IPL 2021: ಸನ್ರೈಸರ್ಸ್ ವಿರುದ್ದ ಭರ್ಜರಿ ಗೆಲುವಿನೊಂದಿಗೆ ಪ್ಲೇ ಆಫ್‌ಗೆ ಎಂಟ್ರಿ ಕೊಟ್ಟ ಚೆನ್ನೈ
* ಚೆನ್ನೈ ಸೂಪರ್ ಕಿಂಗ್ಸ್ ಮತ್ತೊಂದು ಗೆಲುವು
* 44ನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಗೆಲುವು ಸಾಧಿಸಿದ ಮಹೀ ಬಳಗ
* 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನ ಪ್ಲೇ ಆಫ್ ಪ್ರವೇಶಿಸಿದ ಚೆನ್ನೈ ಸೂಪರ್ ಕಿಂಗ್ಸ್
ಶಾರ್ಜಾ, (ಸೆ.30): 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (IPL 2021) ಸನ್ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ 6 ವಿಕೆಟ್ಗಳ ಭರ್ಜರಿ ಗೆಲುವಿನೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ಅಧಿಕೃತವಾಗಿ ಪ್ಲೇ ಆಫ್‌ಗೆ ಎಂಟ್ರಿ ಕೊಟ್ಟಿದೆ.
ಇನ್ನು ಕೇನ್ ವಿಲಿಯಮ್ಸನ್ ನಾಯಕತ್ವದ ಸನ್ರೈಸರ್ಸ್ ಹೈದರಾಬಾದ್(Sunrisers Hyderabad) ತಂಡ ಈ ಸೋಲಿನೊಂದಿಗೆ ಪ್ಲೇ ಆಫ್ ರೇಸ್ನಿಂದ ಹೊರಬಿದ್ದಿದೆ.
IPL 2021 ಅಶ್ವಿನ್ vs ಮಾರ್ಗನ್ ‘ಕ್ರೀಡಾ ಸ್ಫೂರ್ತಿ’ ಕಿತ್ತಾಟ!
ಇಂದು (ಸೆ.30) ಶಾರ್ಜಾ ಸ್ಟೇಡಿಯಂನಲ್ಲಿ ನಡೆದ 44ನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದು, ಕಿಂಗ್ಸ್ ಬೌಲಿಂಗ್ ದಾಳಿಗೆ ನಿಗದಿತ 20 ಓವರ್ನಲ್ಲಿ 7 ವಿಕೆಟ್ ಕಳೆದುಕೊಂಡು 134 ರನ್ಗಳನ್ನು ಕಲೆಹಾಕಲಷ್ಟೇ ಶಕ್ತವಾಯ್ತು.
ಈ ಸಾಧಾರಣ ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) 19.4 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು.ಈ ಮೂಲಕ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಪ್ಲೇ ಆಫ್ ಪ್ರವೇಶ ಮಾಡಿದ ಮೊದಲ ತಂಡವಾಗಿದೆ.
ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡ ಆರಂಭದಲ್ಲಿಯೇ ಆಘಾತವನ್ನು ಅನುಭವಿಸಿತು. ಕಳೆದ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿದ್ದ ಜೇಸನ್ ರಾಯ್ ಈ ಪಂದ್ಯದಲ್ಲಿ ಕೇವಲ 2 ರನ್ ಕಲೆಹಾಕಿ ಪೆವಿಲಿಯನ್ ಸೇರಿಕೊಂಡರು. ಮತ್ತೊಂದೆಡೆ ಆರಂಭಿಕ ಆಟಗಾರನಾಗಿ ಕಣಕ್ಕಿಳಿದಿದ್ದ ವೃದ್ಧಿಮಾನ್ ಸಹಾ 44 ರನ್ ಗಳಿಸಿದರು ವಿಕೆಟ್ ಒಪ್ಪಿಸಿದರು.
ಇನ್ನು ನಾಯಕ ಕೇನ್ ವಿಲಿಯಮ್ಸನ್ 11 ರನ್ ಗಳಿಸಿ ಮತ್ತೊಮ್ಮೆ ವಿಫಲರಾದರು, ಇನ್ನುಳಿದಂತೆ ಪ್ರಿಯಮ್ ಗಾರ್ಗ್ 7, ಅಭಿಷೇಕ್ ಶರ್ಮಾ 18, ಅಬ್ದುಲ್ ಸಮದ್ 18, ಜೇಸನ್ ಹೋಲ್ಡರ್ 5, ಭುವನೇಶ್ವರ್ ಕುಮಾರ್ ಅಜೇಯ 2 ಮತ್ತು ರಶೀದ್ ಖಾನ್ ಅಜೇಯ 17 ರನ್ ಗಳಿಸಿದರು.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಜೋಶ್ ಹೇಜಲ್ ವುಡ್ 3 ವಿಕೆಟ್, ಡ್ವೇನ್ ಬ್ರಾವೊ 2 ಮತ್ತು ಶಾರ್ದೂಲ್ ಠಾಕೂರ್ 1 ವಿಕೆಟ್ ಕಬಳಿಸುವುದರ ಮೂಲಕ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು.
ಚೆನ್ನೈ ಪರ, ರುತುರಾಜ್ ಗಾಯಕವಾಡ್ 45, ಫಾಫ್ ಡು ಪ್ಲೆಸಿಸ್ 41, ಮೊಯೀನ್ ಅಲಿ 17, ಅಂಬಾಟಿ ರಾಯುಡು 17, ಸುರೇಶ್ ರೈನಾ 2, ಎಂಎಸ್ ಧೋನಿ 14 ರನ್ನೊಂದಿಗೆ 19.4 ಓವರ್‌ಗೆ 4 ವಿಕೆಟ್ ಕಳೆದು 139 ರನ್ ಗಳಿಸಿ ಗೆಲುವಿನ ದಡ ಸೇರಿತು.