IPL 2021: ಪಂಜಾಬ್‌ ಕಿಂಗ್ಸ್‌ ತಂಡ ಕೂಡಿಕೊಂಡ ಡೇಮಿಯನ್‌ ರೈಟ್‌..!

ಚೊಚ್ಚಲ ಐಪಿಎಲ್‌ ಟ್ರೋಫಿ ಕನವರಿಕೆಯಲ್ಲಿರುವ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಇದೀಗ ತನ್ನ ಬೌಲಿಂಗ್ ಕೋಚ್‌ ಅಗಿ ಡೇಮಿಯನ್ ರೈಟ್ ನೇಮಕ ಮಾಡಲಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

IPL 2021 Damien Wright joins Punjab Kings as new bowling coach kvn

ನವದೆಹಲಿ(ಮಾ.13): 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಗೆ ಭರ್ಜರಿ ತಯಾರಿ ನಡೆಸುತ್ತಿರುವ ಪ್ರೀತಿ ಜಿಂಟಾ ಸಹಾ ಒಡೆತನದ ಪಂಜಾಬ್‌ ಕಿಂಗ್ಸ್‌ ಇದೀಗ ಆಸ್ಟ್ರೇಲಿಯಾದ ಪ್ರಥಮ ದರ್ಜೆ ಕ್ರಿಕೆಟಿಗ ಡೇಮಿಯನ್ ರೈಟ್‌ರನ್ನು ತನ್ನ ಬೌಲಿಂಗ್‌ ಕೋಚ್‌ ಆಗಿ ನೇಮಿಸಿದೆ. 

45 ವರ್ಷದ ಡೇಮಿಯನ್‌ ರೈಟ್‌ ಬಾಂಗ್ಲಾದೇಶ ಅಂಡರ್ 19 ತಂಡದ ಕೋಚ್‌ ಆಗಿಯೂ ಕಾರ್ಯನಿರ್ವಹಿಸಿದ್ದಾರೆ. ಇದೀಗ ಪಂಜಾಬ್‌ ಕಿಂಗ್ಸ್‌ ಮುಖ್ಯ ಕೋಚ್‌ ಹಾಗೂ ಡೈರೆಕ್ಟರ್ ಆಫ್‌ ಕ್ರಿಕೆಟ್‌ ಆಪರೇಷನ್‌ ಆಗಿರುವ ಅನಿಲ್‌ ಕುಂಬ್ಳೆ ಜತೆಯಾಗಿ ಕಾರ್ಯ ನಿರ್ವಹಿಸಲಿದ್ದಾರೆ. 

ನಾನು ಪಂಜಾಬ್ ಕಿಂಗ್ಸ್ ತಂಡದ ಬೌಲಿಂಗ್ ಕೋಚ್‌ ಆಗಿ ನೇಮಕವಾಗಿರುವುದಕ್ಕೆ ಖುಷಿಯಾಗುತ್ತಿದೆ. ಪಂಜಾಬ್ ಕಿಂಗ್ಸ್‌ ತಂಡ ಅತ್ಯದ್ಬುತವಾಗಿದ್ದು, ಸಾಕಷ್ಟು ಪ್ರತಿಭಾನ್ವಿತ ಆಟಗಾರರನ್ನು ಈ ತಂಡ ಹೊಂದಿದೆ. ಈ ಆವೃತ್ತಿಯ ಐಪಿಎಲ್‌ನಲ್ಲಿ ಎಲ್ಲಾ ಅನುಭವಿ ಸಹಾಯಕ ಸಿಬ್ಬಂದಿಗಳೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿರುವುದಾಗಿ ಡೇಮಿಯನ್ ರೈಟ್‌ ತಿಳಿಸಿದ್ದಾರೆ.

IPL 2021: ಹರಾಜಿನ ಬಳಿಕ ಪಂಜಾಬ್ ಕಿಂಗ್ಸ್‌ ತಂಡ ಹೀಗಿದೆ ನೋಡಿ

ಡೇಮಿಯನ್‌ ರೈಟ್‌ ಆಸ್ಟ್ರೇಲಿಯಾದ ಬಿಗ್‌ಬ್ಯಾಶ್ ಲೀಗ್‌ನಲ್ಲಿ ಹೋಬಾರ್ಟ್ ಹರಿಕೇನ್ಸ್‌ ಹಾಗೂ ಮೆಲ್ಬೊರ್ನ್ ಸ್ಟಾರ್ಸ್‌ ಹಾಗೂ ನ್ಯೂಜಿಲೆಂಡ್ ತಂಡದ ಬೌಲಿಂಗ್‌ ಕೋಚ್‌ ಆಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 

ಚೊಚ್ಚಲ ಐಪಿಎಲ್‌ ಟ್ರೋಫಿ ಕನವರಿಕೆಯಲ್ಲಿರುವ ಕೆ.ಎಲ್‌. ರಾಹುಲ್ ನೇತೃತ್ವದ ಪಂಜಾಬ್ ಕಿಂಗ್ಸ್ ತಂಡವು 14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಏಪ್ರಿಲ್‌ 12ರಂದು ಮುಂಬೈನಲ್ಲಿ ರಾಜಸ್ಥಾನ ರಾಯಲ್ಸ್‌ ತಂಡದ ವಿರುದ್ದ ತನ್ನ ಮೊದಲ ಪಂದ್ಯವನ್ನಾಡಲಿದೆ. 
 

Latest Videos
Follow Us:
Download App:
  • android
  • ios