Asianet Suvarna News Asianet Suvarna News

ಕೇವಲ 4 ರನ್‌ ಬಾರಿಸಿದರೂ ಅಪರೂಪದ ದಾಖಲೆ ಬರೆದ ಕೆ.ಎಲ್‌. ರಾಹುಲ್‌..!

ಸನ್‌ರೈಸರ್ಸ್ ಹೈದರಾಬಾದ್‌ ವಿರುದ್ದದ ಪಂದ್ಯದಲ್ಲಿ ಕೆ,ಎಲ್‌ ರಾಹುಲ್ ಕೇವಲ 4 ರನ್‌ ಬಾರಿಸಿ ವಿಕೆಟ್‌ ಒಪ್ಪಿಸಿದರೂ ಅಪರೂಪದ ದಾಖಲೆ ಬರೆದಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

IPL 2021 KL Rahul Second Fastest Cricketer to Completes 5000 runs in T20 Cricket kvn
Author
Chennai, First Published Apr 21, 2021, 4:44 PM IST

ಚೆನ್ನೈ(ಏ.21): 14ನೇ ಆವೃತ್ತಿಯ ಐಪಿಎಲ್ ಟೂರ್ನಿಯ 14ನೇ ಪಂದ್ಯದಲ್ಲಿಂದು ಪಂಜಾಬ್‌ ಕಿಂಗ್ಸ್‌ ಹಾಗೂ ಸನ್‌ರೈಸರ್ಸ್‌ ಹೈದರಾಬಾದ್ ತಂಡಗಳಿಂದು ಮುಖಾಮುಖಿಯಾಗಿದ್ದು, ಟಾಸ್ ಗೆದ್ದು ಪಂಜಾಬ್‌ ಬ್ಯಾಟಿಂಗ್ ಆಯ್ದುಕೊಂಡಿದೆ.

ಇನಿಂಗ್ಸ್‌ ಆರಂಭಿಸಿದ ಪಂಜಾಬ್ ಕಿಂಗ್ಸ್‌ ನಾಯಕ ಕೆ.ಎಲ್‌. ರಾಹುಲ್ ಕೇವಲ 4 ರನ್‌ ಬಾರಿಸಿ ಭುವನೇಶ್ವರ್ ಕುಮಾರ್‌ಗೆ ವಿಕೆಟ್‌ ಒಪ್ಪಿಸಿ ಪೆವಿಲಿಯನ್ ಸೇರಿದರು. ಆದರೆ ರಾಹುಲ್‌ ವಿಕೆಟ್‌ ಒಪ್ಪಿಸುವ ಮುನ್ನವೇ ಟಿ20 ಕ್ರಿಕೆಟ್‌ನಲ್ಲಿ ಅತಿವೇಗವಾಗಿ 5 ಸಾವಿರ ರನ್ ಪೂರೈಸಿದ ಏಷ್ಯಾದ ಮೊದಲ ಹಾಗೂ ಒಟ್ಟಾರೆ ಎರಡನೇ ಬ್ಯಾಟ್ಸ್‌ಮನ್ ಎನ್ನುವ ಕೀರ್ತಿಗೆ ಪಾತ್ರರಾಗಿದ್ದಾರೆ. 

ಐಪಿಎಲ್‌ 2021: ಸನ್‌ರೈಸರ್ಸ್ ಎದುರು ಟಾಸ್‌ ಗೆದ್ದ ಪಂಜಾಬ್‌ ಬ್ಯಾಟಿಂಗ್ ಅಯ್ಕೆ

ಕೆ.ಎಲ್‌. ರಾಹುಲ್‌ ಕೇವಲ 143 ಟಿ20 ಇನಿಂಗ್ಸ್‌ಗಳನ್ನಾಡಿ 5 ಸಾವಿರ ರನ್‌ ಪೂರೈಸುವ ಮೂಲಕ ಶಾನ್‌ ಮಾರ್ಶ್‌ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ಯೂನಿವರ್ಸಲ್‌ ಬಾಸ್ ಖ್ಯಾತಿಯ ಕ್ರಿಸ್‌ ಗೇಲ್‌ ಕೇವಲ 132 ಇನಿಂಗ್ಸ್‌ಗಳಲ್ಲಿ 5 ಸಾವಿರ ರನ್‌ ಬಾರಿಸುವ ಮೂಲಕ ಅತಿವೇಗವಾಗಿ ಈ ಸಾಧನೆ ಮಾಡಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್‌ ಎನ್ನುವ ದಾಖಲೆ ಬರೆದಿದ್ದಾರೆ.

ಅತಿವೇಗವಾಗಿ 5 ಸಾವಿರ ರನ್‌ ಬಾರಿಸಿದ ಟಾಪ್‌ 5 ಬ್ಯಾಟ್ಸ್‌ಮನ್‌ಗಳಿವರು

1. ಕ್ರಿಸ್‌ ಗೇಲ್‌: 132 ಇನಿಂಗ್ಸ್
2. ಕೆ.ಎಲ್ ರಾಹುಲ್: 143 ಇನಿಂಗ್ಸ್
3. ಶಾನ್ ಮಾರ್ಶ್‌: 114 ಇನಿಂಗ್ಸ್
4. ಬಾಬರ್ ಅಜಂ: 145 ಇನಿಂಗ್ಸ್
5. ಆರೋನ್ ಫಿಂಚ್: 159 ಇನಿಂಗ್ಸ್

Follow Us:
Download App:
  • android
  • ios