IPLಗೂ ಮುನ್ನ ಡ್ಯಾಶಿಂಗ್ ಲುಕ್‌ನಲ್ಲಿ ಕಂಗೊಳಿಸಿದ ಎಂಎಸ್ ಧೋನಿ
ನವದೆಹಲಿ(ಜು. 30) ಭಾರತ ಕಂಡ ದಿಗ್ಗಜ ಕ್ರಿಕೆಟ್ ನಾಯಕ, ಎರಡು ವಿಶ್ವಕಪ್ ಟ್ರೋಫಿಗೆ ಮುತ್ತಿಟ್ಟ ಕ್ಯಾಪ್ಟನ್ ಕೂಲ್ ಎಂಎಸ್ ಧೋನಿ ಅಭಿಮಾನಿಗಳ ಮುಂದೆ ವಿಶಿಷ್ಟ ಅವತಾರದಲ್ಲಿ ಪ್ರತ್ಯಕ್ಷವಾಗಿದ್ದಾರೆ. ವಿಶಿಷ್ಟ ಹೇರ್ ಸ್ಟೈಲ್ ನಲ್ಲಿ ಮಿಂಚಿದ್ದು ಮೆಚ್ಚುಗೆಗೆ ಪಾತ್ರವಾಗಿದೆ.
ಕ್ರಿಕೆಟರ್ ಮತ್ತು ಬಾಲಿವುಡ್ ಸ್ಟಾರ್ ಗಳ ಫೆವರೆಟ್ ಕೇಶ ವಿನ್ಯಾಸಕಾರ ಹಕೀಮ್ ಧೋನಿಗೆ ಹೊಸ ಲುಕ್ ನೀಡಿದ್ದಾರೆ.
ಧೋನಿಯ ಹೊಸ ಕೇಶ ವಿನ್ಯಾಸಕ್ಕೆ ನೀಡಿರುವ ಹೆಸರು The Uber Cool Fox-Hawk Cut.
ಧೋನಿ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸಿದೆ.
ಧೋನಿ ವಿಶಿಷ್ಟ ಕೇಶ ವಿನ್ಯಾಸದಲ್ಲಿ ಕಾಣಿಸಿಕೊಳ್ಳುವುದು ಹೊಸದೇನಲ್ಲ.
ಪಾಕಿಸ್ತಾನ ಪ್ರವಾಸಕ್ಕೆ ತೆರಳಿದ್ದ ವೇಳೆ ಉದ್ದ ಕೂದಲಿನಲ್ಲಿ ಮಿಂಚಿದ್ದರು.
MS Dhoni
ಐಪಿಎಲ್ ನಲ್ಲಿ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಿಕೊಂಡು ಬಂದಿದ್ದಾರೆ.