ಪಡಿಕ್ಕಲ್, ಕೊಹ್ಲಿ ಆಕರ್ಷಕ ಅರ್ಧಶತಕ ಅಬ್ಬರ ಆರಂಭದ ಬಳಿಕ ಕುಸಿತ ಕಂಡ ಬೆಂಗಳೂರು RCB vs CSK ನಡುವಿನ ಲೀಗ್ ಪಂದ್ಯ

ಶಾರ್ಜಾ(ಸೆ.24): ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ದೇವದತ್ ಪಡಿಕ್ಕಲ್(Devdutt Padikkal) ಹಾಗೂ ನಾಯಕ ವಿರಾಟ್ ಕೊಹ್ಲಿ(Virat Kohli) ಭರ್ಜರಿ ಆರಂಭ ಹೊರತಾಗಿಯೂ ಆರ್‌ಸಿಬಿ(RCB) ಸ್ಪರ್ಧಾತ್ಮಕ ಮೊತ್ತ ದಾಖಲಿಸಿದೆ. ಆರಂಭಿಕರನ್ನು ಹೊರತು ಪಡಿಸಿದರೆ ಇತರ ಬ್ಯಾಟ್ಸ್‌ಮನ್‌ಗಳಿಂಗ ಉತ್ತಮ ಪ್ರದರ್ಶನ ಮೂಡಿಬರಲಿಲ್ಲ. ಹೀಗಾಗಿ ಚೆನ್ನೈ(CSK) ವಿರುದ್ಧ ಆರ್‌ಸಿಬಿ 6 ವಿಕೆಟ್ ನಷ್ಟಕ್ಕೆ 156 ರನ್ ಸಿಡಿಸಿದೆ.

Scroll to load tweet…

IPL 2021: ಆರ್‌ಸಿಬಿ ವಿರುದ್ಧ ಟಾಸ್ ಗೆದ್ದ CSK, ಕೊಹ್ಲಿ ಸೈನ್ಯದಲ್ಲಿ ಮಹತ್ವದ ಬದಲಾವಣೆ!

IPL 2021ರ 35ನೇ ಲೀಗ್ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಇಳಿದ ಆರ್‌ಸಿಬಿಗೆ ವಿರಾಟ್ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್ ಉತ್ತಮ ಆರಂಭ ನೀಡಿದರು. ಇವರಿಬ್ಬರ ಜೊತೆಯಾಟ ಚೆನ್ನೈ ತಂಡದ ಆತಂಕ ಹೆಚ್ಚಿಸಿತು. ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್ ಸ್ಫೋಟಕ ಆರಂಭ ಹೊಸ ದಾಖಲೆಗೆ ಕಾರಣವಾಯಿತು. ದೇವದತ್ ಪಡಿಕ್ಕಲ್ ಹಾಫ್ ಸೆಂಚುರಿ ಸಿಡಿಸಿದ ಬೆನ್ನಲ್ಲೇ ನಾಯಕ ವಿರಾಟ್ ಕೊಹ್ಲಿ ಕೂಡ ಅರ್ಧಶತಕ ಪೂರೈಸಿದರು. 

ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತೊಂದು ಸಾಧನೆ ಮಾಡಿದ್ದಾರೆ. ಚೆನ್ನೈ ವಿರುದ್ಧ ಟಿ20 ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಸಿಡಿಸಿದ ಸಾಧನೆ ಮಾಡಿದ್ದಾರೆ.

ತಂಡದ ವಿರುದ್ಧ ಕೊಹ್ಲಿ ಗರಿಷ್ಠ ರನ್ (ಟಿ20)
ಚೆನ್ನೈ ಸೂಪರ್ ಕಿಂಗ್ಸ್; 958
ದೆಹಲಿ ಕ್ಯಾಪಿಟಲ್ಸ್: 933
ಕೋಲ್ಕತಾ ನೈಟ್ ರೈಡರ್ಸ್: 735
ಮುಂಬೈ ಇಂಡಿಯನ್ಸ್: 728
ಆಸ್ಟ್ರೇಲಿಯಾ: 718

Scroll to load tweet…

ವಿರಾಟ್ ಕೊಹ್ಲಿ 53 ರನ್ ಸಿಡಿಸಿ ಔಟಾದರು. ಆದರೆ ಪಡಿಕ್ಕಲ್ ಆಟ ಮುಂದುವರಿಯಿತು. ಆರಂಭಿಕರ ಜೊತೆಯಾಟಕ್ಕೆ ಬ್ರೇಕ್ ಬಿದ್ದ ಬಳಿಕ ಪಡಿಕ್ಕಲ್‌ಗೆ ಇತರರಿಂದ ಉತ್ತಮ ಸಾಥ್ ಸಿಗಲಿಲ್ಲ. ಎಬಿ ಡಿವಿಲಿಯರ್ಸ್ 12 ರನ್ ಸಿಡಿಸಿ ಔಟಾದರು. ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಪಡಿಕ್ಕಲ್ 50 ಎಸೆದಲ್ಲಿ 70 ರನ್ ಸಿಡಿಸಿ ಔಟಾದರು.

IPL 2021 ಕೊಹ್ಲಿ, ಧೋನಿ, ಎಬಿಡಿ; RCB vs CSK ಪಂದ್ಯದಲ್ಲಿ ನಿರ್ಮಾಣವಾಗಲಿದೆ ಹಲವು ದಾಖಲೆ!

ಇತ್ತ ಗ್ಲೆನ್ ಮ್ಯಾಕ್ಸವೆಲ್ ಅಬ್ಬರಿಸಲಿಲ್ಲ. ಮ್ಯಾಕ್ಸ್‌ವೆಲ್ 11 ರನ್ ಸಿಡಿಸಿ ನಿರ್ಗಮಿಸಿದರು. ಕೈಲ್ ಜ್ಯಾಮಿನ್ಸನ್ ಬದಲು ತಂಡ ಸೇರಿಕೊಂಡ ಟಿಮ್ ಡೇವಿಡ್ ಕೇವಲ 1 ರನ್ ಸಿಡಿಸಿ ಔಟಾದರು. ಇತ್ತ ಹರ್ಷಲ್ ಪಟೇಲ್ ಕೇವಲ 3 ರನ್ ಸಿಡಿಸಿ ಔಟಾದರು. ಇದರೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 6 ವಿಕೆಟ್ ನಷ್ಟಕ್ಕೆ 156 ರನ್ ಸಿಡಿಸಿತು.

Scroll to load tweet…

ಉತ್ತಮ ಆರಂಭ ಪಡೆದ ಆರ್‌ಸಿಬಿ ಬಳಿಕ ಅದೇ ರನ್ ರೇಟ್ ಕಾಯ್ದಿರಿಸಲು ಸಾಧ್ಯವಾಗಲಿಲ್ಲ. ಬೃಹತ್ ಮೊತ್ತದ ನಿರೀಕ್ಷೆಯಲ್ಲಿದ್ದ ಆರ್‌ಸಿಬಿ ಸ್ಪರ್ಧಾತ್ಮಕ ಮೊತ್ತ ಪೇರಿಸಿದೆ. ಚೆನ್ನೈ ಸೂಪರ್ ಕಿಂಗ್ಸ್(Chennai Super Kings) ಪರ ಡ್ವೇನ್ ಬ್ರಾವೋ 3, ಶಾರ್ದೂಲ್ ಠಾಕೂರ್ 2 ಹಾಗೂ ದೀಪಕ್ ಚಹಾರ್ 1 ವಿಕೆಟ್ ಕಬಳಿಸಿ ಮಿಂಚಿದರು.