ಅಹಮದಾಬಾದ್(ಏ.27): ಆರ್‌ಸಿಬಿಗೆ ಮತ್ತೆ ಆಪತ್ ಬಾಂಧವ ಎಬಿಡಿ ನೆರವಾಗಿದ್ದಾರೆ. ಡೆಲ್ಲಿ ವಿರುದ್ಧ ಅಬ್ಬರಿಸಿದ ಎಬಿಡಿ ಸ್ಪರ್ಧಾತ್ಮಕ ಮೊತ್ತವನ್ನು ನೀಡಿದ್ದಾರೆ. 

172  ರನ್ ಟಾರ್ಗೆಟ್ ದೆಹಲಿಗೆ ನೀಡಲಾಗಿದೆ.   ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ನಡುವಿನ 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ 22ನೇ  ಪಂದ್ಯದ ಮೊದಲ ಬ್ಯಾಟಿಂಗ್ ಮುಗಿದಿದೆ.

IPL  ನಿಲ್ಲಿಸುವ ಮಾತೇ ಇಲ್ಲ; ದಾದಾ

ನಾಯಕ ವಿರಾಟ್ ಮತ್ತು ಪಡಿಕ್ಕಲ್ ಉತ್ತಮ ಆರಂಭ ಒದಗಿಸುವ ಯತ್ನ ಮಾಡಿದರು. ನಿರೀಕ್ಷೆ ಇಟ್ಟುಕೊಂಡಿದ್ದ ಮಾಕ್ಸ್ ವೆಲ್ ಸ್ಫೋಟಿಸಲಿಲ್ಲ. ಆದರೆ ನಂತರ ಎಬಿಡಿ ಆಟವನ್ನು ಸಂಪೂರ್ಣ ತಮ್ಮ ಮಯವಾಗಿಸಿಕೊಂಡರು. ಕೊನೆ ಓವರ್ ನಲ್ಲಿ ಸ್ಟೋನಿಸ್ ಗೆ  23  ರನ್ ಚಚ್ಚಿದರು. 42 ಎಸೆತದಲ್ಲಿ 75 ರನ್ ಸಿಡಿಸಿ ಡೆಲ್ಲಿ ಮುಂದೆ ಸ್ಪರ್ಧಾತ್ಮಕ ಮೊತ್ತ ಇಡಲಾಗಿದೆ. 

ಉಭಯ ತಂಡಗಳು ತಲಾ 5 ಪಂದ್ಯಗಳನ್ನಾಡಿ 4 ಗೆಲುವು ಹಾಗೂ ಒಂದು ಸೋಲು ಕಂಡಿವೆ. ಅಂಕಪಟ್ಟಿಯಲ್ಲಿ ಡೆಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ಆರ್‌ಸಿಬಿ 3ನೇ ಸ್ಥಾನದಲ್ಲಿದೆ. ಇಂದಿನ ಪಂದ್ಯದಲ್ಲಿ ಗೆಲುವು ಸಾಧಿಸಿದ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲಿದೆ.