* ಬಲಿಷ್ಠ ಮುಂಬೈ ಇಂಡಿಯನ್ಸ್‌ ತಂಡಕ್ಕಿಂದು ಕೆಕೆಆರ್ ಸವಾಲು* ಪ್ಲೇ-ಆಫ್‌ ದೃಷ್ಟಿಯಿಂದ ಎರಡೂ ತಂಡಗಳಿಗೆ ಇದು ಮಹತ್ವದ ಪಂದ್ಯ* ಅಬುಧಾಬಿಯಲ್ಲಿಂದು ಹೈವೋಲ್ಟೇಜ್‌ ಪಂದ್ಯ

ಅಬುಧಾಬಿ(ಸೆ.23): ಗಾಯದಿಂದ ಸಂಪೂರ್ಣ ಚೇತರಿಸಿಕೊಂಡಿರುವ ರೋಹಿತ್‌ ಶರ್ಮಾ(Rohit Sharma) ತಂಡಕ್ಕೆ ವಾಪಸಾಗಲಿದ್ದು, ಹಾಲಿ ಚಾಂಪಿಯನ್ಸ್‌ ಮುಂಬೈ ಇಂಡಿಯನ್ಸ್‌(Mumbai Indians) ಜಯದ ಲಯಕ್ಕೆ ಮರಳಲು ಕಾತರಿಸುತ್ತಿದೆ. ಗುರುವಾರ ಕೋಲ್ಕತಾ ನೈಟ್‌ ರೈಡರ್ಸ್‌(Kolkata Knight Riders) ವಿರುದ್ಧ ಮುಂಬೈ ಸೆಣಸಲಿದ್ದು, ಪ್ಲೇ-ಆಫ್‌ ದೃಷ್ಟಿಯಿಂದ ಎರಡೂ ತಂಡಗಳಿಗೆ ಇದು ಮಹತ್ವದ ಪಂದ್ಯವೆನಿಸಿದೆ.

ಚೆನ್ನೈ ವಿರುದ್ಧದ ಪಂದ್ಯದಲ್ಲಿ ರೋಹಿತ್‌ ಆಡಿರಲಿಲ್ಲ. ಆ ಪಂದ್ಯದಲ್ಲಿ ಮುಂಬೈ 20 ರನ್‌ಗಳ ಸೋಲು ಅನುಭವಿಸಿತ್ತು. ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿರುವ ಮುಂಬೈ, ಪ್ಲೇ-ಆಫ್‌ ರೇಸ್‌ನಲ್ಲಿ ಹಿಂದೆ ಬೀಳದಿರಲು ಈ ಪಂದ್ಯದಲ್ಲಿ ಗೆಲ್ಲಬೇಕಿದೆ. ಮತ್ತೊಂದೆಡೆ ಆರ್‌ಸಿಬಿ ವಿರುದ್ಧ ಸಾಧಿಸಿದ ಗೆಲುವು, ಕೆಕೆಆರ್‌ ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದ್ದು, ತಂಡ ಮತ್ತಷ್ಟು ಆಕ್ರಮಣಕಾರಿ ಆಟವಾಡಲು ಸಿದ್ಧವಿದೆ ಎಂದು ನಾಯಕ ಇಯಾನ್‌ ಮಾರ್ಗನ್‌ ಹೇಳಿಕೊಂಡಿದ್ದಾರೆ.

Scroll to load tweet…

IPL 2021: ಹಣ ಉಳಿಸಲು ಹೋಗಿ ಕೋವಿಡ್‌ ಅಪಾಯಕ್ಕೆ ಆಹ್ವಾನ ನೀಡಿತಾ ಬಿಸಿಸಿಐ..?

ಕೆಕೆಆರ್‌(KKR) ಈ ಪಂದ್ಯದಲ್ಲಿ ಗೆದ್ದರೆ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಲಿದ್ದು, ಪ್ಲೇ-ಆಫ್‌ನಲ್ಲಿ ಸ್ಥಾನಕ್ಕಾಗಿ ನಡೆಯುತ್ತಿರುವ ಪೈಪೋಟಿ ಮತ್ತಷ್ಟು ರೋಚಕತೆ ತೀವ್ರಗೊಳ್ಳಲಿದೆ. ರೋಹಿತ್ ಶರ್ಮಾ ಆಡುವ ಹನ್ನೊಂದರ ಬಳಗ ಕೂಡಿಕೊಂಡರೆ ಬಹುತೇಕ ಇಶಾನ್ ಕಿಶಾನ್‌ಗೆ ವಿಶ್ರಾಂತಿ ನೀಡುವ ಸಾಧ್ಯತೆಯಿದೆ. ಸೌರಭ್ ತಿವಾರಿ ಚೆನ್ನೈ ವಿರುದ್ದದ ಪಂದ್ಯದಲ್ಲಿ ಅರ್ಧಶತಕ ಸಿಡಿಸುವ ಮೂಲಕ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದರು.

Scroll to load tweet…

ಚೆನ್ನೈ ಸೂಪರ್‌ ಕಿಂಗ್ಸ್‌ ಎದುರು ಮುಂಬೈ ಇಂಡಿಯನ್ಸ್‌ ತಂಡವು ಬ್ಯಾಟಿಂಗ್ ವೈಫಲ್ಯ ಅನುಭವಿಸಿತ್ತು. ರೋಹಿತ್ ಶರ್ಮಾ ಹಾಗೂ ಹಾರ್ದಿಕ್ ಪಾಂಡ್ಯ(Hardik Pandya) ತಂಡ ಸೇರಿಕೊಂಡರೆ ಮುಂಬೈ ಇಂಡಿಯನ್ಸ್‌ ಮತ್ತಷ್ಟು ಬಲಿಷ್ಠವಾಗಲಿದೆ. ಇನ್ನು ಕೆಕೆಆರ್ ತಂಡವು ಆರ್‌ಸಿಬಿ(RCB) ಮಣಿಸಿ ಆತ್ಮವಿಶ್ವಾಸದಿಂದ ಬೀಗುತ್ತಿದ್ದು, ರಸೆಲ್, ಫರ್ಗ್ಯೂಸನ್‌ ಮಾರಕ ದಾಳಿ ನಡೆಸಿದ್ದು, ಕೆಕೆಆರ್ ಅಂತಹದ್ದೇ ಪ್ರದರ್ಶನ ತೋರುವ ನಿರೀಕ್ಷೆಯಲ್ಲಿದೆ. ಆರ್‌ಸಿಬಿ ತಂಡವನ್ನು ಕೆಕೆಆರ್ ಕೇವಲ 92 ರನ್‌ಗಳಿಗೆ ಆಲೌಟ್‌ ಮಾಡಿ ಬೀಗಿತ್ತು.

ಮುಂಬೈ-ಕೆಕೆಆರ್‌ ಒಟ್ಟು ಮುಖಾಮುಖಿ: 28

ಮುಂಬೈ: 22

ಕೆಕೆಆರ್‌: 06

ಸಂಭವನೀಯ ಆಟಗಾರರ ಪಟ್ಟಿ

ಮುಂಬೈ: ಡಿ ಕಾಕ್‌, ರೋಹಿತ್‌(ನಾಯಕ), ಸೂರ್ಯ, ಕಿಶನ್‌, ಹಾರ್ದಿಕ್‌/ತಿವಾರಿ, ಕೃನಾಲ್‌, ಪೊಲ್ಲಾರ್ಡ್‌, ರಾಹುಲ್‌ ಚಹರ್‌, ಮಿಲ್ನೆ, ಬೌಲ್ಟ್‌, ಬೂಮ್ರಾ.

ಕೆಕೆಆರ್‌: ಗಿಲ್‌, ವೆಂಕಟೇಶ್‌ ಅಯ್ಯರ್‌, ತ್ರಿಪಾಠಿ, ನಿತೀಶ್‌ ರಾಣಾ, ಮೊರ್ಗನ್‌(ನಾಯಕ), ರಸೆಲ್‌, ಕಾರ್ತಿಕ್‌, ನರೇನ್‌, ಫಗ್ರ್ಯೂಸನ್‌, ಪ್ರಸಿದ್‌್ಧ, ವರುಣ್‌.