* 14ನೇ ಆವೃತ್ತಿಯ ಐಪಿಎಲ್‌ನಲ್ಲಿ ಹರ್ಷಲ್‌ ಪಟೇಲ್ ಅಕ್ಷರಶಃ ಮಿಂಚಿದ್ದಾರೆ.* ಕೇವಲ 7 ಪಂದ್ಯಗಳಲ್ಲಿ 17 ವಿಕೆಟ್ ಪಡೆದ ಹರ್ಷಲ್ ಪಟೇಲ್‌* ಎಬಿ ಡಿವಿಲಿಯರ್ಸ್‌ ವಿಕೆಟ್ ಕಬಳಿಸುವುದು ನನ್ನ ಕೊನೆಯ ಕನಸೆಂದ ಆರ್‌ಸಿಬಿ ವೇಗಿ

ನವದೆಹಲಿ(ಮೇ.20): ಬರೋಬ್ಬರಿ 9 ವರ್ಷಗಳಿಂದ ಐಪಿಎಲ್ ಆಡುತ್ತಾ ಇದ್ದರೂ, 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವೇಗಿ ಹರ್ಷಲ್‌ ಪಟೇಲ್‌ ಮೊದಲ ಬಾರಿಗೆ ತಮ್ಮ ಲಯ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.

14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಪರ ಹರ್ಷಲ್‌ ಪಟೇಲ್‌ ಕೇವಲ 7 ಪಂದ್ಯಗಳನ್ನಾಡಿ 17 ವಿಕೆಟ್ ಕಬಳಿಸುವ ಮೂಲಕ ಪರ್ಪಲ್‌ ಕ್ಯಾಪ್‌ ಮುಡಿಗೇರಿಸಿಕೊಂಡಿದ್ದರು. ಡೆತ್‌ ಓವರ್‌ನಲ್ಲಿ ಪರಿಣಾಮಕಾರಿ ದಾಳಿ ನಡೆಸುವ ಮೂಲಕ ಆರ್‌ಸಿಬಿ ತಂಡಕ್ಕೆ ಹರ್ಷಲ್‌ ಪಟೇಲ್ ಸ್ಮರಣೀಯ ಗೆಲುವು ತಂದಿತ್ತಿದ್ದರು.

ಇದೀಗ ಎಬಿ ಡಿವಿಲಿಯರ್ಸ್‌ ವಿಕೆಟ್‌ ಕಬಳಿಸುವುದು ನನ್ನ ಕೊನೆಯ ದೊಡ್ಡ ಕನಸು ಎಂದು ಆರ್‌ಸಿಬಿ ವೇಗಿ ಹರ್ಷಲ್‌ ಪಟೇಲ್ ಹೇಳಿದ್ದಾರೆ. ನಾನು ಈಗಾಗಲೇ ಕನಸಿಕ ವಿಕೆಟ್‌ಗಳನ್ನು ಕಬಳಿಸಿದ್ದೇನೆ. 2011ರಲ್ಲಿ ಸಚಿನ್ ತೆಂಡುಲ್ಕರ್ ವಿಕೆಟ್ ಪಡೆದಿದ್ದೇನೆ. ಇನ್ನು ಧೋನಿಯನ್ನು ಎರಡು ಬಾರಿ ಹಾಗೂ ವಿರಾಟ್ ಕೊಹ್ಲಿಯನ್ನು ಒಮ್ಮೆ ಪೆವಿಲಿಯನ್ನಿಗಟ್ಟಿದ್ದೇನೆ. ಈ ಮೂವರು ನನ್ನ ಕನಸಿಕ ವಿಕೆಟ್‌ಗಳಾಗಿದ್ದವು. ನನಗನಿಸಿದಂತೆ ಇನ್ನು ಮುಂದೆ ಭವಿಷ್ಯದಲ್ಲಿ ನಾನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ದ ಆಡುವ ಅವಕಾಶ ಸಿಗುವುದಿಲ್ಲವೇನೋ. ಒಂದು ವೇಳೆ ಅಂತರ ಅವಕಾಶ ಸಿಕ್ಕರೆ ಎಬಿ ಡಿವಿಲಿಯರ್ಸ್ ವಿಕೆಟ್‌ ಕಬಳಿಸಲು ಇಷ್ಟಪಡುತ್ತೇನೆ ಎಂದು ವೇಗಿ ಹರ್ಷಲ್‌ ಪಟೇಲ್‌ ಇಂಡಿಯಾ ಟಿವಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಎಬಿಡಿ ಅಭಿಮಾನಿಗಳಿಗೆ ಶಾಕ್‌; ಇನ್ ಯಾವತ್ತೂ ಆಫ್ರಿಕಾ ಪರ ಕ್ರಿಕೆಟ್ ಆಡೊಲ್ಲ ಮಿಸ್ಟರ್ 360..!

ಐಪಿಎಲ್‌ ಟೂರ್ನಿಯಲ್ಲಿ ಗಮನಾರ್ಹ ಪ್ರದರ್ಶನ ತೋರುವ ಮೂಲಕ ಹರ್ಷಲ್ ಪಟೇಲ್‌ ಟಿ20 ವಿಶ್ವಕಪ್‌ ಟೂರ್ನಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸುವ ಕನಸು ಕಾಣುತ್ತಿದ್ದಾರೆ. ಅಲ್ಲದೇ ಮುಂಬರುವ ಶ್ರೀಲಂಕಾ ವಿರುದ್ದ ಪ್ರವಾಸದಲ್ಲಿ ಟೀಂ ಇಂಡಿಯಾ ಸಿಕ್ಕಿದರೂ ಅಚ್ಚರಿ ಪಡಬೇಕಿಲ್ಲ.