐಪಿಎಲ್‌ನಲ್ಲಿ ಮಿಂಚಲು ಉತ್ಸುಕರಾಗಿದ್ದಾರೆ ಎಂದು ವಿರಾಟ್ ಕೊಹ್ಲಿ ತಿಳಿಸಿದ್ದಾರೆ.

Scroll to load tweet…

ಮೊದಲಿನಿಂದಲೂ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು Go Green ಅಭಿಯಾನದ ಮೂಲಕ ಪರಿಸರದ ಬಗ್ಗೆ ಜಾಗೃತಿ ಮೂಡಿಸುತ್ತಲೇ ಬಂದಿದೆ. ಆರ್‌ಸಿಬಿ ಈ ಬಾರಿ ಪಿಪಿಇ ಕಿಟ್‌ ಬಣ್ಣದ ಜೆರ್ಸಿ ತೊಟ್ಟು ಕೆಕೆಆರ್ ವಿರುದ್ದದ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಆರೋಗ್ಯ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸಕ್ಕೆ ಮುಂದಾಗಿದೆ. ಕೋವಿಡ್‌ ಸಂಕಷ್ಟದ ಸಂದರ್ಭದಲ್ಲಿ ಜೀವದ ಹಂಗು ತೊರೆದು ಸೇವೆ ಮಾಡಿದ ಕೋವಿಡ್‌ ಫ್ರಂಟ್‌ಲೈನ್‌ ವರ್ಕರ್‌ಗಳಿಗೆ ಬೆಂಬಲ ಸೂಚಿಸುವ ಸಲುವಾಗಿ ವಿರಾಟ್ ಪಡೆ ಬ್ಲೂ ಜೆರ್ಸಿ ತೊಟ್ಟು ಮೈದಾನಕ್ಕಿಳಿಯಲಿದೆ.

14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇದುವರೆಗೂ ಒಟ್ಟು 7 ಪಂದ್ಯಗಳನ್ನಾಡಿ 5 ಗೆಲುವು ಹಾಗೂ 2 ಸೋಲುಗಳೊಂದಿಗೆ 10 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಬ್ಯಾಟಿಂಗ್, ಬೌಲಿಂಗ್ ಹಾಗೂ ಆಲ್ರೌಂಡ್ ವಿಭಾಗದಲ್ಲಿ ಸಾಕಷ್ಟು ಬಲಿಷ್ಠವಾಗಿ ಗುರುತಿಸಿಕೊಂಡಿರುವ ಆರ್‌ಸಿಬಿ, ಈ ಬಾರಿ ಐಪಿಎಲ್ ಕಪ್‌ ಗೆಲ್ಲಬಲ್ಲ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದೆ.