Asianet Suvarna News Asianet Suvarna News

IPL 2021 ಟ್ರೆಡಿಂಗ್ ಲಿಸ್ಟ್‌ನಲ್ಲಿ#Dhoni ಟಾಪ್, ನಾಯಕನ ನೋಡಲು ಫ್ಯಾನ್ಸ್ ಕಾತರ!

  • IPL 2021 ಯುಎಇ ಚರಣ ಇಂದಿನಿಂದ ಆರಂಭಗೊಳ್ಳುತ್ತಿದೆ
  • ಎರಡನೇ ಭಾಗದದ ಮೊದಲ ಪಂದ್ಯದಲ್ಲಿ ಚೆನ್ನೈ ಹಾಗೂ ಮುಂಬೈ ಹೋರಾಟ
  • ಸಾಮಾಜಿಕ ಜಾಲತಾಣದಲ್ಲಿ  MS Dhoni ಟ್ರೆಂಡಿಂಗ್
IPL 2021 Dhoni trending on social media ahead of CSK vs Mumbai Indians clash dubai ckm
Author
Bengaluru, First Published Sep 19, 2021, 3:31 PM IST
  • Facebook
  • Twitter
  • Whatsapp

ದುಬೈ(ಸೆ.19): ಐಪಿಎಲ್ 2021 ದುಬೈ ಚರಣ ಇಂದಿನಿಂದ ಆರಂಭಗೊಳ್ಳುತ್ತಿದೆ. 2021ರ ಐಪಿಎಲ್ ಟೂರ್ನಿ ಕೊರೋನಾ ಕಾರಣ ದಿಢೀರ್ ಸ್ಥಗಿತಗೊಂಡಿತ್ತು. ಇದೀಗ ಮುಂದುವರಿದ ಭಾಗ ದುಬೈನಲ್ಲಿ ಆರಂಭಗೊಳ್ಳುತ್ತಿದೆ. ದುಬೈ ಚರಣದ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ ಹಾಗೂ ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗುತ್ತಿದೆ. ಸಾಮಾಜಿಕ ಜಾಲತಾಣದ ಟ್ರೆಂಡಿಂಗ್ ಲಿಸ್ಟ್‌ನಲ್ಲಿ ಐಪಿಎಲ್‌ಗಿಂತ ಧೋನಿ ಹೆಚ್ಚು ಸದ್ದು ಮಾಡುತ್ತಿದ್ದಾರೆ.

IPL 2021 ಮುಂಬೈ vs ಚೆನ್ನೈ ಬ್ಲಾಕ್‌ಬಸ್ಟರ್‌ ಪಂದ್ಯಕ್ಕೆ ಕ್ಷಣಗಣನೆ!

ಐಪಿಎಲ್ 2021ರ 30ನೇ ಪಂದ್ಯಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಐಪಿಎಲ್ 2021, ಚೆನ್ನೈ, ಮುಂಬೈ ಟ್ರೆಂಡ್‌ಗಿಂತ MS Dhoni ಅಗ್ರಸ್ಥಾನದಲ್ಲಿದ್ದಾರೆ. ಅಭಿಮಾನಿಗಳು ಇಂದಿನ ಪಂದ್ಯಕ್ಕಾಗಿ ಕಾಯುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಎಂ.ಎಸ್.ಧೋನಿಯನ್ನು ಮತ್ತೆ ಮೈದಾನದಲ್ಲಿ ನೋಡಲು ಕಾತರರಾಗಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ವಿದಾಯ ಹೇಳಿದರೂ ಧೋನಿ ಈಗಲೂ ಅಭಿಮಾನಿಗಳ ನೆಚ್ಚಿನ ಕ್ರಿಕೆಟಿಗ. ಧೋನಿ ಬ್ಯಾಟಿಂಗ್, ನಾಯಕತ್ವ ವೀಕ್ಷಿಸಲು ಅಭಿಮಾನಿಗಳಿಗೆ ಇರುವು ಒಂದೇ ವೇದಿಕೆ ಐಪಿಎಲ್. ಹೀಗಾಗಿ ಇಂದಿನ ಪಂದ್ಯ ಉಭಯ ತಂಡಗಳಿಗೆ ಮಾತ್ರವಲ್ಲ, ಅಭಿಮಾನಿಗಳಿಗೂ ಮಹತ್ವದ್ದಾಗಿದೆ.

IPL 2021 ಒಂದೊಳ್ಳೆಯ ಕಾರ್ಯಕ್ಕೆ ಬ್ಲೂ ಜೆರ್ಸಿ ಹರಾಜು ಹಾಕಲಿದೆ ಆರ್‌ಸಿಬಿ..!

ಅಭಿಮಾನಿಗಳು ಧೋನಿಗ ಶುಭಹಾರೈಸಿದ್ದಾರೆ. ಐಪಿಎಲ್ ಅಂದರೆ ಧೋನಿ, ಅಭ್ಯಾಸ ಪಂದ್ಯದಲ್ಲಿ ಸಿಕ್ಸರ್ ಮೂಲಕ ಅಬ್ಬರಿಸಿರುವ ಧೋನಿ, ಇಂದು ಮಂಬೈ ವಿರುದ್ಧ ತಮ್ಮ ಹಳೇ ಝಲಕ್ ತೋರಿಸಲಿ ಎಂದು ಅಭಿಮಾನಿಗಳು ಟ್ವೀಟ್ ಮಾಡಿದ್ದಾರೆ.

ಧೋನಿ ದರ್ಶನಕ್ಕಾಗಿ ಕಾಯುತ್ತಿದ್ದೇವೆ. ಇಂದಿನ ಪಂದ್ಯ ಈ ಮಟ್ಟಿಗೆ ಹೈಪ್ ಪಡೆದುಕೊಳ್ಳಲು ಧೋನಿ ಕಾರಣ ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಧೋನಿಗೆ ಶುಭಕೋರುತ್ತಿದ್ದಾರೆ. ಎರಡು ಬಲಿಷ್ಠ ತಂಡಗಳ ಹೋರಾಟದಿಂದ ಐಪಿಎಲ್ 2ನೇ ಭಾಗ ಆರಂಭಗೊಳ್ಳಲಿದೆ. 


 

Follow Us:
Download App:
  • android
  • ios