ಅಹಮದಾಬಾದ್(ಏ.28): ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ತೋರುತ್ತಿದ್ದು, ಇದುವರೆಗೂ 6 ಪಂದ್ಯಗಳನ್ನಾಡಿ 5 ಗೆಲುವು ಹಾಗೂ 1 ಸೋಲಿನೊಂದಿಗೆ 10 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.

ಆರ್‌ಸಿಬಿ ಇನ್‌ಸೈಡರ್‌ ಶೋನಲ್ಲಿ ಮಿಸ್ಟರ್‌ ನ್ಯಾಗ್ಸ್‌ ಕರ್ನಾಟಕದ ಯುವ ಪ್ರತಿಭೆ ದೇವದತ್ ಪಡಿಕ್ಕಲ್‌ ಅವರ ಜತೆ ನಡೆಸಿದ ಮಾತುಕತೆಯ ವಿಡಿಯೋವನ್ನು ಆರ್‌ಸಿಬಿ ಟ್ವೀಟ್‌ ಮಾಡಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

ಐಪಿಎಲ್ 2021: ರಿಚರ್ಡ್‌ಸನ್‌ ಬದಲಿಗೆ ಆರ್‌ಸಿಬಿ ಕೂಡಿಕೊಂಡ ಸ್ಕಾಟ್‌ ಕುಗ್ಗಲಯನ್‌

ಈ ಮಾತುಕತೆಯ ವೇಳೆ ಮಿಸ್ಟರ್ ನ್ಯಾಗ್ಸ್‌ ಎಡಗೈ ಬ್ಯಾಟ್ಸ್‌ಮನ್‌ ದೇವದತ್ ಪಡಿಕ್ಕಲ್ ಬಳಿ ನಿಮಗೆ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್‌ ನಿಮಗಿಷ್ಟವಾದ ಆಟಗಾರ ಯಾರು? ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಕೊಹ್ಲಿ ಮಧ್ಯ ಪ್ರವೇಶಿಸಿ, ನನ್ನ ಹಾಗೂ ಎಬಿಡಿ ಇಬ್ಬರಲ್ಲಿ ಪಡಿಕ್ಕಲ್‌ ಯಾರನ್ನು ಇಷ್ಟಪಡುತ್ತಾರೆ ಎನ್ನುವುದು ನ್ಯಾಗ್ಸ್‌ಗಂತೂ ಗೊತ್ತಿಲ್ಲ. ಆದರೆ ಒಂದಂತೂ ಸತ್ಯ ಪಡಿಕ್ಕಲ್ ಮಿ. ನ್ಯಾಗ್ಸ್‌ರನ್ನು ಖಂಡಿತ ಇಷ್ಟಪಡಲಾರರು ಎಂದು ಕೊಹ್ಲಿ ಕಾಲೆಳೆದಿದ್ದಾರೆ.

ಮಿಸ್ಟರ್‌ ನ್ಯಾಗ್ಸ್‌ ಜತೆ ಕನ್ನಡಿಗ ದೇವದತ್ ಪಡಿಕ್ಕಲ್‌ ಮನಬಿಚ್ಚಿ ಮಾತನಾಡಿದ್ದು, ವಿಡಿಯೋದ ಕೊನೆಯಲ್ಲಿ ಅರ್‌ಸಿಬಿ ಅಭಿಮಾನಿಗಳಿಗೆ ಕನ್ನಡದಲ್ಲೇ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ.