ಐಪಿಎಲ್ ಟೂರ್ನಿ ಆರಂಭಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಇದರ ನಡುವೆ ಸನ್‌ರೈಸರ್ಸ್ ಹೈದರಾಬಾದ್ ತಂಡದ ಮಿಚೆಲ್ ಮಾರ್ಶ್ ವೈಯುಕ್ತಿ ಕಾರಣ ನೀಡಿ ಟೂರ್ನಿಯಿಂದ ಹೊರಗುಳಿದ್ದಾರೆ. ಇದರ ಬೆನ್ನಲ್ಲೇ ಸನ್‌ರೈಸರ್ಸ್ ಹೈದರಾಬಾದ್ ತಂಡ ಇಂಗ್ಲೆಂಡ್ ಆರಂಭಿಕ ಬ್ಯಾಟ್ಸ್‌ಮನ್ ಸೇರ್ಪಡೆಗೊಳಿಸಿದೆ.

ನವದೆಹಲಿ(ಮಾ.31): ಐಪಿಎಲ್ ಟೂರ್ನಿಗೆ ತಯಾರಿ ಬಹುತೇಕ ಪೂರ್ಣಗೊಂಡಿದೆ. ಎಪ್ರಿಲ್ 9 ರಿಂದ ಟೂರ್ನಿ ಆರಂಭಗೊಳ್ಳುತ್ತಿದೆ. 8 ಫ್ರಾಂಚೈಸಿಗಳು ತರಬೇತಿ ಶಿಬಿರ ಸೇರಿದಂತೆ ಭರ್ಜರಿ ತಯಾರಿ ಆರಂಭಿಸಿದೆ. ಇದರ ನಡುವೆ ಸನ್‌ರೈಸರ್ಸ್ ಹೈದರಾಬಾದ್ ತಂಡದ ಮಿಚೆಲ್ ಮಾರ್ಶ್ ವೈಯುಕ್ತಿ ಕಾರಣ ನೀಡಿದ ಐಪಿಎಲ್ ಟೂರ್ನಿಯಿಂದ ಹೊರಗುಳಿದಿದ್ದಾರೆ.

IPL 2021: ಎಪ್ರಿಲ್ 1ಕ್ಕೆ RCB ತರಬೇತಿ ಶಿಬಿರ ಸೇರಿಕೊಳ್ಳಲಿದ್ದಾರೆ ಕೊಹ್ಲಿ!

ಮಾರ್ಶ್ ಹೊರಗುಳಿದ ಬೆನ್ನಲ್ಲೇ ಸೈನ್‌ರೈಸರ್ಸ್ ಹೈದರಾಬಾದ್ ತಂಡ ಇಂಗ್ಲೆಂಡ್ ಆರಂಭಿಕ ಬ್ಯಾಟ್ಸ್‌ಮನ್ ಜೇಸನ್ ರಾಯ್ ತಂಡಕ್ಕೆ ಸೇರ್ಪಡೆ ಮಾಡಿದೆ. ಈ ಕುರಿತು ಸನ್‌ರೈಸರ್ಸ್ ಹೈದರಾಬಾದ್ ತಂಡ, ಟ್ವೀಟ್ ಮಾಡಿದೆ. ಇಷ್ಟೇ ಅಲ್ಲ ಜೇಸನ್ ರಾಯ್‌ಗೆ ಆತ್ಮೀಯ ಸ್ವಾಗತ ಕೋರಿದೆ. 

Scroll to load tweet…

2020ರ ಐಪಿಎಲ್ ಟೂರ್ನಿ ಆರಂಭದಲ್ಲೇ ಮಿಶಲ್ ಮಾರ್ಶ್ ಗಾಯಕ್ಕೆ ತುತ್ತಾಗಿದ್ದರು. ಹೀಗಾಗಿ 2020ರ ಐಪಿಎಲ್ ಟೂರ್ನಿಯಿಂದ ಮಾರ್ಶ್ ಹೊರಗುಳಿಯಬೇಕಾಯಿತು. 2010ರಿಂದ ಐಪಿಎಲ್ ಟೂರ್ನಿ ಆಡುತ್ತಿರುವ ಮಾರ್ಶ್ 21 ಪಂದ್ಯ ಆಡಿದ್ದಾರೆ. ಇನ್ನು ಜೇಸನ್ ರಾಯ್ 2017ರಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದಾರೆ.