Asianet Suvarna News Asianet Suvarna News

IPL 2021: ಆರ್‌ಸಿಬಿ ವಿರುದ್ಧ ಟಾಸ್ ಗೆದ್ದ CSK, ಕೊಹ್ಲಿ ಸೈನ್ಯದಲ್ಲಿ ಮಹತ್ವದ ಬದಲಾವಣೆ!

  • ದಕ್ಷಿಣ ಭಾರತದ ಡರ್ಬಿ ಎಂದೇ ಖ್ಯಾತಿಗಳಿಸಿರುವ RCB vs CSK ಪಂದ್ಯ
  • ಶಾರ್ಜಾದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ
  • IPL 2021 ಟೂರ್ನಿಯ 35ನೇ  ಲೀಗ್ ಪಂದ್ಯ
IPL 2021 CSK won toss and chose to field first against royal challengers bengaluru in Sharjah ckm
Author
Bengaluru, First Published Sep 24, 2021, 7:39 PM IST
  • Facebook
  • Twitter
  • Whatsapp

ಶಾರ್ಜಾ(ಸೆ.24): IPL 2021 ಟೂರ್ನಿಯ ಮತ್ತೊಂದು ಮೆಘಾ ಫೈಟ್‌ಗೆ ಶಾರ್ಜಾ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ಸಾಕ್ಷಿಯಾಗಲಿದೆ. ಮರಳು ಗಾಳಿಯಿಂದ ನಿಗದಿತ ಸಮಯದಲ್ಲಿ ನಡೆಯಬೇಕಿದ್ದ ಟಾಸ್ 10 ನಿಮಿಷ ತಡವಾಗಿ ನಡೆದಿದೆ. ಈ ಮಹತ್ವದ ಪಂದ್ಯದಲ್ಲಿ ಟಾಸ್(Toss) ಗೆದ್ದ ಚೆನ್ನೈ ಸೂಪರ್ ಕಿಂಗ್ಸ್(chennai super kings) ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.  

ವಿರಾಟ್ ಕೊಹ್ಲಿ Dating ಹಿಸ್ಟರಿ: ಸಂಜನಾ ಗಲ್ರಾನಿ -ಅನುಷ್ಕಾ ಶರ್ಮಾ!

ಚೆನ್ನೈ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಆರ್‌ಸಿಬಿ ತಂಡದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಸಚಿನ್ ಬೇಬಿ ಬದಲು ನವದೀಪ್ ಸೈನಿ ತಂಡ ಸೇರಿಕೊಂಡಿದ್ದರೆ, ಕೈಲ್ ಜಾಮಿನ್ಸನ್ ಬದಲು ಟಿಮ್ ಡೇವಿಡ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ(royal challengers bengaluru)ಗೆಲ್ಲಲೇಬೇಕಾದ ಪಂದ್ಯ. ಕಾರಣ ದುಬೈನಲ್ಲಿ ಆರಂಭಗೊಂಡ ಐಪಿಎಲ್ 2021 ಎರಡನೇ ಭಾಗದ ಮೊದಲ ಪಂದ್ಯದಲ್ಲಿ ಆರ್‌ಸಿಬಿ ಮುಗ್ಗರಿಸಿದೆ. ಭಾರತದಲ್ಲಿ ಆಯೋಜನೆಗೊಂಡ ಮೊದಲ ಬಾಗದಲ್ಲಿ ಆರ್‌ಸಿಬಿ(RCB) ಉತ್ತಮ ಪ್ರದರ್ಶನ ನೀಡಿತ್ತು. ದುಬೈನಲ್ಲಿ ನಡೆದ ಪಂದ್ಯದಲ್ಲಿ ಕೆಕೆಆರ್(KKR) ವಿರುದ್ಧದ ಸೋಲು, ಆರ್‌ಸಿಬಿ ಆತ್ಮವಿಶ್ವಾಸಕ್ಕೆ ಬಲವಾದ ಪೆಟ್ಟು ನೀಡಿದೆ. ಹೀಗಾಗಿ ಇಂದಿನ ಪಂದ್ಯ ಗೆದ್ದ ಮತ್ತೆ ಗೆಲುವಿನ ಟ್ರ್ಯಾಕ್‌ಗೆ ಮರಳಲು ಕೊಹ್ಲಿ ಪಡೆ ಭರ್ಜರಿ ತಯಾರಿ ನಡೆಸಿದೆ.

IPL 2021 ಕೊಹ್ಲಿ, ಧೋನಿ, ಎಬಿಡಿ; RCB vs CSK ಪಂದ್ಯದಲ್ಲಿ ನಿರ್ಮಾಣವಾಗಲಿದೆ ಹಲವು ದಾಖಲೆ!

ಶಾರ್ಜಾ ಪಿಚ್:
ದುಬೈ, ಅಬುಧಾಬಿ ಕ್ರೀಡಾಂಗಣಕ್ಕೆ ಹೋಲಿಸಿದರೆ ಶಾರ್ಜಾ(Sharjah) ಚಿಕ್ಕ ಮೈದಾನದವಾಗಿದೆ. ಹೀಗಾಗಿ ಇಲ್ಲಿ ಬೌಂಡರಿ ಸಿಕ್ಸರ್ ಅಬ್ಬರ ಕೂಡ ಹೆಚ್ಚಾಗಿರುತ್ತದೆ. 2020ರ ಐಪಿಎಲ್ ಟೂರ್ನಿ ದುಬೈನಲ್ಲಿ ಆಯೋಜಿಸಲಾಗಿತ್ತು. ಈ ವೇಳೆ ಶಾರ್ಜಾದಲ್ಲಿ ನಡೆದ ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ 8 ಇನ್ನಿಂಗ್ಸ್‌ಗಳಲ್ಲಿ 7 ಇನ್ನಿಂಗ್ಸ್‌ 200 ರನ್ ಕಂಡಿದೆ. ಇನ್ನು ಮತ್ತೊಂದು ಅಂಶ ಎಂದರೆ 6 ಪಂದ್ಯದಲ್ಲಿ 5 ಪಂದ್ಯ ಮೊದಲು ಬ್ಯಾಟಿಂಗ್ ಮಾಡಿದ ತಂಡ ಗೆಲುವು ಸಾಧಿಸಿದೆ.

ಆರ್‌ಸಿಬಿ ಸಿಎಸ್‌ಕೆ ಮುಖಾಮುಖಿ:
ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್(chennai super kings) ಮುಖಾಮುಖಿಯಲ್ಲಿ ಬಹುತೇಕ ಬಾರಿ ಧೋನಿ ತಂಡಕ್ಕೆ ಗೆಲವು ಸಿಕ್ಕಿದೆ. ಇವರಿಬ್ಬರ ಹೋರಾಟದಲ್ಲಿ 17 ಬಾರಿ ಸಿಎಸ್‌ಕೆ ಗೆಲುವು ಸಾಧಿಸಿದ್ದರೆ, ಕೇವಲ 9 ಬಾರಿ ಆರ್‌ಸಿಬಿ ಗೆಲುವು ಕಂಡಿದೆ. ಕಳೆದ 11 ಬಾರಿಯ ಮುಖಾಮುಖಿಯಲ್ಲಿ 9 ಬಾರಿ ಚೆನ್ನೈ ತಂಡ ಗೆಲುವು ದಾಖಲಿಸಿದೆ. ಹೀಗಾಗಿ ಅಂಕಿ ಅಂಶ ಕೊಹ್ಲಿ ಸೈನ್ಯದ ಪರವಾಗಿಲ್ಲ.

ಚೆನ್ನೈ ಸೂಪರ್ ಕಿಂಗ್ಸ್ ತಂಡ ಮತ್ತಷ್ಟು ಬಲಿಷ್ಠವಾಗಿದೆ. ಮುಂಬೈ(Mumbai Indians) ವಿರುದ್ಧದ ಪಂದ್ಯದಲ್ಲಿ ರುತುರಾಜ್ ಗಾಯಕ್ವಾಡ್(ruturaj gaikwad) ಹೋರಾಟ ಸಿಎಸ್‌ಕೆ ತಂಡಕ್ಕೆ ಗೆಲುವು ತಂದುಕೊಟ್ಟಿತ್ತು. ಗಾಯಕ್ವಾಡ್ 88 ರನ್ ಸಿಡಿಸಿ ಮಿಂಚಿದ್ದರು. ಚೆನ್ನೈ ಉತ್ತಮ ಬ್ಯಾಟಿಂಗ್ ಲೈನ್ ಅಪ್ ಹೊಂದಿದೆ. ಇತ್ತ ಆರ್‌ಸಿಬಿ ಕೂಡ ಅಷ್ಟೇ ಉತ್ತಮ ಬ್ಯಾಟ್ಸ್‌ಮನ್ ಹೊಂದಿದೆ. ಆದರೆ ಕಳೆದ ಪಂದ್ಯದಲ್ಲಿ ಯಾರೂ ಕೂಡ ತಂಡಕ್ಕೆ ನೆರವಾಗಲಿಲ್ಲ ಅನ್ನೋದು ಸತ್ಯ.

ಅಂಕಪಟ್ಟಿ:
ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಯಿಂಟ್ಸ್ ಟೇಬಲ್‌ನಲ್ಲಿ(Points Table) 2 ಮತ್ತು 3ನೇ ಸ್ಥಾನದಲ್ಲಿದೆ. ಚೆನ್ನೈ ಆಡಿದ 8 ಪಂದ್ಯದಲ್ಲಿ 6 ಗೆಲುವು ಸಾಧಿಸಿದ್ದರೆ, ಆರ್‌ಸಿಬಿ ಆಡಿದ 8ರಲ್ಲಿ 5 ಗೆಲುವು ಕಂಡಿದೆ.

Follow Us:
Download App:
  • android
  • ios