IPL 2021: RCB ಮ್ಯಾಕ್ಸ್ವೆಲ್ ಸ್ಫೋಟ, ರಾಜಸ್ಥಾನ ಧೂಳೀಪಟ
*ಮ್ಯಾಕ್ಸ್ ವೆಲ್ ಸ್ಫೋಟಕ್ಕೆ ರಾಜಸ್ಥಾನ ಚಿಂದಿ ಚಿಂದಿ
* ಆರ್ ಸಿಬಿಗೆ ಏಳು ವಿಕೆಟ್ ಗಳ ಭರ್ಜರಿ ಜಯ
* ಪಾಯಿಂಟ್ ಟೇಬಲ್ ನಲ್ಲಿ ಗಟ್ಟಿ ಸ್ಥಾನ
* ಭರತ್ ಮತ್ತು ಮ್ಯಾಕ್ಸಿ ಜುಗಲ್ ಬಂದಿ
ದುಬೈ, (ಸೆ.29): ರಾಜಸ್ಥಾನ್ ರಾಯಲ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ(Royal Challengers Bangalore) 150 ರನ್‌ಗಳ ಸ್ಪರ್ಧಾತ್ಮಕ ಗುರಿ ನೀಡಿತ್ತು ಇದನ್ನು ಬೆನ್ನು ಹತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಲೀಸಾಗಿ ವಿಜಯವನ್ನು ತನ್ನದಾಗಿಸಿಕೊಂಡಿದೆ.
ದುಬೈ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2021) 43ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲ ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್, ಎವಿನ್ ಲೂಯಿಸ್ (58) ಅರ್ಧಶತಕದ ನೆರವಿನಿಂದ 9 ವಿಕೆಟ್ ನಷ್ಟಕ್ಕೆ 149 ರನ್ ಪೇರಿಸಿದ್ದು, ಆರ್‌ಸಿಬಿಗೆ 150ರನ್‌ಗಳ ಸ್ಪರ್ಧಾತ್ಮಕ ಗುರಿ ನೀಡಿತ್ತು.
IPL 2021 -RCB ಪ್ಲೇಯರ್ಸ್‌ನ ಪೂಲ್ ಪಾರ್ಟಿ ಫೋಟೋ ವೈರಲ್
ಆರ್ ಸಿಬಿ ಪರ ಓಪನಿಂಗ್ ಆರಂಭಿಸಿದ ನಾಯಕ ವಿರಾಟ್ ಕೊಹ್ಲಿ(Virat Kohli) ಮತ್ತು ದೇವದತ್ ಪಡಿಕ್ಕಲ್ ಉತ್ತಮ ಆರಂಭ ಹಾಕಿಕೊಟ್ಟರು. ಕೊಹ್ಲಿ 25 ರನ್ ಗಳಿಸಿ ರನೌಟ್ ಆದರೆ ಪಡಿಕ್ಕಲ್ ಗಳಿಸಿದ್ದು 22 ರನ್. ನಂತರ ಬಂದ ಭರತ್ ಮತ್ತು ಮಾಕ್ಸ್ ವೆಲ್(Glenn Maxwell) ಜೋಡಿ ಗೆಲುವನ್ನು ಖಾತರಿ ಪಡಿಸಿದರು. ಅದ್ಭುತ ಆಟವಾಡಿದ ಭರತ್ 44 ರನ್ ಗಳಿಸಿದರೆ ಕೊನೆವರೆಗೂ ನಿಂತ ಮ್ಯಾಕ್ಸ್ ವೆಲ್ ಅರ್ಧಶತಕ ದಾಖಲಿಸಿದರು. ಎಬಿಡಿಗೆ ಕೇವಲ್ ವಿನ್ನಿಂಗ್ ರನ್ ಗಳಿಸುವ ಜವಾಬ್ದಾರಿ ಮಾತ್ರ ಉಳಿದಿತ್ತು.
ಪರ್ಪಲ್ ಕ್ಯಾಪ್ ಹೊಂದಿರುವ ಹರ್ಷಲ್ ಪಟೇಲ್ ಇದಕ್ಕೂ ಮುನ್ನ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ್ದರು. ಮೂರು ವಿಕೆಟ್ ಕಿತ್ತು ತಾನೇಕೆ ಮುಖ್ಯ ಬೌಲರ್ ಎನ್ನುವುದನ್ನು ನಿರೂಪಿಸಿದ್ದರು. 14 ಅಂಕಗಳ ಸಂಪಾದನೆಯೊಂದಿಗೆ ಆರ್ ಸಿಪಿ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನ ಕಾಪಾಡಿಕೊಂಡಿದೆ. ಚೆನ್ನೈ ಸೂಪರ್ ಕಿಂಗ್ಸ್ ಅಗ್ರಸ್ಥಾನಿಯಾಗಿದ್ದರೆ ಡೆಲ್ಲಿ ಎರಡನೇ ಸ್ಥಾನದಲ್ಲಿದೆ. ಈ ಗೆಲುವಿನೊಂದಿಗೆ ಆರ್ ಸಿಬಿ ತನ್ನ ಫ್ಲೇ ಅಫ್ ಹಾದಿಯನ್ನು ಮತ್ತಷ್ಟು ಸುಲಭ ಮಾಡಿಕೊಂಡಿದೆ.
ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ 19, ಮಹಿಪಾಲ್ ಲೊಮ್ರಾರ್ 3, ಲಿಯಾಮ್ ಲಿವಿಂಗ್‌ಸ್ಟನ್ 6, ರಾಹುಲ್ ತೆವಾಟಿಯಾ 2, ರಿಯಾನ್ ಪರಾಗ್ 9, ಕ್ರಿಸ್ ಮೊರಿಸ್ 14, ಚೇತನ್ ಸಕಾರಿಯಾ 2 ಮತ್ತು ಕಾರ್ತಿಕ್ ತ್ಯಾಗಿ ಅಜೇಯ 1 ರನ್ ಗಳಿಸಿದ್ದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಹರ್ಷಲ್ ಪಟೇಲ್ 3, ಶಹಬಾಜ್ ಅಹ್ಮದ್ ಮತ್ತು ಯಜುವೇಂದ್ರ ಚಹಾಲ್ ತಲಾ 2 ವಿಕೆಟ್‍ಗಳನ್ನು ಪಡೆದರೆ, ಜಾರ್ಜ್ ಗಾರ್ಟನ್ ಮತ್ತು ಡೇನಿಯಲ್ ಕ್ರಿಸ್ಟಿಯನ್ ತಲಾ 1 ವಿಕೆಟ್ ಕಬಳಿಸಿದ್ದರು.