14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ ಸೂಪರ್ ಸಂಡೆಯ ಎರಡನೇ ಪಂದ್ಯದಲ್ಲಿಂದು ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಅಹಮದಾಬಾದ್(ಮೇ.02)‌: ಹಿಂದಿನ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್‌ ಹಾಗೂ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ಭಾನುವಾರ ಮತ್ತೊಂದು ಗೆಲುವು ಸಾಧಿಸುವ ವಿಶ್ವಾಸದಲ್ಲಿವೆ. 

ಡೆಲ್ಲಿ ಈ ಪಂದ್ಯದಲ್ಲಿ ಗೆದ್ದು ಮತ್ತೆ ಅಗ್ರಸ್ಥಾನಕ್ಕೇರುವ ತವಕದಲ್ಲಿದ್ದರೆ, ಪಂಜಾಬ್‌ಗೆ ಗೆಲುವಿನ ಲಯ ಉಳಿಸಿಕೊಳ್ಳಲು ಎದುರು ನೋಡುತ್ತಿದೆ. ಈ ಆವೃತ್ತಿಯಲ್ಲಿ ಉಭಯ ತಂಡಗಳ ನಡುವೆ ಇದು 2ನೇ ಪಂದ್ಯ. ಮೊದಲ ಮುಖಾಮುಖಿಯಲ್ಲಿ ಧವನ್‌ ಅಬ್ಬರ ಆಟಕ್ಕೆ ಪಂಜಾಬ್‌ ಮಂಕಾಗಿತ್ತು. ಎರಡೂ ತಂಡಗಳಿಗೆ ಸ್ಪಿನ್ನರ್‌ಗಳೇ ಟ್ರಂಪ್‌ಕಾರ್ಡ್‌ಗಳಾಗುವ ನಿರೀಕ್ಷೆ ಇದೆ.

ಐಪಿಎಲ್ 2021: ರಾಜಸ್ಥಾನ ರಾಯಲ್ಸ್‌ಗಿಂದು ಸನ್‌ರೈಸರ್ಸ್‌ ಸವಾಲು

ಐಪಿಎಲ್ ಇತಿಹಾಸದಲ್ಲಿ ಉಭಯ ತಂಡಗಳು ಇದುವರೆಗೂ 27 ಬಾರಿ ಮುಖಾಮುಖಿಯಾಗಿದ್ದು, ಡೆಲ್ಲಿ ಕ್ಯಾಪಿಟಲ್ಸ್‌ ತಂಡ 15ರಲ್ಲಿ ಗೆಲುವು ದಾಖಲಿಸಿದ್ದರೆ, ಪಂಜಾಬ್ ತಂಡ 12 ಪಂದ್ಯಗಳಲ್ಲಿ ಗೆಲುವಿನ ರುಚಿ ಕಂಡಿದೆ. ಇದೀಗ ಕಳೆದ ಪಂದ್ಯದಲ್ಲಿ ಡೆಲ್ಲಿಗೆ ಶರಣಾಗಿದ್ದ ಪಂಜಾಬ್‌ ಇಂದಿನ ಪಂದ್ಯದಲ್ಲಿ ತಿರುಗೇಟು ನೀಡುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

ಸಂಭವನೀಯ ಆಟಗಾರರ ಪಟ್ಟಿ

ಡೆಲ್ಲಿ: ಪೃಥ್ವಿ ಶಾ, ಧವನ್‌, ಸ್ಟೀವ್‌ ಸ್ಮಿತ್‌, ಪಂತ್‌(ನಾಯಕ), ಸ್ಟೋಯ್ನಿಸ್‌, ಹೆಟ್ಮೇಯರ್‌, ಲಲಿತ್‌, ಅಕ್ಷರ್‌, ರಬಾಡ, ಇಶಾಂತ್‌, ಆವೇಶ್‌ ಖಾನ್‌.

ಪಂಜಾಬ್‌: ರಾಹುಲ್‌(ನಾಯಕ), ಮಲಾನ್‌, ಗೇಲ್‌, ಹೂಡಾ, ಮನ್‌ದೀಪ್‌, ಶಾರುಖ್‌, ಹಪ್ರೀತ್, ಜೋರ್ಡನ್‌, ಶಮಿ, ಮೆರೆಡಿತ್‌, ಬಿಷ್ಣೋಯ್‌.

ಸ್ಥಳ: ಅಹಮದಾಬಾದ್‌ 
ಪಂದ್ಯ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್