ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ ಎಚ್ಚರಿಕೆ ಬ್ಯಾಟಿಂಗ್ ಪ್ರದರ್ಶನ ನೀಡಿತು.  ಪರಿಣಾಮ ವಿಕೆಟ್ ಉರುಳಲಿಲ್ಲ, ಕೊನೆಯ ಹಂತದಲ್ಲಿ  ವಿಲಿಯಮ್ಸನ್ ಹೋರಾಟದಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸ್ಪರ್ಧಾತ್ಮಕ ಟಾರ್ಗೆಟ್ ನೀಡಿದೆ.

ದೆಹಲಿ(ಏ.28): ಡೇವಿಡ್ ವಾರ್ನರ್ ಹಾಗೂ ಮನೀಶ್ ಪಾಂಡೆ ಹೋರಾಟ ಕುಸಿದ ಸನ್‌ರೈಸರ್ಸ್ ತಂಡಕ್ಕೆ ಆಸರೆಯಾಯಿತು. ಆದರೆ ಸ್ಟ್ರೈಕ್ ರೇಟ್ ಹೆಚ್ಚಿರಲಿಲ್ಲ. ಅಂತಿಮ ಹಂತದಲ್ಲಿ ಕೇನ್ ವಿಲಿಯಮ್ಸನ್ ಬ್ಯಾಟಿಂಗ್ ಪದರ್ಶನದಿಂದ ಸನ್‌ರೈರ್ಸಸ್ ಹೈದರಾಬಾದ್ 3 ವಿಕೆಟ್ ಕಳೆದುಕೊಂಡು 171 ರನ್ ಸಿಡಿಸಿತು. 

Add Asianetnews Kannada as a Preferred SourcegooglePreferred

ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಹೈದರಾಬಾದ್ ಆರಂಭದಲ್ಲಿ ಜಾನಿ ಬೈರ್‌ಸ್ಟೋ ವಿಕೆಟ್ ಕಳೆದುಕೊಂಡಿತು. ಆದರೆ ನಾಯಕ ಡೇವಿಡ್ ವಾರ್ನರ್ ಹಾಗೂ ಕನ್ನಡಿಗ ಮನೀಶ್ ಪಾಂಡೆ ಜೊತೆಯಾಟ ಹೈದರಾಬಾದ್ ತಂಡಕ್ಕೆ ಚೇತರಿಕೆ ನೀಡಿತು. ವಾರ್ನರ್ 103 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದರೆ, ಪಾಂಡೆ 132ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದರು

ವಾರ್ನರ್ ಹಾಗೂ ಪಾಂಡೆ ಹಾಫ್ ಸೆಂಚುರಿ ಸಿಡಿಸಿ ಸಂಭ್ರಮಿಸಿದರು. ಆದರೆ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ಇರಲಿಲ್ಲ. ವಾರ್ನರ್ 57 ರನ್ ಸಿಡಿಸಿ ಔಟಾದರೆ, ಪಾಂಡೆ 61 ರನ್ ಸಿಡಿಸಿ ನಿರ್ಗಮಿಸಿದರು. 

ಅಂತಿಮ ಹಂತದಲ್ಲಿ ಕೇನ್ ವಿಲಿಯಮ್ಸನ್ 10 ಎಸೆತದಲ್ಲಿ ಅಜೇಯ 26 ಹಾಗೂ ಕೇದಾರ್ ಜಾಧವ್ ಅಜೇಯ 12 ರನ್ ಸಿಡಿಸಿದರು. ಈ ಮೂಲಕ ಹೈದರಾಬಾದ್ 3 ವಿಕೆಟ್ ಕಳೆದುಕೊಂಡು 171 ರನ್ ಸಿಡಿಸಿತು.