Asianet Suvarna News Asianet Suvarna News

IPL 2021 ಅಶ್ವಿನ್‌ vs ಮಾರ್ಗನ್‌ ‘ಕ್ರೀಡಾ ಸ್ಫೂರ್ತಿ’ ಕಿತ್ತಾಟ!

* ಅಶ್ವಿನ್‌-ಮಾರ್ಗನ್‌ ಕಿತ್ತಾಟದಿಂದ ಕ್ರೀಡಾ ಸ್ಪೂರ್ತಿ ಚರ್ಚೆ ಮುನ್ನೆಲೆಗೆ

* ಅಶ್ವಿನ್‌- ಮಾರ್ಗನ್ ಕಡೆ ಪರ-ವಿರೋಧ ಚರ್ಚೆ

* ಮಾರ್ಗನ್‌ ಕುರಿತು ವ್ಯಂಗ್ಯವಾಡಿದ ಸೆಹ್ವಾಗ್

IPL 2021 Delhi Capitals Cricketer R Ashwin on field altercation with Morgan brings back Spirit of Game debate kvn
Author
Sharjah - United Arab Emirates, First Published Sep 30, 2021, 9:05 AM IST
  • Facebook
  • Twitter
  • Whatsapp

ಶಾರ್ಜಾ(ಸೆ.30): 14ನೇ ಆವೃತ್ತಿಯ ಐಪಿಎಲ್‌ನಲ್ಲಿ (IPL 2021) ಮತ್ತೆ ‘ಕ್ರೀಡಾ ಸ್ಫೂರ್ತಿ’ ವಿವಾದ ಭುಗಿಲೆದ್ದಿದ್ದು, ಈ ಬಾರಿಯೂ ವಿವಾದದಲ್ಲಿ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್‌ (Ravichandran Ashwin) ಹಾಗೂ ಕೋಲ್ಕತ ನೈಟ್‌ ರೈಡರ್ಸ್ (Kolkata Knight Riders) ತಂಡದ ನಾಯಕ ಇಯಾನ್‌ ಮಾರ್ಗನ್‌ ಕಾಣಿಸಿಕೊಂಡಿದ್ದಾರೆ. 

ಮಂಗಳವಾರ ನಡೆದ ಕೆಕೆಆರ್‌ ಹಾಗೂ ಡೆಲ್ಲಿ ನಡುವಿನ ಪಂದ್ಯದ ವೇಳೆ, ಕೆಕೆಆರ್‌ನ ತ್ರಿಪಾಠಿ ಫೀಲ್ಡ್‌ ಮಾಡಿ ಎಸೆದ ಚೆಂಡು ರಿಷಭ್‌ ಪಂತ್‌ಗೆ (Rishabh Pant) ಬಡಿದು ಕ್ಷೇತ್ರರಕ್ಷಕನಿಂದ ದೂರ ಹೋಯಿತು. ಈ ವೇಳೆ ಅಶ್ವಿನ್‌ ಒಂದು ಹೆಚ್ಚುವರಿ ರನ್‌ ಕಸಿದರು. ಈ ಪ್ರಸಂಗ ಕೆಕೆಆರ್‌ (KKR) ನಾಯಕ ಇಯಾನ್‌ ಮೊರ್ಗನ್‌ಗೆ (Eoin Morgan) ಸಿಟ್ಟು ತರಿಸಿತು. ಅಶ್ವಿನ್‌ ಹಾಗೂ ಮೊರ್ಗನ್‌ ನಡುವೆ ಮಾತಿನ ಚಕಮಕಿ ನಡೆಯಿತು. ಬಳಿಕ ಮೊರ್ಗನ್‌ರನ್ನು ಸೊನ್ನೆಗೆ ಔಟ್‌ ಮಾಡಿದ ಅಶ್ವಿನ್‌, ಜೋರಾಗಿ ಕಿರುಚಾಡುತ್ತ ಸಂಭ್ರಮಿಸಿದರು.

IPL 2021: RCB ಮ್ಯಾಕ್ಸ್‌ವೆಲ್ ಸ್ಫೋಟ, ರಾಜಸ್ಥಾನ ಧೂಳೀಪಟ

ಬಳಿಕ ಸುದ್ದಿಗೋಷ್ಠಿ ವೇಳೆ ಕೆಕೆಆರ್‌ ವಿಕೆಟ್‌ ಕೀಪರ್‌ ದಿನೇಶ್‌ ಕಾರ್ತಿಕ್‌, ‘ಅಶ್ವಿನ್‌ರ ನಡೆ ಮೊರ್ಗನ್‌ಗೆ ಹಿಡಿಸಲಿಲ್ಲ. ಕ್ರೀಡಾ ಸ್ಫೂರ್ತಿ ಮರೆತು ವರ್ತಿಸಿದರು ಎಂದು ಸಿಟ್ಟಾದರು’ ಎಂದು ತಿಳಿಸಿದರು. ಅಶ್ವಿನ್‌ ಬಗ್ಗೆ ಆಸ್ಪ್ರೇಲಿಯಾದ ಮಾಜಿ ಕ್ರಿಕೆಟಿಗ ಶೇನ್‌ ವಾರ್ನ್‌ ಟ್ವೀಟರ್‌ನಲ್ಲಿ ಹರಿಹಾಯ್ದಿದ್ದಾರೆ. ಇನ್ನು ಅಶ್ವಿನ್‌ರನ್ನು ಆಸ್ಪ್ರೇಲಿಯಾದ ಮಾಧ್ಯಮಗಳು ‘ವಿಲನ್‌’ ಎಂದು ಕರೆದಿವೆ.

ಇದಕ್ಕೆ ಪ್ರತಿಕ್ರಿಯಿಸಿರುವ ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್‌ (Virender Sehwag) ‘2019ರ ವಿಶ್ವಕಪ್‌ ಫೈನಲ್‌ನಲ್ಲಿ ಫೀಲ್ಡರ್‌ ಎಸೆದ ಚೆಂಡು ಬೆನ್‌ ಸ್ಟೋಕ್ಸ್‌ (Ben Stokes) ಬ್ಯಾಟ್‌ಗೆ ಬಡಿದು ಬೌಂಡರಿಗೆ ಹೋದಾಗ, ಮಾರ್ಗನ್‌ ಪಿಚ್‌ ಮೇಲೆ ಕೂತು ಪ್ರತಿಭಟಿಸಿದರು. ವಿಶ್ವಕಪ್‌ ಎತ್ತಿಹಿಡಿಯಲು ನಿರಾಕರಿಸಿದರು’ ಎಂದು ವ್ಯಂಗ್ಯವಾಡಿದ್ದಾರೆ.

Follow Us:
Download App:
  • android
  • ios