Asianet Suvarna News Asianet Suvarna News

IPL 2021: ಕೆಕೆಆರ್‌ಗೆ 156 ರನ್ ಟಾರ್ಗೆಟ್ ನೀಡಿದ ಮುಂಬೈ ಇಂಡಿಯನ್ಸ್!

  • ಕೆಕೆಆರ್ ವಿರುದ್ಧ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ಮುಂಬೈ ವಿಫಲ
  • ಉತ್ತಮ ಆರಂಭ ಪಡೆದರೂ ಬಳಿಕ ದಿಢೀರ್ ಕುಸಿತ
  • ಕೆಕೆಆರ್‌ಗೆ 156 ರನ್ ಟಾರ್ಗೆಟ್ 
IPL 2021 quinton de kock help Mumabi Indians set 156 runs Target to  KKR in abu dhabi ckm
Author
Bengaluru, First Published Sep 23, 2021, 9:37 PM IST
  • Facebook
  • Twitter
  • Whatsapp

ಅಬು ಧಾಬಿ(ಸೆ.23): ಕೆಕೆಆರ್ ವಿರುದ್ಧ ಕ್ವಿಂಟನ್ ಡಿಕಾಕ್ ಅರ್ಧಶತಕ ಹಾಗೂ ನಾಯಕ ರೋಹಿತ್ ಶರ್ಮಾ ಸಿಡಿಸಿದ 33 ರನ್ ನೆರವಿನಿಂದ ಮುಂಬೈ ಇಂಡಿಯನ್ಸ್ 155 ರನ್ ಸಿಡಿಸಿದೆ. IPL 2021ರ 34ನೇ ಲೀಗ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ, ಕೆಕೆಆರ್‌ಗೆ 156 ರನ್ ಟಾರ್ಗೆಟ್ ನೀಡಿದೆ.  ಮುಂಬೈ ಇಂಡಿಯನ್ಸ್(Mumbai Indians) ಮಧ್ಯಮ ಕ್ರಮಾಂದ ಬ್ಯಾಟ್ಸ್‌ಮನ್ ಕುಸಿತದಿಂದ ಬೃಹತ್ ಮೊತ್ತ ಪೇರಿಸಲು ಸಾಧ್ಯವಾಗಿಲ್ಲ. ಕೆಕೆಆರ್(kolkata knight riders) ಅದ್ಬುತ ಬೌಲಿಂಗ್ ಮುಂಬೈ ಬ್ಯಾಟ್ಸ್‌ಮನ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನಕ್ಕೆ ಅವಕಾಶ ನೀಡಲಿಲ್ಲ.

 

INNINGS BREAK!

5⃣5⃣ for @QuinnyDeKock69
3⃣3⃣ for @ImRo45

2⃣ wickets each for @KKRiders' Lockie Ferguson & @prasidh43

The #KKR chase to begin shortly. #VIVOIPL #MIvKKR

Scorecard 👉 https://t.co/SVn8iKC4Hl pic.twitter.com/x3Y7VVTfYP

— IndianPremierLeague (@IPL) September 23, 2021

IPL 2021: ವಿಡಿಯೋ ಕಾಲ್ ಮೂಲಕ ಪ್ರತ್ಯಕ್ಷರಾಗಿ KBC ಸ್ಪರ್ಧಿಗೆ ಅಚ್ಚರಿ ನೀಡಿದ ರೋಹಿತ್ ಶರ್ಮಾ!

ಟಾಸ್ ಸೋತು ಬ್ಯಾಟಿಂಗ್ ಇಳಿದ ಮುಂಬೈ ಇಂಡಿಯನ್ಸ್‌ ಉತ್ತಮ ಆರಂಭ ಪಡೆಯಿತು. ನಾಯಕ ರೋಹಿತ್ ಶರ್ಮಾ(Rohit Sharma) ಹಾಗೂ ಕ್ವಿಂಟನ್ ಡಿಕಾಕ್ ಮೊದಲ ವಿಕೆಟ್‌ಗೆ 78 ರನ್ ಜೊತೆಯಾಟ ನೀಡಿದರು. ಮೊದಲ ಪಂದ್ಯದಲ್ಲಿ ವಿಶ್ರಾಂತಿ ಪಡೆದಿದ್ದ ರೋಹಿತ್ ಶರ್ಮಾ, ಎರಡನೇ ಪಂದ್ಯಕ್ಕೆ ತಂಡಕ್ಕೆ ಆಗಮಿಸಿದ್ದರು. ಆದರೆ 33 ರನ್ ಸಿಡಿಸಿ ರೋಹಿತ್ ವಿಕೆಟ್ ಕೈಚೆಲ್ಲಿದರು.

ಕ್ವಿಂಟನ್ ಡಿಕಾಕ್(quinton de kock) ಹೋರಾಟ ಮುಂದುವರಿಸಿದರು. ಆದರೆ ಮುಂಬೈ ಮಧ್ಯಮ ಕ್ರಮಾಂಕದಿಂದ ನಿರೀಕ್ಷಿತ ಹೋರಾಟ ಸಾಧ್ಯವಾಗಿಲ್ಲ. ಸೂರ್ಯಕುಮಾರ್ ಯಾದವ್ ಕೇವಲ 5 ರನ್ ಸಿಡಿಸಿ ಔಟಾದರು. ಯಾದವ್ ವಿಕೆಟ್ ಪತನ ಮುಂಬೈ ತಂಡಕ್ಕೆ ತೀವ್ರ ಹಿನ್ನಡ ತಂದಿತು. ಇನ್ನು ಇಶಾನ್ ಕಿಶನ್ ಕೇವಲ 14 ರನ್ ಸಿಡಿಸಿ ಔಟಾದರು.

119 ರನ್‌ಗಳಿಗೆ ಮುಂಬೈ ಇಂಡಿಯನ್ಸ್ 4 ವಿಕೆಟ್ ಕಳೆದುಕೊಂಡಿತು. ಆದರೆ ಕೀರನ್ ಪೋಲಾರ್ಡ್ ಹಾಗೂ ಕ್ರುನಾಲ್ ಪಾಂಡ್ಯ ಜೊತೆಯಾಟ ಮುಂಬೈ ಇಂಡಿಯನ್ಸ್ ತಂಡಕ್ಕೆ ಹೊಸ ಚೈತೈನ್ಯ ನೀಡಿತು. ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಯಲ್ಲಿ ಮುಂಬೈ ನಿಧಾನವಾಗಿ ಚೇತರಿಸಿಕೊಂಡಿತು. 

IPL 2021: ಸದ್ಯದಲ್ಲೇ RCB ನಾಯಕತ್ವದಿಂದ ಕೊಹ್ಲಿಗೆ ಕೊಕ್, ಮಾಜಿ ಕ್ರಿಕೆಟಿಗನಿಂದ ಹೊಸ ಬಾಂಬ್!

ಪೋಲಾರ್ಡ್ 21 ರನ್ ಸಿಡಿಸಿ ರನೌಟ್‌ಗೆ ಬಲಿಯಾದರು. ಇದರೊಂದಿಗೆ ಮುಂಬೈ ಆತಂಕ ಮತ್ತಷ್ಟು ಹೆಚ್ಚಾಯಿತು. ಪೊಲಾರ್ಡ್ ವಿಕೆಟ್ ಪತನದ ಬೆನ್ನಲ್ಲೇ ಕ್ರುನಾಲ್ ಪಾಂಡ್ಯ ನಿರ್ಗಮಿಸಿದರು. ಕ್ರುನಾಲ್ 12 ರನ್ ಸಿಡಿಸಿ ಔಟಾದರು. ಅಂತಿಮ ಹಂತದಲ್ಲಿ ಸೌರಬ್ ತಿವಾರಿ ಹಾಗೂ ಆ್ಯಡಮ್ ಮಿಲ್ನೆಗೆ ರನ್ ಗಳಿಸುವ ಹೆಚ್ಚಿನ ಅವಕಾಶ ಇರಲಿಲ್ಲ.

ಅಂತಿಮವಾಗಿ ಮುಂಬೈ ಇಂಡಿಯನ್ಸ್ 6 ವಿಕೆಟ್ ಕಳೆದುಕೊಂಡು 155 ರನ್ ಸಿಡಿಸಿತು. ಕೆಕೆಆರ್ ಪರ ಲ್ಯೂಕಿ ಫರ್ಗ್ಯೂಸನ್ 2, ಕನ್ನಡಿಗ ಪ್ರಸಿದ್ಧ್ ಕೃಷ್ಣ 2 ಹಾಗೂ ಸುನಿಲ್ ನರೈನ್  1 ವಿಕೆಟ್ ಕಬಳಿಸಿದರು. 

IPL 2021; ಗೆದ್ದು ಬೀಗಿದ ಡೆಲ್ಲಿಗೆ ಮತ್ತೆ ಅಗ್ರ ಸ್ಥಾನ, ನಾಯಕ ಬದಲಾದರೂ ತಪ್ಪದ ಸೋಲು!

ಮುಂಬೈ ಇಂಡಿಯನ್ಸ್:
IPL 2021ರಲ್ಲಿ ಮುಂಬೈ ಇಂಡಿಯನ್ಸ್ ಅಡಿದ 8 ಪಂದ್ಯದಲ್ಲಿ 4 ಗೆಲುವು ಕಂಡಿದೆ. ಇನ್ನು 4 ಪಂದ್ಯದಲ್ಲಿ ಸೋಲು ಕಂಡಿದೆ. 8 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದೆ. ಐಪಿಎಲ್ ಎರಡನೇ ಭಾಗ ಆರಂಭದಲ್ಲೇ ಮುಂಬೈ ಇಂಡಿಯನ್ಸ್ ಮುಗ್ಗರಿಸಿದೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಸೋಲು ಕಂಡಿದೆ. ಇದೀಗ ಕೆಕೆಆರ್ ವಿರುದ್ಧ ಗೆಲುವು ಸಾಧಿಸಿ ಪ್ಲೇ ಆಫ್ ಹಾದಿ ಸುಗಮಗೊಳಿಸುವ ತವಕದಲ್ಲಿದೆ.

ಕೋಲ್ಕತಾ ನೈಟ್ ರೈಡರ್ಸ್:
ಐಪಿಎಲ್ 2021 ಮೊದಲ ಭಾಗದಲ್ಲಿ ಹೀನಾಯ ಪ್ರದರ್ಶನ ನೀಡಿದ್ದ ಕೆಕೆಆರ್, ಎರಡನೇ ಭಾಗದಲ್ಲಿ ದಿಟ್ಟ ಹೋರಾಟ ಮೂಲಕ ಗೆಲುವಿನ ಹಾದಿಯಲ್ಲಿದೆ. ರಾಯಲ್ ಚಾಲೆಂಜರ್ಸ್ ವಿರುದ್ದ ದುಬೈನಲ್ಲಿ ನಡೆದ ಪಂದ್ಯದಲ್ಲಿ ಭರ್ಜರಿ ಗೆಲುವು ಕಂಡಿದೆ. ಕೆಕೆಆರ್ ಆಡಿದ 8 ಪಂದ್ಯದಲ್ಲಿ 3 ಗೆಲುವು ಹಾಗೂ 5 ಸೋಲು ಕಂಡಿದೆ. ಈ ಮೂಲಕ 6 ಅಂಕದೊಂದಿದೆ 6ನೇ ಸ್ಥಾನದಲ್ಲಿದೆ.

Follow Us:
Download App:
  • android
  • ios