Asianet Suvarna News Asianet Suvarna News

IPL 2021:ಅಂತಿಮ ಹಂತದಲ್ಲಿ ಪಂದ್ಯ ಕೈಚೆಲ್ಲಿದ ಪಂಜಾಬ್, ರಾಜಸ್ಥಾನಕ್ಕೆ 2 ರನ್ ರೋಚಕ ಗೆಲುವು!

  • ಗೆಲ್ಲೋ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್‌ಗೆ ಸೋಲು
  • ರಾಜಸ್ಥಾನ ಹೋರಾಟಕ್ಕೆ ಬಾಲ ಮುದುಡಿದ ಪಂಜಾಬ್
  • ರಾಜಸ್ಥಾನ ರಾಯಲ್ಸ್‌ಗೆ 2 ರನ್ ರೋಚಕ ಗೆಲುವು
  • ದುಬೈನಲ್ಲಿ ನಡೆದ IPL 2021 ಲೀಗ್ ಪಂದ್ಯ
IPL 2021 Kartik Tyagi helpsRajasthan royals to defeat Punjab kings by  2 runs ckm
Author
Bengaluru, First Published Sep 21, 2021, 11:49 PM IST
  • Facebook
  • Twitter
  • Whatsapp

ದುಬೈ(ಸೆ.21): ಅಂತಿಮ ಹಂತದಲ್ಲಿ ಪಂದ್ಯ ಕೈಚೆಲ್ಲುವ ಚಾಳಿಯನ್ನು ಪಂಜಾಬ್ ಕಿಂಗ್ಸ್(Punjab Kings) ಮುಂದುವರಿಸಿದೆ. ಕಾರಣ ಅಂತಿಮ 12 ಎಸೆತದಲ್ಲಿ ಪಂಜಾಬ್ ಗೆಲುವಿಗೆ 8 ರನ್ ಅವಶ್ಯಕತೆ ಇತ್ತು. 8 ವಿಕೆಟ್ ಕೂಡ ಕೈಯಲ್ಲಿತ್ತು. ಆದರೆ ಪಂಜಾಬ್ ಗೆಲುವು ಸಾಧಿಸಲಿಲ್ಲ. ಕೊನೆಯ ಎರಡು ಓವರ್‌ನಲ್ಲಿ ಮ್ಯಾಜಿಕ್ ಮಾಡಿದ ರಾಜಸ್ಥಾನ ರಾಯಲ್ಸ್(Rajasthan Royals)  2 ರನ್ ರೋಚಕ ಗೆಲುವು ಕಂಡಿದೆ. ಈ ಮೂಲಕ ರಾಜಸ್ಥಾನ ರಾಯಲ್ಸ್ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ. ಇತ್ತ ಪಂಜಾಬ್ 7ನೇ ಸ್ಥಾನದಲ್ಲೇ ಉಳಿದುಕೊಂಡಿದೆ.

IPL 2021; ಆರ್‌ಸಿಬಿ ನಾಯಕತ್ವ ತ್ಯಜಿಸಲು ಪತ್ನಿ ಅನುಷ್ಕಾ ಕಾರಣ?ಸ್ಟೇನ್ ಸ್ಫೋಟಕ ಹೇಳಿಕೆ!

IPL 2021ರ 32ನೇ ಲೀಗ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಗೆಲುವಿಗೆ 186 ರನ್ ಟಾರ್ಗೆಟ್ ಪಡೆದಿತ್ತು. ದುಬೈ(Dubai) ಕ್ರೀಡಾಂಗಣದಲ್ಲಿ ಇದು ಉತ್ತಮ ಹಾಗೂ ಬೃಹತ್ ಮೊತ್ತವೇ ಸರಿ. ಆದರೆ ನಾಯಕ ಕೆಎಲ್ ರಾಹುಲ್ ಹಾಗೂ ಮತ್ತೊರ್ವ ಕನ್ನಡಿಗ ಮಯಾಂಕ್ ಅಗರ್ವಾಲ್ ಉತ್ತಮ ಆರಂಭ, ಪಂಜಾಬ್ ತಂಡದ ಆತ್ಮವಿಶ್ವಾಸ ಹೆಚ್ಚಿಸಿತು. 

 

ಕೆಎಲ್ ರಾಹುಲ್(KL Rahul) ಹಾಗೂ ಮಯಾಂಕ್ ಅಗರ್ವಾಲ್ ಮೊದಲ ವಿಕೆಟ್‌ಗೆ 120 ರನ್ ಜೊತೆಯಾಟ ಆಡಿದರು. ಐಪಿಎಲ್ ಎರಡನೇ ಭಾಗದಲ್ಲಿ ಇದು ಅತ್ಯುತ್ತಮ ಆರಂಭಿಕ ಜೊತೆಯಾಟವಾಗಿದೆ. ರಾಹುಲ್ ಹಾಗೂ ಮಯಾಂಕ ಅವರ 5ನೇ ಐಪಿಎಲ್ ಶತಕದ ಜೊತೆಯಾಚ ಅನ್ನೋ ಹೆಗ್ಗಳಿಕೆಗೂ ಪಾತ್ರವಾಯಿತು.

ಮಯಾಂಕ್ ಅಗರ್ವಾಲ್(Mayank Agarwal) ಆಕರ್ಷಕ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು. ಆದರೆ ಕೆಎಲ್ ರಾಹುಲ್ ಕೇವಲ 1 ರನ್‌ಗಳಿಂದ ಅರ್ಧಶತಕ ಮಿಸ್ ಮಾಡಿಕೊಂಡಿರು. ಕೆಎಲ್ ರಾಹುಲ್ 49 ರನ್ ಸಿಡಿಸಿ ಔಟಾದರು. ಇದರ ಬೆನ್ನಲ್ಲೇ 67 ರನ್ ಸಿಡಿಸಿದ ಮಯಾಂಕ್ ಅಗರ್ವಾಲ್ ವಿಕೆಟ್ ಪತನಗೊಂಡಿತು.

ಆಫ್ಘಾನ್ ಜನತೆಗಿದ್ದ ಕೊನೆಯ ಹಾಗೂ ಏಕೈಕ ಮನರಂಜನೆ IPL ಪ್ರಸಾರ ಬ್ಯಾನ್ ಮಾಡಿದ ತಾಲಿಬಾನ್!

ಎರಡು ವಿಕೆಟ್ ಕಳೆದುಕೊಂಡ ಪಂಜಾಬ್ ತಂಡದಲ್ಲಿ ಆತಂಕ ವಾತಾವರಣ ನಿರ್ಮಾಣವಾಯಿತು. ಆ್ಯಡಿನ್ ಮರ್ಕ್ರಾಮ್ ಹಾಗೂ ನಿಕೋಲಸ್ ಪೂರನ್ ಜೊತೆಯಾಟ ಪಂಜಾಬ್ ಆತಂಕ ದೂರ ಮಾಡಿತು. ಇವರಿಬ್ಬರ ಜೊತೆಯಾಟ ರಾಜಸ್ಥಾನ ರಾಯಲ್ಸ್ ತಂಡದ ಸಂಕಷ್ಟ ಹೆಚ್ಚಿಸಿತು.  ಪೂರನ್ ಹಾಗೂ ಆ್ಯಡಿನ್ ಅರ್ಧಶತದ ಜೊತೆಯಾಟ ಆಡಿದರು.

ಪಂಜಾಬ್ ಗೆಲುವಿಗೆ ಅಂತಿಮ 12 ಎಸೆತದಲ್ಲಿ 8 ರನ್ ಅವಶ್ಯಕತೆ ಇತ್ತು. ಅಂತಿಮ ಓವರ್‌ನಲ್ಲಿ 32 ರನ್ ಸಿಡಿಸಿದ ಪೂರನ್ ವಿಕೆಟ್ ಪತನಗೊಂಡಿತು. ಈ ವೇಳೆ ಪಂಜಾಬ್ ಗೆಲುವಿಗೆ 3 ಎಸೆತದಲ್ಲಿ 3 ರನ್ ಅವಶ್ಯಕತೆ ಇತ್ತು. ನಂತ್ರ ಕಣಕ್ಕಿಳಿದ ದೀಪ್ ಹೂಡ ರನ್ ಸಿಡಿಸಲು ಸಾಧ್ಯವಾಗಲಿಲ್ಲ. 5ನೇ ಎಸೆತದಲ್ಲಿ ಹೂಡ ವಿಕೆಟ್ ಪತನಗೊಂಡಿತು.  ಇತ್ತ ರಾಜಸ್ಥಾನ ತಂಡದಲ್ಲಿ ಸಣ್ಣದೊಂದು ಗೆಲುವಿನ ಆಸೆ ಚಿಗುರಿತು. 

 

ಅಂತಿಮ 1 ಎಸೆತದಲ್ಲಿ ಪಂಜಾಬ್ ಗೆಲುವಿಗೆ 3 ರನ್ ಬೇಕಿತ್ತು. ಅಂತಿಮ ಹಂತದಲ್ಲಿ ಪಂದ್ಯ ಕೈಚೆಲ್ಲುವ ಪಂಜಾಬ್  ಚಾಳಿ ಮತ್ತೆ ವಕ್ಕರಿಸಿದಂತೆ ಕಾಣತೊಡಗಿತು. ಫ್ಯಾಬಿಯನ್ ಅಲೆನ್ ಕ್ರೀಸ್‌ಗಿಳಿದರೂ, ಕಾರ್ತಿಕ್ ತ್ಯಾಗಿ(Kartik Tyagi) ಎಸೆತದಲ್ಲಿ ರನ್ ಕಬಳಿಸಲು ಸಾಧ್ಯವಾಗಲಿಲ್ಲ. ಪರಿಣಾಮವಾಗಿ ರಾಜಸ್ಥಾನ ರಾಯಲ್ಸ್ 2 ರನ್ ರೋಚಕ ಗೆಲುವು ಕಂಡಿತು.  ಪಂಜಾಬ್ 4 ವಿಕೆಟ್ ನಷ್ಟಕ್ಕೆ 184 ರನ್ ಸಿಡಿಸಿ ಸೋಲೋಪ್ಪಿಕೊಂಡಿತು.

ಪಂಜಾಬ್ ತಂಡ ಈ ರೀತಿ ಪಂದ್ಯ ಸೋಲುತ್ತಿರುವುದು ಇದು ಮೊದಲಲ್ಲ. ಇನ್ನು ಪಂಜಾಬ್ ತಂಡಕ್ಕೆ ಗೆಲುವು ದಕ್ಕಿರುವುದು ಕೂಡ ಅಂತಿಮ ಹಂತದಲ್ಲಿ. ದಾಖಲೆ ರನ್ ಗಳಿಸಿ ಅಂತರದ ಗೆಲುವಿನ ಬದಲು ಪ್ರಯಾಸದ ಗೆಲುವು ಕಂಡಿದೆ. ಇಂದು ಗೆಲ್ಲುವ ಪಂದ್ಯ ಕೈಚೆಲ್ಲಿದೆ. ಇಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಹೋರಾಟಕ್ಕೆ ಅಭಿಮಾನಿಗಳು ಭೇಷ್ ಎಂದಿದ್ದಾರೆ.

Follow Us:
Download App:
  • android
  • ios