Asianet Suvarna News Asianet Suvarna News

IPL 2021: ರುತುರಾಜ್‌ಗೆ ಆರೇಂಜ್, ಹರ್ಷಲ್ ಪಟೇಲ್‌ಗೆ ಪರ್ಪಲ್ ಕ್ಯಾಪ್, ಯಾರ‍್ಯಾರಿಗೆ ಪ್ರಶಸ್ತಿ?

  • IPL 2021 ಚಾಂಪಿಯನ್ ಪ್ರಶಸ್ತಿ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್
  • ರುತುರಾಜ್ ಗಾಯಕ್ವಾಡ್‌ಗೆ ಆರೇಂಜ್ ಕ್ಯಾಪ್, 
  • ಪ್ರಶಸ್ತಿ ಗೆದ್ದ ಸಂಪೂರ್ಣ ಆಟಗಾರರ ವಿವರ ಇಲ್ಲಿದೆ
IPL 2021 Orange cap to Maximum Sixes award full list of awards and prize money ckm
Author
Bengaluru, First Published Oct 16, 2021, 12:39 AM IST

ದುಬೈ(ಅ.15): IPL 2021ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್(Chennai Super Kings) ಚಾಂಪಿಯನ್ ಆಗಿ ಹೊರಹೊಮ್ಮಿದೆ. ಕೋಲ್ಕತಾ ನೈಟ್ ರೈಡರ್ಸ್(Kolkata Knight Riders) ವಿರುದ್ಧದ ಫೈನಲ್(Final) ಪಂದ್ಯದಲ್ಲಿ ಧೋನಿ ಸೈನ್ಯ 27 ರನ್ ಗೆಲುವು ಸಾಧಿಸಿದೆ. ಈ ಮೂಲಕ 4ನೇ ಬಾರಿಗೆ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಟ್ರೋಫಿ ಗೆದ್ದುಕೊಂಡಿದೆ. ಟ್ರೋಫಿ ಗೆದ್ದ ಚೆನ್ನೈ 20 ಕೋಟಿ ರೂಪಾಯಿ ಬಹುಮಾನ ಗೆದ್ದುಕೊಂಡಿದೆ. ಇದರೊಂದಿಗೆ ಚೆನ್ನೈ ತಂಡದ ರುತರಾಜ್ ಗಾಯಕ್ವಾಡ್(Ruturaj Gaikwad) ಸೇರಿದಂತೆ ಪ್ರಶಸ್ತಿ ಗೆದ್ದ ಕ್ರಿಕೆಟಿಗರ ಲಿಸ್ಟ್ ಇಲ್ಲಿದೆ.

IPL 2021; ಚಾಂಪಿಯನ್ ಕಿರೀಟ ಮುಡಿಗೇರಿಸಿದ CSK; ಧೋನಿ ಸೈನ್ಯಕ್ಕೆ 4ನೇ ಟ್ರೋಫಿ!

ಆರೇಂಜ್ ಕ್ಯಾಪ್ ಪ್ರಶಸ್ತಿ: ರುತುರಾಜ್ ಗಾಯಕ್ವಾಡ್(CSK)
16 ಪಂದ್ಯದಿಂದ 635 ರನ್, 1 ಶತಕ ಹಾಗೂ 4 ಅರ್ಧಶತಕ

 

ಪರ್ಪಲ್ ಕ್ಯಾಪ್ ಪ್ರಶಸ್ತಿ: ಹರ್ಷಲ್ ಪಟೇಲ್(RCB) 32 ವಿಕೆಟ್
ಬ್ರಾವೋ ಜೊತೆ ಸ್ಥಾನ ಹಂಚಿಕೊಂಡ ಪಟೇಲ್

ಪವರ್ ಪ್ಲೇಯರ್ ಆಫ್ ದಿ ಸೀಸನ್: 
ವೆಂಕಟೇಶ್ ಅಯ್ಯರ್

ಗರಿಷ್ಠ ಸಿಕ್ಸರ್: ಕೆಎಲ್ ರಾಹುಲ್(ಪಂಜಾಬ್) 30 ಸಿಕ್ಸರ್

ಗೇಮ್ ಚೇಂಜರ್ ಆಫ್ ದಿ ಸೀಸನ್: ಹರ್ಷಲ್ ಪಟೇಲ್(RCB)

ಸೂಪರ್ ಸ್ಟೈಕರ್ ಆಫ್ ದಿ ಸೀನಸ್: ಶಿಮ್ರೊನ್ ಹೆಟ್ಮೆಯರ್- ಸ್ಟ್ರೈಕ್ ರೇಟ್  168

IPL 2021 Final:ಕೆಎಲ್ ರಾಹುಲ್ ದಾಖಲೆ ಮುರಿದು ಇತಿಹಾಸ ರಚಿಸಿದ ರುತುರಾಜ್!

ಕ್ಯಾಚ್ ಆಫ್ ದಿ ಸೀಸನ್: ರವಿ ಬಿಶ್ನೋಯ್

ಫೇರ್ ಪ್ಲೇ ಪ್ರಶಸ್ತಿ: ರಾಜಸ್ಥಾನ ರಾಯಲ್ಸ್

ಎಮರ್ಜಿಂಗ್ ಪ್ಲೇಯರ್ ಆಫ್ ದಿ ಸೀಸನ್: ರುತುರಾಜ್ ಗಾಯಕ್ವಾಡ್

ಎಂ.ಎಸ್.ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ 4ನೇ ಬಾರಿಗೆ ಟ್ರೋಫಿ ಗೆದ್ದುಕೊಂಡಿದೆ. ಚೆನ್ನೈ ಟ್ರೋಪಿ ಲಿಸ್ಟ್ ಇಲ್ಲಿದೆ.
2010= ಚೆನ್ನೈ ಸೂಪರ್ ಕಿಂಗ್ಸ್
2011= ಚೆನ್ನೈ ಸೂಪರ್ ಕಿಂಗ್ಸ್
2018= ಚೆನ್ನೈ ಸೂಪರ್ ಕಿಂಗ್ಸ್
2021= ಚೆನ್ನೈ ಸೂಪರ್ ಕಿಂಗ್ಸ್

 

2020ರ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಲೀಗ್ ಹಂತದಿಂದಲೇ ಹೊರಬಿದ್ದಿತ್ತು. ಕಳೆದ ಆವೃತ್ತಿಯಲ್ಲೇ ಧೋನಿ, ಕಮ್‌ಬ್ಯಾಕ್ ಮಾಡಲಿದ್ದೇವೆ ಎಂದಿದ್ದರು. ಇದೀಗ ಭರ್ಜರಿಯಾಗಿ ಕಮ್‍‌ಬ್ಯಾಕ್ ಮಾಡಿ ಪ್ರಶಸ್ತಿ ಗೆದ್ದುಕೊಂಡಿದೆ.

ಫೈನಲ್ ಪಂದ್ಯ:
IPL 2021ರ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 3 ವಿಕೆಟ್ ನಷ್ಟಕ್ಕೆ 192 ರನ್ ಸಿಡಿಸಿತ್ತು. ರುತುರಾಜ್ ಗಾಯಕ್ವಾಡ್ 32, ಫಾಫ್ ಡುಪ್ಲೆಸಿಸ್ 86 ರನ್, ಕನ್ನಡಿಗ ರಾಬಿನ್ ಉತ್ತಪ್ಪ 31 ಹಾಗೂ ಮೊಯಿನ್ ಆಲಿ 37 ರನ್ ಸಿಡಿಸಿದ್ದರು. ಈ ಮೂಲಕ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ 193 ರನ್ ಟಾರ್ಗೆಟ್ ನೀಡಲಾಯಿತು.

ಕೋಲ್ಕತಾ ನೈಟ್ ರೈಡರ್ಸ್ ಪರ ಶುಭಮನ್ ಗಿಲ್ ಹಾಗೂ ವೆಂಕಟೇಶ್ ಅಯ್ಯರ್ ತಲಾ ಅರ್ಧಶತಕ ಸಿಡಿಸಿ ಮಿಂಚಿದರು. ಆದರೆ ಇತರರಿಂದ ನಿರೀಕ್ಷಿತ ಹೋರಾಟ ಕಂಡುಬರಲಿಲ್ಲ. ಅಯ್ಯರ್ 50 ಹಾಗೂ ಗಿಲ್ 51 ರನ್ ಸಿಡಿಸಿ ಔಟಾದ ಬಳಿಕ ಕೆಕೆಆರ್ ದಿಢೀರ್ ವಿಕೆಟ್ ಕಳೆದುಕೊಂಡಿತು. ಬಳಿಕ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 165 ರನ್ ಸಿಡಿಸಿತು. ಚೆನ್ನೈ 27 ರನ್ ಗೆಲುವು ಸಾಧಿಸಿತು. 
 

 

Follow Us:
Download App:
  • android
  • ios