IPL 2021: ಹರಾಜಿನ ಬಳಿಕ ಪಂಜಾಬ್ ಕಿಂಗ್ಸ್ ತಂಡ ಹೀಗಿದೆ ನೋಡಿ
ಪ್ರೀತಿ ಝಿಂಟಾ ಸಹ ಒಡೆತನದ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯು 14ನೇ ಆವೃತ್ತಿಯ ಐಪಿಎಲ್ ಆಟಗಾರರ ಹರಾಜಿನಲ್ಲಿ 9 ಆಟಗಾರರನ್ನು ಖರೀದಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಬೆಂಗಳೂರು(ಫೆ.19): ಚೊಚ್ಚಲ ಐಪಿಎಲ್ ಟ್ರೋಫಿಯ ಕನವರಿಕೆಯಲ್ಲಿರುವ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ 53.20 ಕೋಟಿ ರುಪಾಯಿ ಹಣದೊಂದಿಗೆ ಈ ಬಾರಿಯ ಆಟಗಾರರ ಹರಾಜಿನಲ್ಲಿ ಪಾಲ್ಗೊಂಡಿತ್ತು. 14ನೇ ಆವೃತ್ತಿಯ ಆಟಗಾರರ ಹರಾಜಿನಲ್ಲಿ ಪ್ರೀತಿ ಝಿಂಟಾ ಸಹ ಒಡೆತನದ ಪಂಜಾಬ್ ಫ್ರಾಂಚೈಸಿ 9 ಆಟಗಾರರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಆಸ್ಟ್ರೇಲಿಯಾದ ವೇಗದ ಬೌಲರ್ ಜೇ ರಿಚರ್ಡ್‌ಸನ್‌ರನ್ನು 14 ಕೋಟಿ ರುಪಾಯಿ ನೀಡಿ ಖರೀದಿಸಿರುವ ಪಂಜಾಬ್ ಫ್ರಾಂಚೈಸಿಇ, ಟಿ20 ಸ್ಪೆಷಲಿಸ್ಟ್ ಡೇವಿಡ್ ಮಲಾನ್‌ಗೆ ಕೇವಲ ಒಂದೂವರೆ ಕೋಟಿ ರುಪಾಯಿ ಮೂಲ ಬೆಲೆಗೆ ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇನ್ನುಳಿದಂತೆ ದೇಸಿ ಪ್ರತಿಭೆ ಶಾರುಕ್ ಖಾನ್(5.25 ಕೋಟಿ), ರಿಲೇ ಮ್ಯಾಡ್ರಿತ್(8 ಕೋಟಿ), ಮೋಯಿಸ್ ಹೆನ್ರಿಕೇಸ್(4.20 ಕೋಟಿ), ಫ್ಯಾಬಿಯನ್ ಅಲನ್(75 ಲಕ್ಷ), ಜಲಜಾ ಸಕ್ಸೆನಾ(30 ಲಕ್ಷ), ಸೌರಭ್ ಕುಮಾರ್(20 ಲಕ್ಷ) ಹಾಗೂ ಉತ್ಕರ್ಷ್ ಸಿಂಗ್‌ರನ್ನು ಮೂಲ ಬೆಲೆ 20 ಲಕ್ಷ ರುಪಾಯಿ ನೀಡಿ ಖರೀದಿಸಿದೆ.
IPL 2021: ಹರಾಜಿನ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೀಗಿದೆ ನೋಡಿ
ಹರಾಜಿನ ಬಳಿಕ ಪಂಜಾಬ್ ಕಿಂಗ್ಸ್ ತಂಡ ಹೀಗಿದೆ ನೋಡಿ:
ಕೆ.ಎಲ್. ರಾಹುಲ್, ಕ್ರಿಸ್ ಗೇಲ್, ಮಯಾಂಕ್ ಅಗರ್‌ವಾಲ್, ಮನ್ದೀಪ್ ಸಿಂಗ್, ನಿಕೋಲಸ್ ಪೂರನ್, ಇಶನ್ ಪೋರೆಲ್, ಸರ್ಫರಾಜ್ ಖಾನ್, ಮುರುಗನ್ ಅಶ್ವಿನ್, ದೀಪಕ್ ಹೂಡಾ, ಮೊಹಮ್ಮದ್ ಶಮಿ, ಕ್ರಿಸ್ ಜೋರ್ಡನ್, ರವಿ ಬಿಷ್ಣೋಯಿ, ಹರ್ಪ್ರೀತ್ ಬ್ರಾರ್, ಪ್ರಭ್‌ಸಿಮ್ರನ್ ಸಿಂಗ್, ದರ್ಶಾನ್ ನಾಲ್ಕಂಡೆ, ಆರ್ಶದೀಪ್ ಸಿಂಗ್, ಡೇವಿಡ್ ಮಲಾನ್, ಜೇ ರಿಚರ್ಡ್‌ಸನ್, ಶಾರುಕ್ ಖಾನ್, ರಿಲೇ ಮ್ಯಾಡ್ರಿತ್, ಮೋಯಿಸ್ ಹೆನ್ರಿಕೇಸ್, ಜಲಜಾ ಸಕ್ಸೇನಾ, ಉತ್ಕರ್ಷ್ ಸಿಂಗ್, ಫಾಬಿಯನ್ ಅಲನ್, ಸೌರಭ್ ಕುಮಾರ್.