Asianet Suvarna News Asianet Suvarna News

IPL 2021 DC vs RR ಇಂದೇ ಪ್ಲೇ-ಆಫ್‌ಗೆ ಡೆಲ್ಲಿ ಕ್ಯಾಪಿಟಲ್ಸ್‌ ಲಗ್ಗೆ?

* ಅಬುಧಾಬಿಯಲ್ಲಿಂದು ಡೆಲ್ಲಿ ವರ್ಸಸ್‌ ರಾಜಸ್ಥಾನ ಫೈಟ್‌

* ಪ್ಲೇ ಆಫ್‌ ಮೇಲೆ ಕಣ್ಣಿಟ್ಟಿದೆ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್(Delhi Capitals)

* ರಾಜಸ್ಥಾನ ರಾಯಲ್ಸ್‌ಗೆ ಈ ಪಂದ್ಯದಲ್ಲಿ ಗೆಲುವು ಸಾಧಿಸುವುದು ಅನಿವಾರ್ಯ

IPL 2021 Delhi Capitals Take on Rajasthan Royals in Abu Dhabi kvn
Author
Abu Dhabi - United Arab Emirates, First Published Sep 25, 2021, 8:43 AM IST

ಅಬುಧಾಬಿ(ಸೆ.25): ಐಪಿಎಲ್‌ 14ನೇ ಆವೃತ್ತಿಯ(IPL2021) ಭಾಗ-2ರಲ್ಲಿ ಶನಿವಾರ ಮೊದಲ ಬಾರಿಗೆ 2 ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌(Delhi Capitals) ಹಾಗೂ ರಾಜಸ್ಥಾನ ರಾಯಲ್ಸ್‌ ಮುಖಾಮುಖಿಯಾಗಲಿವೆ. ಎರಡೂ ತಂಡಗಳು ಕಳೆದ ಪಂದ್ಯದಲ್ಲಿ ಗೆದ್ದಿದ್ದು, ಜಯದ ಲಯ ಕಾಪಾಡಿಕೊಳ್ಳಲು ಎದುರು ನೋಡುತ್ತಿವೆ.

ಈಗಾಗಲೇ 7 ಪಂದ್ಯಗಳನ್ನು ಗೆದ್ದು 14 ಅಂಕ ಸಂಪಾದಿಸಿರುವ ಡೆಲ್ಲಿ, ಈ ಪಂದ್ಯದಲ್ಲಿ ಜಯಿಸಿದರೆ ಪ್ಲೇ-ಆಫ್‌ನಲ್ಲಿ ಸ್ಥಾನ ಖಚಿತವಾಗಲಿದೆ. ಜೊತೆಗೆ ಪ್ಲೇ-ಆಫ್‌ನಲ್ಲಿ ಸ್ಥಾನ ಪಡೆದ ಮೊದಲ ತಂಡ ಎನಿಸಿಕೊಳ್ಳಲಿದೆ. ಮತ್ತೊಂದೆಡೆ ರಾಜಸ್ಥಾನ ರಾಯಲ್ಸ್‌(Rajasthan Royals) ಕಳೆದ ಪಂದ್ಯದಲ್ಲಿ ಪಂಜಾಬ್‌ ವಿರುದ್ಧ ಅಸಾಧಾರಣ ಗೆಲುವು ಸಾಧಿಸಿ, ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿದೆ. ಈ ಪಂದ್ಯದಲ್ಲಿ ಜಯಿಸಿದರೆ, ರಾಯಲ್ಸ್‌ ಪ್ಲೇ-ಆಫ್‌ ಪೈಪೋಟಿಯಲ್ಲಿ ಮತ್ತೊಂದು ಹೆಜ್ಜೆ ಮುಂದಿಡಲಿದೆ.

ದುಬೈ(Dubai)ನಲ್ಲಿ ನಡೆದಿದ್ದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ರಾಜಸ್ಥಾನ ರಾಯಲ್ಸ್‌ ತಂಡವು 185 ರನ್ ಬಾರಿಸಿತ್ತು. ಈ ಗುರಿ ಬೆನ್ನತ್ತಿದ ಪಂಜಾಬ್‌ ತಂಡವು ಉತ್ತಮ ಅರಂಭ ಪಡೆಯಿತಾದರೂ ಕೊನೆಯ ಓವರ್‌ನಲ್ಲಿ ಕೇವಲ 4 ರನ್‌ ಗಳಿಸಲು ವಿಫಲವಾಗಿತ್ತು. ಕಾರ್ತಿಕ್‌ ತ್ಯಾಗಿ ಕೊನೆಯ ಓವರ್‌ನಲ್ಲಿ ಕೇವಲ ಒಂದು ರನ್‌ ನೀಡಿ 2 ವಿಕೆಟ್ ಕಬಳಿಸುವ ಮೂಲಕ ರಾಜಸ್ಥಾನ ರಾಯಲ್ಸ್‌ 2 ರನ್‌ಗಳ ರೋಚಕ ಗೆಲುವು ಸಾಧಿಸುವಂತೆ ಮಾಡಿದ್ದರು.

IPL 2021: ಅಬ್ಬರಿಸಿದರೂ ಸಿಗಲಿಲ್ಲ ಗೆಲುವು, ಧೋನಿ ಮುಂದೆ ಶರಣಾದ ಕೊಹ್ಲಿ ಬಾಯ್ಸ್!

ಇನ್ನು ಮರುದಿನ ಅದೇ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ್ದ ಸನ್‌ರೈಸರ್ಸ್ ಹೈದರಾಬಾದ್ ತಂಡವು 134 ರನ್‌ ಗಳಿಸಿತ್ತು. ಈ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಕೇವಲ 2 ವಿಕೆಟ್ ಕಳೆದುಕೊಂಡು ಇನ್ನೂ 13 ಎಸೆತಗಳು ಬಾಕಿ ಇರುವಂತೆಯೇ ತಂಡ ಗೆಲುವಿನ ನಗೆ ಬೀರಿತ್ತು. 

ಇದುವರೆಗೂ ಐಪಿಎಲ್‌ ಇತಿಹಾಸದಲ್ಲಿ ಉಭಯ ತಂಡಗಳು ಒಟ್ಟು 23 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ರಾಜಸ್ಥಾನ ರಾಯಲ್ಸ್‌ ಕೊಂಚ ಮೇಲುಗೈ ಸಾಧಿಸಿದೆ. ರಾಜಸ್ಥಾನ ರಾಯಲ್ಸ್‌ ತಂಡವು 12 ಬಾರಿ ಗೆಲುವಿನ ನಗೆ ಬೀರಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್‌ ತಂಡವು 11 ಬಾರಿ ಗೆದ್ದು ಬೀಗಿದೆ.

ಸಂಭವನೀಯ ಆಟಗಾರರ ಪಟ್ಟಿ

ಡೆಲ್ಲಿ: ಪೃಥ್ವಿ ಶಾ, ಶಿಖರ್ ಧವನ್‌, ಶ್ರೇಯಸ್ ಅಯ್ಯರ್‌, ರಿಷಭ್‌ ಪಂತ್‌(ನಾಯಕ), ಮಾರ್ಕಸ್‌ ಸ್ಟೋಯ್ನಿಸ್‌/ ಸ್ಟೀವ್ ಸ್ಮಿತ್‌, ಶಿಮ್ರೋನ್‌ ಹೆಟ್ಮೇಯರ್‌, ಅಕ್ಷರ್ ಪಟೇಲ್‌, ರವಿಚಂದ್ರನ್ ಅಶ್ವಿನ್‌, ಕಗಿಸೋ ರಬಾಡ, ಏನ್ರಿಚ್ ನೋಕಿಯ, ಆವೇಶ್‌ ಖಾನ್‌.

ರಾಜಸ್ಥಾನ: ಎವಿನ್ ಲೆವಿಸ್‌, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್(ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್‌, ಮಹಿಪಾಲ್ ಲೋಮ್ರರ್‌, ರೆಯಾನ್ ಪರಾಗ್‌, ರಾಹುಲ್ ತೆವಾಟಿಯಾ, ಕ್ರಿಸ್ ಮೋರಿಸ್‌, ಚೇತನ್ ಸಕಾರಿಯಾ, ಕಾರ್ತಿಕ್ ತ್ಯಾಗಿ, ಮುಸ್ತಾಫಿಜುರ್‌ ರೆಹಮಾನ್

ಸ್ಥಳ: ಅಬುಧಾಬಿ,
ಪಂದ್ಯ ಆರಂಭ: ಮಧ್ಯಾಹ್ನ 3.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

Follow Us:
Download App:
  • android
  • ios